ದೋಹಾ-1
ಚಿತ್ರಕೂಟ ಘಾಟ ಪೈ, ಭಾರತದ ಸಂತನ ಕೀ ಭೀರ.
ತುಲಸೀದಾಸ ಘೀಸೇ, ತಿಲಕ ಕರೇ ರಘುವೀರ.
ಅನುವಾದ: ತುಲಸೀದಾಸರ ಹೀಗೆ ಹೇಳತ್ತಾರೆ, ಚಿತ್ರಕೂಟದ ಘಾಟದಲ್ಲಿ ಸಂತರ ಜಾತ್ರೆ ನಡೆದಿದೆ, ತುಲಸೀದಾಸರು ಶ್ರೀ ಗಂಧ ತೇಯುತಿರಲು ಶ್ರೀರಾಮಚಂದ್ರರು ಅವರಿಗೆ ಹಚ್ಚುತ್ತಿರುವರು.

ದೋಹಾ-2
ಜಗ ತೇ ರಹ ಛತ್ತೀಸ ಹೈ, ರಾಮ ಚರನ ಛ:ತೀನ್,
ತುಲಸಿ ದೇಖು ವಿಚಾರ ಹಿಯ,
ಹೈ ಯಹ ಮತೌ ಪ್ರಬೀನ..
ಅನುವಾದ: ತುಲಸೀದಾಸರು ಹೀಗೆ ಹೇಳುತ್ತಾರೆ, ಈ ಸಂಸಾರದ ಜೊತೆಗೆ ಘತ್ತೀಸ್ (३६) ಅಂದರೆ ವಿಮುಖನಾಗಿ ಸಂಬಂಧ ಭಗವಂತ ರಾಮನ ಜೊತೆಗೆ ತಿರಸಠ್ (६३) ಅಂದರೆ ಪ್ರೇಮ ಭಾವನೆ ಹೊಂದಿರಬೇಕು.
ದೋಹಾ-3
ತುಲಸಿ ಸಂತ ಸುಅಂಬ ತರು, ಫೂಲಿ -ಫಲಹಿ ಪರ ಹೇತ,
ಇತತೆ ಯೆ ಪಾವನ ಹನತ, ಉತತೆ ವೆ ಫಲ ದೆತ.
ಅನುವಾದ– ತುಲಸಿದಾಸರು ಹೀಗೆ ಹೇಳುತ್ತಾರೆ, ಸಂತರು ಒಂದು ಒಳ್ಳೆಯ ಮಾವಿನ ಹಣ್ಣು ಕೊಡುವ ಗಿಡದ ಹಾಗೆ ಇರಬೇಕು. ಆ ಮರಕ್ಕೆ ಏಷ್ಟು ಜೋರಾಗಿ ಕಲ್ಲಿನಿಂದ ಹೊಡೆದರು ಅದು ಅಷ್ಟೇ ಬೇಗ ಮಾವಿನ ಹಣ್ಣು ಕೊಡುವ ಹಾಗೆ.
ದೋಹಾ -4 ತುಲಸಿ ಕಾಯಾ ಖೇತ ಹೈ, ಮನಸಾ ಭಯೌ ಕಿಸಾನ.
ಪಾಪ ಪುಣ್ಯ ದೊಉ ಬೀಜ ಹೈ, ಬುವೈ ಸೌ ಲುನೈ ನಿದಾನ.
ಅನುವಾದ: ತುಲಸೀದಾಸರು ಹೇಳುತ್ತಾರೆ, ಈ ಶರೀರ ಹೊಲ , ರೈತನೆ ಮನಸ್ಸು,.
ಅದರಲ್ಲಿ ಪಾಪ -ಪುಣ್ಯ ವೆಂಬ ಎರಡು ಬೀಜಗಳು, ಎನು ಬೆಳೆಯುತ್ತೀಯೊ ಅದು ಸಿಗುವುದು.
ದೋಹಾ-5
ಮಧುರ ವಚನ ತೇ ಜಾತ ಮಿಟೈ, ಜೈಸೆ ದೂಧ ಉಫಾನ.
ಅನುವಾದ: ಮಧುರ ವಚನದಿಂದ ಅಹಂಕಾರ ದೂರವಾಗುವುದು, ಉತ್ತಮ ಜನರು ಅಭಿಮಾನಿಯಾಗುವರು
ಸ್ವಲ್ಪ ನೀರು ಚಿಮುಕಿಸಿ, ಯಾವಾಗ ಹಾಲು ಉಕ್ಕುತಿರುವುದೊ.
