ಕೈ ಹಿಡಿದು ನಡೆಸೆನ್ನ ಮಹಾದೇವ
ಕತ್ತಲೆಯ ಮಾಯಾ ಲೋಕದಲಿ
ಕಣ್ಣಿದ್ದರೂ ಕಾಣಲಾರೆ ಈ ಜಗವ
ನೀಡದಿರು ಅಧಿಕಾರ ದುಷ್ಟರ ಕೈಲಿ

ಕೈ ಹಿಡಿದು ನಡೆಸೆನ್ನ ಮಹಾದೇವ
ಸತ್ಯ ಧರ್ಮವು ಬಲಿಯಾಗದಿರಲಿ
ದುಷ್ಟರನ್ನು ನೀಮಾಡು ಸಂಹಾರವ
ಕಷ್ಟಕ್ಕೆ ಶಿರ ಮೇಲೆ ನಿನ್ನ ಕರವಿರಲಿ

ಕೈ ಹಿಡಿದು ನಡೆಸೆನ್ನ ಮಹಾದೇವ
ತನುಮನ ಎಲ್ಲವೂ ನಿನ್ನ ಹೆಸರಲಿ
ಎನ್ನದೇನಿಲ್ಲ ಇಲ್ಲಿ ಬರಿ ಕೈ ಬಡವ
ನನ್ನ ಮರೆತಿಹೆ ನಿನ್ನಯ ಜಪದಲಿ

ಕೈ ಹಿಡಿದು ನಡೆಸೆನ್ನ ಮಹಾದೇವ
ದುರ್ಜನರೇ ತುಂಬಿದ ದಾರಿಯಲಿ
ದುರಾಸೆಗೆ ಜಾರಿಸದಿರು ಮನವ
ಹಿತನುಡಿ ನುಡಿಸು ನಾಲಿಗೆಯಲಿ

           🔆🔆🔆

✍️ಶ್ರೀಮತಿ.ಸುಧಾ ಕಂದಕೂರ.ಹುಬ್ಬಳ್ಳಿ