ಮೇಲ ಮುದ್ದೆಯ ಮನೆ
ಮಳೆ ಬಂದಾಗ ಅಲ್ಲಲ್ಲಿ ಸೇರುವ ಮನೆ …..
ಮನೆ ಚಿಕ್ಕದು ಮನಸು ದೊಡ್ಡದು..
ಪುಟ್ಟ ಮಲಗುವ ಮನೆ.. ಅಡಿಗೆ ಮನೆ ಪಡಸಾಲೆ ಇದೆ ಒಳಗೆ
ಬೇಸಿಗೆಯಲ್ಲಿ ಪುಲ್ ಏಸಿಯ ಮನೆ….
ಕಲ್ಲು ಮಣ್ಣು ಸೇರಿಸಿ ಕಟ್ಟಿದ ಮನೆ
ನಮ್ಮ ಹಳ್ಳಿ ಮನೆ….
ಬೆವರು ಸುರಿಸಿ ಕಲ್ಲುಹೊತ್ತು ಮಣ್ಣು ಕಲಸಿ
ಕಟ್ಟಿದ ಮನೆ ನಮ್ಮ ಅರಮನೆ….
ಈ ಅರಮನೆಗೆ ರಾಜ ನಾನಾದರೆ
ಮಹಾರಾಣಿ ಅವಳು
ಬಾವಿಯಿಂದ ನೀರು ಜಗ್ಗಿ ತಂದು ಹಾಕಿ
ಮಣ್ಣು ಕಲಸಿ ತಂದು ಕೊಟ್ಟಳು…
ಕಲ್ಲು ಮೇಲೆ ಕಲ್ಲನಿಟ್ಟು ಕಣ್ಣು ಸನ್ನೆ ಮಾಡತಲೇ ಮಣ್ಣು ಹಾಕಿ ಗೋಡೆಗೆಲ್ಲಾ ಭರಣೆ ತಟ್ಟಿ ಎಷ್ಟು ಅಂದವೆಂದಳು ಈ ಪುಟ್ಟ ಅರಮನೆಯ ರಾಣಿ ಮಹಾರಾಣೆ…..
✍️ಗೋಪಾಲ ಕ ದೇಶಪಾಂಡೆ
ಹುಬ್ಬಳ್ಳಿ