ಮನುಷ್ಯನ ಸ್ವಾರ್ಥ ಮಿತಿಮೀರಿದೆ, ತನ್ನ ಐಷಾರಾಮಿ ಬದುಕಿಗಾಗಿ ಆತ ಪರಿಸರ ವನ್ನು ಬೇಕಾಬಿಟ್ಟಿ ಬಳಸುತ್ತಿರುವುದು ವಿಷಾದದ ಸಂಗತಿ.ಪರಿಸರ ಇದ್ದರೆ ನಾವು ಗಳು ಎನ್ನುವ ಸತ್ಯ ಅರಿತಾಗ್ಯೂ ಮಾಲಿನ್ಯ ನಿಯಂತ್ರಿಸುವಲ್ಲಿ ಕ್ರಮಕೈಗೊಳ್ಳುವುದಿರಲಿ ಸ್ವತಃ ತಾನೆ ಮಾಲಿನ್ಯ ಮಾಡುತ್ತಾ ಪರಿಸರ ವನ್ನು ಹಾಳು ಮಾಡುತ್ತಿರುವುದು ನಿಜಕ್ಕೂ ಖೇದಕರ ಸಂಗತಿ. ಇತ್ತೀಚೆಗಂತೂ ಭೂಮಿ ಯನ್ನು ಬೇಕಾಬಿಟ್ಟಿ ಬಳಸುತ್ತಿರುವ ಮಾನವ ಅದರ ಮಾಲಿನ್ಯಕ್ಕೂ ಕಾರಣನಾಗಿ ದ್ದಾನೆ. ಮಿತಿಮೀರಿದ ಅರಣ್ಯನಾಶ,ಕೈಗಾರಿ ಕರಣ, ವಿಪರೀತ ಎನ್ನುವಷ್ಟು ಪ್ಲಾಸ್ಟಿಕ್ ಬಳಕೆಯಿಂದ ಭೂ ಮಾಲಿನ್ಯ ಉಂಟಾಗು ತ್ತಿದೆ. ಅತಿಯಾಗಿ ಅರಣ್ಯ ನಾಶಮಾಡುತ್ತಿ ರುವುದು ಜಾಗತೀಕ ತಾಪಮಾನ ಏರಿಕೆಗೆ ಕಾರಣವಾಗಿದೆ. ಅಲ್ಲದೆ ವಾತಾವರಣದಲ್ಲಿ ಹೆಚ್ಚಾಗುತ್ತಿರುವ ಉಷ್ಣತೆಯ ಪರಿಣಾಮ ದಿಂದಾಗಿ ಓಜೋನ್ ಪದರು ನಾಶವಾಗು ತ್ತಿದೆ. ಮಳೆಯ ಪ್ರಮಾಣವು ಕಡಿಮೆಯಾಗಿ ಭವಿಷ್ಯತ್ತಿನ ಸವಾಲುಗಳ ಕುರಿತು ಆತಂಕ ಕಾರಿಯಾದ ಈ ಬೆಳವಣಿಗೆ ಪರಿಸರವಾದಿ ಗಳಿಗಷ್ಟೇ ಅಲ್ಲದೆ ಪ್ರತಿ ನಾಗರೀಕಲ್ಲೂ ಕಳವಳ ಉಂಟು ಮಾಡಿದೆ. ಭೂಮಿಯ ಅವ್ಯವಸ್ಥೆಯ ಪಾಡಿಗೆ ಹೆಚ್ಚುತ್ತಿರುವ ಗಣಿಗಾರಿಕೆ, ಮಿತಿಮೀರಿದ ಅಂತರ್ಜಲದ ಬಳಕೆ, ಫಲವತ್ತಾದ ಜಮೀನಿನಲ್ಲಿ ಇಳು ವರಿಯ ಆಸೆಗೆ ಬಳಸುತ್ತಿರುವ ರಾಸಾಯ ನಿಕ ಗೊಬ್ಬರಗಳು ಹೀಗೆಭೂಮಿ ಮನುಷ್ಯನ ಸ್ವಾರ್ಥ ವರ್ತನೆಗೆ ಕೈ ಚೆಲ್ಲಿಬಿಟ್ಟಿದೆ.

