ರಂಗಭೂಮಿಯಲ್ಲಿ ಡಿಮೋನೋಟಾಯಜೇಶನ್ ಅಂದರೆ ಏನು? ಕಲಾವಿದನ  ಅಥವಾ ಕಲಾವಿದ ರ ಅಪಮೌಲ್ಯವಾಗುವದು. ಇದು ಹಣದಿಂದ ಅಳೆಯುವದಲ್ಲ. ಯಾವದೇ ಪ್ರತಿಭೆಯ ಸರಿಯಾ ಗಿ ಉಪಯೋಗವಾಗದೆ, ಎಲ್ಲೆಲ್ಲೋ ಏನೇನೋ ಆಗಿಹೋಗುವದು. ಶ್ರೇಷ್ಠ ನಟಿ ಅಥವಾ ನಟ ಆಗುವ ಸಾಮರ್ಥ್ಯದ ವ್ಯಕ್ತಿ, ನಿರ್ದೇಶಕ, ವಿನ್ಯಾಸ ಕಾರ ಅಥವಾ ಸಂಘಟಕ ಆಗಿ ಪರಿವರ್ತನೆ ಹೊಂದುವದು. ಹೀಗೆ ಯಾಕೆ, ಹೇಗೆ ಸಾಂಸ್ಕ್ರತಿಕ ತಂಡ ಮತ್ತು ಸಂಸ್ಥೆಗಳಲ್ಲಿ? ಕೆಲವು ಕಾರಣಗಳ ನ್ನು ಪಟ್ಟಿ ಮಾಡಬಹುದು:

1. ಎಲ್ಲರಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರು ತ್ತದೆ. ಯಾವಕ್ಷೇತ್ರದಲ್ಲಿ ಹೇಗೆ ಮಿಂಚುತ್ತಾರೆ ಅನ್ನೋದು ಆಯಾ ಸನ್ನಿವೇಶ,ಸಂಪರ್ಕ, ಪ್ರತಿಭೆ, ಸೌಂದರ್ಯ ತುಂಬಿದ ವ್ಯಕ್ತಿತ್ವ, ಧ್ವನಿ ಸಂಪತ್ತು, ಶಿಕ್ಷಣ, ಸ್ಥಾನ, ಇತರ ತತ್ಸಂಭಂಧಿತ ಕೌಶಲ್ಯಗಳ ಮೇಲೆಯೇ ಹೆಚ್ಚು ಆಧಾರಿತವಾಗಿರುತ್ತದೆ ಯಾವ ಯಾವಾದರಿಂದ ಏನು ನಿರ್ದಿಷ್ಟವಾಗಿ ಕೆಲಸ ಆಗುತ್ತದೆ ಅನ್ನುವದು ಹೇಳಲಿಕ್ಕೆ ಆಗದಿದ್ದರೂ ಒಂದು ಮಾತ್ರ ನಿಜ.ಸಂವಹನಶೀಲತೆಯ ಕೌಶಲ್ಯ ಗಳು ಹೆಚ್ಚಿನ ಪ್ರಭಾವ ಬೀರುತ್ತವೆ. ಉತ್ತಮ ನಟ ಅಥವಾ ನಟಿ ಉತ್ತಮ ಸಂವಹನಶೀಲತೆಯನ್ನು  ಹೊಂದಿರುತ್ತಾರೆ. ಇದರ ಅರ್ಥ ಇಷ್ಟೇ: ಹೆಚ್ಚಿನ ನಟ, ನಟಿಯರಿಗೆ, ಅಭಿನಯಬಂದರೂ ಸಂವಹ ನಾಕೌಶಲ್ಯ ಬರುವದಿಲ್ಲ. ಹೆಚ್ಚು ಜನ ನಟ ನಟಿ ಯರು ಈ ವಾದವನ್ನು ಒಪ್ಪುವದಿಲ್ಲ.ಯಾಕೆಂದರೆ ಸಂವಹನಶೀಲತೆ ಕೌಶಲ್ಯಗಳು ಉರು ಹೊಡೆದ ಡೈಲಾಗುಗಳಂತೆ ಪ್ರದರ್ಶಿಸಲು ಬರುವದಿಲ್ಲ.

