ಈ ವಾರ ಯಾವ ವಿಷಯದಬಗ್ಗೆ ಬರೆಯಬೇಕು ಅನ್ನೋ ವಿಚಾರ ಬಂತು. ಏನೆಲ್ಲಾ ರಂಗಭೂಮಿ ಯಲ್ಲಿ ನಡೆದಿದೆ ಅಂತ ಗಮನ ಹರಿಸಿದಾಗ ಕಂಡ, ಕೇಳಿದ ಒಂದಿಷ್ಟು ವಿಷಯಗಳಲ್ಲಿ ಮೇಲ್ನೋಟಕ್ಕೆ ಗಟ್ಟಿಯಾಗಿ ನಿಲ್ಲುವವು ಯಾವವು? ರಂಗ ಶಿಕ್ಷಕರ ನೇಮಕಾತಿ ಬಗ್ಗೆ, ಅಂತರಜಾಲ ತರಬೇತಿ ಬಗ್ಗೆ ಅನುದಾನಗಳ ಬಗ್ಗೆ ರಂಗಾಯಣಗಳ ಬಗ್ಗೆ,ಕಲಾ ಮಂದಿರಗಳಬಗ್ಗೆ ನಾಟಕ ರಚನೆ ತಯಾರಿಕೆ ಬಗ್ಗೆ ಹೊಸ  ತಂತ್ರಜ್ಞಾನದ ಬಗ್ಗೆ  ವಿಶೇಷ  ಘಟಕಗಳ ಅನುದಾನ, ಕರಾರು ಕಂಡಿಶನ್ ಗಳ ಬಗ್ಗೆ ಸ್ವಂತ ಪ್ರೊಡಕ್ಷನ್ ಗಳ ಬಗ್ಗೆ, ಹೀಗೆ ಹತ್ತುಹಲವು ಸಂಗತಿ ಗಳ   ಬಗ್ಗೆ  ವಿಚಾರ   ಮಾಡುತ್ತಿದ್ದಂತೆ  ವೈಚಾರಿಕ ಕಂಪಾಸ್   ಮುಳ್ಳು   ತಾಜಾ ವಿಷಯವಾದ  ರಂಗ ಶಿಕ್ಷಕರ ಮುಂದೆ ಥಟ್ಟನೆ ನಿಂತುಕೊಂಡಾಗ ಹೊಳೆದ ಕೆಲವು ಅಂಶಗಳು ಕೆಲವು ಪ್ರಶ್ನೆಗಳಿಗೆ ಪೀಠಿಕೆಹಾಕಿದವು.

ರಾಷ್ಟ್ರೀಯ ನಾಟಕ ಶಾಲೆ,ನವದೆಹಲಿ

ಇನ್ನು   ಮತ್ತೊಂದು   ಅಂಶವೆಂದರೆ    ಉಳಿದ ಸಾಮಾನ್ಯ   ವಿಷಯಗಳು    ಪ್ರದರ್ಶಕ  ಕಲೆಯ ಕುರಿತಾಗಿ   ಹೇಳುವ   ವಿಷಯಗಳು    ಮತ್ತು ಅವುಗಳ ಬೋಧನೆಯ ತಂತ್ರ, ಮಂತ್ರಗಳು ಬೇರೆ ಬೇರೆ   ಆಗಿರುತ್ತವೆ. ಕಲಿಯುವ   ಸಿದ್ಧಾಂತಗಳು ಅವೆ   ಆಗಿದ್ದರೂ   ಕೂಡಾ ರಂಗ ಶಿಕ್ಷಕರಿಗೆ  ಆ   ಪೆಡಗಾಗಿಗಳು ಗೊತ್ತಿರುವದಿಲ್ಲ. ಇದು ಅವರವರ ಕಲಿಕೆ  ಮತ್ತು ತರಬೇತಿಗಳ ಅಂತರವಾಗಿರಲೂ ಸಾಕು. ಅದಕ್ಕಾಗಿ ಒಮ್ಮೊಮ್ಮೆ ಅನಿಸುತ್ತದೆ. ಪ್ರಯೋಗಕ್ಕಾಗಿಯಾದರೂ ಒಂದಿಷ್ಟುಈಗಾಗಲೇ ಎಲ್ಲ  ಅರ್ಹತೆ ಹೊಂದಿ ಶಿಕ್ಷಕರಾಗಿ ಕಾರ್ಯನಿರ್ವ ಹಿಸುತ್ತಾ  ಇರುವ 40 ವರ್ಷಗಳಿಗಿಂತ  ಚಿಕ್ಕವರಿಗೆ ರಂಗಭೂಮಿ ಶಿಕ್ಷಣ ತರಬೇತಿಯನ್ನು ಸರ್ಕಾರದ ವ್ಯವಸ್ಥೆಗೆ   ಅನುಗುಣವಾಗಿ   ನೀಡಿ    ಅವರನ್ನು ಬಳಸಿಕೊಳ್ಳುವದು ಹೆಚ್ಚು ಯೋಗ್ಯ ಅನಿಸುತ್ತದೆ. ಅವರಿಗೆ   ಶಿಕ್ಷಣ  ರಂಗದ  ವ್ಯವಸ್ಥೆಯ   ಅರಿವು, ಬೋಧನ  ಕ್ರಮ,  ಮೌಲ್ಯಮಾಪನ  ಗೊತ್ತಿರುವ ಕಾರಣ ಹೆಚ್ಚು ಪ್ರಯೋಜನಕಾರಿ ಅನಿಸುತ್ತದೆ.