ವಿಶ್ವ ಭೂಮಿ ದಿನವನ್ನು ವಿಶ್ವದಾದ್ಯಂತ ಏಪ್ರೀಲ್ 22 ರಂದು ಆಚರಿಸಲಾಗುತ್ತದೆ. 1970 ರಲ್ಲಿ ಮೊದಲ ಬಾರಿಗೆ ಭೂಮಿದಿನ ವನ್ನು ಆಚರಿಸಲಾಯಿತು.ಈ ವಿಶ್ವ ಭೂ ದಿನವನ್ನು ಪ್ರಾರಂಭಿಸಲು ಅಮೇರಿಕಾದ ಡೇವಿಸ್ ಹೇಸ್ ತುಂಬಾ ಶ್ರಮವಹಿಸಿದರು.

ಪರಿಸರವಾದಿ ಮತ್ತು ಸೌರಶಕ್ತಿಯ ಪ್ರತಿ ಪಾದಕ ಡೇನಿಸ್ ಹೇಸ್ ತನ್ನ 25 ರ ಹರೆಯ ದಲ್ಲೇ ಪರಿಸರ ಹೋರಾಟಕ್ಕೆ ಇಳಿದವರು. ಆರಂಭದಲ್ಲಿ ಅಷ್ಟು ಬೆಂಬಲ ದೊರೆಯದಿ ದ್ದರೂ ಹೇಸ್ ಹಿಂಜರಿಯದೆ 85 ಜನರ ತಂಡವೊಂದನ್ನು ಕಟ್ಟಿದರು. ಅದುವರೆಗೆ ತೈಲ ಸೋರಿಕೆ, ಕಾರ್ಖನೆಗಳು, ವಿದ್ಯುತ್ ಸ್ಥಾವರಗಳು, ಕೊಳಚೆನೀರು,ರಾಸಾಯನಿಕ ಗಾಳಿ-ನೀರಿನ ಮಾಲಿನ್ಯದ ವಿರುದ್ದ ಹೋರಾ ಡುತ್ತಿದ್ದವರನ್ನೆಲ್ಲಾ ಒಗ್ಗೂಡಿಸಿ 193 ರಾಷ್ಟ್ರ ಗಳಲ್ಲಿ ಈ ದಿನವನ್ನು ಆಚರಿಸಲಾಯಿತು. ಹೌದು, ವಿಶ್ವ ಭೂಮಿದಿನದಂದಾದರೂ ನಾವು ನಾಗರೀಕರೆಲ್ಲರಲ್ಲಿಭೂಸಂರಕ್ಷಣೆಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಕಾರಣ ನಾವಿವತ್ತು ನಮ್ಮ ಸ್ವಾರ್ಥಕ್ಕಾಗಿ ಬಳಸುವ ವಸ್ತುಗಳು ಮುಂದೊಂದು ದಿನ ನಮ್ಮನ್ನೇ ಹೇಗೆ ನಾಶ ಮಾಡುತ್ತವೆ ಎನ್ನುವ ಪರಿಜ್ಞಾನ ಇರಬೇಕು.

ಹೌದು, ಉದಾಹರಣೆಗೆ ನಾವು ಇತ್ತೀಚೆಗೆ ಬಳಸುತ್ತಿರುವ ಎ.ಸಿ, ರೆಫ್ರಿಜರೇಟರ್ ನಮ್ಮ ಮನೆ ನಮ್ಮ ಒಡಲನ್ನು ತಂಪಾಗಿರಿಸುತ್ತವೆ ನಿಜ. ಆದರೆ ಇವುಗಳಲ್ಲಿ ಬಳಸಲಾಗುವ ಕ್ಲೋರೋ ಪ್ಲೋರೋ ಕಾರ್ಬನ್ ನಮ್ಮ ಸುತ್ತಲಿನ ತಾಪಮಾನವನ್ನು ಹೆಚ್ಚಾಗಿ ಸುತ್ತದೆ. ಧರೆಯನ್ನೇ ಹೊತ್ತಿ ಉರಿಯಲು ಬಿಟ್ಟು ನಮ್ಮ ಮನೆ ನಮ್ಮ ಒಡಲನ್ನು ಮಾತ್ರ ಅದೆಷ್ಟು ದಿನ ನಾವು ತಣ್ಣಗೆ ಇರಿಸಿಕೊಂಡಿರಲು ಸಾದ್ಯ ಹೇಳಿ?

