ಸಂತರ ಸಂತ ಈ ಸತ್ಯಾತ್ಮ
ಮಹಾತ್ಮಾ ಗಾಂಧೀಜಿ ನಂತರದ ಪುಣ್ಯಾತ್ಮ
ದೇವಮಾನವನ ಚಿರಂಜೀವಿ ಆತ್ಮ

ನಡೆದು, ಮುಡಿದು ಸಾರಿದ ಅಮರ ತತ್ವ
ನಮಿಸುತಾ ಪೂಜ್ಯರ ಅಂತರಾತ್ಮಕ್ಕೆ
ಅವರ ಪ್ರವಚನ ಪಂಚಾಮೃತ ಸರ್ವ ಕಾಲಕ್ಕೆ
ದಾರಿ ದೀಪವಾಗಿ ಬಾಳ ಪಥಕ್ಕೆ

ಸಾಧ್ಯವೇ ಇಲ್ಲ, ಈ ಸಂತನ ಮರೆಯಲಿಕ್ಕೆ
ನಮ್ಮೆಲ್ಲರ ಈ ಸಂತ
ಆರದ ನಿತ್ಯದ ನಂದಾದೀಪ
ವರುಷಕ್ಕೊಮ್ಮೆ ಹಚ್ಚತೀವಿ ಕಾರ್ತೀಕ್ ದೀಪ
ಆದರೆ, ಸಂತರು ಹಚ್ಯಾರ
ಜ್ಞಾನಾರ್ಥಿಗಳ ಮನ ದೊಳಗ ಆರದ ನಂದಾ ದೀಪ

ಈ ನಿರ್ಮಲ ನಿರ್ಮೋಹಿಯ ತಿಳಿದಷ್ಟು ಕಡಿಮೆ
ತೃಣವಾದರೂ, ತಿಳಿದು ನಾವು ಅನುಸರಿಸಿದರೆ ಮಾತ್ರ
ಅದು ನಮ್ಮ ನೈಜ ಬಾಳ ದುಡಿಮೆ

ದೇವ ಮನವ, ಸಂತ ಶ್ರೇಷ್ಠ ನೆ,,,,,,
ಇದೊ ಇಂದಿಲ್ಲಿ ಸ್ವೀಕರಿಸು, ನಮ್ಮೆಲ್ಲ ಬಳಗದವರ ಮನದ ವಂದನೆ
ನಿಮ್ಮಾತ್ಮಕೆ ಸದ್ಗತಿ, ಚಿರಶಾಂತಿ
ಕೊಡುವವನನು, ಆ ಭೋಳೆ ಶಂಕರನೇ


✍️ ಶ್ರೀ ಆರ್.ಪಿ.ಕುಲಕರ್ಣಿ
ಪುಣೆ.