ಸ್ನೇಹದ ಮೂಲ ಅರ್ಥವೇ ಬೇರೆಯಾಗುತಿದೆ ಗೆಳೆಯ
ಪ್ರೇಮದ ಪರಿಭಾಷೆಯೇ ಬದಲಾಗುತಿದೆ ಗೆಳೆಯ

ತೇಜಾಬ್ ಎರಚಿ ವಿಕೃತಿ ಮೆರೆಯುವ ಮಜ್ನೂಗಳೆ ಹೆಚ್ಚು
ಚಿತ್ರಹಿಂಸೆ ಕೊಟ್ಟು ಲೈಲಾಳನ್ನು ಕೊಲ್ಲಲಾಗುತಿದೆ ಗೆಳೆಯ

ಮೋಸದ ಬಲೆ ಬೀಸುವ  ಪ್ರೇಯಸಿಯರ ದರ್ಬಾರು ಈಗ
ಪ್ರೇಮಿಗಳ ಜೇಬು ನಸೀಬು  ಬರಿದಾಗುಗುತಿದೆ ಗೆಳೆಯ

ನೇಹದ ಹೆಸರಿನಲಿ ಸಂಚು ದಗಲಬಾಜಿತನ ಮಾಮೂಲು
ಒಡಹುಟ್ಟಿದವರ ನಡುವೆ ನಂಜು ಬಿತ್ತಲಾಗುತಿದೆ  ಗೆಳೆಯ

ಹೆಣ್ಣೇ ಹೆಣ್ಣಿಗೆ ಗಂಡೇ ಗಂಡಿಗೆ ಮೋಹಿಸುವ  ಕಾಲವಿದು
ನರನಾರಿಯರ ಸಂಬಂಧಈಗ ಆಭಾಸವಾಗುತಿದೆ ಗೆಳೆಯ

ಲಾಭವಿಲ್ಲದೆ ಇಲ್ಲಿ ಯಾರೂ ಯಾರನ್ನು  ಮಾತಾಡಿಸರು
ದುಡ್ಡಿಗೆ ಹೆತ್ತವರನ್ನೆ ಮಸಣಕ್ಕೆ ಕಳಿಸಲಾಗುತಿದೆ ಗೆಳೆಯ

ವರದಕ್ಷಿಣೆ ಆಸೆಗೆ ಜೀವಂತ ಸುಡುತ್ತಿದ್ದಾರೆ ದಿನ  ಪ್ರತಿಕ್ಷಣ
ಕಣ್ಣುಬಿಡದ ಕಂದಮ್ಮರನ್ನು ತಿಪ್ಪೆಗೆ ಎಸೆಯಲಾಗುತಿದೆ ಗೆಳೆಯ

ಮೋಜು ಜೂಜಿಗೆ  ಪತ್ನಿಯನ್ನೆ ಅಡುವಿಡವನು ಪತಿರಾಯ
ಹಸುಳೆಯರ ಮೇಲೆ ಅತ್ಯಾಚಾರ ನಡೆಸಲಾಗು ತಿದೆ ಗೆಳೆಯ

ಜಗವೆನ್ನುವದು ಕ್ರೂರಿಗಳ ಅಡ್ಡೆಯಾಗುತಿದೆ ಯಲ್ಲ “ಪೀರ”
ಸಾವಲ್ಲೂ ಲಾಭದ ಗುಣಾಕಾರ ಮಾಡಲಾಗುತಿದೆ ಗೆಳೆಯ.

   ಅಶ್ಫಾಕ್ ಪೀರಜಾದೆ,
ಗೋಕಾಕ