ನಾಡಿನ ಹಲವೆಡೆ ವಿವಿಧ ರಾಜಮನೆತನಗಳ ದೇವಾಲಯಗಳು ನಿರ್ಮಾಣವಾಗಿದ್ದು ಹಲವು ದೇವಾಲಯಗಳು ಸುಂದರ ಕೆತ್ತೆನೆಯಿಂದ ಗಮ ನ ಸೆಳಯುತ್ತದೆ.  ಅದರಲ್ಲಿ ಹಲವು ಅರಸರ ಸುಂದರ ದೇವಾಲಯಗಳು ಒಂದು ಕಡೆ ಸಿಗುವು ದು ಅಪರೂಪ. ಅಂತಹ ದೇವಾಲಯಗಳಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಅರಳಗುಪ್ಪೆ ಪ್ರಮುಖವಾದದ್ದು.ಇದು ಹೊಯ್ಸಳ ರ ಕಾಲದ ಅದ್ಭುತ ಕೆತ್ತೆನೆಯ ಚನ್ನಕೇಶವ ದೇವಾಲಯ ಹಾಗು ಗಂಗ ಹಾಗು ನೊಳಂಬರ ಕಾಲದ ಕಲ್ಲೇಶ್ವರ ದೇವಾಲಯಗಳು ಇರುವ ಸ್ಥಳ.

ಇತಿಹಾಸ ಪುಟದಲ್ಲಿ ಅಲರಿಗುಪ್ಪೆ ಎಂದು ಕರೆಯ ಲಾಗುವ ಅರಳಗುಪ್ಪೆ ತಿಪಟೂರು ತಾಲ್ಲೂಕಿನಲ್ಲಿ ದ್ದು ಆಗಿನ ಪ್ರಮುಖ ಪಟ್ಟಣವಾಗಿತ್ತು.  ಗಂಗರ ರಾಚಮಲ್ಲನ ವೀರಗಲ್ಲು ಇಲ್ಲಿ ದೊರೆತಿದ್ದು ಇಲ್ಲಿ ನ 1091ರ ಶಾಸನದಲ್ಲಿ ಮಹಾದೇವನಉಲ್ಲೇಖ ವಿದೆ. ಗಂಗರ ಕಾಲದಲ್ಲಿ ಪ್ರಮುಖ ಪಟ್ಟಣವಾಗಿ ದ್ದ ಇದು ನಂತರ ನೊಳಂಬ, ಹೊಯ್ಸಳ ಹಾಗು ಪಾಳೇಗಾರರ ಕಾಲದಲ್ಲಿ ಗುರುತಿಸಿಕೊಂಡಿತ್ತು. ಹೊಯ್ಸಳರ ಪ್ರಮುಖ ಸ್ಥಪತಿ ಹೊನ್ನೋಜ ಇಲ್ಲಿ ಇದ್ದು ಅವನ ರೂವಾರಿಯಲ್ಲಿ ಇಲ್ಲಿನ ಸುಂದರ ಕೇಶವ ದೇವಾಲಯ ನಿರ್ಮಾಣವಾಗಿದ್ದು ಪಾಳೇ ಗಾರರ ಚಾವಡಿ ಎಂದು ಕರೆಯುವ ಮಂಟಪವು ಇಲ್ಲಿ ಇದೆ.

ಕಲ್ಲೇಶ್ವರ ದೇವಾಲಯ

ಇಲ್ಲಿನ ಪುರಾತನ ದೇವಾಲಯ ಹೊರವೈಭವದ ಲ್ಲಿ ಇಲ್ಲಿನ ಕೇಶವ ದೇವಾಲಯದಷ್ಟು ಸುಂದರ ವಾಗಿರದಿದ್ದರೂ ಇಲ್ಲಿನ ಅದ್ಭುತ ಶಿಲ್ಪಗಳು ಈ ದೇವಾಲಯ ಅತ್ಯಂತ ಪ್ರಮುಖವಾದದ್ದು.ರಾಚ ಮಲ್ಲನ ಶಾಸನಗಳಿಂದ ಇದು ಗಂಗರ ಕಾಲದ ನಿರ್ಮಾಣ ಎಂದು ಕೆಲವರು ಅಭಿಪ್ರಾಯಪಡು ತ್ತಾರಾದರೂ ವಾಸ್ತು ಹಿನ್ನೆಲೆಯಲ್ಲಿ ನೊಳಂಬರ ದೇವಾಲಯ ಎನ್ನುವುದು ಸ್ಪಷ್ಟವಾಗುತ್ತದೆ. ದೇವಾಲಯವು ಹೊರನೋಟದಲ್ಲಿ ಸರಳವಾಗಿ ಗಿದ್ದು ಗರ್ಭಗುಡಿ, ಅಂತರಾಳ ಹಾಗು ಮಂಟಪ ವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಸುಂದರವಾ ದ ಶಿವಲಿಂಗವಿದ್ದು ಇಲ್ಲಿನ ಬ್ರಹ್ಮಸೂತ್ರ ಗಮನ ಇದರ ಪ್ರಾಚೀನತೆಯನ್ನು ಎತ್ತಿ ಹಿಡಿಯುತ್ತದೆ. ಇನ್ನು ತ್ರಿಶಾಖ ಮಾದರಿಯ ಬಾಗಿಲುವಾಡ ಇದೆ.

