ನಾಡಿನ ದೇವಾಲಯಗಳ ನಿರ್ಮಾಣದಲ್ಲಿ ಹೊಸ ಸ್ವರೂಪವನ್ನು ನೀಡಿದವರು ಕಲ್ಯಾಣ ಚಾಲುಕ್ಯರು.ಅವರ ಹಲವು ದೇವಾಲಯಗಳು ವಾಸ್ತು ಲೋಕಕ್ಕೆ ಹೊಸ ಸ್ವರೂಪವನ್ನೇ ನೀಡಿತು. ಅವರ ಕಲಾತ್ಮಕ ಕೆತ್ತೆನೆಗಳು ಜಾಲಂದ್ರಗಳು ಹೊಸ ಸ್ವರೂಪವನ್ನೇ ನೀಡಿ ದವು. ಇಂತಹ ಅಪರೂಪದ ಮಾದರಿಯ ಸುಂದರವಾದ ಕಲಾತ್ಮಕ ದೇವಾಲಯವೊಂ ದು ಹುಬ್ಬಳ್ಳಿಯ ಸಮೀಪದಲ್ಲಿನ ಉಣಕಲ್ಲಿನ ಲ್ಲಿದೆ.
ಇತಿಹಾಸಪುಟದಲ್ಲಿ ಶಾಸನಗಳಲ್ಲಿ ಉಣಕಲು – ಉಣಗಲು – ಉಣವಕಲ್ಲು ಎಂಬ ಉಲ್ಲೇಖ ವಿದ್ದು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಮುಖ ಕೇಂದ್ರವಾಗಿತ್ತು.ಹಲಸಗಿ -12000 ಪ್ರಾಂತ್ಯಕ್ಕೆ ಸೇರಿದ್ದಇದು ಉಣಕಲ್ಲು 30 ಎಂದೇ ಪರಿಚಯವಾಗಿತ್ತು. ಇಲ್ಲಿನ ಶಾಸನ ಗಳಲ್ಲಿ ಉಗುರೇಶ್ವರ ಕೇಶವನ ಸ್ಥಾಪನೆಯ ಉಲ್ಲೇಖವಿದ್ದರೆ ಇನ್ನು ಉಳಿದ ಶಾಸನಗಳಲ್ಲಿ ಚಂದ್ರಮೌಳೀಶ್ವರ ದೇವಾಲಯದ ಉಲ್ಲೇಖ ವಿದೆ.ಇಲ್ಲಿ ಚಾಳುಕ್ಯರು ಹಾಗು ಚೋಳರ ನಡುವೆ ಯುದ್ದ ನಡೆದ ಉಲ್ಲೇಖವನ್ನು ನೋಡಬಹುದು.
ಚಂದ್ರಮೌಳೀಶ್ವರ ದೇವಾಲಯ

ಸುಮಾರು 12 ನೇ ಶತಮಾನದಲ್ಲಿ ನಿರ್ಮಾಣ ವಾದ ಕಲ್ಯಾಣ ಚಾಲುಕ್ಯರ ಈ ದೇವಾಲಯ ವಿಭಿನ್ನವಾದ ದೇವಾಲಯ. ಸಾಮಿಮೋಜ ಈ ದೇವಾಲಯದ ಮುಖ್ಯ ಸ್ಥಪತಿಯಾದ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ…ಈದೇವಾಲಯಕ್ಕೆ ನಾಲ್ಕು ದಿಕ್ಕಿನಿಂದ ಪ್ರವೇಶವಿದ್ದು ಮಧ್ಯಭಾಗ ದಲ್ಲಿ ಗರ್ಭಗುಡಿ ನಿರ್ಮಾಣವಾಗಿದ್ದು ಸುತ್ತ ಲೂ ಪ್ರದಕ್ಷಿಣ ಪಥವಿರುವುದು ವಿಶೇಷ. ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ ಭಾಗ ಗಳು ಇದ್ದು, ಚತುರ್ರಸ ಮಾದರಿಯ ಅಪರೂಪದ ದೇವಾಲಯ. ಗರ್ಭ ಗುಡಿಯಲ್ಲಿ ಚಂದ್ರಮೌಳೀಶ್ವರ ಎಂದು ಕರೆ ಯುವ ಶಿವಲಿಂಗವಿದೆ.

