ಸುವ್ವಿ ಪರ್ವತದ ತಪ್ಪಲಿನ ಬುಡದ ಒಂದು ಹಳ್ಳಿಯಲ್ಲಿ ಅಜ್ಜಿಯ ಜೊತೆ ವಾಸಮಾಡು ತ್ತಿದ್ದಳು. ಅವಳ ಅಪ್ಪ ಅಮ್ಮ ದೂರದ ಊರಿಗೆ ಕೆಲಸಕ್ಕೆಂದು ಹೋಗಿದ್ದರು.ಸುವ್ವಿ, ಅಜ್ಜಿ ಇಬ್ಬರೇ ವಾಸಿಸುತ್ತಿದ್ದ ಆ ಮನೆಗೆ ಯಾರೊಬ್ಬರೂ ನೆಂಟರು ಬರುತ್ತಿರಲಿಲ್ಲ. ಶಾಲೆಯಲ್ಲಿ ಉಳಿದ ಸ್ನೇಹಿತರು …”ನಿನ್ನೆ ನಮ್ಮ ಮನೆಗೆ ನೆಂಟರು ಬಂದಿದ್ದರು.. ಅವರು ಈ. ಉಡುಗೊರೆ ತಂದಿದ್ದಾರೆ..” ಎಂದೆಲ್ಲಾ ತೋರಿಸುವಾಗ ಸುವ್ವಿಗೆ ‘ತನ್ನ ಮನೆಗೂ ಯಾರಾದರೂ ಬರಲಿ. ಉಡು ಗೊರೆ ತರಲಿ ..’ ಎನ್ನುವ ಬಯಕೆಯಾಗು ತ್ತಿತ್ತು. ಸುವ್ವಿ ಒಂದು ದಿನ ಅಜ್ಜಿಗೆ “ನಮ್ಮ ಮನೆಗೆ ಯಾಕೆ ಯಾರೂ ಬರುವುದಿಲ್ಲ..? ನಮಗೆ ಯಾರೂ ಬಳಗದವರು ಇಲ್ಲವೇ ಎಂದು ಕೇಳಿದಳು.
ಆಗ ಅಜ್ಜಿ ಸುವ್ವಿಯನ್ನು ಸಮಾಧಾನಿಸುತ್ತಾ ” ನಿನಗೊಬ್ಬ ಮಾವನಿದ್ದಾನೆ. ಆತ ದೂರದ ದೇಶದಲ್ಲಿದ್ದಾನೆ. ಆತ ಮರುಭೂಮಿಯನ್ನು ಒಂಟೆಗಳಿಂದ ದಾಟಿ ಪರ್ವತಗಳನ್ನು ಹಕ್ಕಿ ಗಳಿಂದ ಏರಿ ಬರುತ್ತಾನೆ. ಬರುವಾಗ ನಿನಗೆ ಉಡುಗೊರೆ ತರುತ್ತಾನೆ…” ಎಂದು ಹೇಳಿ ಸಮಾಧಾನ ಮಾಡುತ್ತಿದ್ದಳು. ಆಗ. ಸುವ್ವಿಗೆ ತುಂಬಾ ಖುಷಿಯಾಗುತ್ತಿತ್ತು. ಅವಳು ಪ್ರತಿದಿನ ದೂರದ ಪರ್ವತಗಳ ಕಡೆ ನೋಡುತ್ತ ಮಾವನ ಬರುವಿಗೆ ಕಾಯುತ್ತಳೇ ಇದ್ದಳು.
