ಶ್ರೀಧರ ಗಸ್ತಿಯವರ “ಮಕ್ಕಳ ಹಿತೈಷಿ” ಕಥಾ ಸಂಕಲನಕ್ಕೆ ರಾಷ್ಟ್ರಮಟ್ಟದ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಪ್ರಶಸ್ತಿಯ ಗರಿ: ಬೆಂಗಳೂರಿನ ಕನ್ನಡ ಸಾಹಿತ್ಯ ಭವನ ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಭವನದಲ್ಲಿ ಜರುಗಿದ “ಮಾತೋಶ್ರೀ ಜಾನಕಿಬಾಯಿ ರಂಗರಾವ್ ಮುತಾಲಿಕ ದೇಸಾಯಿ” ಸಂಸ್ಮರಣೆಯ ಅಂಗವಾಗಿ ನೀಡುವ “ವಿದ್ಯಾಧರ ಕನ್ನಡ ಪ್ರತಿಷ್ಠಾನ” ಹಸ್ತಪ್ರತಿ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ವಿವಿಧ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಯು ಇವರ ಪ್ರಥಮ ಮಕ್ಕಳ ಸಾಹಿತ್ಯ ಕೃತಿ “ಮಕ್ಕಳ ಹಿತೈಷಿ” ಗೆ ಲಭಿಸಿದೆ. ವೇದಿಕೆಯ ಸರ್ವಾಧ್ಯಕ್ಷರಾದ, ವಿದುಷಿ ಡಾ.ಶ್ಯಾಮಲಾ ಪ್ರಕಾಶ್ ಖ್ಯಾತ ನಾದೋಪಾ ಸನೆ ಸಂಗೀತ ವಿದ್ಯಾಲಯ ಮುಂಬಯಿ, ಖ್ಯಾತ ಸಾಹಿತಿ ಶ್ರೀಮತಿ ಚಂದ್ರಿಕಾ ಪುರಾಣಿಕ ಬೆಂಗಳೂರು, ಉದ್ಯಮಿ ಶ್ರೀ ಮುದಲ್ ವಿಜಯ್ ಪ್ರತಿಷ್ಠಾನದ ಅಧ್ಯಕ್ಷ ವಿದ್ಯಾಧರ ಮುತಾಲಿಕ್ ದೇಸಾಯಿ ಭಕ್ತಿ ಕಾವ್ಯಯಾನ ಪ್ರತಿಷ್ಠಾನದ ಅಧ್ಯಕ್ಷ ಜಯಶ್ರೀ ರಾಜು ಇವರ ಪುಸ್ತಕ ಬಿಡುಗಡೆ ಮಾಡಿ ಪ್ರಶಸ್ತಿಯನ್ನು ವಿತರಿಸಿದರು.

ಇವರ ಕಥೆಗಳೆಲ್ಲವೂ ಕ್ರಾಂತಿಧ್ವನಿ ಪತ್ರಿಕೆಗಳಲ್ಲಿ ಮಾಲಿಕೆಯ ರೂಪದಲ್ಲಿ,ಇತರೆ ಪತ್ರಿಕೆಗಳಾದ ಕೊಂಕಣ ವಾಹಿನಿ, ವಿನಯವಾಣಿ, ವಿಜಯ ವಾಣಿ, ಪತ್ರಿಕೆಗಳಲ್ಲಿಯೂ ಪ್ರಸಾರವಾಗಿ, ಅಂತರ್ಜಾಲ ತಾಣಗಳಾದ ಫೇಸ್ಬುಕ್, ವಾಟ್ಸ್ ಆ್ಯಪ್,ಇನ್ ಸ್ಟಾಗ್ರಾಮ್ ಹೀಗೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿ ಅಧಿಕಾರಿಗಳ, ಪಾಲಕರ, ಶಿಕ್ಷಕರ ಹಾಗೂ ಮಕ್ಕಳ ಪ್ರಶಂಸೆಗೆ ಒಳಗಾಗಿದ್ದವು. ಇದೀಗ ಪುಸ್ತಕ ರೂಪದಲ್ಲಿ ಹೊರಬರುತ್ತಿರುವ ಮಕ್ಕಳ ಕಥಾ ಸಂಕಲನ ಪ್ರಶಸ್ತಿಯನ್ನು ಬಾಚಿಕೊಂಡಿ ದೆ. ಮಕ್ಕಳ ಸುತ್ತ ಹೆಣೆದಿರುವ ಕಥೆಗಳು ಮಕ್ಕಳ, ಶಿಕ್ಷಕರ ಹಾಗೂ ಪಾಲಕರ ಹಿತೈಷಿ “ಕೈಪಿಡಿ” ಯಾಗಿ ಹೊರಹೊಮ್ಮಲಿದೆ.
