(ಮಕರ ಸಂಕ್ರಾಂತಿಯ ನಿಮಿತ್ಯ “ಆರೋಗ್ಯವೇ ಭಾಗ್ಯ” ಮಾಲಿಕೆಯ ಪ್ರಥಮ ಲೇಖನ)
ಕಾಲಮಾನದ ಹೊಸದೊಂದು ಆಗಮನದ ಯುಗದ ಪ್ರಾರಂಭಕ್ಕೆ ಶಕೆ ಆರಂಭಗೊಳ್ಳುವ ಸಂಕ್ರಮನದ ಹೊಸ್ತಿಲು ವಿಶೇಷ ಆಯಾಮ ಗಳನ್ನು ಹೊಂದಿದೆ ಅನಾದಿ ಕಾಲದಿಂದಲೂ ವಿಶಿಷ್ಟ ಸಂಪ್ರದಾಯಗಳೊಂದಿಗೆ ಸಂಸ್ಕಾರ ವನ್ನು ತುಂಬುವ ಸಂ(ಕ್ರಾಂತಿ)ಮಾನವ ಜನಾಂಗದ ವಾಸ್ತವಿಕ ಮೌಲ್ಯಗಳ ಸಂವರ್ಧ ನೆಗೆ ಸೇತುವೆಯಾಗಿ ನಿಲ್ಲತ್ತದೆ.ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕ ಹೀಗೆ ಮುಂತಾದ ತಳಹದಿಯಲ್ಲಿ ಸಂಕ್ರಮನದ ಗತ ತಿರುಳನ್ನು ತಿಳಿಯಲೇಬೇಕು,ಪ್ರತಿಯೊಂದು ಆಚರಣೆ ಯಲ್ಲಿ ಯೂ ಬದುಕಿನ ವಾಸ್ತವಿಕ ವಿಚಾರ ವನ್ನು ಜ್ಞಾನದ ಹಗೆಯಲ್ಲಿ ತುಂಬಿಟ್ಟ ವರು ನಮ್ಮ ಪೂರ್ವಜರು. ಮಕರ ಸಂಕ್ರಾತಿಯ ಆಚರಣೆ ಆರೋಗ್ಯ ಸಂವರ್ಧನೆಯ ನೆಲೆಯು ಹೌದು.
ಬದಲಾವಣೆಯ ಪರ್ವ

ಸೂರ್ಯನ ಉತ್ತರ ದಿಕ್ಕಿನ ಪಯಣದ ಆರಂಭ ವನ್ನು ಸೂಚಿಸುವ ಕಾಲವು ಆಗುತ್ತಿದ್ದ ರಿಂದ ಭೂಮಿಯ ಉತ್ತರಾರ್ಧಗೋಳ ದಲ್ಲಿ ಚಳಿ, ಬೆಚ್ಚನೆಯ ವಾತವರಣ ಆರಂಭವಾಗಿ ಬೆಳೆ ಕಟಾವಿನ ಕಾಲ ಆಗಿರುತ್ತದೆ. ಮಹಾಭಾರತದ ಕಥೆಯಲ್ಲಿ ಬಿಷ್ಮರು ಪ್ರಾಣ ಬಿಡಲು ಉತ್ತರಾಯ ಣ ಪರ್ವಕಾಲವನ್ನು ಕಾದಿದ್ದರು ಎಂಬ ಉಲ್ಲೇಖ ವಿದೆ,ಸುಖ ದುಃಖ ಸರಿಸಮಾನವಾಗಿ ಕಂಡು ಬದುಕುವ ಬದಲಾವಣೆಗಳ ತಾತ್ಪರ್ಯ ಈ ಹಬ್ಬದಲ್ಲ ಡಗಿದೆ.
ವಿಶಿಷ್ಟ ಆಚರಣೆಯಲ್ಲಿ ವೈಶಿಷ್ಟ್ಯತೆ