ಒಂದೆರಡು ವರ್ಷಗಳ ನಂತರ ಹಿಮಬೀಳು ವ ಕಾಲದಲ್ಲಿ ಸುವ್ವಿ ಬೆಚ್ಚಗೆ ಮಲಗಿದ್ದಾಗ ..” ಸುವ್ವಿ ಅದೋ ನಿನ್ನ ಮಾವ ಬಂದೇಬಿಟ್ಟ..!” ಎಂದು ಅಜ್ಜಿ ಕೂಗಿದಳು. ಸುವ್ವಿ ಬಡಬಡ ಎದ್ದು ನೋಡಿದಳು . ಮಾವ ಗಾಡಿ ತುಂಬಾ ಉಡುಗೊರೆ ತರುತ್ತಾನೆ..ಎಂದು ಭಾವಿಸಿದ್ದ ಅವಳಿಗೆ ನಿರಾಸೆಯಾಯಿತು. ಮಾವನ ಕೈಯಲ್ಲಿ ಏನೇನೂ ಇರಲಿಲ್ಲ. ಆತ ಹಾಗೆ ಸುವ್ವಿಯ ಹತ್ತಿರ ಬಂದು ಜೇಬಿನಿಂದ ಪುಟ್ಟ ಪೊಟ್ಟಣವನ್ನು ಸುವ್ವಿಗಾಗಿ ನೀಡಿದನು.
ಸುವ್ವಿ ಕುತೂಹಲದಿಂದ ಆ ಪೊಟ್ಟಣ ಬಿಚ್ಚಿದಾಗ ಅದರಲ್ಲಿ ನಾಲ್ಕು ಬಣ್ಣದ ಬಳೆ ಗಳಿದ್ದವು.ಸುವ್ವಿ ಬಳೆ ಧರಿಸಲು ಮುಂದಾ ದಾಗ. “ಅಜ್ಜಿ ಈಗ ಬೇಡ ಹಬ್ಬದಲ್ಲಿ ತೊಡುವೆಯಂತೆ ..” ಅಂದಳು. ಸುವ್ವಿ ಬಳೆ ಗಳನ್ನು ಹಾಗೆ ತನ್ನ ಪುಟ್ಟ ಪೆಟ್ಟಿಗೆಯಲ್ಲಿ ಇಟ್ಟಳು. ರಾತ್ರಿ ಮಲಗಿದಾಗ ಮತ್ತೆ ಬಳೆ ನೋಡುವ ಆಸೆಯಾಗಿ ಒಂದು ಬಳೆಯನ್ನು ತೊಟ್ಟುಕೊಂಡಳು. ಆಶ್ಚರ್ಯ ಮರುಕ್ಷಣ ಅವಳು ಜೇನುನೊಣವಾಗಿ ಬದಲಾದಳು.!
ಹೂವಿಂದ ಹೂವಿಗೆ ಹಾರಿದಳು. ಮಕರಂದ ಹೀರಿ ನಂತರ ತನ್ನ ಸಹಚರರೊಡನೆ ಜೇನು ಗೂಡಿಗೆ ಹಾರಿದಳು. ಅಲ್ಲಿ ಗೂಡು ಕಟ್ಟುವ ಕೆಲಸದಲ್ಲಿ ನೆರವಾದಳು. ರಾಣಿ ಜೇನು ಹುಳವನ್ನು ಕಂಡು ಖುಷಿ ಪಟ್ಟಳು. ಕೊನೆ ಯಲ್ಲಿ ಗೂಡೊಳಗಿದ್ದ ಸವಿಯಾದ ಜೇನನ್ನು ತಿಂದು ಹಾರಿ ಬಂದಳು.
ಸುವ್ವಿಗೆ ಖುಷಿಯೋ ಖುಷಿ. ಬೆಳಿಗ್ಗೆ ಈ ವಿಷಯವನ್ನು ಅಜ್ಜಿಗೆ ಹೇಳಬೇಕೆಂದು ಕೊಂಡಳು. ಆದರೆ ಅಜ್ಜಿ ಕೆಲಸಕ್ಕೆ ಹೋಗುತ್ತಿರುವುದು ಕಾಣಿಸಿದಾಗ ತನ್ನ ಅನುಭವವನ್ನು ಬರೆಯತೊಡಗಿದಳು.
