ಮಕ್ಕಳಿಗೆ ಜಗತ್ತಿನ ಆಗುಹೋಗುಗಳ ಬಗ್ಗೆ ಅಷ್ಟೇನು ಸ್ಪಷ್ಟವಾಗಿ ತಿಳಿದಿರುವುದಿಲ್ಲ. ಆಗಾಗ ಹಿರಿಯರು ಮಾತಾಡುವ ಮಾತು ಗಳಿಂದ ಅಸ್ಪಷ್ಟ ಮಾಹಿತಿ ತಿಳಿದು ಅದೇ ಸತ್ಯವೆಂದು ನಂಬುತ್ತಾರೆ. ಮಗುವಿನ ಮನ ದಾಳದಲ್ಲಿ ಬೇರುರಿದರೆ ಅಲ್ಲಗಳೆಯುವುದು ಅಥವಾ ಮರೆಸುವುದು ಅಷ್ಟುಸುಲಭವಲ್ಲ. ಹೀಗಾಗಿ ಸತ್ಯದ ಅರಿವು ಮಾಡಿ ಕೊಡ ಬೇಕಾಗಿರುವುದು ಬಹು ಮುಖ್ಯ. “ಸತ್ಯ ಅಂದರೆ ನಿಖರತೆ”. ಸೂರ್ಯನ ಬೆಳಗು ಎಷ್ಟು ಸ್ಪಷ್ಟವೋ ಅಷ್ಟೇ ಬದುಕು ಕೂಡ. ಅದನ್ನು ಮನನ ಮಾಡುವುದು, ಇನ್ನೊಬ್ಬ ರಿಗೆ ಅರ್ಥೈಸು ವುದು ಕಷ್ಟದ ಕೆಲಸ.

” ರಾಜಾ ಹರಿಶ್ಚಂದ್ರ” ಸತ್ಯಕ್ಕೆ ಇರುವ ಇನ್ನೊಂದು ಹೆಸರು. ಆತ ಆ ಒಂದು ಸತ್ಯ ಕ್ಕಾಗಿ ಮೋಸವನ್ನು, ಆತ್ಮ ವಂಚನೆಯನ್ನು ಮಾಡಿಕೊಳ್ಳದೇ ರಾಜ್ಯ,ಮಕ್ಕಳಂತೆ ಪ್ರೀತಿ ಸುವ ಪ್ರಜೆಗಳನ್ನು, ವೈಭವವನ್ನು ತ್ಯಜಿಸಿ ಹೆಂಡತಿ ಮಕ್ಕಳೊಂದಿಗೆ ಪ್ರಜೆಗಳು ಕೂಡ ಅವರೊಟ್ಟಿಗೆ ಹೊರಟಾಗ ಎಂಥವರ ಕರುಳನ್ನು ಕಿವುಚುತ್ತದೆ.

“ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ” ಎಂದು ಕವಿ‌ ರಾಘವಾಂಕನ “ರಾಜಾ ಹರಿಶ್ಚಂದ್ರ” ಕಾವ್ಯ ಎಲ್ಲವನ್ನು ಕಣ್ಮುಂದೆ ಅನಾವರಣಗೊಳಿಸುತ್ತದೆ.ಅದರ ಪರಿಕಲ್ಪನೆ ಮೊದಲು ನಮಗೆ ಸ್ಪಷ್ಟವಾಗಿದ್ದರೆ ಎನಿತು ಸುಂದರ ಈ ಬದುಕು! ಸತ್ಯದ ಭಾವವನ್ನು ತಿಳಿಸುವ ಕಲೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕರಗತವಾಗಿರುತ್ತದೆ.

