ಹೊಯ್ಸಳರ ದೇವಾಲಯಗಳು ನಮ್ಮಲ್ಲಿ ಹಾಸನ ಹಾಗು ಮಂಡ್ಯ ಜಿಲ್ಲೆಯ ಪರಿಸರದಲ್ಲಿ ಹಲವು ದೇವಾಲಯಗಳು  ವಾಸ್ತು  ಲೋಕದಲ್ಲಿ  ಕಾಣಬ ಹುದು. ಹಲವು ಉರಿನಲ್ಲಿ ಶೈವ ಹಾಗು ವೈಷ್ಣವ ಜೋಡಿ  ದೇವಾಲಯಗಳನ್ನು   ನೋಡಬಹುದು.  ಅಂತಹ  ಸುಂದರ ದೇವಾಲಯಗಳನ್ನು ಹೊಂದಿ ರುವ ಸ್ಥಳಗಳಲ್ಲಿ ಮಂಡ್ಯ ಜಿಲ್ಲೆಯ ಹೊಸ ಬೂದ ನೂರು ಸಹ ಒಂದು.

ಇತಿಹಾಸ ಪುಟದಲ್ಲಿ ಇದು ಪ್ರಮುಖ ಅಗ್ರಹಾರ ವಾಗಿತ್ತು.  ಇಲ್ಲಿನ 1276 ರ  ಹೊಯ್ಸಳ   ದೊರೆ ಮುಮ್ಮುಡಿ ನರಸಿಂಹನ ಕಾಲದ ಶಾಸನದಲ್ಲಿ ಈ ಗ್ರಾಮವನ್ನುಉಧ್ಬವ ಸರ್ವಜ್ಞ ಪದ್ಮನಾಭಪುರ ಎಂದೇ   ಬಣ್ಣಿಸಲಾಗಿದೆ.  ಇಲ್ಲಿನ   ಅನಂತ ಪದ್ಮ ನಾಭ ದೇವಾಲಯಕ್ಕೆ  ದತ್ತಿ  ನೀಡಿದ   ಉಲ್ಲೇಖ ನೋಡಬಹುದು.  ಇಲ್ಲಿ  ಬಹುತೇಕ  ಒಂದೇ ಮಾದರಿಯ ಶಿವ ಹಾಗೂ ಅಪರೂಪದ ಅನಂತ ಪದ್ಮನಾಭ ದೇವಾಲಯಗಳನ್ನು ನೋಡಬಹುದು

       ಅನಂತಪದ್ಮನಾಭ ದೇವಾಲಯ :

ಸುಮಾರು  13 ನೇ  ಶತಮಾನದಲ್ಲಿ ನಿರ್ಮಾಣ ವಾದ ಪ್ರಸ್ತುತ ನಗರದ ಮಧ್ಯ ಭಾಗದಲ್ಲಿರುವ ಈ ದೇವಾಲಯ ಸುಂದರವಾಗಿದ್ದು ಹೊಯ್ಸಳರ ದೇವಾಲಯಗಳಂತೆ  ಎತ್ತರವಾದ   ಜಗತಿಯ ಮೇಲೆ ನಿರ್ಮಾಣವಾಗಿದ್ದು ಗರ್ಭಗುಡಿ, ಅಂತರಾ ಳ,  ನವರಂಗ  ಹಾಗೂ   ಮುಖಮಂಟಪವನ್ನು ಹೊಂದಿದೆ. ಗರ್ಭಗುಡಿಯಲ್ಲಿ  ಗರುಡ  ಪೀಠದ ಮೇಲೆ ಸ್ಥಾನಿಕ ಭಂಗಿಯಲ್ಲಿರುವ ಹೊಯ್ಸಳರಲ್ಲಿ ಅಪುರೂಪದ ಸಮಾರು ಐದು ಅಡಿ ಎತ್ತರದ ಸುಂದರ  ಶ್ರೀದೇವಿ – ಭೂದೇವಿ ಸಹಿತನಾದ ಅನಂತ ಪಧ್ಮನಾಭನ ಮೂರ್ತಿ ಇದೆ. ಶಿಲ್ಪ ಪದ್ಮ, ಚಕ್ರ, ಗಧಾ ಮತ್ತು ಶಂಖಧಾರಿಯಾಗಿದ್ದು ಪ್ರಭಾ ವಳಿಯಲ್ಲಿ ಸುಂದರವಾದ ದಶಾವತಾರದ ಕೆತ್ತೆನೆ ಗಳನ್ನು  ನೋಡಬಹುದು.  ಇಲ್ಲಿನ ಬಾಗಿಲುವಾಡ ದಲ್ಲಿನ  ಲಲಾಟದಲ್ಲಿನ  ಗಜಲಕ್ಶ್ಮಿಯ  ಕೆತ್ತೆನೆ ಅದ್ಭುತವಾಗಿದೆ.