2. ನಾಟಕದಲ್ಲಿ ಪಾತ್ರ ಮಾಡುವದಷ್ಟೇ ಜವಾಬು ದಾರಿಯೇ ಅಥವಾ  ಎಲ್ಲರ ಜತೆ ತಂಡದ ಒಂದು ಅವಶ್ಯಕ ಭಾಗವಾಗಿ ಕಾರ್ಯ ನಿರ್ವಹಿಸುವದು ಸಹಿತ ಜವಾಬುದಾರಿಯೇ? ಕರ್ತವ್ಯ ವೃತ್ತಿಪರತೆ ಅಥವಾ ಪ್ರೊಫೆಷನಲ್ ಅಂದರೆ ಬರೀ ದುಡ್ಡು ತೆಗೆದುಕೊಂಡು ಒಪ್ಪಿದ ಅಥವಾ ಹೇಳಿದ ಕೆಲಸ ವನ್ನು ಮಾಡುವದು ಅಷ್ಟೇ ಅಲ್ಲದೆ  ಆ ವೃತ್ತಿಯ ಗೌರವ, ಘನತೆ ಮತ್ತು  ಅಲ್ಲಿ ಸಂಬಂಧಿಸಿದ ಎಲ್ಲ ಸಹ ನಟ ನಟಿಯರಿಗೆ ಜೀವನೋತ್ಸಾಹ ತುಂಬಿ ಪ್ರದರ್ಶನಕ್ಕೆ ಸಿದ್ಧಗೊಳಿಸುವದುವ ಸಹ  ಪೂರಕ ಕಾರ್ಯವಾಗಿದೆ. ಅದಕ್ಕೆ ನಾಟಕ ಪ್ರದರ್ಶನಕ್ಕೆ ಯಾವಾಗಲೂ ತಂಡ ಸಂಘಟನೆ ಅತಿ ಅವಶ್ಯಕ. ಆದರೆ ತಂಡದಲ್ಲಿ ಎಲ್ಲರೂ ಒಂದೇ ತರಹ,ಒಂದೇ ಆಸಕ್ತಿ ಹೊಂದಿದವರು ಇರುವದಿಲ್ಲ. ಲೋಕೋ ಭಿನ್ನರುಚಿ: ಅಂದರೆ ಇದು. ನನಗೆ ಬೇರೆ ಏನೂ ಬರುವದಿಲ್ಲ ಅಥವಾ ಅದು, ಇದು ನನ್ನ ಕೆಲಸ ವಲ್ಲ ಅಂತ ಕೂತು ಬಿಡುವದರಿಂದ ನಾಟಕ ಆಗು ವದಿಲ್ಲ .ಹೀಗಾಗಿ ಈ ಮಾನವಸಂಪನ್ಮೂಲವನ್ನು ನಿಭಾಯಿಸುವದೇ ಸಂಘಟನೆಯ ಒಂದು ಮಹತ್ವದ  ಕ್ರಿಯೆ ಆಗಿಬಿಡುತ್ತದೆ.