ಸತ್ಯದೇವ ದುಬೆ

ಕರ್ನಾಟಕದ  ಪ್ರಥಮ ರಂಗಾಯಣದಲ್ಲಿ ಕಲಾವಿ ದರನ್ನು  ನೇಮಕಾತಿ  ಮಾಡಿದ  ನಂತರ ಏನೇನಾ ಯಿತು ಅನ್ನೋದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಶಿಕ್ಷಕರ ನೇಮಕಾತಿಗೆ ಏನೇನು ಅರ್ಹತಾ ನಿಯಮಗಳು ಇರುತ್ತವೆಯೋ ಅದಕ್ಕೆ ಯೋಗ್ಯ ವಾದ ಸ್ಕೇಲುಗಳು ಇರುತ್ತವೆ. ಆದರೆ ಮ್ಯಾಟ್ರಿಕ ನಂತರ ಒಂದು ವರ್ಷದ ಡಿಪ್ಲೊಮಾ, ಡಿಗ್ರಿ, ಡಾಕ್ಟರೇಟುಗಳು ಎಲ್ಲವೂ ಒಂದೇ ತಕ್ಕಡಿ, ಒಂದೇ ಕರ್ತವ್ಯ, ಒಂದೇ ವೇತನ ಅಂತ ಅನ್ನು ವಾಗ ಎಲ್ಲ ಕಡೆ ಬೇಡಿಕೆ ಬಂದೆ ಬರುತ್ತವೆ. ಈಗಾಗಲೇ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಇಂತಹ ಕೋರ್ಟು ಕಚೇರಿ ಮತ್ತು ಭ್ರಮನಿರಸನ ಪ್ರಕರಣಗಳು ಆಗಿವೆ. ಮೊದಲು ಇವೆಲ್ಲ ನೀತಿ ನಿಯಮಾವಳಿಗಳು ರೂಪುಗೊಂಡು ಇತಿಮಿತಿಗಳ ಇತ್ಯರ್ಥವಾದರೆ   ಒಳ್ಳೆಯದು.  ಯಾವದಕ್ಕೂ  ಗಡಿಬಿಡಿ ತರಾತುರಿ ಮತ್ತು ಆಕಾಶ ಕಡಿದು ಬಿದ್ದಿದೆ ಅನ್ನೋ ಪರಿಸ್ಥಿತಿ   ನಿರ್ಮಾಣ   ಮಾಡಿದಾಗ  ಈಗ  ಕೋವಿಡ್ 19 ರ ಆರೋಗ್ಯ ವ್ಯವಸ್ಥೆಯಲ್ಲಿ ಆದ ಘಟನೆಗಳು ಬೇರೆ ರೂಪ ದಲ್ಲಿ ಆದರೆ ಏನೂ ಅಚ್ಚರಿ ಅಲ್ಲ.

