ಕಲ್ಯಾಣ ಚಾಲುಕ್ಯರು ನಾಡಿನ ಇತಿಹಾಸ ದಲ್ಲಿ ತನ್ನದೇ ಆದ ಶೈಲಿಯಿಂದ ದೇವಾಲ ಯಗಳನ್ನು ನಿರ್ಮಿಸಿ ಹೊಸ ನಾಂದಿ ಹಿಡಿದಿರುವರು. ಸುಂದರ ಶಿಲ್ಪಗಳು, ಜಾಲಂದ್ರಗಳು ಬಾಗಿಲುವಾಡಗಳು ವಾಸ್ತು ಶಿಲ್ಪದ ಅಧ್ಯಯನಕ್ಕೆ ಹೊಸ ಸ್ವರೂಪ ನೀಡಿದವು.ಆದರೆ ಗದಗಜಿಲ್ಲೆಯ ಡಂಬಳ ದ ದೊಡ್ಡಬಸಪ್ಪ ಇವರ ದೇವಾಲಯಗಳ ಲ್ಲಿಯೇ ವಿಭಿನ್ನವಾದದ್ದು. ನಕ್ಷತ್ರಾಕಾರದ   ತಲವಿನ್ಯಾಸದ ಪರಿಕಲ್ಪನೆಗೆ ನಾಂದಿಹಾಡಿ ದ ಕಲ್ಯಾಣ ಚಾಲುಕ್ಯರ ದೇವಾಲಯಗಳಿಗೆ ಅತ್ಯುತ್ತಮ ಉದಾಹರಣೆ ಈ ದೇವಾಲಯ.

ಇತಿಹಾಸದಲ್ಲಿಧರ್ಮಪುರ,ಧರ್ಮವೊಳ ಲ್ ಎಂದು ಕರೆಯುತ್ತಿದ್ದ ಈ ಸ್ಥಳ ಆಕಾಲ ದಲ್ಲಿ  ಪ್ರಸಿದ್ಧ  ಭೌದ್ದ  ಕೇಂದ್ರವಾಗಿತ್ತು. ನಂತರ ಕಾಲದಲ್ಲಿ ಶೈವ ಮಠದ ಕೇಂದ್ರ  ವಾಗಿದ್ದ ಇಲ್ಲಿಕೆಳದಿಅರಸರು ದತ್ತಿ ನೀಡಿದ ಉಲ್ಲೇಖವಿದೆ. ಈಗಲೂ ಇಲ್ಲಿನ ತೋಂಟ ದಾರ್ಯಮಠ ಪ್ರಸಿದ್ದಿಯಾದದ್ದು.ಕೆಳದಿಯ ಬಸಪ್ಪ ನಾಯಕ ಇಲ್ಲಿ ಕಳಸ ಮಾಡಿಕೊಟ್ಟ ಬಗ್ಗೆ ಶಾಸನ ಇದೆ,ಇಲ್ಲಿಯ ಶಾಖೆ ಕೆಳದಿಯ ರಾಜಧಾನಿಯಾಗಿದ್ದ ಬಿದನೂರಿನಲ್ಲಿದ್ದು ಈಗಲೂ ಅಲ್ಲಿ ನೋಡಬಹುದು. ಬೌದ್ದ, ಜೈನ ಹಾಗು ಶೈವರ ಕೇಂದ್ರವಾಗಿದ್ದ ಡಂಬಳ ಮೂರು ಧರ್ಮಗಳ ನಾಡಾಗಿದ್ದುವಿಶೇಷ

         ದೊಡ್ಡಬಸಪ್ಪದೇವಾಲಯ :

ಮೂಲತ:  ಈ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಮುಖಮಂಟಪ ಹಾಗೂ ನಂದಿಮಂಟಪವನ್ನು ಹೊಂದಿದೆ. ಸುಮಾರು ೧೧೨೪ ರಲ್ಲಿಈ ದೇವಾಲಯ ವನ್ನು  ಅಜ್ಜಯ್ಯ ನಾಯಕ ಕಟ್ಟಿಸಿದ ಬಗ್ಗೆ ಉಲ್ಲೇಖವಿದೆ.ಗರ್ಭಗುಡಿಯಲ್ಲಿ ಶಿವಲಿಂಗ ಇದ್ದು ಪಾಣೀಪೀಠದಲ್ಲಿನ ಕೆತ್ತೆನೆ ಗಮನ ಸೆಳಯುತ್ತದೆ.

