ಒಲವಿನ ಸಿರಿಯಾದೆ
ಗೆಲುವಿನ ಬದುಕಾದೆ
ಹೃದಯಕೆ ಪ್ರೀಯವಾದೆ
ಬದುಕೆ ನೀನಾದೆ
ಪ್ರೀತಿಯ ಸಂಕೋಲೆಯಲಿ
ಪ್ರೀತಿಯನು ಧಾರೆಯೆರೆದೆ
ಬದುಕಿನ ರಂಗೋಲಿಯಲಿ
ಬಣ್ಣ ಬಣ್ಣದ ಚಿತ್ತಾರಬರೆದೆ
ಮನಸ್ಸಿನ ಗೂಡಿಗೆ
ಪ್ರೇಮದ ನಡಿಗೆ
ಭಾವನೆಗಳ ಬೆಸುಗೆ
ಪ್ರೇಮಮಾತುಗಳ ಮಲ್ಲಿಗೆ
ತನುಮನಗಳ ಅರ್ಪಣೆ
ಗಿರಿಶಿಖರಕೇರಿತು ಕಲ್ಪನೆ
ಉಸಿರಲಿ ಉಸಿರಾಗಿ
ತನುವಲಿ ತನುವಾಗಿ
ಪ್ರೀತಿಗೆ ತನುವರ್ಪಣೆ
ದೂರವಾಗದ ಸಂಕಲ್ಪನೆ
ಅರಿಯದೇ ಹೋದೆಯಾ
ನನ್ನ ಪ್ರೀತಿಯ ಮನಸನ್ನ
ಮರೆತು ಹೋದೆಯಾ
ಆಣೆಪ್ರಮಾಣಗಳ ಭಾಷಣ
ಹೋಗಬೇಡ ಬಿಟ್ಟಹೋಗಬೇಡ
ಮುಗ್ಧಪ್ರೀತಿಯ ತೊರೆಯಬೇಡ.
✍️ಶ್ರೀಮತಿ.ಚೇತನಾ ಕೀರೆಸೂರ.
ಧಾರವಾಡ