ಜೂನ್  10  ರಂಗಭೂಮಿ   ಇತಿಹಾಸದಲ್ಲಿ ದಾಖಲೆಯ ದಿನ. 2019 ಜೂನ್10  ಇದು ಕರ್ನಾಟಕವಷ್ಟೇ  ಅಲ್ಲದೆ  ಜಾಗತಿಕ ನಾಟಕ ಸಾಹಿತ್ಯದಲ್ಲಿ  ಒಂದು  ದುರಂತದ   ದಿನವಾ ಗಿದೆ. ಅಂದು ಬೆಂಗಳೂರಿನಲ್ಲಿ ಜ್ಞಾನ ಪೀಠ ಪ್ರಶಸ್ತಿ  ಭಾಜನರಾದ  ಗಿರೀಶ್ ಕಾರ್ನಾಡ್, ಯಾರು ಕನ್ನಡ ನಾಟಕದ ಮೂಲಕ ಕನ್ನಡ ಸಾಹಿತ್ಯವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದರೊ ಅವರುಅಂದು ನಿಧನರಾದರು. ಕನ್ನಡ ನಾಟಕ ರಚನಾಕ್ಷೇತ್ರ ಬಡವಾಯಿತು.ಜಾಗತಿಕ ಮಟ್ಟಕ್ಕೆ ಕನ್ನಡವನ್ನು ಒಯ್ಯುವ ಯಾವ  ಸೃಜನಶೀಲ  ಲೇಖಕರೂ   ಇಂದು ಕಾಣದೆ ಇರುವದು ದುರಾದೃಷ್ಟಕರ ಸಂಗತಿ. ಅದರಲ್ಲಿ ಕೋವಿಡ್ 19 ರ ಮಾರಕ ಹೊಡೆ ತಕ್ಕೆ  ಸಿಕ್ಕಿ  ನಲುಗಿ   ಹೋಗಿರುವ   ದೇಶದ ಆರ್ಥಿಕ ಕುಸಿತ, ದೀರ್ಘಾವಧಿಯ ಲಾಕ್ಡೌನ್ ಗಳು, ಜನ ಸಮುದಾಯ  ಸಾವು   ಉಳಿವು ಗಳ ಮಧ್ಯೆ   ಹೋರಾಡುತ್ತಿರುವಾಗ  ಸೃಜನ ಶೀಲ ರಂಗಭೂಮಿ ಚಟುವಟಿಕೆಗಳು ಸ್ಥಗಿತ ಗೊಳ್ಳುತ್ತಿರುವ ಸಮಯದಲ್ಲಿ ಯಾರು ಬರೆ ಯುವವರು,   ಯಾರು   ಮಾಡುವವರು, ಯಾರು ನೋಡುವರು, ಯಾರು ದುಡ್ಡುಕೊ ಡುವರು ಅನ್ನುವ ಸಂಘರ್ಷಮಯಬದುಕು ಆದಾಗ ಹೊಸ ಸಾಧ್ಯತೆಗಳ ಹುಡುಕಾಟವೇ ಸದ್ಯ  ಮುಖ್ಯವಾಗಿದೆ.  ಇಂಥಹ   ಪರಿಸ್ಥಿತಿ ಯಾಕೆ ಬಂತು? ಎಲ್ಲೋ ಒಂದು ಕಡೆ ನಮ್ಮ ರಂಗಭೂಮಿ  ಕ್ಷೇತ್ರದಲ್ಲಿ ಸಂಘಟನೆ, ಸಮು ದಾಯ ಜತೆ   ಹೊಂದಿಕೊಂಡು   ಹೋಗುವ ಅವಶ್ಯಕತೆ  ಮತ್ತು  ಅದರಲ್ಲಿ ಸೃಜನಶೀಲತೆ ಯನ್ನು    ಕಾಣಬಹುದಾದ    ದೃಷ್ಟಿಕೋನ ಮತ್ತು ಕ್ರಿಯಾಶೀಲತೆಯನ್ನು ಕಲಿಸುವದಿಲ್ಲ. ಅಷ್ಟೇ ಅಲ್ಲದೆ ಸರಕಾರ ವೇತನ, product ion cost ಎಲ್ಲಾ ಭಾಗ್ಯಗಳನ್ನುಕೊಡುತ್ತಲೇ ಬಂದಾಗ    ಸೃಜನಶೀಲತೆಯ     ಭಾವವೇ ಹುಟ್ಟುವುದಿಲ್ಲ.