ಒಮ್ಮೆ ಭಗವಾನ್ ಬುದ್ದರ ಮಹಿಮೆಯನ್ನು ತಿಳಿದ ಓರ್ವ ಮಹಿಳೆ ತನ್ನ ಕಂದನನನ್ನ ಕಳೆದುಕೊಂಡು ರೋಧಿಸುತ್ತಿದ್ದಗಳಿಗೆಗೆ, ಆ ಮಹಾತ್ಮರ ದಿವ್ಯ ದರ್ಶನದಿಂದ ನನ್ನ ಮಗ ಪುನಃ ಜೀವಿತನಾಗುನೆಂದು ಮಗುವಿನ ಮೃತದೇಹದೊಂದಿಗೆ ಆಗಮಿಸುತ್ತಾಳೆ. ಸ್ವಾಮಿ…ಇರುವ ಏಕೈಕ ಮಗನನ್ನು ಕಳೆದು ಕೊಂಡಿರುವೆ. ನನಗೆ ಆಸರೆಯಾರಿಲ್ಲ ನಿಮ್ಮ ಬಗ್ಗೆ ತುಂಬಾ ಕೇಳಿತಿಳಿದ್ದಿನಿ.ತಾವು ನನ್ನ ಮಗನನ್ನು ಬದುಕಿಸಿ ಕೊಡಬೇಕೆಂದು ಭಗವಾನ್ ಬುದ್ದನನ್ನು ಪರಿಪರಿಯಾಗಿ ಕಣ್ಣೀರ ಕೋಡಿಹರಿಸಿ ಬೇಡುತ್ತಾಳೆ.. ಶಾಂತ ಚಿತ್ತದಿಂದ ಎಲ್ಲವನ್ನು ಆಲಿಸಿದ ಮಹಾನು ಭಾವರು ತಾಯಿ.. ಖಂಡಿತ ವಾಗಿಯು ನಿನ್ನ ಮಗನನ್ನು ಬದುಕಿಸಿ ಕೊಡುವೆ ಆದರೆ……. ಹೇಳಿ ಸ್ವಾಮಿ‌ ನಾನೇನು ಮಾಡಬೇಕು? ಅಂತಹುದೇನಿಲ್ಲ ತಾಯಿ….ನೀನು ನನಗೆ ಒಂದು ಮುಷ್ಠಿಯಷ್ಟು” ಸಾಸಿವೆ “ ಕಾಳನ್ನು ಸಾವಿರದ ಮನೆಯಿಂದ ಬೇಡಿ,ಅದು ಸೂರ್ಯ ಮುಳುಗುವುದರೊಳಗೆ ತಂದರೆ ಖಂಡಿತವಾಗಿ ಬದುಕಿಸುವೆ ಎಂದರು. ಅವರು ಹೇಳಿದ್ದೆ ತಡ ಆ ತಾಯಿ…ಅಷ್ಟೇ ತಾನೆ ಸ್ವಾಮಿ ಈಗ ಹೋಗಿ ತರುತ್ತೆನೆ ಎಂದು ಸೆರಗಿನಿಂದ ಕಣ್ಣೀರ ಒರೆಸುತ್ತಾ…ಮಗನ ಮೃತ ದೇಹ ಸ್ವಾಮಿಯ ಬಳಿ ಬಿಟ್ಟು ಊರತ್ತ ಓಡಿದಳು ‘ಕಾಲನ ಹಿಡಿದು ತರುವೆನೆಂಬ ಭ್ರಮೆಯಲಿ’ ಸಾಸಿವೆ ತಾನೆ.! ಎದುರಾದ ಮನೆಯಲ್ಲಿ ಸಾಸಿವೆ ಬೇಡಿದಳು‌ ಅವರು ಖುಷಿಯಿಂದ ನೀಡಲು ಬಂದರು.. ಸ್ವಾಮಿ ಹೇಳಿದ ಮಾತು ಸಾವಿರದ ಮನೆ ಯಿಂದ ಸಾಸಿವೆಬೇಕು ಅಂದಾಗ ಪ್ರತಿ ಮನೆಯಲ್ಲೂ ಸಾವು ಒಂದಿಲ್ಲೊಂದು ಕಾರಣಕ್ಕಾಗಿ ಆಗಿರುವುದು ಸ್ಪಷ್ಟವಾದಂತೆ ಒಂದು ಕಾಳು ಸಾಸಿವೆ ದಕ್ಕಲಿಲ್ಲ. ಬರಿಗೈಲಿ ಆಶ್ರಮಕೆ ಬಂದಾಗ…ಭಗವಾನ್ ಬುದ್ದರು ಆ ಮಹಿಳೆಯ ಮಗನ ಅಂತ್ಯಸಂಸ್ಕಾರದ ಕಾರ್ಯದಲ್ಲಿ ಮಗ್ನರಾಗಿದ್ದರು. ತಾಯಿಯ ಬರುವಿಕೆಗಾಗಿ ಕಾಯುತ್ತಿದ್ದರು. ನಿರಾಶೆಯ, ಭಾರವಾದ ನಡಿಗೆ ಅವಳಿಗೆ ಸತ್ಯ ಗೋಚರಿ ಸುವಂತೆ ಮಾಡಿತ್ತು.