ಇನ್ನು ಗರ್ಭಗುಡಿಯಲ್ಲಿ ಮೊದಲು ಇದ್ದ ಚತುರ್ಮುಖ ಶಿವಲಿಂಗವನ್ನು ಈಗ ಮುಖ ಮಂಟಪದಲ್ಲಿಇರಿಸಲಾಗಿದೆ.ಇದರಲ್ಲಿ ಪೂರ್ವ ಕ್ಕೆ ತತ್ಪುರುಷ, ದಕ್ಷಿಣಕ್ಕೆ ಆಘೋರ, ಪಶ್ಚಿಮಕ್ಕೆ ಸದ್ಯೋಜಾತ ಹಾಗು ಉತ್ತರಕ್ಕೆ ವಾಮದೇವನ ಮುಖವಿದ್ದು ಚಾಲ್ಯುಕ್ಯರ ಅಪರೂಪದ ಚತು ರ್ಮುಖ ಶಿವಲಿಂಗವಿದೆ.ಇನ್ನು ಮುಖಮಂಟ ಪದಲ್ಲಿ ಸುಂದರವಾದ ನಂದಿಯಿದ್ದು,ಕುಳಿತಿ ರುವ ಭಂಗಿಯಲ್ಲಿದ್ದು ಕೊರಳಲ್ಲಿನ ಘಂಟಾ ಸರ ಹಾಗು ಗಗ್ಗರ ಗಮನ ಸೆಳೆಯುತ್ತದೆ.

ಇಲ್ಲಿನ ನಾಲ್ಕು ಪ್ರವೇಶ ದ್ವಾರಗಳು ಸುಂದರ ವಾಗಿ ಪಂಚಶಾಖೆಯಿಂದ ಅಲಂಕರಣಗೊಂ ಡಿದ್ದು ದ್ವಾರಪಾಲಕರೆ ಕೆತ್ತೆನೆ ಇದೆ. ಇನ್ನು ಇಲ್ಲಿನ ನಾಲ್ಕು ದಿಕ್ಕಿನಲ್ಲೂ ಮುಖಮಂಟಪ ವಿದ್ದು,ಪೂರ್ವದ್ವಾರದ ಬಾಗಿಲುವಾಡ ಮಾತ್ರ ಸುಂದರವಾಗಿ ಅಲಂಕರಣಗೊಂಡಿದೆ. ಇಲ್ಲಿ ತ್ರಿಶಾಖ ಮಾದರಿಯ ಕೆತ್ತೆನೆ ಇದ್ದು ಇಲ್ಲಿನ ಕಮಲ ಹಾಗು ಬಳ್ಳಿಯ ಕೆತ್ತೆನೆ ಇದ್ದು ಸುಂದರ ಮಕರ ತೋರಣವಿದೆ.ಇಲ್ಲಿ ಕಾಣ ಸಿಗುವ ಜಾಲಂದ್ರ ಗಳು ಕಲ್ಯಾಣ ಚಾಲುಕ್ಯರ ಕಲಾತ್ಮ ಕತೆಯನ್ನ ಸಾರಿ ಹೇಳುತ್ತದೆ. ಅತ್ಯಂತ ಸೂಕ್ಷ್ಮ ಕೆತ್ತೆನೆಯಿ ರುವ ಇಲ್ಲಿನ ನಾಟ್ಯ ಹಾಗು ವಾದ್ಯಗಾರ ಭಂಗಿ ಗಳು ಬಳ್ಳಿಗಾವಿಯ ತ್ರಿಪುರಾಂತಕೇಶ್ವರ ದೇವಾಲಯದ ಜಾಲಂದ್ರಗಳನ್ನು ನೆನಪಿ ಸುತ್ತದೆ. ಇಲ್ಲಿ ಮುಂದೆ ಇದ್ದ ಮಹಾಮಂಟಪ ಬಹುತೇಕ ನಾಶವಾಗಿದೆ.ದೇವಾಲಯದ ಹೊರಭಿತ್ತಿಯ ಲ್ಲಿನ ಅರೆಗಂಭಗಳ ಅಲಂಕಾರಗಳು, ವಿಷ್ಣು, ನಟರಾಜ,ಶಿವ,ಬ್ರಹ್ಮ ಮುಂತಾದ ಕೆತ್ತೆನಗಳು ಗಮನ ಸೆಳೆಯುತ್ತದೆ. ಇನ್ನು ಕಪೋತದ ಭಾಗದಲ್ಲಿ ಹಲವು ದೇವರ ಕೆತ್ತೆನೆಯನ್ನು ನೋಡಬಹುದು.