ಇಷ್ಟೆಲ್ಲ   ಯಾಕೆ   ಹೇಳಬೇಕಾಯಿತೆಂದರೆ, ಕೊರೊನಾ   ಲಾಕ್ ಡೌನ್    ಇದ್ದಾಗ, ಕಲಿಕೆಯ,  ಗಳಿಕೆಯ  ಎಲ್ಲ  ಮಾರ್ಗಗಳು ಮುಚ್ಚಿದಾಗ  ಸೃಜನಶೀಲತೆಯ  ಸೆಲೆಗಳು ಅನ್ನುವುದು ಸಿಗುವದಿಲ್ಲ. ಇಂತಹ ಪರಿಸ್ಥಿತಿ ಯಲ್ಲಿ ಶ್ರದ್ಧಾಂಜಲಿ,ನುಡಿನಮನ ಸಲ್ಲಿಸಲು  ಸಾಂಪ್ರದಾಯಿಕ  ಮಡಿ ಕಲಾವಿದರಿಗೆ, ಇಲ್ಲಿ ಯವರೆಗೆ  ಎಲ್ಲದಕ್ಕೂ  ಸರ್ಕಾರ,  ಫೌಂಡೇ ಷನ್ ಗಳನ್ನೇ ಅವಲಂಬಿಸಿದ  ಲೆಟರ್ ಹೆಡ್ ತಂಡಗಳಿಗೆ,  ವೃತ್ತಿ,  ಅರೆವೃತ್ತಿ ಕಲಾವಿದರು, ನವವೃತ್ತಿಪರರು ನಗರ ನಕ್ಸಲ್ ಪಟ್ಟಿಯನ್ನು ಹಾಕಿಕೊಂಡವರ  ಬಗ್ಗೆ  ಏನು ಮಾಡುವದು ಅಂತ ತಿಳಿಯದೆ ಇದ್ದಾಗ,  ಹವ್ಯಾಸಿ  ರಂಗ ಸಂಸ್ಥೆಯಾದ ‘ಅಭಿನಯ ಭಾರತಿ’ ಉತ್ತರ ಕರ್ನಾಟಕದ   ಪ್ರತಿಷ್ಠಿತ    ತಂಡವಾಗಿದ್ದು, ತನ್ನದೇ  ಆದ  ರೀತಿಯಲ್ಲಿ  ಫೇಸ್ಬುಕ್ ತಂತ್ರ ಜ್ಞಾನವನ್ನು ಉಪಯೋಗಿಸಿ  ಲಾಕ್ ಡೌನ್ ಸಮಯದಲ್ಲಿ  ಕ್ರಿಯಾಶಾಲಿಯಾಗಿ   ಹೊಸ ಬೆಳಕು  ಬೀರುತ್ತಾ,  ಮನೆಯಲ್ಲಿ   ಕುಳಿತೇ ಸಾಂಸ್ಕ್ರತಿಕ   ತುಡಿತ,  ಮಿಡಿತ   ಮಾಡುತ್ತ ಹೀಗೂ    ಮಾಡಬಹುದಲ್ಲವೇ?   ಎಂದು ಸೃಜನಶೀಲತೆಯ  ಹೊಸ  ಮಜಲುಗಳನ್ನು ಜಗತ್ತಿಗೆ   ತೋರಿಸಲು   ಮುಂದಾಯಿತು. ಗಿರೀಶ್  ಕಾರ್ನಾಡರ   ಆತ್ಮಕಥೆಯಾದ ಆಡಾಡ್ತಾ ಆಯುಷ್ಯ ವನ್ನು  ಕರ್ನಾಟಕ, ಹಾಗೂ ದೇಶ, ವಿದೇಶಗಳಲ್ಲಿರುವ  ಕನ್ನಡ   ಸಾಹಿತಿಗಳು,‌  ಅಭಿಮಾನಿಗಳಿಂದ   ಫೇಸ್ ಬುಕ್ ಲೈವ್ ನಲ್ಲಿ   ಓದಿಸುವ   ಮೂಲಕ   ಖ್ಯಾತ ನಾಟಕಕಾರನಿಗೆ   ವಿಶ್ವದಾಖಲೆಯ ನಮನ  ಸಲ್ಲಿಸಲಾಯಿತು.

