ನಲ್ಲೆಯ ಮುಖದಲಿಂದು ನಗು ಮಾಯವಾಗಿದೆ
ನಲ್ಲನ ದಾರಿಗಾಗಿ ಕಾದು ನಗು ಮಾಯವಾಗಿದೆ

ಹೂ ಹಣ್ಣು ಪ್ರಕೃತಿಯ ಸೊಬಗು ರುಚಿಯಾಗಿತ್ತು
ನಲ್ಲೆಯ ಹೃದಯ ಮಿಡಿದು ನಗು ಮಾಯವಾಗಿದೆ

ಒಲವಿನ ಗಂಧ ಗೋಧೂಳಿಯ ರಸ ನಿಮಿಷಗಳು
ನಲ್ಲನ ಬಿಸಿಯಪ್ಪುಗೆ ನೆನೆದು ನಗು ಮಾಯವಾಗಿದೆ

ಪ್ರೇಮಿಗಳ ಇಜ್ಜತ್ತು ಕಳೆವ ಕಾಲದ ಮುಳ್ಳುಗಳು
ಜಗದ ಕಣ್ಣಿಗೆ ಪಾಪಿಗಳಾಗಿದ್ದು ನಗು ಮಾಯವಾಗಿದೆ

ನಗುವಿಗೆ ಶಿಕ್ಷೆ ಕೊಡುವ ಕಾಲನ ತೀರ್ಪು ಕೊಟ್ಟಾಗಿದೆ
“ಜಾಲಿ” ಪ್ರೀತಿ ದೂರ ಮಾಡಿದ್ದು‌ ನಗು ಮಾಯವಾಗಿದೆ

         🔆🔆🔆

✍️ವೇಣು ಜಾಲಿಬೆಂಚಿ ರಾಯಚೂರು.