ಈ ಹಿಂದೆ ಸಂಗೀತ ಮತ್ತು ರಂಗ ಶಿಕ್ಷಕರು ನೇಮಕವಾಗಿದ್ದರೆ ಅವರ ಇಲ್ಲಿವರೆಗಿನ ಕೊಡುಗೆ ಏನು ? ಅವರಿರುವ ಶಾಲೆಗಳಲ್ಲಿ, ಸುತ್ತ ಮುತ್ತ ಇರುವ ಪರಿಸರದಲ್ಲಿ ಏನೇನು ಕಲಾಪೂರ್ವಕ ಬದಲಾವಣೆ ತಂದಿದ್ದಾರೆ? ಅಷ್ಟೇ ಅಲ್ಲ. ಈ ಲಾಕ್ಡೌನ್ ಸಮಯದಲ್ಲಿ ಹೇಗೆ ತಮ್ಮ ಕೆಲಸದಲ್ಲಿ ನಾವೀನ್ಯತೆ ತರುವ ಪ್ರಯತ್ನ ಮಾಡಿದ್ದಾರೆ?
ಸಂಗೀತ ಶಿಕ್ಷಕರಿಗೆ ಕನಿಷ್ಠ ವಾದ್ಯಗಳು ಇದ್ದರೆ ಸಾಕು ಅವರು ಸಂಗೀತದ ಜ್ಞಾನ, ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಬಹುದು. ಆದರೆ ನಾಟಕದ ಶಿಕ್ಷಕರದು ಹಾಗಲ್ಲ. ಅವರನ್ನು ತಯಾರು ಮಾಡಿದ ಶಾಲೆಗಳೇ ಅವರಿಗೆ ಮಿತವ್ಯಯಿಯಾದ ಪ್ರೊಡಕ್ಷನ್ ಮಾಡುವದನ್ನು ಕಲಿಸಿರುವದಿಲ್ಲ. ತತ್ಪರಿಣಾಮವಾಗಿ ಎಲ್ಲರೂ ಅದು ಬೇಕು ಇದು ಬೇಕು ಅಂತ ಬೇಡಿಕೆ ಇಟ್ಟರೆ ಸರ್ಕಾರಿ ವ್ಯವಸ್ಥೆ ಯಲ್ಲಿ ಕಠಿಣ. ಮತ್ತು ಅದು ಹೆಡ್ಮಾಸ್ಟರ್ ಮತ್ತು ಇತರ ಸಹೋದ್ಯೋಗಿಗಳ ಮೇಲೆ ಅಷ್ಟೊಂದು ಅನುಕೂಲವಲ್ಲದ ಪರಿಣಾಮ ಬೀರುತ್ತದೆ.ಹೆಚ್ಚಿನ ರಂಗ ಶಾಲೆಗಳು ಪಾಶಿಮಾತ್ಯ ಪ್ರತಿಭಟ ನಾತ್ಮಕ ಆದರ್ಶವಾದಗಳ  ಬತ್ತಳಿಕೆ  ಹೊಂದಿದ   ಹಿನ್ನೆಲೆ ಇದ್ದ  ಕಾರಣ  ಭರತಮುನಿ  ನಮ್ಮ ಶಾಲಾ ಗುರು ಕುಲಗಳಲ್ಲಿ ಬರದೆ ಇರುವ ಸಾಧ್ಯತೆ ಹೆಚ್ಚಿರುತ್ತದೆ. ನಮ್ಮ  ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಒಟ್ಟು ಬಂಡಾ ಯದ  ಧೋರಣೆ  ಅಂದರೆ  ಯಾವದೇ  ಆಡಳಿತ ವ್ಯವಸ್ಥೆಗೆ ಸೆಡ್ಡು ಹೊಡೆಯುವ ಸಾಧ್ಯತೆ ಹೆಚ್ಚಿರು ತ್ತವೆ.ಇಲ್ಲಿ ಯಾವದು ಸರಿ,ಯಾವದು ತಪ್ಪುಅಂತ ಹೇಳಲು ಆಗುವದಿಲ್ಲ. ಅದು ಆಯಾ ಕಾಲಘಟ್ಟ  ಮತ್ತು  ರಾಜಕೀಯ   ವ್ಯವಸ್ಥೆಯನ್ನು ಅವಲಂಬಿ ಸಿರುತ್ತದೆ.

