ನೀಲಾಕಾಶದಲಿ ಮಿನಿಗುವ ತಾರೆ ನಾನು ನೋಡುವ ಕಣ್ಣು ನಿನಗಿಲ್ಲದಿರೆ ನನ್ನ ತಪ್ಪೇನು

ಶಾಂತ ಸಾಗರದ ಚಿಪ್ಪಲಡಗಿದ ಮುತ್ತು ನಾನು ನಿನ್ನರಿವಿಗೆ ಬಾರದಿರೆ ಕಳೆದುಕೊಳ್ಳದಿರುವೆಯೇನು

ಸುಡುವ ಬೆಂಕಿಯಲಿ ಹೊಳೆವ ಹೊನ್ನು ನಾನು ನೀ ಕೈಹಾಕ ಹೆದರಿದರೆ ನಾ ಸಿಗುವೆನೇನು

ಸುಳಿವ ಕುಳಿರ್ಗಾಳಿಯಲಿ ಬೆರೆತ ಗಂಧ ನಾನು ನಾಸಿಕದ ಮಿತಿಯ ನೀ ಮೀರದಿರೆ ನಾ ಮಾಡಲೇನು

ಕವಿದ ಕಾವಳದಲರಳಿದ ಪ್ರೇಮಪುಷ್ಪ ನಾನು ನಿನ್ನ ಕೈಗೆಟುಕದಿರೆ ನಷ್ಟ ನಿನಗಲ್ಲವೇನು

ಅಲಭ್ಯವೇ ಅನರ್ಘ್ಯವು
ಅನರ್ಘ್ಯವೇ ಅತ್ಯಾಪ್ತವು

          🔆🔆🔆                             

✍️ ಕವಿತಾ ಹೆಗಡೆ, ಹುಬ್ಬಳ್ಳಿ