ನಮಗೆಲ್ಲ  ನೆನಪಿದೆ  ಬಾಲ್ಯದಲ್ಲಿ  ಶಾಲೆಗೆ  ರಜೆ ಕೊಟ್ಟಾ  ಕ್ಷಣ ಅಜ್ಜ, ಅಜ್ಜಿ, ಕಾಕಿ, ಮಾಮಾ ಹೀಗೆ ಸಂಬಂಧಿಕರ  ಮನೆಗೆ  ತುಂಬ ಉತ್ಸುಕತೆಯಲ್ಲಿ ಹೋಗುವುದು, ಅವರ  ಬರುವಿಕೆ  ಸುದ್ದಿಯನ್ನು ಅಂಚೆಯ ಪತ್ರ ಮುಖೇನ ತಲುಪಿದರೆ ಸಾಕಿತ್ತು. ರಾತ್ರಿ ಹಗಲು  ಆ ದಿನಕ್ಕಾಗಿ  ಕಾದು  ಕುಳಿತಿದ್ದು, ಬರುವುದನ್ನು ಕಂಡು ಓಡಿಹೋಗಿ ಅಪ್ಪಿಕೊಂಡು, ಕೈಯಲ್ಲಿದ್ದ  ಚೀಲಗಳನ್ನು  ಹೊತ್ತು  ಖುಷಿಯಿಂದ ಬರುವ  ಗತ್ತು  ನೆನಪಾದರೆ   ಒಳಗೊಳಗೆ  ಹಾಲ ನೊರೆ   ಉಕ್ಕಿದಾನುಭವ.   ಅಕ್ಕ   ಪಕ್ಕದವರಿಗೆ ನೆಂಟರು ಬಂದ ಬಗ್ಗೆ ಹೇಳಬೇಕಾಗಿರಲಿಲ್ಲ  ನಮ್ಮ ನ್ನು ನೋಡಿದರೇನೆ ಗೊತ್ತಾಗುತ್ತಿತ್ತು,  ಸಂಭ್ರಮದ ಕ್ಷಣಗಳು ಎಷ್ಟು ಅರ್ಥಪೂರ್ಣ.

ಆಗಾಗ  ಪತ್ರ ಬರೆದು ಕ್ಷೇಮ ಸಮಾಚಾರ ವಿಚಾರಿ ಸುವ  ಅವರ   ಮರು  ಉತ್ತರಕ್ಕೆ ಕಾದಸಮಯ ನೆನೆದರೆ   ಏನೋ   ಉಲ್ಲಾಸ   ಉದ್ವೇಗ, ಸಾವು, ನೋವು  ಎಲ್ಲವನ್ನು   ಅನ್ವಯ ಮಾಡಿಕೊಳ್ಳುವ  ಪರಿ   ವಿಚಿತ್ರವಾದರೂ ಸತ್ಯ.  ಹಳೆಯ   ನೆನಪು ಗಳು,ಆಟಗಳು ಕಣ್ಮರೆಯಾಗುತ್ತಿರುವುದುಯಾವ ಸೂಚನೆ?  ನಮ್ಮ  ಮಕ್ಕಳಿಗೆ  ಕುಟುಂಬ  ಎಂದರೆ ಏನು?   ಕುಟುಂಬದಲ್ಲಿ   ಯಾರು   ಇರುತ್ತಾರೆ? ಅಜ್ಜಿಯ  ಕಥೆಗಳು, ಅಜ್ಜನ  ಕೋಲು, ಆತ್ಮೀಯ ಭಾವ, ಸದ್ಗುಣಗಳ  ಜೀವ   ತುಂಬುವ    ಕೆಲಸ ಎಲ್ಲೊ    ಒಂದು    ಕಡೆ    ಅಸ್ತಂಗತವಾಗುವಂತೆ ಗೋಚರಿಸುತ್ತಿದೆ.   ಗುರು  ಹಿರಿಯರಿಗೆ   ಗೌರವ ನೀಡಿ, ಸಾಕುವ ಸಲಹುವ ಸಂಪ್ರದಾಯ ಮರೀಚಿ ಕೆಯಾಗುತ್ತಿದೆ.  ಅದರ   ಪರಿಣಾಮ ವೃದ್ದಾಶ್ರಮ ಗಳ ಸಂಖ್ಯೆಯು ಗಣನೀಯವಾಗಿ ಬೆಳೆಯುತ್ತಿರು ವುದು ದುರಂತವೇ ಸರಿ.

