ಕರ್ನಾಟಕ ಸಾಹಿತ್ಯ ಅಕಾಡೆಮಿಯು ದಿ:01/07/2021 ರಿಂದ 31/07/2021ರವರೆಗೆ “ಕನ್ನಡ ಕಾದಂಬರಿ: ಜೀವನಯಾನ” ಎಂಬ ಕಾರ್ಯಕ್ರಮ  ಹಮ್ಮಿಕೊಂಡಿದ್ದು 31 ದಿನ 31 ಕನ್ನಡ   ಕಾದಂಬರಿಗಳ   ಕುರಿತಾಗಿ   ವಿವಿಧ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾ ರೆ. ಪ್ರತಿ ದಿನ ಸಂಜೆ: 5.30 ರಿಂದ ಅಕಾಡೆಮಿಯ ಪೇಸ್ ಬುಕ್  ಮತ್ತು ಯೂಟ್ಯೂಬ್  ನಲ್ಲಿ ಈ ಕಾರ್ಯಕ್ರಮ   ವೀಕ್ಷಿಸಬಹುದು.   ಆಧುನಿಕ ಕಾಲಘಟ್ಟದಲ್ಲಿ   ಕಾದಂಬರಿಯು  ಪ್ರಮುಖ ಸಾಹಿತ್ಯ  ಪ್ರಕಾರವಾಗಿದ್ದು, ಬದುಕಿನ  ಕುರಿತಾಗಿ ಬದುಕಿನ ಚಲನಶೀಲತೆ ಕುರಿತಾಗಿ ಅರ್ಥಪೂರ್ಣ ವಾಗಿ ತಿಳಿಸಿಕೊಡಬಲ್ಲದು.  ಈ   ಕಾರಣದಿಂದ ಮೇಲ್ಕಂಡ  ಕಾರ್ಯಕ್ರಮ   ಹಮ್ಮಿಕೊಂಡಿದ್ದು ಆಸಕ್ತರು   ಕಾರ್ಯಕ್ರಮದ    ಸದುಪಯೋಗ ಪಡೆಯುವಂತೆ  ಬಗ್ಗೆ  ಅಕಾಡೆಮಿ  ತನ್ನ  ಪ್ರಕಟನೆ ಯಲ್ಲಿ ತಿಳಿಸಿದೆ.


ದೀಪ್ತಿ ಭದ್ರಾವತಿ
ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು