ಮಗು ಆಗಮನದ ಸುದ್ದಿ ಕೇಳಿದಂತೆಲ್ಲ ಮನೆ ಮಂದಿಗೆ ಹೊಸ ಚೈತನ್ಯ ಬಂದಂತೆ.ಅದು ಗಂಡೋ ಹೆಣ್ಣೋ ಎಂಬ ಕುತೂಹಲ. ನೂರಾರು ಕನಸ ಹೊತ್ತು ಅದನ್ನೆಲ್ಲ ಜನಿಸುವ ಮಗುವಿನ ಸುತ್ತ ನೂರಾರು ಕನಸುಗಳು. ತನ್ನೆಲ್ಲ ಆಶಾಭಾವ ಗಳನ್ನು ನನಸಾಗಿಸುವ ಹೊಣೆಯ ಹೆಣಿಕೆ ಸದ್ದಿಲ್ಲದೆ ನಡೆದಿರುತ್ತದೆ. ಇನ್ನು ಪ್ರಪಂಚದ ಮುಖವ ನೋಡದ ಮುದ್ದು ಕಂದಮ್ಮಗೆ ಉದರದಲ್ಲೇ ತರಬೇತಿ ಪ್ರಾರಂಭ ವಾಗುತ್ತದೆ. ಅದರ ಭವಿಷ್ಯ ರೂಪಿ ಸಲು ಅಡ್ವಾನ್ಸ್ ಸ್ಕೂಲ್ ಪಾರ್ಮ ತುಂಬಲಾಗುತ್ತದೆ. ಅದೊಂದು ವಿಚಿತ್ರ ಚಿಂತನೆ! ಮಗು ಮೊದಲಿ ನಂತೆ ನಾರ್ಮಲ್ ಆಗಿಲ್ಲ. ಅದರ ದೃಷ್ಟಿಕೋನ ಸಂಪೂರ್ಣ ನಮ್ಮದು.

ಅಚಾನಕ್ಕಾಗಿ ನನ್ನ ಕಾರು ನಡು ಮಧ್ಯೆ ರಸ್ತೆಯ ಲ್ಲಿ ಕೆಟ್ಟು ನಿಂತಿತ್ತು.ಎಲ್ಲಿಯು ಸಮೀಪದಲ್ಲಿ ಗ್ಯಾರೇಜ್ ಸಿಗದ ಕಾರಣ ಹೇಗೆ ರಿಪೇರಿ ಮಾಡಿ ಸುವುದು ಎಂಬ ಚಿಂತೆ.ಡ್ರೈವರ್ ಯಾವುದೋ ಬೈಕ ಹತ್ತಿ ಮೇಕಾನಿಕ್ನನ ಕರೆತರಲು ಹೋದ. ಎಷ್ಟಂತ ಒಬ್ಬಳೇ ಕಾರಲ್ಲಿ ಕುಳಿತಿರಲಿ? ರಸ್ತೆಯ ಅಂಚಿನಲ್ಲಿ ಒಂದಿಷ್ಟು ಮಕ್ಕಳು ಕುಣಿಯುತ್ತಿರು ವುದನ್ನು ಕಂಡು ಆಶ್ಚರ್ಯ! ಆ ಧೂಳಲ್ಲಿ ಮಿಂದೆ ದ್ದ ಮಕ್ಕಳ ಮನಸ್ಸು ಸದಾ ಲವಲವಿಕೆ ಯಿಂದ ಜಿನುಗುವ ಕಾರಂಜಿಯಂತೆ ಪುಟಿಯುತ್ತಿತ್ತು. ಆದರೆ ಅವರಿಗೆ ತಾವು ಎಲ್ಲ‌ ಸೌಲಭ್ಯಗಳಿಂದ ವಂಚಿತರೆಂಬ ಕೊರಗು ಅವರ ನಗುವಲ್ಲಿ ಕಿಂಚಿ ತ್ತು ಸುಳಿಯದ ಆ ಮುಗ್ಧ ಮನಸು. ಕುತೂಹಲ ತಾಳಲಾರದೇ ದೃಷ್ಟಿ ಹರಿಸಿದೆ. ಮಕ್ಕಳ ಸಂಭ್ರಮ ಕೆ ಕಾರಣ ಪುಟ್ಟದೊಂದು ಗಾಳಿಪಟ! ಅದರ ಬಾಲಂಗೂಸಿ ಹಿಡಕೊಂಡು ನಿಂತ ಮಕ್ಕಳ ಕಂಗಳು ಮಾತ್ರ ಮರದ ಟೊಂಗೆಗೆ ಸಿಕ್ಕಿಕೊಂಡ ಗಾಳಿ ಪಟದತ್ತ ನೆಟ್ಟಿತ್ತು.