3.ಒಂದು ಸಂಘಟನೆ ಸಶಕ್ತವಾಗಿ, ಸುಸೂತ್ರವಾಗಿ ಕಾರ್ಯನಿರ್ವಹಿಸಲು ಏನೇನು ಬೇಕು ಎಂದರೆ  ವಿವಿಧ ಪ್ರತಿಭೆಗಳ ವಿವಿಧ ವಯೋಮಾನದ  ಉತ್ಸಾಹ ತುಂಬಿದ ಮಾನವ ಸಂಪನ್ಮೂಲ, ತಕ್ಕ ಮಟ್ಟಿಗಿನ ಆರ್ಥಿಕ ಸಂಪನ್ಮೂಲ ಮತ್ತು ತಕ್ಕ ಮಟ್ಟಿಗಿನ ಕಟ್ಟಡ ಲಭ್ಯತೆ ಮತ್ತು ದೀಪಗಳು. ಅಷ್ಟೇ ಅಲ್ಲ   ಅದರ ಜತೆ ಯುವಕ, ಯುವತಿ, ಮದ್ಯವಯಸ್ಕರು, ಹಿರಿಯರು ಎಲ್ಲರ  ಮಿಶ್ರಣವಿ ರಬೇಕು. ಭವಿಷ್ಯದ ವಿಚಾರ ಮಾಡುವದಾದಲ್ಲಿ ಯುವ ಅನ್ನಬಹುದಾದವರು, ಮದುವೆ ಇನ್ನೂ ಆಗದೆ ಇದ್ದವರು ಕನಿಷ್ಠ 60 ಪ್ರತಿಶತ ಇನ್ನುಳಿದ ವರು 40 ಪ್ರತಿಶತ ನಡೆದಿತು. ಯುವ ಜನತೆ ಬರುವ ಹಾಗೆ ಮಾಡಲು ಪ್ರಾಧ್ಯಾಪಕರು, ಪ್ರಾಚಾ ರ್ಯರುಗಳ ಪ್ರಯತ್ನ ಬೇಕು. ಅವರು ಮನಸ್ಸು ಮಾಡುವದು ಮುಖ್ಯ. ಅವರು ಪ್ರೋತ್ಸಾಹಿಸುತ್ತಿ ದ್ದರೆ ಯುವಕ -ಯುವತಿಯರು ಮುಂದೆ ಬರು ತ್ತಾರೆ. ಇಂದು ನಿಜವಾಗಿ ಕಮ್ಯುನಿಕೇಶನ್ ಸ್ಕಿಲ್ಸ್ ಅಂತ ಯಾವುದಕ್ಕೆ ಹಿಂದಿಲ್ಲದ ಮಹತ್ವ ಬಂದಿದೆ ಯೋ ಅದರಲ್ಲಿ ಪರಿಣಿತಿ ಸಾಧಿಸಲುಸುಲಭವಾಗಿ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಾಗ ಮಾತ್ರ ಸಾಧ್ಯ.

4.ಹೆಚ್ಚಿನ ಪ್ರತಿಭಾವಂತರು ವೃತ್ತಿಪರಕೋರ್ಸುಗ ಳಿಗೆ ಹೋಗುತ್ತಾರೆ ಅನ್ನುವ ಕಾರಣಕ್ಕಾಗಿ ಉಳಿದ ಕಲಾ,ವಿಜ್ಞಾನ,ವಾಣಿಜ್ಯಗಳಿಗೆ ಬರುವವರ ಆಸಕ್ತಿ ಯ ಮಟ್ಟ, ಗ್ರಹಿಕಾಸಾಮರ್ಥ್ಯ ಇವುಗಳ ಮೇಲೆ ಅವಲಂಬಿತವಾಗಿರುವ ಕಾರಣ ಈ ರಂಗಭೂಮಿ ಯ ಮೂಲಕ ಆಗಬಹುದಾದ ಲಾಭಗಳ ಬಗ್ಗೆ ಅರಿವು ಹುಟ್ಟು ಹಾಕಬೇಕಾಗಿರುತ್ತದೆ.

