ನಮಿಸುವೆನ ಅಮ್ಮಾ ಶಾರದೆಗೆ
ವಂದಿಸುವೆನು ನಾ ವಾಗ್ದೇವಿಗೆ
ಹೂಮನವ ಅರ್ಪಿಸುವೆ ನಿನಗೆ
ಶರಣು ಎನ್ನುವೆ ಕಲಾವಲ್ಲಭೆಗೆ
ಬೇಡುವೆನು ವೀಣಾಪಾಣಿಯೇ
ನಿನ್ನ ಕೈಯ ವೀಣೆ ನನ್ನ ಮಾಡಿಕೋ
ಹಾಡುವೆನು ವರದಸ್ವರವಾಣಿಯೇ
ಅಮ್ಮಾ ನಿನ್ನಿಚ್ಛೆಯಂತೆ ನುಡಿಸಿಕೋ
ನಿನ್ನ ಕಾಣದೇ ಬೆಳಕು ಕಾಣಲಾರೆನು
ನಿನ್ನ ಸ್ತುತಿಸದೇ ನಾ ನುಡಿಯಲಾರೆನು
ನೀನು ನಡೆಸದೇ ನಾ ನಡೆಯಲಾರೆನು
ಉಸಿರ ಕೊನೆವರೆಗೂ ನಿನಗೆ ಶರಣನು
ನೀನು ಭಾವಶ್ವೇತ ಹಂಸವಾಹಿನಿ
ಮುಗ್ಧ ಭಕುತಿಗೆ ವರಪ್ರದಾಯಿನಿ
ನನ್ನ ಕೈಯ ಬಿಡದೆ ನಡೆಸಮ್ಮಾ ನಿ
ವಾಣಿನಿ, ವೇಣಿನಿ ಸಲಹಮ್ಮಾ ನಿ
ಕಲಾ ವೇದ ವಿದ್ಯೆಗೆ ಪರಿಣಿತಿ
ಅಭಯಧಾತೆ ಆಗಿ ಕಾಯುತಿ
ಭಾಗ್ಯ ಬೆಳಗುವೆ ನೀ ಭಗವತಿ
ಜ್ಞಾನದೀಪ ಹಚ್ಚು ನೀ ಸರಸ್ವತಿ
✍️ ಕಾವ್ಯಸುತ (ಷಣ್ಮುಖಂವಿವೇಕಾನಂದಬಾಬು)