ಕೈಗೆಟುಕದ ಪಟ ಪಡೆದ ಅವರ ಸಾಹಸ ಕಂಡು ಬೆರಗಾದೆ.ಚೊಟುದ್ದ ಬಾಲಕ ವೀರಾವೇಶದಿಂದ ಮರ ಹತ್ತಿ ತಾನು ತರುವೆ ಎಂದಾಗ ಎಲ್ಲರ ಪಾಲಿಗೆ ಅವನೇ ಹೀರೋ…ಅವನಿಗೆ ಬೆಂಬಲಿಸಿ ಅವ ಹತ್ತುವ ಪ್ರತಿ ಕ್ಷಣಕ್ಕೆ ಹುರಿದುಂಬಿಸುವ ಪುಟಾಣಿಗಳ ಕೂಗು ನನಗೂ ಸ್ಪೂರ್ತಿ ನೀಡಿತ್ತು. ಸ್ನೇಹಿತರೊಂದಿಗೆ ಆಡಲು ಬಿಡದೇ ಮೂರೂ ಹೊತ್ತು ಯಂತ್ರ ದಂತೆ‌ ಸುತ್ತಾಡಿಸುವ ಚಿತ್ರಣ ಕಣ್ಣೆದುರು ಬಂದು ಬೆಚ್ಚಿಬಿದ್ದೆ. ಮೊದಲ ಮಳೆ ಯ ಹನಿ ಗಳು ಭೂಮಿ ತಲುಪಿ ಮಣ್ಣಿನ ಘಮ ಲು‌ ಆಸ್ವಾದಿಸು‌ವ ಗಳಿಗೆ ಮಕ್ಕಳಿಗೆ ನೀಡಿದ್ದಿವಾ? ಅಥವಾ ಅದರ ಸವಿನಯ ನೆನಪುಗಳನ್ನು ಬಿತ್ತರಿಸಿದ್ದೀವಾ? ಪ್ರಶ್ನೆಗೆ ಉತ್ತರ ಕಾಣದೆ ಮೌನ ವಾದೆ.

ಇಂದಿನ ಯಾಂತ್ರಿಕ ಯುಗದಲ್ಲಿ ಎಲ್ಲವೂ ಸಾಧ್ಯವಾ? ಒಂದು ಭತ್ತದ ಕಾಳು ತೆನೆಯಾಗಿ ಪರಿವರ್ತನೆಯಾಗಬೇಕೆಂದರೆ ಅದಕ್ಕೆ ಭೂಮಿ ತಾಯಿ ಯ ಅಂತಃಸತ್ವ ಹಾಗೂ ಪ್ರಕೃತಿಯ ಕೊಡುಗೆ, ನೇಸರನ ಆಶೀರ್ವಾದ, ವರುಣನ ಹಿತಮಿತವಾದ ದೃಷ್ಟಿ ಎಲ್ಲವೂ ಏಕಕಾಲದಲ್ಲಿ ಸರಿಯಾಗಿ ತಲುಪಿದರೆ ಮಾತ್ರ ಸಾಧ್ಯವೆಂಬ ಸತ್ಯ ಅರಿವಾಗುವುದು ಬೆಳೆಯ ಬೆಳವಣಿಗೆ ಯಲ್ಲಿ ಯಾವುದಾದರೊಂದು ರೀತಿ ಕುಂಠಿತ ವಾದಾಗ ಮಾತ್ರ. ಮಗುವಿನ ಸರ್ವಾಂಗೀಣ ಪ್ರಗತಿಯ ಮೂಲವೇ ಪ್ರಕೃತಿ.