ನವರಂಗದಲ್ಲಿ   ತಿರುಗಣೆಯಿಂದ    ಮಾಡಿದ ಹೊಯ್ಸಳ    ದೇವಾಲಯಗಳಲ್ಲಿ    ಕಾಣಬರುವ ಸುಂದರ  ನಾಲ್ಕು  ಕಂಭಗಳಿದ್ದು      ವಿತಾನದಲ್ಲಿ ಕಮಲದ  ಮೊಗ್ಗಿನ  ರಚನೆ  ಇದೆ.  ಇಲ್ಲಿನ  ಗರ್ಭ ಗುಡಿಯ   ಬಾಗಿಲುವಾಡ   ಪಂಚಶಾಖೆಯಿಂದ ಹಾಗೂ ನವರಂಗ ಸಪ್ತ ಶಾಖೆಯಿಂದ ಅಲಂಕೃತ ಗೊಂಡಿದೆ.  ಮುಖಮಂಟಪದಲ್ಲಿ  ಸಹ  ತಿರುಗಣೆ ಯ  ಕಂಭ ಇದ್ದು ಬಾಗಿಲುವಾಡ ಸರಳವಾಗಿದೆ.   ಮುಖಮಂಟಪದಲ್ಲಿ ಕಕ್ಷಾಸನ ನೋಡಬಹುದು. ಹೊರಭಿತ್ತಿಯಲ್ಲಿ   ಯಾವುದೇ    ಅಲಂಕಾರಿಕ ಶಿಲ್ಪಗಳ  ಕೆತ್ತೆನೆ ಕಾಣಬರುವದಿಲ್ಲ. ದೇವಾಲಯ ಕ್ಕೆ ಸುಂದರ ದ್ರಾವಿಡ ಶೈಲಿಯ ಶಿಖರ ಇದೆ.  


ಇಡೀ ದೇವಾಲಯ ಸರಳವಾಗಿದ್ದರೂ  ಸುಂದರ ವಾಗಿದೆ. ಇಲ್ಲಿ  ಅನಂತ ಪದ್ಮನಾಭವ್ರತದಂದು ವಿಶೇಷ ಪೂಜೆ ನಡೆಯುತ್ತದೆ.

ಕಾಶಿ ವಿಶ್ವೇಶ್ವರ ದೇವಾಲಯ

ಇಲ್ಲಿ ಇದೇ ಶೈಲಿಯಲ್ಲಿರುವ ಮತ್ತೊಂದು ದೇವಾ ಲಯ ಇದ್ದು ಕಾಶಿವಿಶ್ವೇಶ್ವರ ದೇವಾಲಯ ಎಂದೇ ಪ್ರಸಿದ್ದಿ ಪಡಿದಿದೆ.  ಈ ದೇವಾಲಯ ಸಹ ಗರ್ಭ ಗುಡಿ,  ಸುಖನಾಸಿ, ನವರಂಗ ಮತ್ತು ಮುಖಮಂ ಟಪ ಹೊಂದಿದ್ದು  ಗರ್ಭಗುಡಿಯಲ್ಲಿ ಪಾಣಿಪೀಠ ದಲ್ಲಿ ಸುಂದರ ಶಿವಲಿಂಗವಿದೆ.  


