ನದಿ ದಂಡೆಗೆ ಕುಳಿತಿರುವೆ ಈ ಸಂಜೆ ಕರಗುತ್ತದೊ ಚಂದಿರನ ಮಾತನಾಡಲಿರುವೆ ಈ ಸಂಜೆ ಕರಗುತ್ತದೊ
ಅಲೆಗಳು ಒಂದು ಕ್ಷಣ ಸುಮ್ಮನೆ ಕೂಡಲಾರವೇನೊ
ಹಕೀಕತ್ ಹುಡುಕಲಿರುವೆ ಈ ಸಂಜೆ ಕರಗುತ್ತದೊ
ಸುಖ ದುಃಖದ ಕಣ್ಣಾಮುಚ್ಚಾಲೆ ನಾವೆಲ್ಲ ಹುಡುಗರು
ಆಟ ಬೊಂಬಾಟದಲಿರುವೆ ಈ ಸಂಜೆ ಕರಗುತ್ತದೊ
ಹೊಸತು ಹಳತಾಗುವುದು ಈ ರಿಪಿ ರಿಪಿ ಮಳೆಗೆಲ್ಲವು
ಮನಕೆ ಜರಡಿ ಹಿಡಿಯಲಿರುವೆ ಈ ಸಂಜೆ ಕರಗುತ್ತದೊ
ದಂಡೆಗೆ ಕುಳಿತು ಬಹಳ ಹೊತ್ತಾಯಿತು ಕರಗಲಿಲ್ಲವೊ
ಜಾಲಿ ಎದೆ ಅರ್ಪಿಸಲಿರುವೆ ಈ ಸಂಜೆ ಕರಗುತ್ತದೊ
ವೇಣು ಜಾಲಿಬೆಂಚಿ
ರಾಯಚೂರು.