ಗುರು ಎಂದರೆ ಜ್ನಾನಕ್ಕೆ ವರವು
ಮರೆವಿಗೆ ನೆನಪಿಸುವ ದಿವೌಷಧವು
ಕತ್ತಲೆಯಂಬ ಅಜ್ಞಾನಕೆ ನೀಡುತ ಸುಜ್ಞಾನವ
ಖಾಲಿ ಇರುವ ಮಸ್ತಕಕೆ ಇವರೆ ಪುಸ್ತಕವು//

ಪ್ರತೀ ಇಡುವ ಹೆಜ್ಜೆಗೂ ಗುರವೇ ಬೆಳಕು ತಮ್ಮಾ
ಬದುಕನ್ನು ಬೆಳಗಿಸುವರು ನಿತ್ಯ ನಮ್ಮನಿಮ್ಮಾ
ಭೇಧವಿರದ ಕಂದನಂತೆ ಇವರ ಮನಸು ನೋಡಮ್ಮಾ
ತಾಯಿಯಂತೆ ಗುರುವು ಕೂಡಾ
ಹೌದಲ್ಲವಮ್ಮಾ//

ಗುರುವಿರಲು ನಮ್ಮ ಪಕ್ಕ ಅರುವು ನೀಡುವ ಖಜಾನೆ
ಸಂತಸದ ನಗುವೂ ಕೂಡಾ ಇವರಿಂದಾನೆ
ಪ್ರತೀ ಮಗುವಿನಲ್ಲೂ ಬಿತ್ತುವರು ಜ್ಞಾನದ ಬೆಳಕನ್ನೇ
ಗುರುವಿನ ಮಾರ್ಗದಿಂದ ತಲುಪುವೆವು
ಮಾನವೀಯತೆಯ ಶಿಖರವನ್ನೇ//

ನಿನ್ನ ಭಕ್ತಿ ಅರ್ಪಿಸು ಗುರುವಿನ ಪಾದಗಳಿಗೆ ಜನ್ಮಧಾತರಿಗೆ
ನಿತ್ಯ ನಡೆಯೊ ಮನುಜನೆ ಸತ್ಯದ ಮಾರ್ಗದ ಕಡೆಗೆ
ನ್ಯಾಯ.ನೀತಿ.ಸಂಸ್ಕೃತಿ . ಅಳವಡಿಸು ಬದುಕಿಗೆ
ಮಾನವೀಯತೆಯಲಿ ಬದುಕಿದಾಗ ಸಾಗುವುದು ಜೀವನ ಸನ್ನ್ಮಾರ್ಗದೆಡೆಗೆ//

✍️ರ.ಗು.ಸುತೆ.
ಡಾ//ಸುಧಾ.ಚ.ಹುಲಗೂರ
ಧಾರವಾಡ
🙏🙏