ಸೌಂದರ್ಯವರ್ಧಕಗಳಾದ ಪರ್‍ಫ್ಯೂಮ್‍ ಗಳಲ್ಲಿಯೂ ಸಿ.ಎಫ್.ಸಿ ಯನ್ನು ಬಳಸಲಾ ಗುತ್ತದೆ. ನಮ್ಮ ಕ್ಷಣಿಕ ಸೌಂದರ್ಯಕ್ಕಾಗಿ ಶಾಶ್ವತವಾದ ಭೂಮಿಯನ್ನು ನಾಶಮಾಡು ವುದು ಎಷ್ಟು ಸರಿ ಎಂದನ್ನಿಸದೆ ಇರದು. ಹೌದು ಹೊರನೋಟಕ್ಕೆಕಾಣುವ ಮಾನವನ ನಗರೀಕರಣದ ಬದುಕುಟೊಳ್ಳು ಸಂಸ್ಕೃತಿ ಯಿಂದ ಕೂಡಿರುವಂತಹದು. ಅವನ ಕ್ಷಣಿಕ ಆನಂದಕ್ಕಾಗಿ ಸುಂದರ ಭೂಮಿಯನ್ನು ನಾಶಮಾಡಿ ಹಾಕುತ್ತಿದ್ದಾನೆ. ಇದಕ್ಕೆ ಕಾರಣ ಓಟದ ಬದುಕು,ಅಂಧಾನುಕರಣೆ, ಆಧುನೀ ಕರಣ,ಸ್ಪರ್ಧಾ ಮನೋಭಾವನೆ ಮುಂತಾದ ಸಣ್ಣ ವಿಚಾರಧಾರೆಗಳಾಗಿವೆ.

ವಿಶ್ವ ಭೂ ದಿನದ ಹಿನ್ನಲೆಯನ್ನು ನೋಡುವು ದಾದರೆ ಕೈಗಾರಿಕೆಗಳ ಮಾಲಿನ್ಯದಿಂದ ವಾತಾವರಣ ಕೆಡುತ್ತಿದ್ದು, ಮಾಲಿನ್ಯಯುಕ್ತ ವಾಗುತ್ತಿದೆ ಎಂದು ಅಮೇರಿಕಾದಲ್ಲಿ 1970 ರಲ್ಲಿ ಪರಿಸರವಾದಿಗಳು ಚಳುವಳಿ ನಡೆಸಿ ದರು. ಇದು ಕೆಲವೇ ದಿನಗಳಲ್ಲಿ ಬೃಹತ್ ಸ್ವರೂಪ ಪಡೆದು ಪರಿಸರ ಪ್ರೇಮಿಗಳಷ್ಟೇ ಅಲ್ಲದೆ ನಾಗರೀಕರೆಲ್ಲರೂ ಎಚ್ಚೆತ್ತುಕೊಂಡು ಚಳುವಳಿಗೆ ಧುಮುಕಿದರು. ಮಾಲಿನ್ಯ ಹೋಗದಿದ್ದರೆ ಉಳಿಗಾಲವಿಲ್ಲವೆಂದು ಅರಿತುಕೊಂಡರು. ಸರ್ಕಾರವನ್ನೂ ತೀವ್ರ ವಾಗಿ ಒತ್ತಾಯಿಸಿದ ಪರಿಣಾಮವಾಗಿ ಆಗ ಸರ್ಕಾರ ಮಾಲಿನ್ಯ ತಡೆಗೆ ನಿಯಮಗಳನ್ನು ರೂಪಿಸಿ ಜಾರಿಗೆ ತಂದಿತು. ಈ ಹೋರಾಟದ ಫಲವಾಗಿ ಭೂಮಿ ದಿನ ಜಾರಿಗೆ ಬಂದು ವ್ಯಾಪಕವಾದ ಪ್ರಚಾರವನ್ನು ಪಡೆದು ಕೊಂಡಿತು. ಈ ಚಳುವಳಿಗೆ ಮನ್ನಣೆ ನೀಡಿ ಭರವಸೆ ನೀಡಿದ ಸೂಚಕವಾಗಿ ಪ್ರತಿವರ್ಷ ಏಪ್ರೀಲ್ 22 ರಂದು ವಿಶ್ವ ಭೂಮಿ ದಿನ ಆಚರಿಸಲಾಗುತ್ತದೆ. ಪ್ರತಿವರ್ಷ ಒಂದು ಥೀಮ್ ನೀಡಲಾಗುತ್ತದೆ.ಅದರಂತೆ ಭೂಮಿ ರಕ್ಷಣೆಯಲ್ಲಿ ಭೂಮಿಯನ್ನು ಮಾಲಿನ್ಯ ಮುಕ್ತಗೊಳಿಸಲು, ಪರಿಸರ ಕಾಪಾಡಲು, ಉಳಿಸಲು ಕಾರ್ಯಕ್ರಮ ವನ್ನು ಆಯೋಜಿ ಸಲಾಗುತ್ತದೆ. ಈ ವರ್ಷ ಕೊರೊನಾ ವೈರಾಣು ಮನುಕುಲಕ್ಕೆ ತಂದೊಡ್ಡಿದ ಆತಂಕದಿಂದ, ವಿಶ್ವದ ಚಟುವ ಟಿಕೆಗಳೇ ಸ್ಥಬ್ಧವಾಗಿವೆ.‘ ಭೂಮಿಗಾಗಿ ಒಂದಾಗೋಣ’ ಎನ್ನುವ ಧ್ಯೇಯವಾಕ್ಯ ದಡಿ ಪರಿಸರಕ್ಕೆ ಪೂರಕವಾದ ಅಭಿಯಾನ ಕೈಗೊಳ್ಳಲಾಗಿದೆ. ಆದರೂ ಮನುಷ್ಯ ತಾನು ಸ್ವಯಂ ಕಲಿಯದಪಾಠವನ್ನು ಕರೋನ ಕಲಿಸಿದೆ ಎಂದು ಅನ್ನಿಸದೆ ಇರದು. ಹೌದು ಕರೋನಾ ಸುದೀರ್ಘ ದಿಗ್ಭಂಧನದ ಫಲ ವಾಗಿ ಪರಿಸರ ಮಾಲಿನ್ಯ ತುಂಬಾ ಕಡಿಮೆ ಯಾಗಿದೆ. ವಾಹನಗಳ ಓಡಾಟ, ಮತ್ತು ಮನುಷ್ಯನ ಅನಾವಶ್ಯಕ ಓಡಾಟಗಳು ಕಡಿಮೆಯಾಗಿ ಪರಿಸರಸಾಕಷ್ಟು ಹತೋಟಿಗೆ ಬಂದಿರುವುದನ್ನು ಕಾಣಬಹುದು. ಇದರಿಂದಾಗಿ ಪ್ರಾಣಿ ಪಕ್ಷಿಗಳು ಸ್ವಚ್ಛಂದ ವಾಗಿ ಓಡಾಡಿಕೊಂಡಿರುವುದನ್ನು ನಾವು ಕಾಣಬಹುದು.