ಕಲ್ಲೇಶ್ವರ ದೇವಾಲಯ

ಕಲ್ಯಾಣ ಚಾಲುಕ್ಯರ ಕಾಲದ ಈ ದೇವಾಲಯ ಈಗ ಜೀರ್ಣೋದ್ದಾರಗೊಂಡಿದ್ದು ಚಾಲುಕ್ಯರ ಕಾಲದ ಗರ್ಭಗುಡಿ ಹಾಗು ನವರಂಗ ಹೊಂದಿ ದೆ.ಉಳಿದ ಭಾಗಗಳು ನಂತರ ಸೇರ್ಪಡೆಯಾ ಗಿದ್ದು ಗರ್ಭಗುಡಿಯಲ್ಲಿ ಕಲ್ಲೇಶ್ವರ ಎಂದು ಕರೆ ಯುವ ಶಿವಲಿಂಗವಿದೆ. ಇನ್ನು ದೇವಾಲಯದ ಎದುರು ಭಾಗದಲ್ಲಿ ಪ್ರತ್ಯೇಕ ನಂದಿಮಂಟಪ ವಿದ್ದು ಇಲ್ಲಿ ಸುಮಾರು ಐದು ಅಡಿ ಎತ್ತರದ ನಂದಿ ಇದೆ.
ಇನ್ನು ಉಣಕಲ್ಲಿನ ಕೆರೆ ಇಲ್ಲಿನ ಸುಂದರ ಕೆರೆ ಯಾಗಿದ್ದು ಇಲ್ಲಿನ ಗುಡ್ಡದಲ್ಲಿ ಉಣಕಲ್ಲಗುಡ್ಡ ಅಥವಾ ನೃಪತುಂಗ ಬೆಟ್ಟ ಎಂದು ಕರೆಯಲಾ ಗುತ್ತದೆ. ಇನ್ನು ಉಣಕಲ್ಲಿನಲ್ಲಿ ವೀರಭದ್ರ, ಪಾಂಡುರಂಗ, ಆಂಜನೇಯ ಹಾಗು ಪ್ರಸಿದ್ದ ಸಿದ್ದಪ್ಪಾಜಿ ಮಠವಿದೆ.
ತಲುಪವ ಬಗ್ಗೆ : ಉಣಕಲ್ಲ ಹುಬ್ಬಳಿ – ಧಾರವಾಡ ರಸ್ತೆಯಲ್ಲಿ ಹುಬ್ಬಳ್ಳಿಯಿಂದ ಸುಮಾರು 2 ಕಿ.ಮೀ. ಹಾಗು ಧಾರವಾಡದಿಂದ ಸುಮಾರು 16 ಕಿ. ಮೀ.ದೂರದಲ್ಲಿದೆ.
✍️ಶ್ರೀನಿವಾಸಮೂರ್ತಿ ಎನ್.ಎಸ್. ಬೆಂಗಳೂರು