ಬಹಳ ಹಿಂದಿನಕಾಲದಲ್ಲಿ ಶರಸೇನ ಎನ್ನುವ ಹೆಸರಿನ ರಾಜ ಶರನಗರಿ ಎನ್ನುವ ರಾಜ್ಯವನ್ನು ಆಳುತ್ತಿದ್ದ.
ಆತ ತನ್ನ ಆತುರದ ನಿರ್ಧಾರದಿಂದ ಒಂದಷ್ಟು ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದ. ಒಂದು ಬೇಸಿಗೆಗಾಲದಲ್ಲಿ ಆತ ರಾಜ್ಯ ಪರ್ಯಟನೆಗೆ ತೆರಳಿದ. ಸಾಮ್ರಾಜ್ಯದ ಮೂಲೆ ಮೂಲೆಯ ಊರುಗಳಲ್ಲಿ ಸಂಚರಿಸುತ್ತಿದ್ದ ಆತನಿಗೆ ವಿಪರೀತ ಬಿಸಿಲಿಗೆ ಮೈಯೊಡ್ಡಿದ ಪರಿಣಾಮ ಆತನ ಮೈಮೇಲೆ ಬಿಸಿಲುಗುಳ್ಳೆಗಳು ಎದ್ದವು.ಪ್ರಯಾಣ ಅರ್ಧಕ್ಕೆ ನಿಲ್ಲಿಸದ ರಾಜ ತನ್ನ ರಾಜಧಾನಿಗೆ ವಾಪಾಸ್ಸಾದ. ಇನ್ನೆಂದೂ ಉರಿ ಬಿಸಿಲಿನಲ್ಲಿ ಬೇಟೆಗೆ ಹೋಗಲು ಸಾಧ್ಯವೇ ಇಲ್ಲ.. ಎನ್ನುವ ಭಾವನೆಬರುವಷ್ಟು ಆಯಾಸವಾಗಿತ್ತು.ಇದರ ಪರಿಣಾಮ ತನ್ನ ರಾಜ್ಯವನ್ನು ಬಿಸಿಲಿನಿಂದ ರಕ್ಷಿಸಬೇಕೆಂಬ ಆತುರ ರಾಜನಲ್ಲಿ ಮೂಡಿತು.ತಕ್ಷಣ ಮಂತ್ರಿಗಳನ್ನು ಕರೆದು.. ತನ್ನ ಇಡೀ ಸಾಮ್ರಾ ಜ್ಯಕ್ಕೆ ಗುಡಾರ ಹೊದೆಸುವಂತೆ ಆಜ್ಞೆ ಹೊರಡಿಸಿದ. ರಾಜಾಜ್ಞೆ ಯನ್ನು ಕೇಳಿದ ಮಂತ್ರಿಗಳು, ಸಭಾಸದರು ಪ್ರಜೆಗಳು ಚಿಂತೆಗೊಳಗಾದರು. ಇಡೀ ಸಾಮ್ರಾಜ್ಯಕ್ಕೆ ಹೊದಿಕೆ ಹೊದಿಸುವು ದೆಂದರೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಮರಗಿಡ ಬೆಳೆಗಳು ಬಿಸಿಲಿಲ್ಲದೇ ಹೇಗೆ ಬೆಳೆದಾವು? ಜೀವ ಸಂಕುಲ ಹೇಗೆ ಉಳಿದಾವು..? ಎಂದು ಚಿಂತಿತರಾದರು.. ಆದರೆ ರಾಜನು ತನ್ನ ನಿರ್ಧಾರ ಬದಲಿಸುವಂತೆ ಮಾಡುವ ಅಂದರೆ ರಾಜನ ಎದುರು ನಿಂತು ಮನವೊಲಿಸುವ ಯಾವ ಉಪಾಯಗಳು ಅವರ ಬಳಿ ಇರಲಿಲ್ಲ. ಈ ಸುದ್ದಿ ಇಡೀ ರಾಜ್ಯ ತಲುಪಿದಾಗ ಒಂದು ಹಳ್ಳಿಯಿಂದ ಒಬ್ಬ ಯುವಕ ರಾಜನನ್ನು ಕಾಣಲುಬಂದ.
