ಹಬ್ಬಗಳೆಂದರೆ ಎಲ್ಲಿಲ್ಲದ ಸಂಭ್ರಮವು ಮಕ್ಕಳಿಂ ದ ಹಿರಿಯರವರೆಗೂ ಅಚ್ಚುಮೆಚ್ಚು. ಮಕ್ಕಳಿಗೆ ಒಂದಿಷ್ಟು ಸಿಹಿತಿಂಡಿ, ಹೊಸಬಟ್ಟೆ, ಮನೆತುಂಬ ನೆಂಟರು, ಹಬ್ಬದಡಿಗೆ ಎಲ್ಲವೂ ಮಕ್ಕಳಿಗೆ ಇಷ್ಟ. ಸಂಪ್ರದಾಯಗಳು, ಆಚರಣೆಗಳು ಯಾಕಾಗಿ ಎಂಬೆಲ್ಲ ಮಹತ್ವ ತಿಳಿಸುವ ಅಮೃತ ಗಳಿಗೆಗಳು. ಅಜ್ಜ,ಅಜ್ಜಿಯರಿದ್ದ ಮನೆಯಲ್ಲಿ ಮೊಮ್ಮಕ್ಕಳಿಗೆ ಹಬ್ಬದ ಕುರಿತಾಗಿ ಕಥೆಗಳು ರೋಚಕ ಅನುಭವ ನೀಡುವುದರೊಂದಿಗೆ, ಹಬ್ಬದ ವಿಶೇಷತೆಗಳು ನಮ್ಮ ಸಂಸ್ಕೃತಿಗಳ ಅರಿವು ಮೂಡಿಸಿದಂತಾಗು ವುದು. ಬಿಡುವಿಲ್ಲದೆ ದುಡಿವ ಪಾಲಕರಿಗೆ ಪುರ ಸೊತ್ತಿಲ್ಲ. ಮನೆಗೆ ತೆರಳಿದಾಕ್ಷಣ ಎದುರಾಗುವ ಸಂಸಾರ ತಾಪತ್ರೆಯದಲ್ಲಿ ಮುಳುಗಿದ ಪ್ರತಿಯೊ ಬ್ಬ ಪಾಲಕರಿಗೂ ಕಾಡುತ್ತಿರುತ್ತವೆ,ಪುಟಾಣಿಗಳಿಗೆ ಸಂತಸದ ಕ್ಷಣಗಳನ್ನು ಒದಗಿಸುವ ನೂರು ಕನ ಸುಗಳ ಹೊತ್ತಿರುವುದಕ್ಕೆ ಹಬ್ಬಗಳು ಸ್ವಲ್ಪ ಸಮ ಯವಾದರೂ ರಿಲೀಫ್ ಆಗಿ, ಮನೆಯೊಂದು ಸಂಭ್ರಮದ ಮಂದಿರವಾಗಲು ಶ್ರಮಿಸುವಾಗೆಲ್ಲ ಹೆಮ್ಮೆ.

ದೀಪ ಗಳಹಬ್ಬ ದೀಪಾವಳಿಯು ಜೋಪಡಿಯಿಂ ದ ಹಿಡಿದು ಅಂತಸ್ತುಗಳ ಮಹಲಿಗೂ ಪುಟ್ಟ ಹಣತೆ ಬೇಕೆ ಬೇಕು. ಕಾರಣ ಬೆಳಕು ಎಂಬ ಮಾಂತ್ರಿಕ ಎಲ್ಲರ ಬದುಕಿಗೆ ಇಲ್ಲದೆ ಹೋದರೆ ಬದುಕು ನಿಸ್ತೇಜ. ಹಬ್ಬಗಳು ಹಾಗೂ ಅದರ ಹಿಂದಿನ ಮಹತ್ವ ನೆನೆದರೆ ಪೂರ್ವಿಕರು ಸುಮ್ಮನೆ ಅವುಗಳ ಆಚರಣೆಗೆ ಪ್ರಾಮುಖ್ಯತೆ ನೀಡಿಲ್ಲ. ವೈಜ್ಞಾನಿಕ ಮನೋಭಾವದೊಂದಿಗೆ ತನ್ನೊಳಗಿನ ಅಂತಃಶಕ್ತಿಯನ್ನು ಜಾಗೃತಗೊಳಿಸುವುದರ ಮೂಲಕ ಇತರರಿಗೂ ಜ್ಞಾನದ ಜ್ಯೋತಿಯನ್ನು ಪಸರಿಸಲು ನೆರವಾಗಿವೆ. ಕಾರ್ತಿಕ ಮಾಸದಲ್ಲಿ ಸೂರ್ಯಾಸ್ತ ಬೇಗನೆ ಆಗುತ್ತದೆ.