ಭಾರತದ ದಕ್ಷಿಣ ಭಾಗದಲ್ಲಿ ಸಂಕ್ರಾತಿಯ ರಂಗು ಮುಗಿಲುಮುಟ್ಟಿರುತ್ತದೆ.ಸಂಸ್ಕೃತಿಯ ಸಂಪ್ರದಾ ಯಗಳ ಹಿನ್ನಲೆಯಲ್ಲಿ ಜನಪದ ಉತ್ಸವಗಳು ಜರುಗತ್ತವೆ.ವಿಶೇಷ ವೆಂದರೆ ಪವಿತ್ರ ಸ್ಥಳಗಳಿಗೆ ಹೋಗಿ ಎಳ್ಳ ಬೆಲ್ಲ ಅರಿಷಿನ ಮುಂತಾದ ಜನ ಪದ ಅಮೃತಗಳನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಿ ದೈವಿ ಶಕ್ತಿಗಳಿಗೆ ತಲೆ ಬಾಗುವ ಪದ್ಧತಿ ಗಳಿವೆ,ಹಲವು ಬಾಂಧವ್ಯ ಬೆಸೆಯುವ ಹಬ್ಬ ಇದಾಗಿದ್ಧು ಎಲ್ಲ ಕೆಲಸ ಕಾರ್ಯಗಳನ್ನು ಬದಿ ಗಿಟ್ಟು ಕುಟುಂಬ ಬಂಧು ಮಿತ್ರರೊಡನೆ ಸಾಮ ರಸ್ಯದಿಂದ ಸೇರುವ ಸಡಗರದ ದಿನವಾಗಿದೆ.
ಆಹಾರಗಳಲ್ಲಿದೆ ಆರೋಗ್ಯ

ಸಂಕ್ರಾತಿ ಹಬ್ಬದಲ್ಲಿ ಸವಿಯುವ ಆಹಾರಗಳಲ್ಲಿ ಆರೋಗ್ಯವಿದೆ ನಮ್ಮ ಕರ್ನಾಟಕದಲ್ಲಿ ಸಂಕ್ರಾತಿ ಎಂದರೆ ಎಳ್ಳು ಬೆಲ್ಲ ಸವಿಯುವುದು, ತಮಿಳು ನಾಡಿನಲ್ಲಿ ಪೊಂಗಲ್ ಮಾಡುವುದು ಹಾಗು ದೇಶದ ತುಂಬೆಲ್ಲಾ ಎಳ್ಳು, ಬೆಲ್ಲ, ಕೊಬ್ಬರಿ, ಹಣ್ಣುಗಳನ್ನು ಸವಿಯುವ ಹಾಗೂ ವಿಧವಿಧ ವಾದ ಅಡುಗೆ ಮಾಡುವ ಸ್ವಾಸ್ಥ್ಯ ಸಂಪ್ರದಾಯ ವಿದೆ.ಹೊರಗಡೆ ಓಲೆ ಹಚ್ಚಿ ಮಣ್ಣಿನ ಮಡಿಕೆ ಯಲ್ಲಿ ಮಾಡುವ ಪೊಂಗಲ್ ನಲ್ಲಿ ವಿಟಿಮಿನ್ ಡಿ ಸಿಗುತ್ತದೆ ಅಲ್ಲದೆ ಇದರಲ್ಲಿ ಅರಿಷಿನ ಹಾಕುವ ದರಿಂದ ವೈರಾಣುಗಳ ವಿರುದ್ಧ ಹೋರಾಟ ಮಾಡುವ ಸಾಮಾರ್ಥ್ಯ ದೇಹಕ್ಕೆ ಬರುತ್ತದೆ, ರುಚಿಗಾಗಿ ಬಳಸುವ ಶುದ್ಧವಾದ ತುಪ್ಪದಲ್ಲಿ ತ್ವಚೆಯ ತೇವಾಂಶ ಕಾಪಾಡಿ ತ್ವಚೆ ಹಾಗೂ ಕೂದಲನ್ನು ರಕ್ಷಣೆ ಮಾಡುತ್ತದೆ. ಪೊಂಗಲ್ನಲ್ಲಿ ಬಳಸುವ ಅಕ್ಕಿ ಮತ್ತು ಹೆಸರು ದೇಹದಲ್ಲಿ ಕಾರ್ಬೊಹೈಡ್ರೇಟ್ಸ ಹಾಗೂ ಪ್ರೋಟಿನ್ ಸಮ ತೋಲನ ಕಾಪಾಡಲು ಸಹಕಾರಿಯಾಗುತ್ತದೆ. ಬೆಲ್ಲದಲ್ಲಿ ಖನಿಜಾಂಶಗಳಾದ ಕ್ಯಾಲ್ಸಿಯಂ, ಕಬ್ಬಿನಾಂಶ, ಸತು,ರಂಜಕ, ಪೊಟ್ಯಾಸಿಯಂ, ಸೆಲೆನಿಯಮ್ ಇದ್ಧು ಬೇಡಾದ ಕಲ್ಮಶವನ್ನು ಹೊರಗಡವಲು ಸಹಕಾರಿ. ಎಳ್ಳಿನಲ್ಲಿ ತಾಮ್ರ, ಕ್ಯಾಲ್ಸಿಯಂ, ಸತು,ಕಬ್ಬಿನಾಂಶ ವಿಟಿಮಿನ್ ಇ ಇದ್ಧು ಆ್ಯಂಟಿ ಆಕ್ಸಿಡಂಟ್ ರೋಗ ನಿರೋಧಕ ಶಕ್ತಿ ಹೆಚ್ಚಿಸು ವದು,ನಾರಿನ ಅಂಶ ನೆಲಗಡಲೆ ಯಲ್ಲಿಯೂ ಒಮೆನಾ 6ಕಬ್ಬಿನಾಂಶ ಇದ್ಧು ತ್ವಚೆಗೆ ಒಳ್ಳೆಯದು ಇದರಲ್ಲಿ ವಿಟಿಮಿನ್ ಬಿ ಮತ್ತು ಬಿಯೋಟಿಸ್ ಇರುವದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಬಾರೇ ಹಣ್ಣಿನಲ್ಲಿ ಯೂ ವಿಟಿಮಿನ್ ಸಿ ಇದ್ಧು ಆ್ಯಂಟಿ ಆಕ್ಸಿಡಂಟ್ ದೇಹದಲ್ಲಿರುವ ಬೇಡದ ಕಣಗಳ ವಿರುದ್ಧ ಹೋರಾಡುತ್ತದೆ, ಕಬ್ಬಿನಲ್ಲಂತೂ ಎಲೆಕ್ಟ್ರೋ ಲೈಟ್ಸ , ಕ್ಯಾಲ್ಸಿಯಂ, ಕಬ್ಬಿನಾಂಶ ಇದ್ಧು ರೋಗ ನಿರೋಧಕ ಶಕ್ತಿಯಾಗಿ ಹೋರಾಡುತ್ತದೆ. ಹೀಗೆ ಒಂದಲ್ಲಾ ಎರಡಲ್ಲಾ ಸಂಕ್ರಾತಿಯಲ್ಲಿ ಸವಿಯುವ ಆಹಾರಗಳು ಅದ್ಭುತ್ !ಇನ್ನೂ ಅಡುಗೆಯಂತೂ ಉಣ್ಣುವದಕ್ಕೆ ಪುಣ್ಯ ಮಾಡಿರಬೇಕು! ಸಂಕ್ರಾತಿ ಸಮಯದಲ್ಲಿ ಸವಿಯುವ ಆಹಾರಗಳು ಆರೋಗ್ಯ ವರ್ಧಕ ಗಳಾಗಿವೆ.
ಹರುಷ ತರಲಿ ಸಂಕ್ರಾತಿ