ಈ ದೇವಾಲಯದ   ನವರಂಗದಲ್ಲಿ   ಅತ್ಯಂತ ಕಲಾತ್ಮಕವಾದ ಕೆತ್ತೆನೆಯ ನಂದಿ ಇದೆ. ನಂದಿಯ ಘಂಟೆಸರ, ಗೆಜ್ಜೆ, ಕಾಲಿನ ಗೆಜ್ಜೆ  ಅತ್ಯಂತ  ಸೂಕ್ಷ್ಮ ವಾದ  ಕೆತ್ತೆನೆಯಿಂದ  ಕೂಡಿದೆ.   ನವರಂಗದಲ್ಲಿ ಸಪ್ತಮಾತೃಕಾ, ಗಣಪತಿ ಮತ್ತು ಕಾರ್ತಿಕೇಯರ ಶಿಲ್ಪ ಇದ್ದು,  ತನ್ನ ವಾಹನವಾದ ನವಿಲಿನ ಮೇಲೆ ಕುಳಿತಿರುವ  ಕಾರ್ತಿಕೇಯನ  ಶಿಲ್ಪ  ಹೊಯ್ಸಳರ ಕಾರ್ತಿಕೇಯ  ಶಿಲ್ಪಗಳಲ್ಲಿ  ಸುಂದರವಾದ  ಶಿಲ್ಪ. ಇಲ್ಲಿಯೂ   ಸಹ  ನವರಂಗದಲ್ಲಿ   ಹೊಯ್ಸಳರ ಕಾಲದಲ್ಲಿ  ಕಾಣಬರುವ  ನಾಲ್ಕು   ಕಂಭಗಳಿದ್ದು ವಿತಾನದಲ್ಲಿ  ಅಷ್ಟ ದಿಕ್ಪಾಲಕರ  ಕೆತ್ತೆನೆ  ಹಾಗೂ ವಾದ್ಯಗಾರರ ಕೆತ್ತೆನೆ ಕಾಣಬಹುದು. ಇನ್ನು ಮುಖ ಮಂಟಪದಲ್ಲಿ ಕಕ್ಷಾಸನ ಇದೆ.  ಈ ದೇವಾಲಯದ ಹೊರಭಿತ್ತಿ   ಸಹ     ಅಲಂಕಾರರಹಿತವಾಗಿದ್ದು ಸುಂದರ  ದ್ರಾವಿಡ್ಯ  ಶೈಲಿಯ   ಶಿಖರ ಹೊಂದಿದೆ. ಇಲ್ಲಿ ಕಾರ್ತೀಕಮಾಸದಲ್ಲಿ ಸೋಮವಾರ ಹಾಗೂ ಶಿವರಾತ್ರಿಯಂದು ವಿಶೇಷ ಪೂಜೆ  ನಡೆಯುತ್ತದೆ.

ವಿನಾಶದ ಅಂಚಿನಲ್ಲಿದ್ದ  ಎರಡೂ ದೇವಾಲಯ ಗಳನ್ನು ಈಗ ಧರ್ಮಸ್ಥಳದ ಮಂಜುನಾಥ ಟ್ರಸ್ಟ್ ಹಾಗೂ ಸ್ಥಳೀಯರ ಸಹಕಾರದೊಂದಿಗ  ನವೀಕ ರಿಸಲಾಗಿದೆ. ಇನ್ನು ಇಲ್ಲಿ  ಸುಮಾರು  14 ನೇ ಶತ ಮಾನಕ್ಕೆ  ಸೇರಿದ   ವೀರಗಲ್ಲುಗಳನ್ನ   ನೋಡಬ ಹುದು.  

ತಲುಪುವ ಬಗ್ಗೆ : ಈ ದೇವಾಲಯ ಮಂಡ್ಯದಿಂದ ಸುಮಾರು  ಏಳು  ಕಿ.ಮೀ.   ದೂರದಲ್ಲಿದ್ದು, ಬೆಂಗಳೂರು – ಮದ್ದೂರು – ಹೊಸಬೂದನೂರು ಕ್ರಾಸ್ ನಿಂದ  ಬಲಕ್ಕೆ  ಸುಮಾರು  ಅರ್ಧ ಕಿ.ಮೀ. ದೂರದಲ್ಲಿ ಹಾಗೂ ಮೈಸೂರು – ಮಂಡ್ಯ -ಹೊಸ ಬೂದನೂರು  ಕ್ರಾಸ್  ಮೂಲಕ   ಸುಲಭವಾಗಿ ತಲುಪಬಹುದು.

✍️ಶ್ರೀನಿವಾಸಮೂರ್ತಿ ಎನ್. ಎಸ್. ಬೆಂಗಳೂರು