ಪರ್ವತವಾಣಿ

ನಮ್ಮ ವ್ಯವಸ್ಥೆಯಲ್ಲಿ ರಂಗಭೂಮಿಯಲ್ಲಿ ಎಡ- ಪಂಥೀಯ ಧೋರಣೆಗಳು ಹೆಚ್ಚು ಕ್ರಿಯಾಶಾಲಿ ಯಾಗಿವೆ, ಬಲಪಂಥೀಯ ಅಂತ ನಾವು ಯಾವು ದನ್ನ ಅನ್ನುತ್ತೇವೆಯೋ ಅವೆಲ್ಲ ಜಿಕೇರಿ ಮಾಡಿ ಹೊಂದಾಣಿಕೆ ಜೀವನ ಸಾಗಿಸುವದರಲ್ಲಿ ಪ್ರಾಕ್ಟಿಕಲ್ ಮನೋಭಾವಣೆಯವರು ಹೆಚ್ಚು. ಇಂತಹ ಎರಡೂ ಮನೋಸ್ಥಿತಿ ಉಳ್ಳ ಶಕ್ತರಿಂದ ಹೆಚ್ಚಿನದನ್ನು ನಿರೀಕ್ಷಿಸುವದು ಸಾಧ್ಯವಿಲ್ಲ, ಅದಕ್ಕಾಗಿ ವಿಶೇಷವಾದ ಕಾರ್ಯಪಡೆಯನ್ನು ಸರ್ಕಾರದ ಆಶಯಕ್ಕೆ ಅನುಗುಣವಾಗಿ ರಚಿಸಿ ಕಾರ್ಯೋನ್ಮುಖರಾಗಬೇಕಾಗುತ್ತದೆ. ಫ್ರಾನ್ಸ್ ದೇಶವು ಇತ್ತೀಚಿಗೆ ಜಾರಿಗೆ ತಂದಿರುವಂತಹ ಸಾಂಸ್ಕೃತಿಕ ನೀತಿಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ ತರಬೇಕಾಗುತ್ತದೆ.

ಟಿ.ಪಿ.ಕೈಲಾಸಂ

ಕೆಲವು  ರಂಗ ಶಿಕ್ಷಕರು ನೇರವಾಗಿ  ಮತ್ತು ಈಗಾ ಗಲೇ ಭೋಧನೆಯಲ್ಲಿ ತೊಡಗಿಕೊಂಡಿರುವ ಯುವ ಶಿಕ್ಷಕರಿಗೆ ಹೆಚ್ಚಿನ ರಂಗ ಶಿಕ್ಷಣ, ತರಬೇತಿ ನೀಡಿ ಅವರಿಂದಲೂ ಅದೇಕೆಲಸ ತೆಗೆದುಕೊಂಡು ಪರಿಣಾಮಗಳ ತೌಲನಿಕ ಅಧ್ಯಯನ ಮಾಡಿ ನಿರ್ಧಾರ ರೂಪು ರೇಷೆ ನಿಗದಿಪಡಿಸಬಹುದಾ ಗಿದೆ. ಈ ಹಿಂದೇ ಕನ್ನಡ ರಂಗ ಭೂಮಿ ಇತಿಹಾಸ ದಲ್ಲಿ ಇಂತಹ ಕಾರ್ಯ ಕೈಲಾಸಂ, ಶ್ರೀರಂಗ, ಕಾರಂತ, ಪರ್ವತವಾಣಿ ಮಾಡಿದ್ದರೂ ಕೂಡಾ ಅದರ ಅನಿಶ್ಚಿತತೆಯಿಂದಾಗಿ ಅವು ಮುಂದುವರಿ ಯಲಿಲ್ಲ. ಆದರೆ ಆಗ ಭಾಗವಹಿಸಿ ಈಗ ಮುದು ಕರಾದವರೂ ಇನ್ನೂ ಆಸಕ್ತಿ ಕಳೆದುಕೊಂಡಿಲ್ಲ ಮತ್ತು ವಯೋಮಾನಕ್ಕೆ ತಕ್ಕಂತೆ ಚಿಂತನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಅನ್ನೋದು ಅಷ್ಟೇ ಮುಖ್ಯ.