ಎರಡನೇ ದಿನ ಕೆಂಪು ಬಳೆ ತೊಟ್ಟಾಗ.. ಅರೆಕ್ಷಣದಲ್ಲಿ ಅವಳು ಕೆಂಪು ಮೂತಿಯ ಗಿಳಿಯಾಗಿ ಬದಲಾದಳು. ಕೂಡಲೇ ಬಯಲಿಗೆ ಹಾರಿದಳು. ಅಲ್ಲಿ ಅವಳಿಗೆ ಒಂದು ಗಿಳಿ ಜೊತೆಯಾಯಿತು. ಇಬ್ಬರೂ ಖುಷಿಯಿಂದ ಹೊಲದಲ್ಲಿ ಕಾಳು ತಿನ್ನುತ್ತಿ ದ್ದಾಗ ಇನ್ನೊಂದು ಗಿಳಿ ಒಂದು ಬಲೆಯಲ್ಲಿ ಸಿಕ್ಕಿಬಿದ್ದಿತು. ಬಲೆ ಬೀಸಿದವ ಗಿಳಿಯನ್ನು ಪಂಜರದಲ್ಲಿಟ್ಟುಕೊಂಡು ಹೋದ.ಅದನ್ನು ಕಂಡು ಗಿಳಿ ರೂಪಿ ಸುವ್ವಿಗೆ ತುಂಬಾ ದುಃಖ ವಾಯಿತು.
ಈ ಸಲ ಸುವ್ವಿ ತನ್ನ ಅನುಭವವನ್ನು ಬರೆಯುತ್ತಾ “ದಯಮಾಡಿ ಹಕ್ಕಿಗಳನ್ನು ಬೇಟೆಯಾಡಬೇಡಿ. ಪಂಜರದಲ್ಲಿ ಬಂಧಿಸ ಬೇಡಿ ..” ಎಂದು ಬರೆದಳು.
ಮೂರನೆಯ ದಿನ ಸುವ್ವಿ ಕುತೂಹಲದಿಂದ ಹಳದಿ ಬಳೆ ತೊಟ್ಟಳು. ಆಗ ಅವಳು ಒಂದು ಇರುವೆಯ ರೂಪ ತಾಳಿದಳು. ಇತರ ಇರುವೆಗಳ ಜೊತೆ ಸರತಿ ಸಾಲಿನಲ್ಲಿ ಸಾಗಿದಳು. ಅಲ್ಲೊಂದು ಮನೆಯಲ್ಲಿ ಸಕ್ಕರೆಯ ಪಾಕದ ಪಾತ್ರೆ ಕಾಣಿಸಿತು. ಎಲ್ಲ ಇರುವೆಗಳು ಹುರ್ರೇ ಎನ್ನುತ್ತ ಆ ಕಡೆ ಸಾಗಿದವು.ಸುವ್ವಿಯು ಸಕ್ಕೆರಪಾಕ ಸವಿಯು ವಾಗ ಜಾರಿ ಪಾತ್ರೆಯೊಳಗೆ ಬಿದ್ದಳು. ಮೇಲೇರಲಾಗದೇ ಒದ್ದಾಡುತ್ತಿರುವಾಗ ಇತರ ಇರುವೆಗಳು ಅವಳಿಗೆ ಸಹಾಯ ಮಾಡಿದಾಗ ಸುವ್ವಿಗೆ ಇರುವೆಗಳ ಒಗ್ಗಟ್ಟು, ಸಮಯ ಪ್ರಜ್ಞೆ ಕಂಡು ಸಂತಸವಾಯಿತು. ಸಕ್ಕರೆ ಪಾಕದಲ್ಲಿ ಸ್ನಾನವೂ ಆಯ್ತುಎನ್ನುತ್ತ ಗೂಡಿನೊಳಕ್ಕೆ ಇಳಿದಳು. ನೆಲದೊಳಗಿನ ವಿಶಾಲವಾದ ಇರುವೆಗಳ ಸಾಮ್ರಾಜ್ಯ ನೋಡಿ ಅವಳಿಗೆ ಆಶ್ಚರ್ಯ ವಾಯಿತು. ಇರುವೆಗಳ ಆಹಾರ ಸಂಗ್ರಹಣೆ ನೋಡಿ ಖುಷಿ ಪಟ್ಟಳು.