ದೋಹಾ- 6
ತುಲಸಿ ಎಹಿ ಸಂಸಾರ ಮೇ, ಭಾಂತಿ ಭಾಂತಿ ಕೆ ಲೋಗ.
ಸಬ ಸೋ ಹಿಲ ಮಿಲ ಬೋಲಿಎ, ನದಿ ನಾಂವ ಸಂಯೋಗ.
ಅನುವಾದ: ತುಲಸಿದಾಸರು ಹೇಳುವರು, ಈ ಸಂಸಾರದಲ್ಲಿ ಬೇರೆ ಬೇರೆ ಸ್ವಭಾವಗಳ ಜನ ಇರುವರು.
ಎಲ್ಲರ ಜೋತೆ ಬೆರೆತು ಮಾತನಾಡಿ, ಹೊಳೆ ಮತ್ತು ಹಡಗಿನ ಹಾಗೆ.
ದೋಹಾ-7
ಕಾಮ, ಕ್ರೋಧ, ಮದುವೆ, ಲೋಭ ಕೀ, ಜೈ ಲೌ ಮನ ಮೇ ಖಾನ.
ತೌ ಲೌ ಪಂಡಿತ ಮೂರ್ಖೌ, ತುಲಸಿ ಎಕ ಸಮಾನ.
ಅನುವಾದ: ಕಾಮ, ಕ್ರೋಧ, ಮದುವೆ, ಲೋಭಗಳು ಯಾರ ಮನದಲ್ಲಿರುವವೊ ಅವನು ಬದ್ದಿವಂತನಾದರು ತಲಸಿದಾಸರ ಪ್ರಕಾರ ಪಂಡಿತ ಮತ್ತು ಮೂರ್ಖ ಇಬ್ಬರು ಒಂದೇ.
ದೋಹಾ- 8
ಆವತ ಹಿ ಹರ್ಷೆ ನಹಿ, ನೈನನ ನಹಿ ಸನೇಹ.
ತುಲಸಿ ತಹಾ ನ ಜಾಇಎ, ಕಂಚನ ಬರಸೆ ಸನೇಹ.
ಅನುವಾದ: ನಮ್ಮ ಬರುವಿಕೆಯಿಂದ ಯಾರ ಕಣ್ಣುಗಳಲ್ಲಿ ಹರ್ಷ ಮತ್ತು ಸ್ನೇಹ ತೋರುವುದಿಲ್ಲವೊ ತುಲಸಿ ಹೇಳುವರು ಅಲ್ಲಿ ಮೋಡ ಬಂಗಾರದ ಮಳೆ ಸುರಿಸಿದರೂ ಹೋಗಬಾರದು.
ದೋಹಾ-9
ತುಲಸಿ ಕಬಹು ನ ತ್ಯಾಗಿಎ, ಅಪನೆ ಕುಲ ಕೀ ರೀತಿ.
ಲಾಯಕ ಹಿ ಸೋ ಕೀಜಿಎ , ಬ್ಯಾಹ ಬೈರ ಅರು ಪ್ರೀತಿ.
ಅನುವಾದ: ತುಲಸಿ ಹೇಳುವರು ಎಂದು ಬಿಡಬಾರದು, ನಮ್ಮ ಕುಲದ ರೀತಿಯ.
ಸರಿಹೊಂದುವುದನ್ನೆ ಮಾಡಿ, ಮದುವೆ, ವೈರತ್ವ, ಪ್ರೀತಿ.
ದೋಹಾ-10
ಬೀನಾ ತೇಜ ಕೆ ಪುರುಷ ಕೀ, ಅವಶಿ ಅವಜ್ಞಾ ಹೋಯ.
ಆಗಿ ಬುಝೆ ಜ್ಯೋ ರಾಖ ಕೋ, ಆಪು ಛುವೈ ಸಬ ಕೋಯ.
ಅನುವಾದ: ತೇಜಹೀನ ಪುರುಷನ, ಅವಶ್ಯವಾಗಿ ಅಪಮಾನವಾಗುವುದು.
ಆರಿದ ಬೆಂಕಿಯ ಬೂದಿಯನ್ನು ಎಲ್ಲರೂ ಸ್ಪರ್ಶಿಸುವರು, ಆದರೆ ಬೆಂಕಿಯನ್ನು ಯಾರು ಮುಟ್ಟುವುದಿಲ್ಲ.

