ಎಲ್ಲಿ ನಿರ್ಭಯವಾಗಿಹುದೋ ಮನನೊಬೆಲ್ ಪುರಸ್ಕೃತ ಶ್ರೀ ರವೀಂದ್ರನಾಥ ಟ್ಯಾಗೋರ್ (೭.೫.೧೮೬೧- ೭.೭.೧೯೪೧) ಅವರು ಮೂಲತಃ ಬಂಗಾಲಿಯಲ್ಲಿ ೧೯೧೦ರಲ್ಲಿ ರಚಿಸಿ, ಗೀತಾಂಜಲಿಯಲ್ಲಿ ೩೫ನೆಯದಾಗಿ ಸೇರಿಸಿ ಪ್ರಕಟಿಸಿದ “ವ್ಹೇರ್ ದ ಮೈಂಡ್ ಈಸ್ ವಿದೌಟ್ ಫಿಯರ್” ಎಂಬ ಈ ಕವಿತೆ ಭಾರತದ ಸ್ವಾತಂತ್ರ್ಯಪೂರ್ವದಲ್ಲಿ ಸೃಷ್ಟಿಸಿದ ಸಂಚಲನ ಹಾಗೂ ಪಡೆದ ಖ್ಯಾತಿ ವರ್ಣಿಸಲಸದಳ. ಇದರ ಕನ್ನಡ ಅನುವಾದಕ್ಕಿಲ್ಲಿ ಪ್ರಯತ್ನಿಸಿದ್ದೇನೆ.

🔆🔆

ಎಲ್ಲಿ ನಿರ್ಭಯವಾಗಿಹುದೋ ಮನ

ಎಲ್ಲಿ ಶಿರವೆತ್ತಿರುವರೋ ಜನ;

ಎಲ್ಲಿ ಮುಕ್ತವಾಗಿಹುದೋ ಜ್ಞಾನ;

ಎಲ್ಲಿ ಜಗ ಸಂಕುಚಿತ ಕೌಟುಂಬಿಕ ಗೋಡೆಗಳಿಂದ

ಚೂರು ಚೂರಾಗಿ ಒಡೆದಿಲ್ಲವೋ;

ಎಲ್ಲಿ ಸತ್ಯದಾಳದಿಂದ ಮಾತುಗಳುಕ್ಕಿ ಬರುವವೋ;

ಎಲ್ಲಿ ದಣಿವರಿಯದ ಶ್ರಮ ಪರಿಪೂರ್ಣತೆಯೆಡೆಗೆ

ತನ್ನ ಬಾಹುಗಳ ಚಾಚುವುದೋ;

ಎಲ್ಲಿ ವಿವೇಚನೆಯ ಝರಿ ಮಂಕಾದ ಬಂಜರು

ಮರಳುಗಾಡಲಿ ತನ್ನ ಪಥವ ಕಳಕೊಂಡಿಲ್ಲವೋ;

ಎಲ್ಲಿ ಮನ ಎಂದೆಂದೂ ವಿಸ್ತರಿಪ ಚಿಂತನೆ

ಮತ್ತು ಕ್ರಿಯೆಯೆಡೆಗೆ ನಿನ್ನಿಂದ ಮುನ್ನಡೆಸಲ್ಪಡುವದೋ;

ಓ ತಂದೆಯೇ, ಅಂತಹ ಸ್ವಾತಂತ್ರ್ಯದ ಸ್ವರ್ಗದೆಡೆಗೆ

ನನ್ನ ದೇಶವು ಜಾಗೃತವಾಗಲಿ.

Gitanjali 35
BY RABINDRANATH TAGORE

Where the mind is without fear and the head is held high;

Where knowledge is free;

Where the world has not been broken up into fragments by narrow domestic walls;

Where words come out from the depth of truth;

Where tireless striving stretches its arms towards perfection;

Where the clear stream of reason has not lost its way into the dreary desert sand of dead habit;

Where the mind is led forward by thee into ever-widening thought and action

Into that heaven of freedom, my Father, let my country awake.

           🔆🔆🔆

✍️ ಬಂಗಾಲಿ ಹಾಗೂ ಆಂಗ್ಲ ಮೂಲ: ರವೀಂದ್ರನಾಥ್ ಟಾಗೋರ್

ಕನ್ನಡಕ್ಕೆ: ಕವಿತಾ ಹೆಗಡೆ, ಹುಬ್ಬಳ್ಳಿ