5.ನಮ್ಮಲ್ಲಿ ಪ್ರದರ್ಶಕ ಕಲೆಗಳು ಸಂಪೂರ್ಣವಾಗಿ ಜೀವನೋಪಾಯ ಮಾಡಿಕೊಡದ ಕಾರಣ ಅವು ಗಳ ಸುತ್ತ ಬದುಕು ಕಟ್ಟಿಕೊಳ್ಳುವದೇ ಕಠಿಣವಾ ಗುತ್ತದೆ ಹೀಗಾಗಿ  ಅಸಾಮರ್ಥ್ಯದವರು ಬಂದಾಗ ಮೆಡಿಯೋಕ್ರೇಸಿಟಿ ಮಟ್ಟ ದಾಟುವದು ಇಲ್ಲಾ ಕೊರೊನಾ ಅಂತಹ ಸಂದರ್ಭದಲ್ಲಿ ಹತಾಶೆಯ ಅಂಚನ್ನು ತಲುಪುತ್ತಾರೆ,ಬಾಯಿ ಜೋರಾಗುತ್ತದೆ. ಸಿಟ್ಟು, ಸೆಡವು, ಸಹವಾಸದಲ್ಲಿ ತಾವೇ ಇಷ್ಟಪಟ್ಟು ಇಂಥಹ ಕ್ಷೇತ್ರಕ್ಕೆ ಬಂದೆವು ಅನ್ನುವವಿಷಯವನ್ನೇ ಮರೆಯುತ್ತಾರೆ. ಪ್ರದರ್ಶಕ ಕಲೆಗಳು ಇಂಡಿಯಾ ದಲ್ಲಿ ಹೆಚ್ಚಿನ ಕಲಾವಿದರ ಹೊಟ್ಟೆ ತುಂಬಿಸುವು ದಿಲ್ಲ, ಹೀಗಾಗಿ ಅವರು ತಮ್ಮ ಯಾವದೇ ಪ್ರತಿಭೆ ದುಡಿತಕ್ಕೆ ಪ್ರತಿಫಲ ಕೇಳಿದರೆ ತಪ್ಪಲ್ಲ. ಆದರೆ ಆ ಪ್ರತಿಫಲ ಎಷ್ಟು, ಯಾಕೆ, ಹೇಗೆ, ಯಾರಿಂದ, ಯಾವಾಗ ಅನ್ನುವದರ  ಅರಿವು ಇಟ್ಟುಕೊಂಡಿರ ಬೇಕು.ಈ ವಿಷಯ ಎಷ್ಟೇ ಬೇಡವೆಂದರೂ ಸಂಘ ಟಕರನ್ನು, ಕಂಪನಿಯ ಮಾಲಕರನ್ನು ಕಾಡುವ ವಿಷಯ. ಸಂಘಟನೆಯ ನಿರ್ವಾಹಕರು ಕೂಡ ಈ ಅಂಶವನ್ನು ಗಮನಿಸಬೇಕಾಗುತ್ತದೆ.

6.ಹೆಚ್ಚಿನ ಸಂಘಟನೆಗಳು ದೊಡ್ಡವಿರುವದಿಲ್ಲ. ಇದ್ದರೆ ಒಂದು ರೀತಿಯಿಂದ ಏಕಸ್ವಾಮ್ಯದ ಕಂಪೆನಿಗಳಂತೆ ಇರುತ್ತವೆ.ಅವೆಲ್ಲ ಹೆಚ್ಚಿಗೆ ಆಟೋ ಕ್ರ್ಯಾಟಿಕ್ ಆಗಿರುತ್ತವೆ. ಸರ್ಕಾರದ ಧನ ಸಹಾಯ ಬಹಳ ವರ್ಷಗಳಿಂದ ಪಡೆಯುತ್ತಿದ್ದರೆ ಸಾಕಷ್ಟು ಬೌದ್ಧಿಕ, ಆರ್ಥಿಕ, ಸಾಮಾಜಿಕ ಕೊಬ್ಬನ್ನು ಪಡೆದಿ ರುತ್ತಾರೆ ಅಂತಹ ಸಂಘಟನೆಗಳು ಹೆಚ್ಚಿನ ರಾಜಕೀಯ, ಜಾತಿಯ, ಮಠಗಳ ಸ್ವಾಮ್ಯಕ್ಕೆ ಒಳಗಾಗಿರುತ್ತವೆ. ಪ್ರತಿಯೊಂದು ಸಂಘಟನೆಗೂ ತನ್ನದೇ ಆದ ಸಂಸ್ಕೃತಿ organizational culture ಹೊಂದಿರುತ್ತವೆ. ಕಲಾವಿದರು ಮತ್ತು ನಿರ್ದೇಶಕರು ಇದನ್ನು  ಅರಿತುಕೊಂಡಿದ್ದರೆ ಒಳ್ಳೆ ಯದು.