ಕಳೆದ ಎರಡು ಮೂರು ವರ್ಷಗಳಲ್ಲಿ ಸಂಕ್ರಾಮಿ ಕ ರೋಗಗಳು ಜಗತ್ತನ್ನೆ ಬಯದ ವಾತಾವರಣ ದಲ್ಲಿಟ್ಟವು ಎಲ್ಲರು ಎಲ್ಲವು ಇದ್ಧು ಏನು ಇಲ್ಲದ ನಿಸ್ಸಾಹಯಕ ಸ್ಥಿತಿಯಲ್ಲಿ ಕಾಲ ಕಳೆಯುವಂತಾ ಯಿತು.ನಮ್ಮ ಹಬ್ಬ, ಸಂಪ್ರದಾಯಗಳಲ್ಲಿ ಆರೋಗ್ಯ ಸ್ವಾಸ್ಥ್ಯ ಬಯಸುವ ಹಿನ್ನಲೆಗಳಿವೆ ಜನಪದ ಆಚರಣೆ ಗಳು ಜನಜೀವನದ ಶ್ರೇಷ್ಠತೆ ಯ ಬದುಕನ್ನು ಬಯಸುತ್ತವೆ.
ನಮ್ಮ ಹಳ್ಳಿಗಾಡಿನ ಹಬ್ಬಗಳಲ್ಲಿ ನಾವೆಲ್ಲರೂ ಸಂಭ್ರಮದಿಂದ ಪಾಲ್ಗೋಳ್ಳೋಣ… ಸಂಕ್ರಾತಿ ಸಕಾರಾತ್ಮಕ ಸಕ್ರಿಯತೆಗೆ ಕ್ರಾಂತಿಯಾಗಲಿ ಸಹಬಾಳ್ವೆಯೊಂದಿಗೆ ಸಂಸ್ಕಾರ ಒಡಮೂಡಲಿ, ಮಕರ ಸಂಕ್ರಾತಿ ಎಲ್ಲರಿಗೂ ಹರುಷ ತರಲಿ.

✍ಶ್ರೀಮತಿ.ಭಾಗ್ಯಶ್ರೀ ಗ ಹಳ್ಳಿಕೇರಿಮಠ ಸಾ:ಜಂತಲಿ ಶಿರೂರು ತಾ-ಮುಂಡರಗಿ ಜಿ-ಗದಗ