ನಾಲ್ಕನೆಯ ದಿನ ಸುವ್ವಿ ಬೆಳ್ಳಿ ಬಣ್ಣದ ಬಳೆ ತೊಟ್ಟಳು. ಆ ಕ್ಷಣ ಅವಳು ಸುಂದರ ಮೀನಾಗಿ ನೀರಲ್ಲಿ ಈಜುತ್ತಿದ್ದಳು.ನೀರೊಳ ಗಿನ ಸಹಸ್ರಾರು ಜೀವಿಗಳ ಜೊತೆ ತಾನೂ ಆರಾಮಾಗಿ ಈಜಿದಳು. ಆ ಹೊತ್ತಿಗೆ ದೊಡ್ಡ ಮೀನೊಂದು ಅವಳನ್ನು ನುಂಗಲೆಂದು ಬಂತು.ಹೇಗೋ ಕಲ್ಲುಗಳ ನಡುವೆ ಬಚ್ಚಿಟ್ಟು ಕೊಂಡು ಪಾರಾದಳು. ಸಮುದ್ರದಲ್ಲಿ ಇರುವ ಚಿತ್ರ ವಿಚಿತ್ರ ಜೀವಿಗಳನ್ನು ನೋಡಿ ಖುಷಿಪಟ್ಟರೂ ಅವುಗಳ ಹೋರಾಟದ ಬದುಕು ಅವಳಲ್ಲಿ ಅಚ್ಚರಿ ಮೂಡಿಸಿತು. ಎಲ್ಲಾ ಜೀವಿಗಳೂ ಬದುಕಿಗಾಗಿ ಹೋರಾ ಡಲೇ ಬೇಕು ಎಂದು ಅರಿತಳು.
ಮರುದಿನ ಮತ್ತೆ ಬಳೆಗಾಗಿ ಬಳೆಪೆಟ್ಟಿಗೆ ತೆರೆದಳು. ಆಗಲೇ ಅವಳು ನಾಲ್ಕು ಬಳೆ ಗಳನ್ನು ತೊಟ್ಟುಕೊಂಡಾಗಿತ್ತು. ಪ್ರಾಣಿ ಪ್ರಪಂಚದಲ್ಲಿ ಇನ್ನಷ್ಟು ಪ್ರಾಣಿಗಳಾಗಿ ಸುತ್ತಾಡಲು ಅವಳಿಗೆ ಇನ್ನೂ ಆಸೆಯಿತ್ತು. “ಮಾವ ಇನ್ನೊಮ್ಮೆ ಬರುವಾಗ ನನಗೆ ಇನ್ನಷ್ಟು ಬಣ್ಣಬಣ್ಣದ ಬಳೆಗಳನ್ನು ತೆಗೆದು ಕೊಂಡು ಬಾ ..” ಎಂದು ತಡಮಾಡದೇ ಮಾವನಿ ಗೊಂದು ಕಾಗದ ಬರೆದಿಟ್ಟು ಮತ್ತೆ ಕನಸಿನ ಲೋಕಕ್ಕೆ ಜಾರಿದಳು.
✍️ ರೇಖಾ ಭಟ್,ಹೊನ್ನಗದ್ದೆ
ಮಕ್ಕಳ ಆಸಕ್ತಿ ಕೆರಳಿಸುವಂತಿದೆ….ನನಗೂ ಸುವ್ವಿಯಾಗುವ ಆಸೆ…ಚೆನ್ನಾಗಿದೆ ಗೆಳತಿ
LikeLiked by 1 person