ಸುಳ್ಳು ಆರಂಭವಾದದ್ದೇ ನನ್ನ ಹೆಸರಿನಿಂದ,
ಸುಳ್ಳೇ ನನ್ನ ಮನೆ ದೇವರು,
ಸುಳ್ಳೇ ನನ್ನ ನಿಜ ಜೀವನ !

ಸುಳ್ಳು-ಸುಳ್ಳು , ಸುಳ್ಳೇ ನಾನು.
ಸ್ವಾತಂತ್ರ್ಶದ ಆದಿಯಿಂದ ಹುಲುಸಾಗಿ ಬೆಳೆದದ್ದು ಸ್ವೆಚ್ಛೆಯಾಗಿ ಮೆರೆದದ್ದು
ಅವಕಾಶ ಇತ್ತವರು ನೀವು- ನಾನು ಅಲ್ಲವೇ ?!

ಸತ್ಶವನ್ನು ನುಂಗಿದ್ದು ಸುಳ್ಳು
ನಿರ್ಭೀತಿಯ ನುಂಗಿದ್ದು ಭೀತಿ.
ಫಲಿತಾಂಶ ಊಚವೋ ನೀಚವೋ,
ಅನುಭವಿಸುವವರೇ ಪರಮ ಸುಖಿಗಳು !

ಹುಸಿ ಹಿರಿಮೆ-ಗರಿಮೆ,
ಹುಸಿ ಅಹಂ-ಅಂತಸ್ತುಗಳ ಪ್ರಭಾತ್ ಪೇರಿ
ಅಗೋ ಅಲ್ಲಿ ಆಧಿಪತ್ಶದ ಬೃಹತ್ ಸವಾರಿ
ಮಾಂದ್ಶ ಕಂಗಳು ಕುಕ್ಕುವದ್ಶಾತಕ್ಕೆ ?

ವಿರಮಿಸಲು ಅಣಕಿಸುತ್ತೆ,
ಬಿಡುಗಡೆ ಯಾವತ್ತೋ ಸಭ್ಶತೆಯ ಸೋಗಿನಿಂದ.
ಬಿಡಿ, ನಾನು ನಾನೇ ನಾನಾಗಲು.
ಹುಸಿಗೆ ನುಸಿ ಮುಟ್ಟಿಸಲು.!

🔆🔆🔆

ಅಮರ್ ಜಾ
(ಅಮರೇಗೌಡ ಪಾಟೀಲ ಜಾಲಿಹಾಳ). ನಿವೃತ್ತ ವ್ಯವಸ್ಥಾಪಕರು, ಕುಷ್ಟಗಿ