ಈ ದೇವಾಲಯ ಗಮನ ಸೆಳೆಯುವುದು ಇಲ್ಲಿನ ಕಲಾತ್ಮಕವಾದ ಅಷ್ಟದಿಕ್ಪಾಲಕರು ಹಾಗು ಮಧ್ಯ ದ ನಟರಾಜನ ಕೆತ್ತೆನೆಯಿಂದ. ನಮ್ಮ ರಾಜ್ಯದ ಅದ್ಭುತ ನಟರಾಜ ಎಂದೇ ಗುರುತಿಸಿಕೊಂಡ ಇದು ಇಲ್ಲಿನ ನವರಂಗ (ಮಂಟಪ)ದ ವಿತಾನದ ಲ್ಲಿದೆ.ಇಲ್ಲಿನ ಶಚಿದೇವಿ ಸಹಿತ ವಾಹನ ಐರಾವತ ದ ಮೇಲಿನ ಇಂದ್ರ (ಪೂರ್ವ), ಸ್ವಾಹ ಸಹಿತ ಟಗ ರಿನ ಮೇಲಿನ ಅಗ್ನಿ (ಆಗ್ನೇಯ), ಧೂಮ್ರೋಣ ಸಹಿತ ವಾಹನ ಕೋಣದ ಮೇಲಿನ ಯಮ (ದಕ್ಷಿಣ),ಚಂಡಿಕೆ ಸಹಿತ ವಾಹನ ಕತ್ತೆಯ ಮೇಲಿ ನ ನಿಋತಿ (ನೈರುತ್ಯ) (ಈ ಮಾದರಿ ಅಪರೂಪ ಹೆಚ್ಚಾಗಿ ಮಾನವನ ವಾಹನ ಕಾಣ ಬರುವುದು), ವಾರುಣಿ ಸಹಿತ ವಾಹನ ಮಕರದ ಮೇಲೆ ವರುಣ (ವರುಣ), ಮೋಹಿನಿ ಸಮೇತ ವಾಹನ ಸಾರಂಗದ ಮೇಲೆ ವಾಯು(ವಾಯುವ್ಯ),ಹಾರಿತಿ ಸಮೇತ ವಾಹನ ಕುದುರೆಯ ಮೇಲೆ ಕುಬೇರ (ಉತ್ತರ), ಗೌರಿಯ ಜೊತೆ ವಾಹನ ನಂದಿಯ ಮೇಲೆ ಈಶಾನ (ಈಶಾನ್ಯ) (ಇವನು ಶಿವನ ಒಂದು ರೂಪ ಎಂಬ ನಂಬಿಕೆ ಇದ್ದು ಹಾಗಾಗಿ ಇಲ್ಲಿ ಹೆಚ್ಚು ಅಲಂಕರಣಗೊಂಡಿದೆ), ಮದ್ಯದಲ್ಲಿ ನಟರಾಜನ ಕೆತ್ತೆನೆ ಇದೆ. ಕಲೆಯ ಅದ್ಭುತ ಕೆತ್ತನೆ ಯಾದ ಇದು ಅಪಸ್ಮಾರ ಪುರುಷನ ಮೇಲೆ ನೃತ್ಯ ಮಾಡುತ್ತಿದ್ದು ಜಟಾಮುಕುಟ, ಮಕರಕುಂಡಲ, ಹಾರಗಳು ಎರಡು ತ್ರಿಶೂಲಗಳು ಗಮನ ಸೆಳೆ ಯುತ್ತದೆ.  