ಮಗುವಿಗೆ  ಕೇವಲ  ಆಹಾರ ನೀಡಿದರೆ ಸಾಲದು. ದೈಹಿಕ  ಬೆಳವಣಿಯಾದರೆ   ಆಯಿತಾ?   ನಮ್ಮ ಒತ್ತಡಗಳನ್ನು, ಗುರಿಗಳನ್ನು, ಆಸೆ ಆಕಾಂಕ್ಷೆಗಳನ್ನ ಪುಟ್ಟ  ಮಗುವಿನ  ಮೆದುಳನ್ನು ಸಹಜವಾಗಿ ಬಲಿ ಯಲು  ಬಿಡದೇ  ನಮ್ಮಂತೆ  ಬಲಿಸಿ, ರೆಕ್ಕೆ ಬಲಿತು ಹಾರಿಹೋದ   ಮೇಲೆ   ಪರಿತಪಿಸುವ  ಸಂದರ್ಭ ದಲ್ಲಿ   ಮರುಗಿದರೇನು   ಫಲ?   ಮಾನಸಿಕವಾಗಿ ಪರಿಶ್ರಮದ  ಲೆಕ್ಕಹಾಕಿದರೆ  ಉತ್ತರ ದೊರಕೀತೆ? ಮಗುವಿನ ಮನದಲ್ಲಿ ಅಂತಃಕರಣ ಮಾನವೀಯ ಮೌಲ್ಯದ  ಗಟ್ಟಿ ಕಾಳು   ಬಿತ್ತದಿರುವಾಗ  ಬರುವ ಬೆಳೆಯೆಂತಹುದು  ಯೋಚಿಸಬೇಕಾದ  ಪರಿಸ್ಥಿತಿ. ಸಮಯ ಜಾರಿದಂತೆಲ್ಲ ಕಳೆದುಕೊಂಡಅಮೂಲ್ಯ ಸಮಯವನ್ನು ಪುನಃ ಮಕ್ಕಳಿಗೆ ಸಿಕ್ಕಿತೆ?

ಪಪ್ಪಾಯಗಿಡ, ದಾಸವಾಳ, ಬಾಳೆಗೊನೆ  ಇತ್ಯಾದಿ ಗಳನ್ನು  ಬೆಳೆಯುವಾಗಲೇ   ಮಂಗಗಳು  ದಾಳಿ ಯಿಟ್ಟು  ತಿನ್ನುವಾಗ  ಅವುಗಳನ್ನು   ಓಡಿಸುವುದ ರಲ್ಲಿ  ಎಲ್ಲರು ಮಗ್ನ.  ಪಟಾಕಿ   ಸಿಡಿಸಿ  ಅವುಗಳ ದಿಕ್ಕು  ತಪ್ಪಿಸಿ   ಮನೆಯ  ಹಂಚುಗಳಿಗೆ ಬೆಲೆತೆತ್ತು ಮರಗುವ  ನಾವು, ಅವು  ತಮ್ಮ ಜೀವದ  ಹಂಗು ತೊರೆದು   ಅವಶ್ಯಕ   ಆಹಾರದಲ್ಲಿರುವ  ರೋಗ ನಿರೋಧಕ     ಶಕ್ತಿಯನ್ನು     ಹೆಚ್ಚಿಸಿಕೊಳ್ಳುವ ಸಂಘರ್ಷ  ನಮಗೆಲ್ಲ  ಮಾದರಿ.   ಮಂಗಗಳಷ್ಟೆ  ಅಲ್ಲ ಪ್ರಾಣಿಗಳ ಬದುಕು ಪ್ರಕೃತಿಯಲ್ಲಿ ಅಡಗಿದೆ. ನಾವು ಕಲಿಯಬೇಕಾಗಿದ್ದು  ಬಹಳಷ್ಟಿದೆ.  ನಮ್ಮ ಮಕ್ಕಳಿ ಗೂ ಇದು ಅವಶ್ಯಕ.