ಓಂ ಅಸತೋ ಮಾ ಸದ್ಗಮಯಾ,
ತಮಸೋ ಮಾ ಜ್ಯೋತಿರ್ಗಮಯ, 
ಮೃತ್ಯೋರ್ಮಾ ಅಮೃತಂಗಮಯ.

ದೀಪಗಳ ಆವಳಿ ಅಂದರೆ ಸಾಲು ಸಾಲು ದೀಪಗ ಳನ್ನು ಬೆಳಗಿದಿ ಕತ್ತಲೆಯನ್ನು ಹೋಗಲಾಡಿಸಲು ಹಣತೆಗಳ ಬೆಳಗಿಸುತ್ತೇವೆ. ದೀಪಾವಳಿ ಕಳೆದ ನಂತರ ಚಳಿಗಾಲ ಆರಂಭವಾಗುತ್ತದೆ. ಬೆಳಕಿನ ಹಬ್ಬ ದೀಪಾವಳಿ, ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸು ವಂತಹ ವಿಶೇಷ ಹಬ್ಬ.

ದೀಪಾವಳಿ ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಹಬ್ಬ. ಭಾರತದ ಮೇಲೆ ಆಕ್ರಮಣಕಾರರು ದಾಳಿ ಮಾಡಿದ ಮೇಲೆ ಭೂಭಾಗ ತುಂಡು ತುಂಡಾಗಿ ಹೋಯಿತು. ಮೊದಲು ಆಫ್ಘಾನಿಸ್ತಾನದಿಂದ ಬರ್ಮಾವರೆಗೆ, ಶ್ರೀಲಂಕಾ, ಕಾಂಬೋಡಿಯಾ, ವಿಯೆಟ್ನಾಂ ಅವೆಲ್ಲವೂ ಕೂಡ ಸಾಂಸ್ಕೃತಿಕ ಭಾರತದ ಭಾಗವಾಗಿತ್ತು. ಅಲ್ಲೆಲ್ಲ ಕೂಡ ದೀಪಾ ವಳಿಯ ಕಾರ್ತಿಕೋತ್ಸವವನ್ನು ಬೇರೆ ಬೇರೆ ತರ ದಲ್ಲಿ ಆಚರಣೆ ಮಾಡುತ್ತಾರೆ.

ಬೆಳಗು ಬರೀ ಬೆಳಗಲ್ಲವಿದು ಅಂಧಕಾರದಿಂದ ಹೊರದೂಡುವ ಪುಟ್ಟ ಜ್ಞಾನಕಿರಣ. ಇರುಳನ್ನು ಭೇದಿಸಲು ಇದೊಂದು ಬ್ರಹ್ಮಾಸ್ತ್ರ.ಜೈನರಿಗೆ ಇದು ಮೋಕ್ಷ್ಮ ಲಕ್ಷ್ಮಿ ಪೂಜೆ. ಇಡೀ ವರ್ಷ ಅವರು ಧನ ಲಕ್ಷ್ಮಿ ಪೂಜೆ ಮಾಡುತ್ತಾರೆ. ದೀಪಾವಳಿ ಹಿಂದಿನ ದಿನ ಮೋಕ್ಷ್ಮಲಕ್ಷ್ಮಿ ಪೂಜೆ ಮಾಡುತ್ತಾರೆ.ವೈರಾಗ್ಯ ದ ದೃಷ್ಟಿಯಿಂದ ದಾನ, ಉಪವಾಸ ಮಾಡುತ್ತಾರೆ ನಮ್ಮಲ್ಲಿ ದೀಪಾವಳಿ ಅಮಾವಾಸ್ಯೆ ದಿನ ಕೇದಾ ರೇಶ್ವರ ವ್ರತ ಮಾಡುತ್ತೇವೆ. ಕೆಲವರು ಕೇದಾರ ಗೌರಿ ವ್ರತ ಮಾಡುತ್ತಾರೆ.ಶಿವನ ವ್ರತವೇ ಕೇದಾರ ವ್ರತವಾಗಿರುತ್ತದೆ.