ಬಿ.ವಿ.ಕಾರಂತ

ಇನ್ನೊಂದು ವಿಷಯ ಇದು ಎಲ್ಲ ಸರ್ಕಾರಿ ಕೆಲಸ ಗಳಂತೆಯೇ ಅಥವಾ ಕ್ರೀಡೆಯಂತೆಯೋ? ಕ್ರೀಡೆ ಗಳಲ್ಲಿ ಆಡುವ ಸಾಮರ್ಥ್ಯಕ್ಕೆ ಒಂದು ವಯೋ ಮಾನದ ಪ್ರಭಾವ ಇರುತ್ತದೆ. ವಯಸ್ಸು ಹೆಚ್ಚಾ ದಂತೆ ಸಾಮರ್ಥ್ಯ. ಕಡಿಮೆ ಆಗುತ್ತದೆ. ಸರ್ಕಾರಿ ಕೆಲಸಕ್ಕೆ 60 ವರ್ಷ ನಿವೃತ್ತಿ ಅಂತ ಸದ್ಯ ನಿಗದಿ ಆದದ್ದು. ಹಾಗೆಯೇ ಕಲಾವಿದರಿಗೂ ವಯಸ್ಸಿನ ಪ್ರಭಾವ ಇರುವ ಕಾರಣ ರಂಗ ಶಿಕ್ಷಕ ವೃತ್ತಿಯನ್ನು 5 ಅಥವಾ 10 ವರ್ಷಗಳ ಗುಣಕಗಳ ಗುತ್ತಿಗೆ ಆಧಾರದ ಮೇಲೆ ನೀಡುವದು ಒಳ್ಳೆಯದುಮತ್ತು ಅವರಿಗೆ ಹೊರಗೂ ಸಹ ಕೆಲಸಮಾಡಲು ಪರಿಮಿತ ಸ್ವಾತಂತ್ರ ನೀಡುವದು ಒಳ್ಳೆಯದು. ಸರ್ಕಾರಿ ಕೆಲಸ ಅಂದರೆ ಏನಾಗಿದೆ ಅಂದರೆ ಕೆಲಸಕ್ಕೆ ಸೇರ್ಪಡೆಯಾದ ದಿನವೇ ಸೇವಾಭದ್ರತೆ ಗ್ಯಾರಂಟಿಯಾಗಿ ಮಾನಸಿಕವಾಗಿ ಅಂದೇ ನಿವೃತ್ತಿ ಜೀವನದ ಆರಂಭ ಅಂತ ಅನಿಸಿದರೆ ಅಚ್ಚರಿ ಅಲ್ಲ.

ಇಬ್ರಾಹಿಂ ಅಲ್ಕಾಜಿ

ಶಾಲೆ ಕಾಲೇಜುಗಳಲ್ಲಿ ಎಂತಹ ರಂಗ ಶಿಕ್ಷಕರು ಇರಬೇಕೆಂದರೆ ಅವರು ಪಠ್ಯಗಳಿಂದಲೇ ವೆಚ್ಚ ವಿಲ್ಲದೆ ನಾಟಕವನ್ನು ಸೃಜನಶೀಲವಾಗಿ ಹುಟ್ಟಿ ಸುವ ಸಾಮರ್ಥ್ಯ ಹೊಂದಿದವರು, ಯಾವ ಕೆಟ್ಟ ಚಟಗಳನ್ನು ಹೊಂದಿರದವರು, ಯಾವ ರಾಜ ಕೀಯ ಪಕ್ಷಗಳ ಬಗೆಗೂ ಒಲವು ಇರಲಾರದ ತಮ್ಮ ವೇತನಕ್ಕೆ ನ್ಯಾಯ ಒದಗಿಸುವ ಹಾಗೆ ದುಡಿಯಲು ಇಚ್ಛೆ ಇರುವವರು, ದೇಶಾಭಿಮಾನ ವಿರುವ ಮತ್ತು ಜಾತಿಯ ಮನೋಭಾವನೆಯನ್ನ ಹೊಂದಿರದವರು ಆಗಿರಬೇಕು. ಅಂಥವರು ಸಿಗುವರೆ? ಅನ್ನೋದೇ ಕೇಳಬಾರದ ಪ್ರಶ್ನೆಯೊ ಗೊತ್ತಿಲ್ಲ.

     ✍️ಅರವಿಂದ ಕುಲಕರ್ಣಿ         ರಂಗಭೂಮಿ ಚಿಂತಕರು,ಧಾರವಾಡ