“ಯುಗ ಯುಗಾದಿ ಕಳೆದರೂ    ಯುಗಾದಿ  ಮರಳಿ ಬರುತಿದೆ “ಯುಗಯುಗಾದಿ ಕಳೆದರು ಯುಗಾದಿ ಮರಳಿಬರುತಿದೆ ಹೊಸವರುಷಕೆ  ಹೊಸಹರುಷಕೆ ಹೊಸ ವರುಷವು     ಹೊಸತು ಹೊಸತು ತರುತಿದೆ” 

ಬೇಂದ್ರೆಯವರ ಈ ಸಾಲು ಯಾವಾಗಲೂ ಕಿವಿಯಲ್ಲಿ ಇರುತ್ತದೆ. ಈ ಸಾಲಿನಲ್ಲಿ ಇರುವಷ್ಟೇ ಚೆತನ್ಯ ಹಬ್ಬಕ್ಕಿದೆ. ಹೊಸ ವರ್ಷ ಯುಗಾದಿ ಹಬ್ಬ ಎಂದರೆ ಎಲ್ಲರಿಗೂ ಏನೋ ಒಂದು ರೀತಿ ಉತ್ಸಾಹ. ವರ್ಷಾರಂಭದ ಪವಿತ್ರ ದಿನವೂ ಹೌದು. ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು  ಆಚರಿಸ ಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ ಆದಿ” ಹೊಸ ಯುಗದ ಆರಂಭ ಎಂದು ಕೂಡ ಕರೆಯಲಾಗುತ್ತದೆ. ನಮಗೆಲ್ಲರಿಗೂ ಬಾಲ್ಯದಿಂದಲೇ ಯುಗಾದಿ ಎಂದರೆ ಏನೋ ಒಂದು ರೀತಿ ಆನಂದ. ಹಾಗೆಯೆ ಈ ಹಬ್ಬಕ್ಕೆ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿವೆ ಕರ್ನಾಟಕದಲ್ಲಿ ಯುಗಾದಿ ಎಂದರೆ, ಮಹಾರಾಷ್ಟ್ರದಲ್ಲಿ ‘ಗುಡಿಪಾಡವ’  ಎಂದೂ ಆಂದ್ರ ಹಾಗೂ ತಮಿಳುನಾಡಿನಲ್ಲಿ ‘ಹೊಸ ವರ್ಷದ ಹಬ್ಬವೆಂದೂ’  ಉತ್ತರ ಭಾರತದಲ್ಲಿ ಬೈಸಾಕಿ ಎಂದು ಆಚರಿಸಲಾಗುತ್ತದೆ. ಈ ಯುಗಾದಿಯ ಸಮಯದಲ್ಲಿ ಪ್ರಕೃತಿ ನವಚೈತನ್ಯದಿಂದ ಕಂಗೊಳಿಸುವುದು. ಕಣ್ಣಾಯಿಸಿದಲೆಲ್ಲಾ ಹಚ್ಚ ಹಸಿರೇ ಹಸಿರು. ಪ್ರಕೃತಿಯಲ್ಲೂ ನವ ಚೈತನ್ಯವಿರು ಈ ಹಬ್ಬ ನಮ್ಮಲ್ಲಯೂ ನವ ಚೈತನ್ಯ ತುಂಬುವಂತ ದಾಗಿದೆ. ನೈಸರ್ಗಿಕವಾಗಿ ಅಲ್ಲದೆಯೆ ಈ ಹಬ್ಬ ಮೌಲ್ಯದಲ್ಲಿಯೂ ತನ್ನದೇ ಆದ ವಿಶೇಷತೆಯನ್ನು ಪಡೆದಿದೆ. ಯುಗಾದಿಯ ದಿನ ನೀರಿನಲ್ಲಿ ಬೇವು ಮಿಶ್ರಣ ಮಾಡಿ ಸ್ನಾನ ಮಾಡಿ. ಹೊಸ ಬಟ್ಟೆ ಧರಿಸಿ ಇಷ್ಟದೈವದ ಪ್ರಾರ್ಥನೆ ಮಾಡಲಾಗುತ್ತದೆ. ಬೇವು ಬೆಲ್ಲ ಸೇರಿಸಿ ಸೇವನೆ ಮಾಡಲಾಗು ತ್ತದೆ ಕಾರಣ ಬೇವು ಬೆಲ್ಲ ಸುಖ ದುಖಃಗಳ ಸಂಕೇತವಾಗಿದೆ. ಬಾಳಿನಲ್ಲಿ ಬರುವ ನೋವು ನಲಿವುಗಳನ್ನು ಸಮಚಿತ್ತತೆಯಿಂದ ಸ್ವೀಕರಿಸಬೇಕು ಎನ್ನುವುದನ್ನು ಯುಗಾದಿ ಹೇಳುತ್ತದೆ. ಯುಗಾದಿ ಎಂದರೆ ಸತ್ಕಾರ್ಯಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ದಿನ. ಸಾಂಪ್ರದಾಯಿಕ ವಾಗಿ ಸೂರ್ಯ ನಮಸ್ಕಾರ, ಪಂಚಾಗದ ಪೂಜೆ ಸರ್ವೆಸಾಮಾನ್ಯ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು ಹಿಂದೂ ಧರ್ಮದ ವೇದಾಂಗ ಜ್ಯೋತೊಷ್ಯ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತದೆ. ಚಂದ್ರನ ಚಲನೆ ಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಸೌರಮಾನ ಪದ್ದತಿ ಮೊದಲಿನಿಂದ ರೂಡಿಯಲ್ಲಿದೆ. ಭೂಮಿಯಿಂದ ನೋಡಿದಾಗ ಸೂರ್ಯ ಚಂದ್ರ ಗ್ರಹಗಳು ನಕ್ಷತ್ರ ಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತದೆ. 

ಈ ದಿನದ ವಿಶೇಷವಾಗಿ ಬೇವಿನ ಮಿಶ್ರಣದ ಪಚ್ಚಡಿ ಇಲ್ಲವೆ ಧ್ರವ ರೂಪದ ಪಾನೀಯ ತಯಾರಿಸುವರು. ಉತ್ತರ ಕರ್ನಾಟಕದ ಕಡೆ ಹೆಚ್ಚಾಗಿ ಕಂಡು ಬರುವ ಸಂಪ್ರದಾಯ ತುಂಬಾ ವಿಶೇಷವೆನಿಸುತ್ತದೆ. ಮನೆಯ ಬಾಗಿಲುಗಳಿಗೆ ತಳಿರು ತೋರಣ ಕಟ್ಟಿ ಮನೆಯ ಮುಂದೆ ಬಣ್ಣದ ರಂಗವಲ್ಲಿ ಬಿಡಿಸಿ ಪಂಚಾಗ ಓದಿಸಿ ಹಲವರು ಕುಳಿತು ಕೇಳುವರು.

ಇಲ್ಲಿ ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು ಹಿಂದೂ ಧರ್ಮದ ವೇದಾಂಗ ಜ್ಯೋತಿಷ್ಯ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತದೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಪದ್ದತಿ ಮೊದಲಿನಿಂದಲೂ ಇದೆ. ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷ್ಯದಂತೆ ಮೊದಲ ನಕ್ಷತ್ರ ಅಶ್ವಿನಿ ಅಂದರೆ ಮೇಷ ರಾಶಿಯ 0-13: 20 ಭಾಗ ಅಲ್ಲಿ ಸೂರ್ಯ ನಿದ್ದಾಗ ಭೂಮಿಯ ಉತ್ತರಾರ್ಧಗೋಳ ದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ. ಆದ್ದರಿಂದ ಅಶ್ವಿನಿ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸಲಾಗುತ್ತದೆ. ಇದೇ ಸೌರಮಾನ ಯುಗಾದಿ.                   

ಪುರಾಣಗಳ ಪ್ರಕಾರ ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪಟ್ಟಾಭಿಷೇಕವಾದ ದಿನ. ಮಹಾಭಾರತ ದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾದಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನ. ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಒಟ್ಟಿನಲ್ಲಿ ಸಂಪ್ರದಾಯಿಕವಾದ ಈ ಹಬ್ಬಗಳು ವೈಜ್ಞಾನಿಕ ಹಿನ್ನಲೆಯನ್ನು ಹೊಂದಿರುವು ದಂತೂ ಸತ್ಯ. ಬನ್ನಿ ಎಲ್ಲಾ ಹಬ್ಬಗಳನ್ನೂ ಆಚರಿಸೋಣ ಆನಂದವಾಗಿ ಉತ್ಸಾಹದಿಂದ ಬದುಕು ಕಳೆಯೋಣ.

                  🔆🔆🔆

ಶ್ರೀಮತಿ.ಗಿರಿಜಾ ಮಾಲಿ ಪಾಟೀಲ್       ವಿಜಯಪೂರ