ದೇವಾಲಯದ ಆವರಣದಲ್ಲಿ ಇರುವ ಚಿಕ್ಕ ಗುಡಿ ಯಲ್ಲಿ ಸುಂದರ ಉಮಾ ಮಹೇಶ್ವರ ಮೂರ್ತಿ ಸಹ ಇದ್ದು ರಾಜ್ಯದಲ್ಲಿ ಸಿಕ್ಕ ಅಪುರೂಪದ ಶಿಲ್ಪ. ಸುಮಾರು ಐದು ಆಡಿ ಇರುವ ಈ ಶಿಲ್ಪ ಮಹೇ ಶ್ವರನ ತೊಡೆಯಲ್ಲಿ ಉಮೆ ಆಸೀನಳಾಗಿದ್ದು ಕೈ ಗಳಲ್ಲಿ ಪಾಶ ಇದ್ದು, ಇನ್ನೊಂದಿ ಕೈನಲ್ಲಿ ಉಮೆ ಯನ್ನು ಬಳಸಿರುವಂತೆ ಇದೆ. ಸುಂದಾ ಜಟಾ ಮುಕುಟವಿದ್ದು ಚಂದ್ರನ ಕೆತ್ತೆನೆ ಇದೆ. ಕೆಳಭಾಗದ ಲ್ಲಿ ನಂದಿ ಇದೆ. ಇನ್ನು ಇದರ ಎದುರು ಕಲ್ಲೇಶ್ವರ ದೇವಾಲಯಕ್ಕೆ ಅಭಿಮುಖವಾಗಿ ಸುಮಾರು ಏಳುಅಡಿ ಎತ್ತರದ ನಂದಿ ಇದು ನಂತರ ಬಹುಶ: ಪಾಳೇಗಾರರ ಕಾಲದಲ್ಲಿ ಸೇರ್ಪಡೆಗೊಂಡಿದೆ.

ದೇವಾಲಯದಲ್ಲಿ ಆವರಣದಲ್ಲಿ ಇನ್ನು ಐದು ಉಪ ದೇವಾಲಯಗಳು ಇದ್ದು ಹೆಚ್ಚಿನ ದೇವಾಲ ಯಗಳು ನವೀಕರಣಗೊಂಡಿದೆ. ನೋಡಲು ಸರ ಳವಾಗಿದ್ದರು ತನ್ನ ಒಡದಲ್ಲಿ ಕಲೆಯ ಮಡಿಲನ್ನೇ ಹೊತ್ತು ನಿಂತಿದೆ.

ಚನ್ನಕೇಶವ ದೇವಾಲಯ

ಹೊಯ್ಸಳರ ಮೇರು ದೇವಾಲಯಗಳಲ್ಲಿ ಒಂದಾ ದ ಚನ್ನಕೇಶವ ದೇವಾಲಯ ಮೂಲತಹ ಏಕ ಕೂಟ ದೇವಾಲಯ. ಹೊಯ್ಸಳರ ಕಾಲದಲ್ಲಿ ಕಾಣಬರುವ ಅಪರೂಪದ ಏಕ ಕೂಟ ಮಾದರಿ. ಪೂರ್ವಾಭಿಮುಖವಾಗಿರುವ ಈ ದೇವಾಲಯ ಒಂದು ಗರ್ಭಗುಡಿ,ಸುಖನಾಸಿ ಹಾಗು ನವರಂಗ ಹೊಂದಿದೆ,  ಈ ದೇವಾಲಯ ಸಹ ಹೊಯ್ಸಳರ ದೇವಾಲಯಗಳಂತಯೇ ಸುಮಾರು ನಾಲ್ಕುಅಡಿ ಎತ್ತರದ ಜಗತಿಯ ಮೇಲೆ ನಿರ್ಮಾಣಗೊಂಡಿದೆ. ದೇವಾಲಯಕ್ಕೆ ಸುಂದರವಾದ ಶಿಖರವಿದ್ದು, ಗರ್ಭಗುಡಿಯಲ್ಲಿ ಚನ್ನಕೇಶವನ ಮೂರ್ತಿ ಇದೆ. ನವರಂಗದಲ್ಲಿ ಸಹ ಒಂದು ಚನ್ನಕೇಶವನ ಮೂರ್ತಿ ಇದ್ದು, ಮೂಲತ: ಗರ್ಭಗುಡಿಯಲ್ಲಿ ಈ ವಿಗ್ರಹವೆ ಇತ್ತು ಎಂದು ಹೇಳುತ್ತಾರೆ. ಗರ್ಭಗುಡಿ ಯಲ್ಲಿರುವ ಕೇಶವನಮೂರ್ತಿ ಅತ್ಯಂತ ಸುಂದರ ವಾಗಿದ್ದು ಶಂಖ, ಚಕ್ರ, ಗಧಾ ಹಾಗು ಪದ್ಮಧಾರಿ ಯಾಗಿರುವ ಮೂರ್ತಿಯ ಪ್ರಭಾವಳಿ ಸುಂದರ ವಾಗಿದೆ.ಶಿಲ್ಪದ ಆಭರಣಗಳು,ಕಂಠೀಹಾರ,ವಸ್ತ್ರ ಗಳು,ಕೈ ಮತ್ತು ಕಾಲಿನ ಅಲಂಕಾರಗಳು ಎಲ್ಲವು ಕಲಾತ್ಮಕ ವಾದ ಕುಸುರಿ ಕೆತ್ತೆನೆ ಹೊಂದಿದೆ.ಗರ್ಭ ಗುಡಿ ಸಹ ಸುಂದರವಾಗಿ ಅಲಂಕೃತವಾಗಿದ್ದು ಸುಂದರ ದ್ವಾರದ ಕೆತ್ತೆನೆ ಹೊಂದಿದೆ. ಇಲ್ಲಿನ ವೈಷ್ಣವ ದ್ವಾರಪಾಲಕರು ಸಹ ಸುಂದರವಾಗಿದ್ದು ಮೇಲ್ಭಾಗದಲ್ಲಿ ಸುಂದರ ಕಮಲ ಹಾಗು ಅಷ್ಟ ದಿಕ್ಪಾಲಕರ ಕೆತ್ತನೆ ಇದೆ.