ಗರ್ಭಗುಡಿಯ ವಿತಾನದಲ್ಲಿನ  ಕೆತ್ತೆನೆ ಸುಂದರವಾಗಿದೆ. ಇನ್ನು ಇದಕ್ಕೆ ಸಪ್ತಶಾಖೆ ಯ ಬಾಗಿಲುವಾಡ ಇದ್ದು, ಇಲ್ಲಿನ ನೃತ್ಯ ಶಿಲ್ಪಗಳು ಇದ್ದು, ಲಲಾಟದಲ್ಲಿ ಗಜಲಕ್ಷ್ಮಿಯ ಕೆತ್ತೆನೆ ಇದೆ.ಗರ್ಭಗುಡಿಯ ಮುಂದೆ ವಿಸ್ತಾರ ವಾದ ಅಂತರಾಳವಿದ್ದು ಇಲ್ಲಿನ ತೋರಣ ಅಲಂಕಾರ ಕಲಾತ್ಮಕವಾಗಿದೆ. ಗರ್ಭಗುಡಿ ಯಲ್ಲಿ ೨೪ ಮೂಲೆಗಳಿದ್ದು  ಶಿಖರದ ರೂಪಕ್ಕೆ ನಾಂದಿಯಂತಿದೆ.

ಇನ್ನು ವಿಸ್ತಾರವಾದ ನವರಂಗವನ್ನು ಹೊಂದಿದ್ದು ಇಲ್ಲಿ ನಾಲ್ಕು ಕೆತ್ತೆನೆಯ ಕಂಭ ಗಳಿವೆ.  ಇಲ್ಲಿನ   ಕಂಭಗಳಲ್ಲಿನ ಹೂಬಳ್ಳಿ ಕೆತ್ತೆನೆ ಉಬ್ಬು ಶಿಲ್ಪಗಳ ಕೆತ್ತೆನೆ ನೋಡಬಹು ದು.ಇಲ್ಲಿನ ವಿತಾನ (ಭುವನೇಶ್ವರಿ)ಯಲ್ಲಿನ ಕೆತ್ತನೆ ಅಧ್ಭುತ.ನವರಂಗದಲ್ಲಿ ಕಂಭಗಳು ಒಂದೇ ರೀತಿಯಲ್ಲಿರದೆ ವಿಭಿನ್ನವಾಗಿದೆ.

ಈ ದೇವಾಲಯಕ್ಕೆ ಪ್ರತ್ಯಕವಾದ ನಂದಿ ಮಂಟಪವಿದ್ದು ದೇವಾಲಯ ಭಾಗವಾಗಿ ಯೇ ಕಟ್ಟಲಾಗಿದೆ.ನಂದಿ ಮಂಟಪದಲ್ಲಿ ದೊಡ್ಡದಾದ ನಂದಿ ಇದೆ.ಇದರಿಂದಲೇ ಈ ದೇವಾಲಯಕ್ಕೆ ದೊಡ್ಡ ಬಸಪ್ಪದೇವಾಲಯ ಎಂಬ ಹೆಸರು ಬಂದಿದೆ.ಇನ್ನುಇಲ್ಲಿಯೂ ಸಹ ಕಲಾತ್ಮಕವಾದ ಕಂಭಗಳಿವೆ.

ಈ ದೇವಾಲಯದ ಮುಖ್ಯ ಸಂಗತಿಯೇ ಶಿಖರಭಾಗ.ಶಿಖರವನ್ನು ಅರ್ಧಕಂಭಗಳ ಮೇಲೆ ಚಿಕ್ಕ ಚಿಕ್ಕ ತೋರಣಗಳಲ್ಲಿ ನಿರ್ಮಿಸಿ ರುವುದು.ಚಾಲುಕ್ಯರ ನಿರ್ಮಾಣದ ವೇಸರ ಶೈಲಿಯಲ್ಲಿರುವ ಗೋಪುರ ಬಹಳಷ್ಟು ಕೋನಗಳನ್ನು ಹೊಂದಿದ್ದು ಅಧಿಷ್ಟಾನದ ಮೂಲಕ ಆರಂಭವಾಗಿ ಕಳಸದಲ್ಲಿ ಕೊನೆ ಗೊಳ್ಳುವದರಿಂದ ಚಾಲುಕ್ಯರ ದೇವಾಲಯ ಗಳಲ್ಲಿಯೇ ವಿಭಿನ್ನವಾಗಿ ಗಮನ ಸೆಳೆಯು ತ್ತದೆ.

