ಮನಸ್ಸು ಮರ್ಕಟವೆ ಸರಿ. ಏಕೆಂದರೆ ಅದು ನಿಂತಲ್ಲಿ ನಿಲ್ಲಲಾರದು, ಕುಳಿತಲ್ಲಿ ಕುಳಿತುಕೊಳ್ಳಲಾರದು. ಅದು ಮರದಲ್ಲಿ ಹಾರಾಡುವ ಮಂಗಗಳಂತೆ ಚಂಚಲ. ಆದರೆ ಅದನ್ನು ಸ್ಥಿಮಿತದಲ್ಲಿ ಇಟ್ಟಿಕೊಳ್ಳುವುದು ನಮ್ಮ ಕೈಯಲ್ಲಿದೆ. ಮನಸ್ಸು ಚಂಚಲ ತನುವು ದುರ್ಬಲವಾದಾಗಲೆ ನಮ್ಮ ಜೀವನದಲ್ಲಿ ನೆಡೆಯಬಾರದ ಘಟನೆಗಳು ನೆಡೆಯುತ್ತವೆ. ಹಾಗಾಗಿ ಮನಸ್ಸನ್ನು ಒಂದು ಮಗು ಎಂದು ಭಾವಿಸಿ ಅದಕ್ಕೆ ಅವಶ್ಯ ವಿರುವ ಅಂಶಗಳ ಕಡೆಗೆ ಮಾತ್ರ ಅದನ್ನು ಹರಿಬಿಡಬೇಕು. ಒಂದು ಮಗುವನ್ನು ನಾವು ಸಾಕುವಾಗ ಅದಕ್ಕೆ ಏನು ಬೇಕು ಏನು ಬೇಡ ಎಂದು ನಿರ್ಧರಿಸುವ ಹಾಗೆ ಮನಸ್ಸನ್ನು ಒಂದು ಹಿಡಿತದಲ್ಲಿ ಇಟ್ಟು ಕೊಳ್ಳಬೇಕು. ಆಗ ನಾವು ಹೇಳೆದಂತೆ ನಮ್ಮ ಮನಸ್ಸು ಕೇಳುತ್ತದೆ. ಮನಸ್ಸಿಗೆ ಹಿತವೆನಿ ಸುವ ಜನರ ಜೊತೆ ಒಡನಾಟ, ಒಳ್ಳೆಯ ವಾತಾವರಣ, ಸರಿಯಾದ ಸಮಯದಲ್ಲಿ ಸರಿಯಾದ ವಿದ್ಯಾಭ್ಯಾಸ ಇವುಗಳಿಂದ ನಮ್ಮ ಮನಸ್ಸು ನಮ್ಮ ಜೊತೆಯೆ ಇರಲು ಸಾಧ್ಯ. ಹಾಗಾಗಿ ಮನಸ್ಸನ್ನು ಗಾಳಿ ಬಂದಂತೆ ತೂರಿಕೊಳ್ಳಲು ಬಿಡದೆ ಅದರ ಮೇಲೆ ಹಿಡಿತ ಸಾದಿಸಿದರೆ ಆಗ ನಾವು ಚಂಚಲತೆ ಇಲ್ಲದ ಮನಸ್ಸನ್ನು ಹೊಂದಲು ಸಾಧ್ಯ. ಹಾಗಾಗಿ ನಾವು ಈ ನಿಟ್ಟಿನಲ್ಲಿ ನಮ್ಮ ಮನಸ್ಸನ್ನು ಹರಿಬಿಡೋಣ.
🔆🔆🔆
✍️ ಮಧುರಾ ಎಲ್ ಭಟ್ಟ