ಆದರೆ ಇಂದಿನ ದಿನಮಾನಗಳು ಮಗುವಿನ ಚಿಂತನೆಯ ದಿಕ್ಕನ್ನು ದಿಕ್ಕಾಪಾಲು ಮಾಡಿವೆ. ತಾನು ಅನುಭವಿಸಿದ ಯಾವ ಕಷ್ಟಗಳನ್ನೂ ತನ್ನ ಮಗು ಅನುಭವಿಸಬಾರದೆಂದು ಎಲ್ಲ ಸಂಕಷ್ಟ ಗಳ ಭಾರಹೊತ್ತು ಸೋತು ಸುಣ್ಣ ವಾದ ಪಾಲಕ ರೆಷ್ಟೋ. ತಂದೆ-ತಾಯಿಯ ನೋವು ಮರೆತು ಕೊನೆಗಾಲದಲ್ಲಿ ವೃದ್ದಾಶ್ರಮ ದ ಪಾಲಾದವರೆ ಷ್ಟೋ, ತಾವು ನೆಟ್ಟ ಸಸಿಯು ಮುಂದೊಂದು ದಿನ ನೆರಳಾದೀತೆಂಬ ಭ್ರಮೆ ಯಲ್ಲಿ ಮೌಲ್ಯಗಳ ನ್ನು ಬೆರೆಸದೆ,ಮರೆತು ಬೆಳೆಸಿದ್ದರ ಪರಿಣಾಮವೇ ನಮ್ಮ ಕಂಗಳು‌ ತೇವವಾಗಲು ಕಾರಣವೆಂಬ ಸತ್ಯ ಗೋಚರಿಸ ಬೇಕಷ್ಟೇ.

ಮಗು ದೇವರೆಂಬ ಭಾವ ದಿಟವಾದರೇ; ಮಗು ವಿನ ಮನದಲ್ಲಿ ಪರಿಸರವನ್ನು ಹಚ್ಚಹಸಿರಾಗಿ ಸುವ ನೆನಪನ್ನು ಅಚ್ಚಳಿಯದಂತೆ ಪಸರಿಸಲು ಅವಕಾಶ ಕಲ್ಪಿಸಿ. ಎಲ್ಲೆಗಳನ್ನೂ ಮೀರಿದ ಮಾನವೀಯತೆಯ ಸರಳ ಮಾರ್ಗವನ್ನು ಅಳವಡಿಸಿ. ಪ್ರತಿ ಮಗುವಿನಲ್ಲಿ ಸಾಧಕನಿಗೆ ಬೇಕಾದ ಎಲ್ಲ ಸಾಮರ್ಥ್ಯವಿದೆ. ಅದನ್ನು ಸೂಕ್ತ ಸಮಯದಲ್ಲಿ ಜಾಗೃತಗೊಳಿಸು ವುದು ಬಹುಮುಖ್ಯ. ಮಗುವಿನ ನಿಷ್ಕಲ್ಮಶ ಪ್ರೇಮ ತುಂಬಿದ ನಗುವಿನ ಮುಂದೆ ಎಲ್ಲಶೂನ್ಯ.

ಹಕ್ಕಿಯಂತೆ ಸ್ವಚ್ಛಂದವಾಗಿ ಅಭಿವ್ಯಕ್ತಿಸುವ, ಬದುಕುವ ಹಕ್ಕು ಎಲ್ಲರಿಗೂ ಇದೆ.ವಿವಿಧ ಬಣ್ಣ ಗಳ ಸಮ್ಮಿಲನವೇ ಬದುಕು. ಮಗು ಸ್ವತಃ ಅನುಭವಿಸಲು ಮುಕ್ತ ಅವಕಾಶ ನೀಡಬೇಕು. ನೀಲಿ ಬಾನಿನಲಿ‌ ಪ್ರಕಾಶಿಸುವ ಸೂರ್ಯನಂತೆ. ಅವನ ನಂಬಿ ಇಡೀ ಜೀವ ಸಂಕುಲ ಬದುಕು ತ್ತಿದೆ. ಪಾಲಕರ. ಮನೋಭಾವಗಳು ಭಿನ್ನ, ಮೌಲ್ಯಗಳು ಭಿನ್ನ. ಹೀಗಿರುವಾಗ ಬೀದಿಯಂಚಿನ ಟೆಂಟ್ಗಳ್ಲಿ ಬೆಳೆದ ಮಗುವಿಗೂ ಸ್ಥಿತಿವಂತ ಮನೆಯಲ್ಲಿ ಬೆಳೆದ ಮಗುವಿಗೂ ಸಾಕಷ್ಟು ವ್ಯತ್ಯಾಸ. ಆದರೆ ಮಗುವಿನ ಎಳೆತನ ಇರುವಷ್ಟು ಸಮಯ ಕುಣಿದು ಕುಪ್ಪಳಿಸಲು ಬಯಸುತ್ತೆ.ಅದು ಕಠಿಣತೆ ಗೆ ವಾಲಿದಂತೆ ಚಿತ್ರಪಟದಲ್ಲಿ ನೋಡಿ ಸಂತಸ ಪಡುವ ಕ್ಷಣಗಣನೆ..

✍️ಶ್ರೀಮತಿ.ಶಿವಲೀಲಾ ಹುಣಸಗಿ 
ಶಿಕ್ಷಕಿ ಯಲ್ಲಾಪೂರ