ಮಗುವಿಗೆ   ಸ್ವತಂತ್ರವಾಗಿ   ಚಿಂತಿಸುವ   ಹಕ್ಕನ್ನು ನಿಯಂತ್ರಣ ಮಾಡಿ ಅದನ್ನು ರಿಮೋಟ್ಗೆ ಅಳವಡಿ ಸಿದರೆ ಅದು ಚಿಂತಿಸುವ ಕಾರ್ಯ ಬಿಟ್ಟು,ತನಗಿಷ್ಟ ದಂತೆ ಮೌನದತ್ತ ವಾಲುತ್ತದೆ. ಮೊಬೈಲ್, ಟಿ.ವಿ. ಗೇಮಿನಲ್ಲಿ  ತನ್ನೆಲ್ಲ  ಸಮಯವನ್ನು  ಮಿಸಲಿಟ್ಟು, ಕರೆದಾಗ  ಬಂದು   ಉಣ್ಣುವುದು,  ಓದುವುದು, ಮಲಗುವುದು,   ಅವರು   ಬಯಸಿದಷ್ಟು  ಅಂಕ ತೆಗೆಯುವುದು,  ಅವರು   ನಕ್ಕರೆ    ನಗುವುದು,  ಮಾತಾಡಲು ಹೇಳಿದರೆ ಮಾತಾಡುವುದು,ಎರಡು ನಿಮಿಷ  ಹತ್ತಿರ  ಕೂತು  ಬೆರೆಯುವಷ್ಟು   ಟೈಮ್ ಇಲ್ಲ.  ಒಳಸೇರಿ   ಬಿಟ್ಟರೆ  ಮುಗಿತು,   ಅವರಿಗೂ ಯಾವ  ಸಂಬಂಧವೂ  ಬೇಡ. ಅದರ ಅವಶ್ಯಕತೆ ಯು  ಇಲ್ಲದಂತೆ   ಮೂರು   ಹೊತ್ತು   ಚೌಕಟ್ಟಿನ ಬದುಕು.    ಹೌದರಿ    ಹಿಂಗ     ಮಾಡಲಿಲ್ಲಾಂದ್ರ ಮಕ್ಕಳು ಹಾಳಾಗಿಹೋಗುತ್ತಾರೆಂದು ಗೊಣಗುವ  ಪಾಲಕರು ಸಾಕಷ್ಟು.

ಎಷ್ಟೋ ಮಕ್ಕಳು  ಮಾನಸಿಕವಾಗಿ  ಅಸ್ವಸ್ಥತೆಯ ನ್ನು  ಹೊಂದಿ  ನರಳಾಡುವ  ಸ್ಥಿತಿ ನೆನೆದರೆ ಭಯ ವಾಗುತ್ತೆ.   ವಿಭಕ್ತ  ಕುಟುಂಬವಿಂದು  ಯಾಂತ್ರಿಕ ಬದುಕಿಗೆ   ನಾಂದಿ ಹಾಡಿದೆ.  ಅಜ್ಜ ನೆಟ್ಟ   ಆಲದ ಮರಕೆ ಮೊಮ್ಮಗ/ಳು ಬೇರಾಗಿ,ಹೊಸ ಚಿಗುರಾಗಿ ವಿಶಾಲವಾದರೆ  ತಾನೆ ಸಮೃದ್ಧ ಬದುಕು ನಿರ್ಮಾ ಣವಾಗುವುದು. ಹೆತ್ತವರ ಒಡಲು ತಂಪಾಗಿಸುವ, ದೇಶದ ಸತ್ಪ್ರಜೆಯಾಗಿಸುವ  ಹೊಣೆ  ನಮ್ಮದೆಂಬ ಸಂಸ್ಕೃತಿಯ  ಸೊಗಡನ್ನು,  ಜ್ಞಾನವನ್ನು  ಮೈಗೂ ಡಿಸಿಕೊಂಡು  ಸಾಗುವಲ್ಲಿ ನಮ್ಮ ಪಾತ್ರ ಅಗ್ರಗಣ್ಯ ವಾಗಬೇಕೆಸುತ್ತದೆ. “ವಸುದೈವ  ಕುಟುಂಬಕಂ” ಎಂಬ ಕನಸು ನನಸಾಗುವತ್ತ ಸಾಗಿದರೆ ಮಕ್ಕಳ ಭವಿಷ್ಯ ಉಜ್ವಲವಾಗುವುದು.

ಶ್ರೀಮತಿ.ಶಿವಲೀಲಾ ಹುಣಸಗಿ ಶಿಕ್ಷಕಿ,ಯಲ್ಲಾಪೂರ