ಆಗ ಭಗವಾನಬುದ್ದರು…ತಾಯಿ ಪ್ರಕೃತಿಯ ಮುಂದೆ ನಾವೆಲ್ಲರೂಶೂನ್ಯರು… ಹುಟ್ಟಿದವ ಸಾಯಲೇಬೇಕು. ಅತಿಯಾದ ಆಸೆಯೇ ದುಃಖಕ್ಕೆ ಮೂಲ ಕಾರಣ. ವಿವೇಚನೆಯನ್ನು ಕಳೆದುಕೊಳ್ಳ ಬಾರದು. ಇರುವಷ್ಟು ಸಮಯ ಒಳಿತಿನ ಕಡೆ ಹೆಚ್ಚು ಗಮನಹರಿಸ ಬೇಕು. ನಾನು ನನದೆಂಬ ಮೋಹ ಕಳಚ ಬೇಕು, ಆಗ ಬದುಕು ಸಾರ್ಥಕವಾಗುವುದು. ಸ್ವಾಮಿ ತಮಗೆಲ್ಲ ಗೊತ್ತಿದ್ದರೂ ನನ್ನನ್ನು ಕಳುಹಿದಿರಿ ಆಗಲೇ ಹೇಳಬಹುದಿತ್ತು ಎಂದು ಮಹಿಳೆಯೆಂದಾಗ, ಭಗವಾನ್ ಬುದ್ದರು.. ತಾಯಿ‌ ಆಗ ನಾನು ಈ ಸತ್ಯ ಹೇಳಿ‌ದ್ದರೆ ನಿನಗೆ ನನ್ನ ಮೇಲೆ ಅಪನಂಬಿಕೆ ಬರುತ್ತಿತ್ತು. ನಾನಾಗ ಏನು ಹೇಳಿದರೂ ನೀನು ಕೇಳುವ ಸ್ಥಿತಿಯಲ್ಲಿರ ಲಿಲ್ಲ. ಸತ್ಯದ ಅರಿವಾಗುತ್ತಿರಲಿಲ್ಲ… ಎನ್ನುವಾಗ ತಾಯಿ ಬುದ್ದರ ಕಾಲಿಗೆ ಬಿದ್ದು ನನಗೆ ಮುಕ್ತಿ ಮಾರ್ಗತೋರಿರೆಂದು ಬೇಡಿದಳು.