ಆತ ಧೈರ್ಯತೋರಿ ರಾಜನ ಎದುರು ನಿಂತು.. “ಸ್ವಾಮಿ ಇಡೀ ಸಮ್ರಾಜ್ಯಕ್ಕೆ ಹೊದಿಕೆ ಹೊದೆಸಲು ನೀವು ಯಾಕೆ ಅನವ ಶ್ಯಕವಾಗಿ ಹಣ ವ್ಯಯಿಸುತ್ತೀರಿ…! ಅಲ್ಲದೇ ಮಳೆ ಬರುವಾಗ ಮತ್ತೆ ಅದನ್ನು ತೆಗೆಯಬೇಕಾಗುತ್ತದೆ.ನಿಮ್ಮ ಸೈನಿಕರಿಗೆ ಇದೇ ಕಾಯಕದಲ್ಲಿ ವರ್ಷಪೂರ್ತಿ ಕಳೆದು ಹೋಗುತ್ತದೆ. ಅದರ ಬದಲು ನೀವು ಮಳೆಗಾಲದಲ್ಲಿ ಬಳಸುವ ಕೊಡೆಯನ್ನೆ ಬಿಸಿಲಿಗೂ ಬಳಸಬಹುದಲ್ಲ..!” ಎಂದು ಸಲಹೆಯಿತ್ತನು.
ರಾಜ ನಿಧಾನವಾಗಿ ವಿಚಾರ ಮಾಡಿದಾಗ ಈ ಯೋಚನೆಯಲ್ಲಿ ರಾಜ್ಯದ ಹಿತವಿದೆ ಎಂದು ಮನಗಂಡು, ಪರಿಣಿತರನ್ನು ಕರೆಸಿ ಬೇಸಿಗೆ ತಕ್ಕುದಾದ ಕೊಡೆಗಳನ್ನು ತಯಾರಿಸಲು ಅಪ್ಪಣೆ ಹೊರ ಡಿಸಿದ.ಆಗ ರಾಜ್ಯದ ಪ್ರಜೆಗಳೆಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟರು. ಆಕಾಶದಲ್ಲಿರುವ ಸೂರ್ಯನೂ “ಅಬ್ಬಾ..ನನ್ನ ಬೆಳಕು, ಶಾಖಭೂಮಿಗೆ ಇಳಿಯಲು ಯಾವ ಅಡ್ಡಿ ಅಡಚಣೆಯೂ ಎದುರಾಗಲಿಲ್ಲ..” ಎಂದು ಖುಷಿಪಟ್ಟ.
ಆ ವರ್ಷದಿಂದ ರಾಜ್ಯದಲ್ಲಿ ಬಣ್ಣಬಣ್ಣದ ಬಿಸಿಲು ಕೊಡೆಗಳು ರಸ್ತೆಯುದ್ದಕ್ಕೂ ನಡೆಯು ತ್ತಿದ್ದವು. ಮಕ್ಕಳ ಕೈಯಲ್ಲಿ ಅವು ಖುಷಿಯಿಂದ ನಲಿಯುತ್ತಿದ್ದವು.
🔆🔆🔆
✍️ರೇಖಾ ಭಟ್,ಹೊನ್ನಗದ್ದೆ
Alpanige aishwarya bandre madhyaratrili bisilu kode anno gade i rajanigu anvayisutte
LikeLike
ಬಣ್ಣ ಬಣ್ಣದ ಕೊಡೆಗಳು ಬಂದಿರುವ ಕತೆ ತುಂಬಾನೇ ಚೆನ್ನಾಗಿದೆ ಮೇಡಂ 👌👌👌👌👍👍
LikeLiked by 1 person
ಕಥೆಯ ಪರಿಕಲ್ಪನೆ ಉತ್ತಮ
LikeLiked by 1 person
ಚೆನ್ನಾಗಿದೆ ಬಣ್ಣಬಣ್ಣದ ಕೊಡೆಗಳ ಜೊತೆಗೊಂದು ಭಾವ ನೈಸ್
LikeLiked by 1 person