ಒಬ್ಬ ಹುಡುಗ ತಮ್ಮೊಂದಿಗೆ ಸ್ನೇಹ ಮಾಡಿದ್ದರೂ ಅವನು ಒಳ್ಳೆಯ ನಡತೆಯ ಹುಡುಗ ಇದ್ದ ಎಂದರೆ ಇನ್ನು ಹತ್ತು ಕೆಟ್ಟ ಮಂದಿ ಅವನನ್ನು ನೋಡಿ ‘ಗಾಂಧಿ’ಎಂದು ಗೇಲಿ ಮಾಡುವುದುಂಟು.ಆ ರೀತಿ ಟೀಕೆ ಮಾಡುವವರು ಒಂದು ದಿನ ಎಲ್ಲರ ಮುಂದೆ ತಲೆ ತಗ್ಗಿಸಬೇಕಾದಂತಹ ಸಂದರ್ಭ ಬರುತ್ತದೆ.

ಹಳ್ಳಿಯಿಂದ ಪೇಟೆಯ ಕಡೆ ಬಂದಾಗ ಅಲ್ಲಿ ತುಂಬಾ ಜನ ಸ್ನೇಹಿತರಾಗುತ್ತಾರೆ. ಅಲ್ಲಿ ಯಾರು ಒಳ್ಳೆಯವರು,ಕೆಟ್ಟವರೆಂದು ಕೂಡಲೇ ಅರಿಯುವುದು ಅಸಾಧ್ಯ. ನಿಧಾನವಾಗಿ ಅವರ ನಡವಳಿಕೆಯ ಮೇಲೆ ಅವರು ಎಂತವರು ಎಂಬುದು ತಿಳಿಯುತ್ತದೆ.ಮೊದ ಮೊದಲಿಗೆ ಜ್ಯೂಸ್ ಕೂಡ ಕುಡಿಯಲು ಹೆದರುವ ಹುಡುಗ ಮುಂದೊಂದು ದಿನ ಬಿಯರ್ ಬಾಟಲ್ ಎತ್ತಿ ಸರಾಗವಾಗಿ ಕುಡಿಯುತ್ತಾನೆ ಎಂದರೆ ಅವನು ಮಾಡಿರುವಂತಹ ಸಹವಾಸವು ದುಷ್ಟರದ್ದು ಎಂದರ್ಥ. ಮೊದಲು ನಮ್ಮ ದೇಹ,ಮನಸ್ಸನ್ನು ನಾವು ನಿಯಂತ್ರಣದಲ್ಲಿ ಇರಿಸಿಕೊಂಡರೆ ಎಂತ ದೊಡ್ಡ ಸೈತಾನ ಬಂದರೂ ನಮ್ಮನ್ನು ಬದಲಾಯಿಸುವುದು ಕಷ್ಟ.

ಹುಟ್ಟುತ್ತಲೇ ಯಾರೂ ಕೂಡ ಕೆಟ್ಟದ್ದನ್ನು ಮಾತನಾಡುವುದನ್ನಾಗಲಿ, ಕೆಟ್ಟ ಹವ್ಯಾಸ ಗಳನ್ನಾಗಲಿ ಕಲಿತಿರುವುದಿಲ್ಲ. ಅದೇ ರೀತಿ ನಾವು ಕೂಡ ಬೆಳೆಯುತ್ತ ಇದ್ದ ಹಾಗೆ ಒಳ್ಳೆಯ ವಿಷಯಗಳನ್ನು, ಹವ್ಯಾಸಗಳನ್ನು ಅರಿಯಬೇಕೆ ಹೊರತು,ಕೆಟ್ಟವರ ಜೊತೆ ಕೂಡಿ ನಾವು ದುಷ್ಟರಾಗುವುದಲ್ಲ, ದುಷ್ಟರನ್ನು‌ ಒಳ್ಳೆಯವರನ್ನಾಗಿಸೋಣ. ಜೀವನದಲ್ಲಿ ಉದ್ಧಾರ ವಾಗುವ ಕಡೆ ಯೋಚನೆ ಮತ್ತು ಶ್ರಮ, ಪಣವನ್ನು ತೊಡಗಿಸಿಕೊಳ್ಳೋಣ.

            🔆🔆🔆

✍️ ಹರ್ಷಿತಾ ಹೆಬ್ಬಾರ್.
ಪ್ರಥಮ ಎಂ.ಸಿ.ಜೆ ಎಸ್.ಡಿ ಎಂ ಕಾಲೇಜು,ಉಜಿರೆ