ಮನ ಮನ ಗಳಲಿ ಶಾಶ್ವತ
ಬಾಡದ ಬೆಟ್ಟದ ಹೂವು
ಗಂಧ ಸುಸುತಾ ಗೆಲುವು
ಮರೆಯ ಲಾಗದ ಯುವ ರತ್ನ ಚಿರಾಯು
ಪ್ರಪಂಚ ದಲಿದ್ದರೂ ಅದೆಷ್ಟೋ ಕಲಾ ಹೂವು
ಮರೆಯಾಗ ದು, ಅವನ ನೆನಹು
ಈ ಸರದಾರ ನಗುವಿಗೇ ಒಡೆಯ
ಅಪ್ಪು, ಅಪ್ಪಿಕೊಂಡಿದ್ದ ಆಗಿ, ಕಲಾ ಕಂಕೈ ರ್ಯ
ಆದರ್ಶ ವಾದ, ಅವನ ನಡೆ ನುಡಿಯ
ಮಾಡಿತು, ಅವನ ಚಿರಜೀವಿ, ಚಿರಾಯು
ಹುಟ್ಟಿದ ಆರು ತಿಂಗಳ ಲೇ
ಕೂ ಸಾಗಿ ಸೂಸಿದ ಬಾಲ ಪ್ರತಿಭೆಯ
ಕಾಣ ದಂತಾ ದರೂ, ಆತಾ ಮಾಯಾ
ಮಿಡಿಯುತಿದೆಪ್ರಪಂಚದ, ಅಬಾಲ, ಹೃದಯ
ಅಮೋಘ ಅಭಿನಯ, ನೃತ್ಯ,
“ತಂದೆಯಂತೆ ಸತ್ಯ ಸಹೃದಯ “
ಕಲಾ ಭಿ ಮಾನಿಗಳ ಯುವರತ್ನ
ಅಳೆಯ ಲಾಗದು ಅವನ ಕಲಾ ಗಾತ್ರ
ಅಷ್ಟೊಂದು ಆವರಿಸಿದ, ರಾಜರ ಸುಪುತ್ರ
ನಲ್ವತ್ತಾರರಲೇ ಭುವಿಗೆ ಹೇಳಿ ವಿದಾಯ
ಮೆಚ್ಚಿಸಿದ ಅಪಾರ ಅಭಿಮಾನಿಗಳ ಹೃದಯ
ಅಪ್ಪು ಅಮರ, ಅಜರಾಮರ,
ಒಪ್ಪಿ ಅಪ್ಪುವಿನ ಜನ ಸಾಗರ
ಅಪ್ಪು ದೇಹದಿ ದೂರ ದೂರ
ವರುಷ ಅನಿಸಿದರೂ ಪುರಾ
ಅವಾ ಮನದಿ ಹತ್ತಿರ, ಹತ್ತಿರ
ಎಲ್ಲೆಲ್ಲೂ ಅವನ ನಡೆಯ ಚಿತ್ತಾರ
ಅನನ್ಯ, ಅಪ್ಪುವಿಗೆ, ಕರ್ನಾಟಕ ರತ್ನ ಪುರಸ್ಕಾರ
✍️ಶ್ರೀ ಆರ್.ಪಿ.ಕುಲಕರ್ಣಿ
ಧಾರವಾಡ.