ಇನ್ನು ಸುಖನಾಸಿ ಸಹ ಸುಂದರವಾಗಿದ್ದು ಸುಂದ ರ ಬಾಗಿಲುವಾಡ ಹೊಂದಿದೆ. ಲಲಾಟದಲ್ಲಿ ಆದಿ ಶೇಷನ ಮೇಲೆ ಪವಡಿಸಿರುವ ವಿಷ್ಣುವಿನ ಕೆತ್ತೆನೆ ಇದ್ದು ಸುಂದರ ಅಷ್ಟದಿಕ್ಪಾಲಕರ ಕೆತ್ತೆನೆ ಇದೆ. ನವರಂಗದಲ್ಲಿ ಒಟ್ಟು ೦೮ ಕಂಭಗಳಿದ್ದು ಮಧ್ಯ ಭಾಗದಲ್ಲಿ ನಾಲ್ಕು ಕಂಬಗಳಿವೆ.ಎಲ್ಲ ಕಂಭಗಳು ಕಲಾತ್ಮಕವಾಗಿದ್ದು ಸುಂದರ ಲತಾ ಬಳ್ಳಿಗಳು ಹಾಗು ತೋರಣ ಅಲಂಕಾರಗಳಿದ್ದು ಹೊಯ್ಸ ಳರಲ್ಲಿನ ದೇವಾಲಯಗಳಲ್ಲಿ ಸುಂದರವಾದದು. ಇನ್ನು ದೇವ ಕೋಷ್ಟಕಗಳಲ್ಲಿ ಗಣಪತಿ ಹಾಗು ಮಹಿಷಾಸುರ ಮರ್ಧಿನಿಯರ ಶಿಲ್ಪವಿದೆ. ಇನ್ನು ಹತ್ತು ಅಂಕಣದ ವಿತಾನ ಇದ್ದು ಎಲ್ಲವೂ ವಿಭಿನ್ನ ವಾಗಿದ್ದು ಸುಂದರವಾದ ಕೆತ್ತೆನೆ ಹೊಂದಿದೆ. ಮಧ್ಯದ ಅಂಕಣದಲ್ಲಿ ಅಷ್ಟದಿಕ್ಪಾಲಕರು ವಾಹನ ಸಮೇತ ಇದ್ದು, ಸುಂದರ ಲಕ್ಷ್ಮೀನಾರಾಯಣನ ಕತ್ತೆನೆ ಇದೆ.