ಆಡಾಡ್ತಾ ಆಯುಷ್ಯ ಆತ್ಮ ಕಥೆಯ ಓದು ಮುಂಜಾನೆ 5.50ಕ್ಕೆಸರಿಆರಂಭವಾಯಿತು. ಅರ್ಪಣೆ ಪುಟ ಮೊದಲು ಓದುವದು ಇರದಿ ದ್ದರೂ ಡಾ.ರಾಮ ಜೋಷಿ  ಅವರ  ಸಲಹೆ ಪ್ರಕಾರ ಅರ್ಪಣೆ ಓದಿದ್ದು ಹಲವು ಕುತೂಹ ಲಕ್ಕೆ, ಆಸಕ್ತಿ ತುಂಬಿದ  ಕೇಳುವಿಕೆಗೆ  ಪಿಚ್ ತಯಾರು ಮಾಡಿತು. ನಾವೆಲ್ಲ  ಭೂಮಿಯ ಮೇಲೆ ಹೇಗೆ ಯಾವ ಕಾರಣಕ್ಕಾಗಿಬಂದೆವು, ಆಕಸ್ಮಿಕವಾಗಿ ನಾವು ಭ್ರೂಣಾವಸ್ಥೆಯಲ್ಲಿ ಯೇ  ವೈದ್ಯನಾರಾಯಣ ಹರಿ: ಆಗೋ ಬದಲು ವೈದ್ಯೋ ಯಮ ಹರಿಃ ಆಗಿದ್ದರೆ ನಾವಿಲ್ಲದ ಜಗತ್ತು ಹೇಗಿರುತಿತ್ತು? ಅನ್ನೋ ಕುತೂಹಲ. ಗರ್ಭಪಾತದ  ಘಳಿಗೆ  ತಪ್ಪಿದ ಕ್ಷಣದ  ಫಲವಾಗಿ  ಭವಿತವ್ಯದ  ಅಂತಾರಾ ಷ್ಟ್ರೀಯ   ನಾಟಕಕಾರ  ಕನ್ನಡಕ್ಕೆ  ಮತ್ತೆ ಜ್ಞಾನಪೀಠ ಮತ್ತು ಹತ್ತು ಹಲವು ಯಶಸ್ಸಿನ ಗರಿ ಹಚ್ಚಿಕೊಂಡ   ಸಾಹಿತ್ಯಗಿರಿಯ  ಈಶ   ಹುಟ್ಟಿದುದು ನಮ್ಮಲ್ಲಿ ಬೆರಗು  ಮೂಡಿಸದೆ ಇರುತ್ತದೆಯೇ? ಧಾರವಾಡದಲ್ಲಿ ಇಬ್ಬರಿಂದ  ಓದಿಸಿಕೊಂಡು  ಸಿರಸಿಗೆ  ಬಂದು  ಅಲ್ಲಿಂದ  ಮತ್ತೆ ಅಮೆರಿಕೆ,ಧಾರವಾಡ ಮತ್ತೆಮೈಸೂರ, ಬೆಳಗಾವಿ ಮುಂಬೈ,ಬೆಂಗಳೂರು,ಶಿವಮೊಗ್ಗೆ ಮಣಿಪಾಲ,   ಅಮೆರಿಕ,    ಇಂಗ್ಲೆಂಡ್, ಜರ್ಮನಿ, ಗುಲ್ಬರ್ಗ,  ಬಾಗಲಕೋಟೆ ಹೀಗೆ ವಾಚನದ ಧ್ವನಿಯ ನದಿ ಅಂಕುಡೊಂಕಾಗಿ  ಹರಿಯುತ್ತಾ    ಕೊನೆಗೆ    ಧಾರವಾಡವನ್ನು ಮುಟ್ಟಿದಾಗ  ಸರಿ ರಾತ್ರಿ 11.೦೦ ಗಂಟೆಯಾ ಗಿತ್ತು.  ವಿಜಯದ, ಯಶಸ್ಸಿನ,  ತೃಪ್ತಿಯ  ಭಾವವು   ಗೂಗಲ್ ಮಿಟ್ ನಲ್ಲಿ   ಎಲ್ಲರ    ಮುಖದಲ್ಲಿಯೂ ಕಂಡಿತ್ತು.

ಅಲ್ಲಿ  ಆನಂದ, ಸಂತೋಷ, ತೃಪ್ತಿಯಬಾಷ್ಪ ನೋಡಿದಾಗ    ರಾತ್ರಿಯಲ್ಲಿಯೂ   ಸಹ ‘ಸಂಸ್ಕಾರ’ದ ಚಂದ್ರಿ ನೆನಪಾಗಿ ಮಟ ಮಟ ಮಧ್ಯಾಹ್ನದಲ್ಲಿ ಕಾಗೆ ಬಂದು ಪುಸ್ತಕದ ಬಿಳಿ ಪುಟ ಕುಕ್ಕಿದಂತಾಗಿತ್ತು. ಎಲ್ಲ ಬಿಟ್ಟು ದೂರ ನಿಂತಿದ್ದ ಚಂದ್ರಿ ತನ್ನ ಸೆರಗಿನ ತುದಿಯಿಂದ ಕಣ್ಣೊರೆಸಿಕೊಳ್ಳುವ ಹಾಗೆ ಅನಿಸಿತು.

                      🔆🔆🔆

✍️ ಅರವಿಂದ‌ ಕುಲಕರ್ಣಿ ರಂಗಭೂಮಿಚಿಂತಕರು, ಧಾರವಾಡ