ಈ ಇಸ್ವಿಯಲಿ ಹೊಸ ಚೈತನ್ಯ ಮೂಡಿ ಬರಲಿ
ಈ ಹೂವುಗಳಂತೆ ಅರಳರಳಿ ಸೂಸಲಿ
ಬಾಡದೇ ನಾಡು ನಲಿಯುತಿರಲಿ
ಬಾಳು ಬಂಗಾರವಾಗಿರಲಿ
ಉದಯಿಸಲಿದೆ ಶ್ರೀರಾಮ ಮಂದಿರ
ಹಬ್ಬುತಾ ಈ ಹೂವುಗಳ ಹಂದರ
ಆತ್ಮ ನಿರ್ಭರತೆಯ, ಸಮಸ್ತ ಭಾರತೀಯರ ನರೇಂದ್ರ
ಮರ್ಯಾದಾ ಪುರುಷೋತ್ತಮ ಭಾರತೀಯ ರ ಹೃದಯ ಮಂದಿರ
ಬರಲಿರುವ ದಿನಗಳಲಿ
ಇನ್ನಷ್ಟು ಸುಖ ಸೌಹಾರ್ದತೆ ಶೋಭಿಸಲಿ
ತಮ್ಮ ತಾವು ಅರಿತರಿತು ಬೆಳಗಲಿ
ವರುಷದ 24 ಘಂಟೆಯೂ ಚೇತೋಹಾರಿ ಯಾಗಿರಲಿ.
ದೇವರ ದಯೆ ಸದಾ ಇರುತಿರಲಿ
ಹೊಸ ಇಸ್ವಿ 2024ರ ಶುಭಾಶಯಗಳು
✍️ ಆರ್. ಪಿ. ಕುಲಕರ್ಣಿ ಪುಣೆ.
