ಇಂದು  ಮಧ್ಯಾಹ್ನ  ಆಫೀಸಿನಲಿ  ಊಟ ಮಾಡುವಾಗ ಡಬ್ಬಿಬಿಚ್ಚುತ್ತಿದ್ದಂತೆ ಯಾಕೋ ಇವಳು  ಕಣ್ಮುಂದೆ ಬಂದಳು. ಎಷ್ಟೇ  ಏನೇ ಕೆಲಸವಿದ್ದರೂ ಮುಂಜಾನೆ ಒಂಬತ್ತರೂಳಗೆ ಈ ಡಬ್ಬಿ ತಯಾರಾಗಲೇ ಬೇಕು; ಅಲ್ಪ ಸ್ವಲ್ಪ ವ್ಯೆತ್ಯಾಸವಾದರೂ ಕೆಂಗಣ್ಣಿಗೆ ಗುರಿಯಾಗಿ.

ನಿಜವಾಗಿಯೂ ಹೆಣ್ಣೆಂದರೆ ಒಂದು ಮಹಾ ಶಕ್ತಿನೆ.ತಾಯಿ,ಸಹೋದರಿ, ಹೆಂಡತಿ ಮತ್ತು ಮಗಳು ತಮ್ಮಎಷ್ಟೆಲ್ಲಾ ಸಮಸ್ಯೆಗಳ ನಡು ವೆಯೂ ಸಂಸಾರಕ್ಕಾಗಿ ಜೀವಸವೆಸುವರು. ಆದರೆ  ಈ  ಗಂಡುಜಾತಿಯ.  ಜೀವಗಳು ಸ್ವಾರ್ಥತೆಯ ಮಡಿಕೆಗಳಿದ್ದಂತೆ.

ಎರಡು ಗಂಟೆಯಾಯಿತು,ಇವಳು ಡಬ್ಬಿಗೆ ತುಂಬಿದ  ಪ್ರೀತಿಯನ್ನು  ತಟ್ಟೆಗಿಳಿಸುತ್ತಾ ಫೋನ್  ಹಿಡಿದು…‌ “ಉಂಡ್ಯೆ”  ಕೇಳಿದೆ. “ಇನ್ನೂ  ಇಲ್ಲ  ಪಪ್ಪ”  ಆ  ಕಡೆಯ  ಧ್ವನಿ‌
(ಇಬ್ಬರೂ ಮಕ್ಕಳು ಪಪ್ಪಾ ಅನ್ನುತ್ತಿದ್ದರಿಂದ ನಾ ಇವಳಿಗೂ “ಪಪ್ಪ” ನೇ)  ಇಷ್ಟೊತ್ತಿನ ತನಕ ಏನ್ ದನಾಕಾಯ್ತಾ ಇದ್ದಿ” ಕೇಳಿದೆ.  ಕಂಪ್ಯೂಟರ್ ನಲಿ   ಟೈಫ್   ಮಾಡ್ತಿದ್ದೆ ಹೊತ್ಹೋದದೆ  ತಿಳಿಲಿಲ್ಲ,  ಈಗ  ಉಣ್ತೆ” ಅಂದಳು.

ಕಣ್ಣಂಚು ತೇವವಾಯಿತು.ಕಳೆದ ಎಂಟು ವರ್ಷಗಳಿಂದ ನಿಗದಿತ ಸಮಯದೊಳಗೆ ಇಷ್ಟೇ ಕ್ವಾಲಿಟಿ, ಕ್ವಾಂಟಿಟಿ ತುಂಬಿ ಕೊಡುತ್ತಿ ದ್ದರಿಂದಲೇ  ಅಲ್ಲವೇ,  ನಿವೃತ್ತಿಯಂಚಿನ
ಇಂದಿಗೂ ನಾ ಲವಲವಿಕೆಯಿಂದ ಓಡಾಡಿ ಕೊಂಡು ಇದ್ದದ್ದು ಅಂತ ಕ್ಷಣ ಭಾವುಕನಾಗಿ ತಟ್ಟೆಯೊಳಗೆ ನಾಲ್ಕು ಹನಿ ಉದುರಿತು.

ದುಡಿಯುವ ಕೈ ಗಳಿಗೆ, ಡಬ್ಬಿ ತುಂಬಿ ಕೊಡು ತ್ತಿರುವ   ಎಲ್ಲಾ  ಹೆಣ್ಣು  ಜೀವಗಳಿಗೆ  ನನ್ನ ನೂರಾರು ಸಲಾಮುಗಳು.ಇವರ ಪರಿಶ್ರಮ ತ್ಯಾಗದಿಂದಲೇ ನಮ್ಮೆಲ್ಲ ಸಂಸಾರದ  ಅಡಿ ಪಾಯ  ನಿಂತಿದೆ  ಎಂಬುದನ್ನು  ಯಾರೂ ಮರೆಯದಿರಿ.ಹೆಣ್ಣು ಹೆಣ್ಣು ಅಂತಾ ಎಲ್ಲೂ ಜರೆಯದಿರಿ.

✍️ಪ್ರಕಾಶ ಕಡಮೆ, ನಾಗಸುಧೆ    ಹುಬ್ಬಳ್ಳಿ.