7.ಪ್ರತಿಯೊಂದು ಸಂಘಟನೆಗೆ ಅದರ ಸಂಸ್ಕೃತಿಗೆ ಅನುಗುಣವಾಗಿ ಶಿಸ್ತು ಹೊಂದಿರುವದು ಅಷ್ಟೇ ಅವಶ್ಯ. ಆರ್ಥಿಕ ಶಿಸ್ತು ಅತಿ ಅವಶ್ಯಕ. ಸಂಸ್ಥೆ ಎಡ ಅಥವಾ ಬಲ ಯಾವದೇ ಒಲವಿನದು ಇದ್ದರೂ ಸಹ ಶಾಖಾಶಿಸ್ತು ಅನ್ನುವದು ಒಂದಿಷ್ಟು ಆದರೂ ಇರಲೇಬೇಕು ಈ ಶಾಖಾ ಶಿಸ್ತು ಅನ್ನುವ ದು ಹಾಗೆಯೇ ಬರುವದಿಲ್ಲ. ಅದನ್ನ ಇದ್ದ ಹಿರಿಯರು ಮಾಡುತ್ತಲೇ ಹೇಳಿ ತೋರಿಸಿಕೊಡು ವದೇ ಸಂಘ ಸಂಸ್ಥೆಗಳನ್ನು  ಬೆಳೆಸುವದರ ಹಿಂದೆ ಇರುವ ರಹಸ್ಯವಾಗಿರುತ್ತದೆ. ಉದಾಹರಣೆಗೆ ಮಾದರಿ  ಧುರೀಣರಾಗಿ ಮಾರ್ಪಾಡಿಸಿಕೊಳ್ಳುವು ದನ್ನು ಕಲಿಯಬೇಕಾಗುತ್ತದೆ. ಹೆಚ್ಚಿನ ಪ್ರದರ್ಶಕ ಕಲೆ ನಿರ್ವಹಿಸುವ ಸಂಘ, ಸಂಸ್ಥೆಗಳಲ್ಲಿ ಶಾಖಾ ಶಿಸ್ತು ಕಡಿಮೆ ಕಂಡುಬರುವದು.

8.ಇನ್ನು ಸರ್ಕಾರದ ಧನ ಸಹಾಯಪಡೆಯುವ ದರ ಬಗ್ಗೆ ಒಂದಿಷ್ಟು ನಿಚ್ಚಳವಾದ ಧೋರಣೆ ಬೇಕಾಗುತ್ತದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಧನ ಸಹಾಯವನ್ನು  ಮಾಡುತ್ತವೆ. ಕೇಂದ್ರ ದೂರ,  ಅಡ್ಡಿ-ಆತಂಕ ಕಡಿಮೆ ಆದರೆ ರಾಜ್ಯ ಸಮೀಪ,ಆದರೆ ಅಡ್ಡಿ-ಆತಂಕಗಳು ಪ್ರಯ ತ್ನ ಮಾಡಿದವರಿಗೆ ಗೊತ್ತು. ಕೆಲವು ಒತ್ತಡಗಳು, ಕೆಲವು ಅನಿವಾರ್ಯತೆಗಳು ಏನೂಅನ್ನುವ ಹಾಗೆ ಇಲ್ಲ. ಬಿಸಿ ತುಪ್ಪ,ಉಗುಳುವ ಹಾಗಿಲ್ಲ ನುಂಗುವ ಹಾಗೂ ಇರುವದಿಲ್ಲ,ಅನುಭವಿಸುವದೇ.ಖಾಸಗಿ, ಕಾರ್ಪೊರೇಟ್ ಪ್ರಾಯೋಜಕತ್ವವು ಅವರವರ ಸಾಮರ್ಥ್ಯಗಳ ಮೇಲೆ ಅವಲಂಬಿಸಿರುತ್ತದೆ. ಇದನ್ನು ಬಿಟ್ಟು ಟೀಕಿಟ್ ಮಾರುವದರ ಮೇಲೆ, ಜಾಹಿರಾತು ಸಂಗ್ರಹಿಸುವದರ  ಮೂಲಕ ಮಾಡು ವದು. ಆದರೆ ಇದಕ್ಕೂ ಸಾಮರ್ಥ್ಯ, ಅಧಿಕಾರ, ಸಾರ್ವಜನಿಕ ಸಂಪರ್ಕ ಉದ್ದಿಮೆಗಳ, ರಾಜಕಾರ ಣಿಗಳ ಜತೆ ಭೀತಿಯಿಲ್ಲದ ಪ್ರಾಮಾಣಿಕತೆ ಬೇಕು, ಇಂತಹ ಜನ ಎಲ್ಲ ತಂಡಗಳಲ್ಲಿ  ಸಿಗ್ತಾರೆಯೇ?