ದೋಹಾ -11
ಸಾಹಸ ತೆ ಸೇವಕ ಬಡವ, ಜೊತೆಗೆ ನಿಜ ಧರ್ಮ ಸುಜಾನ l
ರಾಮ ಬಾಂಧವ್ಯ ಉತರೆ ಉದಧಿ,ಲಾಂಘಿ ಗಯೆ ಹನುಮಾನ್ll
ಅನುವಾದ: ಸೇವಕನು ಸ್ವಾಮಿಗಿಂತ ದೊಡ್ಡವನು , ಯಾರು ತಮ್ಮ ಧರ್ಮವನ್ನು ಪಾಲಿಸುವಲ್ಲಿ ನಿಪುಣನಿರುವನೊ.
ಭಗವಾನ್ ರಾಮಚಂದ್ರ ಆಣೆಕಟ್ಟು ಕಟ್ಟಿ ಸಮುದ್ರ ದಾಟಿದರೆ ಹನುಮಂತನು ಅದೇ ಸಮುದ್ರವನ್ನು ಹಾರಿಕೊಂಡು ಲಂಕಾ ತಲುಪಿದನು.
ದೋಹಾ -12
ತುಲಸಿ ನಿಜ ಕರತೂತಿ ಬಿನ, ಮುಕುತ ಜಾತ ಜಬ ಕೊಯ l
ಗಯಾ ಅಜಾಮಿಲ ಲೋಕ, ಹರಿನಾಮ ಸಕ್ಯೊ ನಹಿ ಧೋಯ ll
ಅನುವಾದ: ತುಲಸಿದಾಸರು ಹೀಗೆ ಹೇಳುತ್ತಾರೆ, ಪರಿಶ್ರಮವಿಲ್ಲದೆ ಯಾರಿಗೆ ಮೋಕ್ಷ ದೊರೆಯುವುದೊ ಅವರಿಗೆ ಅಷ್ಟು ಕೀರ್ತಿ ಸಿಗುವುದಿಲ್ಲ, ಅಜಾಮಿಲಗೆ ಸ್ವರ್ಗ ದೊರೆಯಿತೇನೊ ನಿಜ ಆದರೆ ಪ್ರಯತ್ನ ಮಾಡಿದ್ದರಿಂದ ಪ್ರಸಿದ್ಧಿ ದೊರೆಯಿತು.
ದೋಹಾ-13
ಅನುಚಿತ ಉಚಿತ ವಿಕಾರು ತಜಿ , ಜೆ ಪಾಲಹಿ ಪಿತು ಬೈನ l
ತೆ ಭೋಜನ ಸುಖ
ಸುಜಸ ಕೆ, ಬಸಹಿ ಅಮರಪತಿ ಏನ ll
ಅನುವಾದ: ಯಾವ ಪುತ್ರ ಉಚಿತ ಮತ್ತು ಅನುಚಿತಗಳ ವಿಚಾರ ಬಿಟ್ಟು ತಂದೆಯ ವಚನ ಪಾಲನೆ ಮಾಡುತ್ತಾನೊ ಅವನು ಸುಖ ಮತ್ತು ಸುಕೀರ್ತಿಗೆ ಸ್ವರ್ಗ ಸೇರುತ್ತಾನೆ.
ದೋಹಾ -14
ಆಪನ ಛೊಡೆ ಸಾಥ ಸಬ, ಜಬ ದೀನ ಹಿತು ನಾ ಕೊಈ l
ತುಲಸಿ ಅಬುಜ ಅಂಬು ಬಿನ, ತರನಿ ತಾಸು ರಿಪು ಹೊಈ ll
ಅನುವಾದ: ತುಲಸಿದಾಸರು ಹೀಗೆ ಹೇಳುತ್ತಾರೆ, ಯಾವ ದಿನ ನಮ್ಮವರೇ ನಮ್ಮಿಂದ ದೂರವಾಗುವರೊ ಆ ದಿನ ಯಾರೊಬ್ಬರು ನಮ್ಮ ಒಳಿತು ಬಯಸುವುದಿಲ್ಲ, ಜಲ ಕಮಲದ ಜೊತೆ ಬಿಟ್ಟಂತೆ, ಸೂರ್ಯ ಕಮಲವನ್ನೆ ಸುಟ್ಟು ಬಿಡುವನು.
ದೋಹಾ-15 ಚಾತಕ ತುಲಸಿ ಕೆ ಮತೆ, ಸ್ವಾತಿಹು, ಪಿಯೆ ಪಾನಿ.