ಇನ್ನು ದೇವಾಲಯಕ್ಕೆ ಭೂಷಣ ಎನ್ನುವಂತೆ ಇರುವುದು ಇಲ್ಲಿನ ಹೊರಭಿತ್ತಿಯ ಅಲಂಕಾರಕ ಶಿಲ್ಪಗಳು. ಹೊಯ್ಸಳರ ದೇವಾಲಯಗಳಲ್ಲಿಯೇ ಕಲಾತ್ಮಕತೆ ಹೊಂದಿರುವ ಇಲ್ಲಿನ ಬಿತ್ತಿಯಲ್ಲಿ ಆನೆಗಳ ಕೆತ್ತೆನೆಗಳು, ಕುದುರೆಸವಾರರು, ಲತಾ ಬಳ್ಳಿಗಳು, ರಾಮಾಯಣ, ಭಾಗವತದ ಕಥೆಗಳು, ಹಂಸದ ಕೆತ್ತೆನೆ ನೋಡಬಹುದು.ಇನ್ನು ಅಲಂಕಾ ರಿಕ ಶಿಲ್ಪಗಳಲ್ಲಿ ನಾಟ್ಯ ಗಣೇಶ, ಮದನಿಕೆಯ ಮುಳ್ಳು ತೆಗೆಯುವ,ಭೂದೇವಿ,ಶ್ರೀದೇವಿ, ವೇಣು ಗೋಪಾಲ, ಲಕ್ಷ್ಮೀನರಸಿಂಹ, ವರಾಹಮೂರ್ತಿ, ಗೋವರ್ಧನಗಿರಿಧಾರಿ, ನಾಟ್ಯ ಸರಸ್ವತಿ, ವರದ ರಾಜ, ನಾಗ ಕನ್ಯೆ, ಚತುರ್ವಿಂಶತಿ ವಿಷ್ಣು ಹರಿಹರ ಮುಂತಾದ ಕೆತ್ತೆನೆ ನೋಡಬಹುದು.  ಇಲ್ಲಿನ ದೇವಾಲಯಗಳಲ್ಲಿ ಪ್ರಮುಖವಾಗಿ ಹಲವು ಕಡೆ ಗಳಲ್ಲಿ ವಿಷ್ಣುವಿನ ವಿವಿಧ ದಶಾವತಾರದ ಆಯು ಧಗಳು ವಿಷ್ಣುವಿನಲ್ಲಿ ಕಾಣಬರುವುದು. ಪರಶು ಹಿಡಿದ ವಿಷ್ಣು (ಪರಶುರಾಮನ ರೂಪ), ದನಸ್ಸು ಮತ್ತು ಬಾಣ ಹಿಡಿದ ವಿಷ್ಣು (ರಾಮನ ರೂಪ), ಗುರಾಣಿ ಹಿಡಿದ ವಿಷ್ಣು (ಕಲ್ಕಿ ರೂಪ) ಮುಖ್ಯವಾ ದವು. ಇಲ್ಲಿನ ಹಲವು ಶಿಲ್ಪಗಳಲ್ಲಿ ಶಿಲ್ಪಿ ಹೊನ ಜನ ಹೆಸರು ಕಂಡು ಬಂದಿದ್ದು ಇವನ ಹೆಸರು ಬೇರೆ ದೇವಾಲಯಗಳಲ್ಲಿ ಕಾಣದೇ ಇರುವುದು ವಿಶೇಷ.

ಇಲ್ಲಿನ ದಕ್ಷಿಣ ಭಾಗದಲ್ಲಿ ಹೊಸದಾಗಿ ಗರ್ಭಗುಡಿ ಯನ್ನು ರೂಪಾಂತರ ಮಾಡಿದ್ದು ಇಲ್ಲಿ ಉಗ್ರನರ ಸಿಂಹನ ಶಿಲ್ಪ ಇರಿಸಲಾಗಿದ್ದು, ದೇವಾಲಯದ ಒಟ್ಟು ಸೌಂದರ್ಯಕ್ಕೆ ಅಡ್ಡಿಪಡಿಸಿದಂತಿದೆ. ಇದು ನಂತರ ಕಾಲದ ಮಾರ್ಪಾಡು.

ತಲುಪವ ಬಗ್ಗೆ : ಅರಳಗುಪ್ಪೆ ತಿಪಟೂರಿನಿಂದ ಸುಮಾರು 16 ಕಿ ಮೀ ದೂರದಲ್ಲಿದೆ. ರೈಲಿನಲ್ಲಿ ಬರುವವರೆಗೆ ಇಲ್ಲೆಯೇ ನಿಲ್ದಾಣವಿದ್ದು ಬೆಂಗ ಳೂರು – ಹುಬ್ಬಳಿ / ಶಿವಮೊಗ್ಗ ದಾರಿಯಲ್ಲಿದೆ.

ಶ್ರೀನಿವಾಸಮೂರ್ತಿ ಎನ್.ಎಸ್. ಬೆಂಗಳೂರು