ನಿಜ ಮಾನವ ತನ್ನ ಅಟ್ಟಹಾಸದಿಂದ ಇಡೀ ಪರಿಸರಕ್ಕೆ ದೊಡ್ಡ ಮಾರಕವಾಗಿಪರಿಣಮಿಸಿ ರುವುದು ಮಾತ್ರ ಸುಳ್ಳಲ್ಲ. ಈಗಲಾದರು ಎಚ್ಚಿತ್ತುಕೊಂಡು ನಾವೆಲ್ಲರೂ ವಿಶ್ವ ಭೂ ದಿನದ ಅಂಗವಾಗಿ ಪ್ರತಿ ಮನೆಯ ಹೊರಾಂಗಣದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು. ಭೂಮಿಗೆ ಕಂಟಕವಾಗಿ ಪರಿಣಮಿಸಿರುವ ಪ್ಲ್ಯಾಸ್ಟಿಕ್ ಮತ್ತು ಇನ್ನಿತರ ಮಾರಕವಸ್ತುಗಳನ್ನು ತ್ಯಜಿಸ ಬೇಕು.ತ್ಯಾಜ್ಯವನ್ನು ಮರು ಬಳಕೆ ಮಾಡ ಬೇಕು. ಅಳಿವಿನಂಚಿನ ಪ್ರಾಣಿಗಳ ಉಳಿವಿಗೆ ಪಣತೊಡಬೇಕು. ಮರಗಿಡಗಳನ್ನು ಕಡಿಯದೆ ಮನೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಚೊಕ್ಕವಾಗಿಡುವುದು ಹೀಗೆ ಭೂಮಿಯ ಸಂರಕ್ಷಣೆಗಾಗಿ ಪ್ರತಿ ಯೊಬ್ಬರೂ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಮ್ಮಉಳಿವಿಗೆ ನಾವುಜಾಗೃತರಾಗಬೇಕಿದೆ.

🔆🔆🔆

✍️ ಶ್ರೀಮತಿ.ಗಿರಿಜಾ ಮಾಲಿಪಾಟೀಲ ವಿಜಯಪೂರ