ಬೋಳುಮರ ಆದರೇನಂತೆ
ಮತ್ತೆ ಅಂಕುರಿಸಬಲ್ಲೆ
ಬಾನೆತ್ತರಕ್ಕೆ ಕೈಚಾಚಬಲ್ಲೆ
ಕೊರಡು ಕೊನರಬಲ್ಲದೆಂದು
ತೋರಬಲ್ಲೆ ,
ಬದುಕಿನ ಆಶಯ
ಅಂತರಂಗದಲ್ಲಡಗಿರುವಾಗ
ಛಲದ ಬಲದಿಂದ
ಅಚಲ ಭರವಸೆಯಿಂದ
ಬೇರೂರಿ ನಿಂತಿರುವೆ.
ಅರೆಜೀವ ಸಾಕೆನಗೆ
ಜೀವನೋತ್ಸಾಹಕೆ.
ಅವಕಾಶ ಹುಸಿಯಾಗದು
ಕನಸುಗಳ ಹೊತ್ತು
ಮತ್ತೆ ಬರುವೆ
ಜಗಕೆ ಹಸಿರಾಗಿ
ಉಸಿರಾಗಿ

🔆🔆🔆

✍️ಅಮರ್ಜಾ(ಅಮರೇಗೌಡ ಪಾಟೀಲ ಜಾಲಿಹಾಳ )ಬು.ಬ. ನಗರ, ಕುಷ್ಟಗಿ