ಪ್ರೇಮ ತೃಷಾ ಬಢತಿ ಭಲಿ,ಘಟೈ ಘಟೈ ಕಿ ಆನಿ.
ಅನುವಾದ– ಹೇ ಚಾತಕ! ತುಲಸಿಯ ವಿಚಾರದ ಪ್ರಕಾರ ನೀನು ಸ್ವಾತಿ ನಕ್ಷತ್ರದ ದಿನ ಸುರಿದ ಮಳೆಯ ನೀರನ್ನು ಕೂಡ ಕುಡಿದಿಲ್ಲ.
ಪ್ರೇಮ ತೃಷೆ ಹೆಚ್ಚುವುದೆ ಒಳ್ಳೆಯದು, ಕಡಿಮೆ ಯಾಗುವುದರಿಂದ ಅದರ ಪ್ರತಿಷ್ಠೆಯೆ ಇರುವುದಿಲ್ಲ.
ದೋಹಾ -16
ಚರಣ ಚೊಂಚ ಲೋಚನ ರಂಗೋ, ಚಲೊ ಮರಾಲಿ ಚಾಲ.
ಛೀರ ನೀರ ಬೀಚ ಸಮಯ ಕಬ, ಉನರ ಧರತ ತೇಹಿ ಕಾಲ.
ಅನುವಾದ: ಬಗುಲಾ ತನ್ನ ಚರಣ ಚೊಂಚ ಮತ್ತು ಕಣ್ಣುಗಳಿಗೆ ಹಂಸದ ಹಾಗೆ ಬಣ್ಣ ಹಚ್ಚಲಿ.
ಹಂಸದ ಹಾಗೆ ನಡೆಯಲಿ, ಆದರೆ ಯಾವ ಸಮಯದಲ್ಲಿ ಹಂಸ ಹಾಲು ಮತ್ತು ನೀರನ್ನು ಬೇರೆ ಮಾಡುವುದೊ ಆಗ ಬಗುಲದ ಬಣ್ಣ ಬದಲಾಗುವುದು.
ದೋಹಾ-17
ಬಡೆ ಪಾಪ ಬಡಿ ಕಿಎ, ಛೊಟೆ ಕಿಏ ಲಜಾತ l
ತುಲಸಿ ತಾಪರ ಸುಖ ಚಹತ, ವಿಧಿ ಸೊ ಬಹುತ ರಿಸಾತ ll
ಅನುವಾದ:
ದೊಡ್ಡ ಮನುಷ್ಯ ದೊಡ್ಡ ಪಾಪ ಮಾಡುತ್ತಾನೆ, ಸಣ್ಣಪಾಪ ಮಾಡಲು ನಾಚಿಕೆಪಟ್ಟುಕೊಳ್ಳುವನು ತುಲಸಿದಾಸರು ಹೀಗೆ ಹೇಳುವರು, ಇದರಲ್ಲೂ ದೊಡ್ಡ ಮನುಷ್ಯ ಸುಖ ಬಯಸುವನು ಮತ್ತೆ ವಿಧಾತನ ಮೇಲೆ ಕೋಪ ಮಾಡಿಕೊಂಡು ಅವನ ಮೇಲೆ ತಪ್ಪು ಹೊರಸುವನು.
ದೋಹಾ- 18
ದೇಶ ಕಾಲ ಕರತಾ ಕರಮ, ವಚನ ವಿಚಾರ ವಿಹಿನ l
ಸೊ ಸುರತರು ತರ ದಾರಿದ್ರಿ, ಸುರಸರಿ ತೀರ ಮಲೀನ.
ಅನುವಾದ: ಯಾವ ಪ್ರಾಣಿ ದೇಶ, ಕಾಲ, ಕರ್ತೃ, ಕರ್ಮ, ವಚನ ಮತ್ತು ವಿಚಾರಗಳಿಂದ ಹೀನವೆಂದು ಪರಿಗಣಿಸುತ್ತಾರೆಯೊ ಅವರ ಕಲ್ಪವೃಕ್ಷದ ಕೆಳಗೆ ವಾಸವಾಗಿದ್ದರು ಕೂಡ ಬಡವನೆ! ಮತ್ತು ದೇವ ನದಿ ಗಂಗೆಯ ದಡದಲ್ಲಿ ದ್ದರು ಪಾಪಿಯೆ.
✍️ಶ್ರೀದುರ್ಗಾ ಹುಬ್ಬಳ್ಳಿ (ಡಾ.ಸರೋಜ ಮೇಟಿ ಲೋಡಾಯ)