ಆಚರಿಸದಿದ್ದರೂ ನಾವು ಹೊಸ ವರುಷವ.
ಬಾಂದಳ ಬೆಳಗುವ ಅರುಣ ಕೆಂಬಣ್ಣ ಸುಸೂತ್ತ ಬಂದೇ ಬರುವ
ಕ್ಯಾಲೆಂಡರ್ ವರುಷದ ಕೊನೆಯ ಇರುಳಲ್ಲಿ ಅವೇ ಚುಕ್ಕಿ ತಾರೆಗಳು, ಅಮಾವಾಸ್ಯೆಯತ್ತ ಚಂದಿರ ಜಾರುತ್ತಲಿರುವ
ಆಗಸದ ಅರಮನೆಯಲ್ಲಿ ಇರದು ಈ ಎಲ್ಲ ಜಂಜಾಟ, ಆಟ.
ಮನುಜ ಲೋಕದಿ ಬೆಳೆಸಿಕೊಂಡಿರುವ ವಿಜ್ಞಾನವೋ,ಅಜ್ಞಾನವೋ ವಿವರಿಸಲಾಗದ ನೋಟ -ಕೂಟ.
ವಿನೋದವೋ,ವಿಷಾದವೋ ಸಂತೋಷವೋ ಅಂತೂ ಬದಲಾಗುತ್ತಿದೆ ಕ್ಯಾಲೆಂಡರ್ರು,
ದೇಶದ ತುಂಬೆಲ್ಲ ಆಚರಿಸಲು ಓಡುತ್ತಿದ್ದಾರೆ ಜನರು,ಯುವಕರು.

✍️ ಕಮಲಾಭಿತನಯೆ
(ಶ್ರೀಮತಿ ರೇಖಾ ನಾಡಿಗೇರ)
ಹುಬ್ಬಳ್ಳಿ