ದೀಪಾವಳಿಯನ್ನು ನಾವು ಇಂದು ಮೂರು ದಿನ ಗಳಿಗೆ ಸೀಮಿತಗೊಳಿಸಿದರೂ ಮೂಲತಃ ಐದು ದಿನಗಳ ಹಬ್ಬ. ಐದು ದಿನಗಳಲ್ಲಿ ಮೊದಲ ದಿನ ನೀರು ತುಂಬುವುದು,ಎರಡನೇ ದಿನ ನರಕ ಚತು ರ್ದಶಿ, ಮೂರನೇ ದಿನ ದೀಪಾವಳಿ ಅಮವಾಸ್ಯೆ , ನಾಲ್ಕನೇ ದಿನ ಬಲಿಪಾಡ್ಯಮಿ ಹಾಗೂ ಐದನೇ ದಿನ ಯಮ ದ್ವಿತೀಯ ಆಚರಣೆಯಿರುತ್ತದೆ. ಇಂದೆಲ್ಲ ಇಷ್ಟು ದಿನ ಆಚರಿಸುವ ಸಮಯವೆಲ್ಲಿ? ಮಕ್ಕಳಿಗೆ ಶಾಲೆ,ಪಾಲಕರಿಗೆ ಉದ್ಯೋಗ, ಬದುಕಿ ನ ಚಕ್ರ ಸಾಗಿಸಲು ದುಡಿಮೆ ಅನಿವಾರ್ಯ.

ಬೌದ್ಧರಲ್ಲಿರುವ ಹಲವಾರು ಪಂಗಡಗಳು ದೀಪಾ ವಳಿಯ ಮೂರು ದಿನ ಪೂಜೆ ಮಾಡುತ್ತಾರೆ. ಸಿಖ್ಖರು ಕೂಡ ಆಚರಿಸುತ್ತಾರೆ. ಒಟ್ಟಿನಲ್ಲಿ ಇದು ಈ ದೇಶದಲ್ಲಿ ಹುಟ್ಟಿರುವ ಮೂಲತಃ ಭಾರತೀ ಯರು, ಬುಡಕಟ್ಟು ಜನಾಂಗದಿಂದ ಹಿಡಿದು ಜೈನ ರು,ಬೌದ್ಧರು ಸಿಖ್ಖರು, ಹಿಂದೂಗಳು, ಕಾಡಿನಿಂದ ಹಿಡಿದು ನಾಡಿನ ಜನರವರೆಗೂ ಆಚರಿಸುವ ಪುರಾತನ ಹಬ್ಬ.ದೀಪಗಳ ಹಬ್ಬ ಇಡೀ ಜಗತ್ತನ್ನು ಕತ್ತಲಿನಿಂದ ಹೊರತರಲು ಅಂತರಂಗದಲ್ಲಿ‌ ಹಣ ತೆ ಹಚ್ಚುವುದು ಬಹು ಮುಖ್ಯ. ದುಂದು ವೆಚ್ಚಕ್ಕೆ ಹೆಚ್ಚು ಮಹತ್ವ ಕೊಡದೆ, ಸರಳವಾಗಿ ಪರಿಸರ ಸ್ನೇಹಿಯಾಗಿ ಆಚರಣೆಗೆ ಹೆಚ್ಚು ಮಹತ್ವ ನೀಡು ವುದನ್ನು ಮಕ್ಕಳಿಗೆ ಪ್ರತಿ ಹಬ್ಬದಲ್ಲೂ ಪರಿಚಯಾ ತ್ಮಕವಾಗಿ ಮನದಟ್ಟು ಮಾಡುವುದು ಪ್ರತಿ ಪಾಲ ಕರ ಆದ್ಯ ಕರ್ತವ್ಯ.

✍️ಶ್ರೀಮತಿ.ಶಿವಲೀಲಾ ಹುಣಸಗಿ
ಯಲ್ಲಪೂರ