ಬಸಿರ್ಸೀಳಿ ಧರಣಿಯನು ಬಂಜೆ ಮಾಡಿದೆವಂದು
ಕೆಸರೆರಚಿ ವದನವನು ಮಸಿಯಾಗಿಸಿ
ಕಿಸಿಯುತಿಹ ಮನುಜನಿಗೆ ಶಾಪವನಿತ್ತ ಳಿಂದು
ನುಸಿಯುತಿವೆ ರೋಗಗಳು ನರಹರಿಸುತೆ

ಉಸಿರುಸಿರ ಹಪಹಪಿಸಿ ಪಡೆಯುತಿಹ ಮಾನವನು
ಹಸಿರದನೋಡಿಸುತಲಿ ಪರಿತಪಿಸುತೆ
ಪಸಿರಸಿರಿ ಮುಂದೆಯೂ ಕಾಯದೆಲೆ ಕೆಡಹಿದರೆ
ಹೆಸರಿರದು ಮನುಜಕುಲ ನರಹರಿಸುತೆ

ಬಳುವಳಿಯು ಭಗವಂತ ನಮಗಾಗಿ ನೀಡಿದುದ_
ನುಳಿಸದೆಲೆ ಸಂಪೂರ್ಣ ನಾಶಮಾಡುತೆ
ಸುಳಿವಿರದೆ ಹಸಿರಿನದು ಕೊರಗುತಿಹ ಕಾಲದಲಿ
ಚಳುವಳಿಯೇ ದಾರಿಯದು ನರಹರಿಸುತೆ

                   🔆🔆🔆
✍️ಸುಜಾತಾ ರವೀಶ್, ಮೈಸೂರು