ನಗುವಿನಲೆಯ ಪ್ರಿಯ ಮಕಾನದಾರ ,
‘ ಪ್ಯಾರಿ ಪದ್ಯ’ ಓದಿದೆ
ಪುಟ ಪುಟವೂ
‘ ಪ್ಯಾರಿ – ಪ್ಯಾರಿ ; ಸಿಹಿ – ಸಿಹಿ ‘
ಪ್ರೀತಿಯ
ವಿಷಯಗಳ ವೈವಿಧ್ಯತೆ
ಶಬ್ಧಪ್ರಯೋಗದ ವೈಶಿಷ್ಟ್ಯತೆ
ಮನಮೋಹಕ .
‘ ಲೇ ಇವಳೆ ‘
ಹೊಸ !ಉಸಿರಿನಂತಿದೆ .
“ಇರಿಯಲು ಬಂದ ಚೂರಿಗೆ
ಮುತ್ತಿಕ್ಕಿದೆ
ಮುತ್ತಿನ ಮತ್ತಿನಲಿ ಚೂರಿ
ಮೆತ್ತಗಾಯಿತು”
” ಬುದ್ಧ
ನೀನಿದ್ದರೂ
ಯಾಕೆ ಯುದ್ಧ ”
“ಧರ್ಮ – ಧರ್ಮಗುರುವಿನ
ಉಪದೇಶ ಸಾಕು
ರಟ್ಟೆಯ ಬಲ ರೊಟ್ಟಿಯ ರುಚಿಯ
ಉಪದೇಶ ಬೇಕು ”
” ನೀನು ಸೂಜಿ
ನಾನು ದಾರ
ಹೊಲಿಯೋಣ ಗಡಿಗಳನು ” ……..
ಇಂತಹ ಪದಪುಂಜಗಳು ಬದುಕಿನ
ನಿತ್ಯ ಸತ್ಯದ ಹಸಿರಾಗಿದೆ.
ಸಖಿ, ಪ್ಯಾರಿ,ಚಾಂದನಿ,ಸಾಕಿ,ಸನಮ್ ,
ದಿಲ್ ರುಬಾ, ದಿವಾನಿ, ಮಾಷೂಕ್
ಹೂವಿ, ಮೆಹಬೂಬಾ ………..ಗಳು
ಪುಸ್ತಕದ ತುಂಬಾ ಓಡಾಡಿ
ಬದುಕಿನ ಪ್ರೀತಿಗೆ ರೋಮಾಂಚನಗಳಾಗಿವೆ.
ಚಿತ್ರ – ರೇಖೆ ಗಳ
ಗೆಳೆಯ ವಿಜಯ್
ಚಂದ್ರನ ಬೆಳದಿಂಗಳಂತೆ ಮಿಂಚಿ
‘ ಪ್ಯಾರಿ ‘ ಗೆ ಬೆಳಕಾಗಿರುವನು.
ಹದಿನಾರು ವಿದ್ವಾಂಸರ ‘ ಪ್ಯಾರಿ ‘
ಬರಹಗಳೇ
ಮೂಲ ಸಂಕಲನವನ್ನೇ
‘ಮರ -ಮಾಚಿ ‘ ದಂತಿದೆ !
” ನಗುವಿನ ಮಾಟ ತುಂಬಿಸಿದವರಾರು ?
ಮಾತಿನಲಿ ಸಕ್ಕರೆ ಬೆರೆಸಿದವರಾರು ?”
ಎಂದು ಕಣ್ಣೋಟದಲೇ ಮನಸೆಳೆವ
ಮನುಷ್ಯ ಪ್ರೀತಿಯ ನಿಮಗೆ
ಮತ್ತು ನಿಮ್ಮ ” ಪ್ಯಾರಿ ” ಗೆ
ನಾಗಸುಧೆಯಿಂದ ಅಭಿನಂದಿಸಿ ಶುಭಕೋರುವೆ.
🔆🔆🔆
ಶ್ರೀ ಪ್ರಕಾಶ ಕಡಮೆ
ನಾಗಸುಧೆ , ಹುಬ್ಬಳ್ಳಿ .
ತುಂಬ ಆಪ್ತವಾದ ಬರಹ . ಚಂದದ ಪುಸ್ತಕ ಪರಿಚಯ .
ಸುಜಾತಾ ರವೀಶ್
LikeLike