9.ನಾಟಕತಂಡದಲ್ಲಿ ಬಹುಮುಖ ಪ್ರತಿಭೆಯ ಜನ ಸಂಪನ್ಮೂಲ ಇರುವಂತೆ ನೋಡಿಕೊಳ್ಳಬೇಕು. ನಾಟಕದ ಆಯ್ಕೆಯಿಂದ ಹಿಡಿದು ಪ್ರದರ್ಶನದವ ರೆಗೆ ಸಮಯೋಚಿತ ಸಲಹೆ ಸೂಚನೆಗಳನ್ನು ರಚ ನಾತ್ಮಕವಾಗಿ ನೀಡುವಂತಿರಬೇಕು. ಇಂತಹ ಜನ ರನ್ನು ನಮ್ಮ ಸುತ್ತಮುತ್ತಲಿನಿಂದಲೇ ಆಯ್ಕೆ ಮಾಡಿಕೊಳ್ಳಬೇಕು.ಎಲ್ಲರೂ ಒಳ್ಳೆಯ ಸಾಮಾನ್ಯ ವಾದ ಉದ್ದೇಶ ಹೊಂದಿರಬೇಕು.

10. ರಂಗಭೂಮಿಯಲ್ಲಿ ಒಂದು ಕ್ಷೇತ್ರದಲ್ಲಿದ್ದ ಪ್ರಾವೀಣ್ಯತೆ ಬಳಸಿಕೊಂಡು ಅದನ್ನೇ ಬಂಡವಾಳ ಮಾಡಿಕೊಂಡು ನಿಧಾನವಾಗಿ ಉಳಿದಕ್ಷೇತ್ರಗಳಲ್ಲಿ ಕೌಶಲ್ಯತೆ ಹೆಚ್ಚಿಸಿಕೊಳ್ಳುವ ಗುಣವಿರುವ ಜನವಿರ ಬೇಕು. ಈ ಗುಣಧರ್ಮ ಇರಬೇಕೆಂದರೆ ಅಂತಹ ವ್ಯಕ್ತಿಗಳಲ್ಲಿ ಉತ್ಕಟಇಚ್ಛೆ passion ಪ್ರಬಲವಾಗಿ ರಬೇಕು. ಇದರ ಅರ್ಥ ಎಂದರೆ ಮನುಷ್ಯನಿಗೆ ಏನನ್ನಾದರು ಸಾಧಿಸಲೇಬೇಕೆಂಬ ಛಲಇರಬೇಕು ಸಾಧನೆಯನ್ನು ಮಾಡಬೇಕೆಂದರೆ ಅದಕ್ಕೆಬೇಕಾದ ಇಚ್ಛಾಶಕ್ತಿ ಪ್ರೇರಣೆಗಳನ್ನು  ಅವರವರೇ ಹುಡುಕಿ ಕೊಳ್ಳಬೇಕು ಅವುಗಳೆಲ್ಲ ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿರುತ್ತವೆ ಅನ್ನುವದು ಸಹಜ.

(ಸಶೇಷ)

   ಅರವಿಂದ ಕುಲಕರ್ಣಿ, 
ರಂಗಭೂಮಿ ಚಿಂತಕರು,ಧಾರವಾಡ