ಸೋಮೇಶ್ವರದೇವಾಲಯ :


ದೊಡ್ಡಬಸಪ್ಪ ದೇವಾಲಯಕ್ಕೆ ಸನಿಹದಲ್ಲಿ ಯೇ ಈ ದೇವಾಲಯವಿದ್ದು ಗರ್ಭಗುಡಿ, ಅಂತರಾಳ ಹಾಗೂ ನವರಂಗ ಹೊಂದಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿದೆ.ಬಾಗಿಲು ವಾಡದ ಕೆತ್ತೆನೆ ಸುಂದರವಾಗಿದೆ.ವಿತಾನ ಕೆತ್ತೆನೆ ಕಲಾತ್ಮಕ.ಇನ್ನು ಅಂತರಾಳದಲ್ಲಿ ಹೊಸದಾದ ನಂದಿ ಇಡಲಾಗಿದೆ. ಇಲ್ಲಿನ  ಬಾಗಿಲವಾಡದ ಜಾಲಂದ್ರಗಳು ಲಲಾಟ ವನ್ನು ಆವರಿಸಿಕೊಂಡಿದ್ದುಕೆತ್ತೆನೆ ಗಮನಿಸ ಬೇಕಾದದ್ದು.ನವರಂಗದಲ್ಲಿ ಚಾಲುಕ್ಯಶೈಲಿ ಯ ನಾಲ್ಕುಕಂಭಗಳಿವೆ.ಶಾಸನಗಳಲ್ಲಿ   ಮಾಧವೇಶ್ವರ ಎಂಬ ಉಲ್ಲೇಖವಿದ್ದು,  ಸ್ಥಳೀಯವಾಗಿ  ಸೋಮೇಶ್ವರ ಎಂದು   ಕರೆಯಲಾಗುತ್ತಿದೆ.

                   ಜಪಬಾವಿ


ಇನ್ನು ಇಲ್ಲಿ ಸುಂದರವಾದ ಜಪಬಾವಿ ಎಂದುಕರೆಯುವ ಕಲ್ಯಾಣಿ ಇದ್ದು ಇಲ್ಲಿನ ಚಿಕ್ಕ ಚಿಕ್ಕ ಮಂಟಪಗಳು ಘಾಂಸನಾ (ಕದಂಬನಾಗರ) ಶೈಲಿಯಲ್ಲಿದೆ.ಸುಮಾರು 20 ಅಡಿಆಳದ ಈ ಕಲ್ಯಾಣಿ ಚಾಲುಕ್ಯ ಶೈಲಿಯ ಉತ್ತಮ ಉದಾಹರಣೆ.

ಇನ್ನುಇಲ್ಲಿ ಕೋಟೆಯ ಕುರುಹು ಇದ್ದು ಇಲ್ಲಿನ ಜೈನಬಸದಿ ಇದ್ದ ಉಲ್ಲೇಖವಿದೆ. ಇಲ್ಲಿ ನಾಶದ ಹಂತದಲ್ಲಿರುವ ಕಲ್ಲೇಶ್ವರ ದೇವಾಲಯವಿದ್ದು ಕಾಳಮ್ಮದೇವಾಲಯ ನವೀಕರಣಗೊಂಡಿದೆ.  ಇನ್ನು  ಇಲ್ಲಿನ ತೋಂಟದಾರ್ಯಮಠವಿದ್ದು ಪ್ರತಿನಿತ್ಯ ದಾಸೋಹದೊಂದಿಗೆ ದೇವಾಲಯಗಳ ನಿರ್ವಹಣೆಗೂ ಸಾಕಷ್ಟು ಕೋಡುಗೆ ನೀಡಿದೆ.

ತಲುಪವ ಬಗ್ಗೆ : ಈ ದೇವಾಲಯ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿದ್ದು ಗದಗದಿಂದ. ಸುಮಾರು ೨೦ಕಿ.ಮೀ. ದೂರ ದಲ್ಲಿದೆ. ಲಕ್ಕುಂಡಿಯಿಂದಲೂ ಸುಮಾರು ೧೬ಕಿ.ಮೀ. ದೂರದಲ್ಲಿದೆ.

                  🔆🔆🔆
✍️ ಶ್ರೀನಿವಾಸಮೂರ್ತಿಎನ್.ಎಸ್
      ಎನ್.ಆರ್.ಕಾಲೋನಿ            
    ಬೆಂಗಳೂರು-560019