ಮೇಲ್ನೋಟಕ್ಕೆ ಇದು ಸಾಮಾನ್ಯ ಎನಿಸಿ ದರೂ ಮಗುವಿಗೆ ಅರಿವು ಮೂಡಿಸುವ ಬಗೆ ಅಷ್ಟು ಸುಲಭವಲ್ಲ. ಇರುವಷ್ಟು ಕಾಲ ಜ್ಞಾನದ ಹಸಿವನ್ನು,ಪ್ರಕೃತಿಗೆ ತನ್ನ ಅಳಿ‌ಲು ಸೇವೆಯನ್ನು ನೀಡಬೇಕೆನ್ನುವ ಮನೋ ಭಾವ ನಮ್ಮಲ್ಲಿ ಬಂದರೆ ಅದು ಮಗುವಿಗೂ ವರ್ಗಾವಣೆಯಾಗುತ್ತದೆ. ಹಿರಿಯರು ತಮ್ಮ ಅನುಭವದಲ್ಲಿ ಪಡೆದ ಸಿಹಿ ಕಹಿ ಪಾಲು ಬದುಕನ್ನು ರೂಪಿಸಲು ಸಹಕರಿಸಿರುತ್ತದೆ. ನೀಡುವ ಅನುಭವ ಯಾವ ತರನಾಗಿದ್ದು ಎಂಬುದನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳ ಬೇಕು.

ಕಟುಕರ ಗರಡಿಯಲ್ಲಿ ಬೆಳೆದ ಗಿಳಿ ಕೇವಲ ಕೊಚ್ಚು,ಕಡಿ, ಬಡಿ ಅನ್ನುತ್ತದೆಯೇ ಹೊರತು ಬೇರೆನೂ ಮಾಡದು. ಅದೇ ಸಂಸ್ಕಾರ ವಂತರ ಮನೆಯಲ್ಲಿ ಬೆಳೆದ ಗಿಣಿ ಬನ್ನಿ ಕುಳಿತು ಕೊಳ್ಳಿರೆಂದು ಉಪಚರಿಸಲು ಮುಂದಾಗುತ್ತದೆ. ಗಿಳಿಗಳ ಗುಣ ಒಂದೇ ಯಾದರೂ ಬೆಳೆದ ಪರಿಸರ ಭಿನ್ನ. ಪಕ್ಷಿಗಳಿಗೆ ಪ್ರಭಾವ ಬೀರಿದ ವಾತಾವರಣ ಇನ್ನು ಹಸು ಗೂಸಿನ ಮೇಲೆ ಬೀರದೆ ಇರುತ್ತದಾ? ಸಮಯ ಸಿಕ್ಕಾಗ ಆದಷ್ಟು ಮಗುವಿಗೆ ಕ್ರಿಯಾತ್ಮಕ ಚಟುವಟಿಕೆ,ಸತ್ಸಂಗಗಳತ್ತ ವಾಲಿಸುವುದರಿಂದ ಮಗು ಮೌಲ್ಯಯುತ ಹಾದಿ ಯಲ್ಲಿ ಹೆಜ್ಜೆಯಿಡಲು ಸಹಾಯವಾಗು ತ್ತದೆ. ಪ್ರಯತ್ನ ಪಡದೇ ಫಲ ಸಿಗಲು ಸಾಧ್ಯ ವಿಲ್ಲ.ಯಾವ ಮಗುವೂ ದಡ್ಡ ಅಲ್ಲ. ಅದು ಜೀವನದಲ್ಲಿ ಎದುರಾಗುವ ಸಂಘರ್ಷಗಳಿಗೆ ತನ್ನನ್ನು ತಾನು ನಮ್ಮನ್ನು ನೋಡಿ ಪಳಗಿಸು ತ್ತಿರುತ್ತದೆ. ಸಮಯ ಯಾರ ಮುಲಾಜಿಗೂ ನಿಲ್ಲುವುದಿಲ್ಲ.ಅದು ನಿರಂತರ ಪ್ರಕ್ರಿಯೆ.. ಎಚ್ಚರದ ನಡೆ ನಮ್ಮದಾಗಬೇಕು.. ಎಡವಿದರೆ ಅನಾಹುತ ಕಟ್ಟಿಟ್ಟ ಬುತ್ತಿ…

🔆🔆🔆

✍️ ಶ್ರೀಮತಿ.ಶಿವಲೀಲಾ ಹುಣಸಗಿ.
ಶಿಕ್ಷಕಿ,‌ಯಲ್ಲಪೂರ