ನಮ್ಮ ವಿಭಿನ್ನ ಪ್ರವಾಸದ ಕನಸಿನಲ್ಲಿ ರಾಜಸ್ಥಾನ ವೂ ಒಂದಾಗಿತ್ತು. ಪ್ರತಿ ಬಾರಿಯೂ ಪ್ರವಾಸ ಆರಂಭಿಸುವಾಗಲೇ ಕಾಣುತ್ತಿದ್ದ ವಿಘ್ನಗಳು ಪ್ರವಾಸಕ್ಕೆ ಬೇರೆಯ ಅನಿವಾರ್ಯತೆ ಸೃಷ್ಟಿಮಾಡು ತಿತ್ತು. ಈ ಬಾರಿ ಪ್ರವಾಸಕ್ಕೆ ಹೋಗಬೇಕು ಎಂದಾಗಲೂ ಹಲವು ವಿಘ್ನಗಳು, ನಡುವೆ ಸ್ಥಳಗಳು ಸಿದ್ದಪಡಿಸಿದ ಮಾದರಿಯಂತಿದ್ದವು. ಮರಭೂಮಿ ಮತ್ತು ಅರಮನೆಗಳ ವೈಭವದ ನಡುವೆ ಹೊಸತನ ಹುಡುಕುವ ಪ್ರಯತ್ನಕ್ಕೆ ಹೊಂದುವ ಪ್ರವಾಸಿ ತಂಡವನ್ನು ಹುಡುಕುವುದು ಕಷ್ಟ ಇತ್ತು. ಅಗತ್ಯ ದಾಖಲೆಯನ್ನು ಕೊಡುವ ಜೊತೆಯಲ್ಲಿ ಸಿಕ್ಕ ಒಂದು ತಂಡದೊಂದಿಗೆ ಪ್ರವಾಸಕೂಡಿಸಿದಾಗ ಮಗಳ ಪರೀಕ್ಷೇಯ ಹಿನ್ನೆಲೆ ಯಲ್ಲಿ ಮತ್ತೆ ಮರು ಹೊಂದಾಣಿಕೆಯೊಂದಿ ಗೆ ಪ್ರಯಾಣ ಆರಂಭ ವಾದಾಗ ನಿಟ್ಟುಸಿರು. ಇಲ್ಲಿನ ಇತಿಹಾಸದ ಪುಟ ಗಳು ಇಲ್ಲಿನ ಕಲ್ಲಿನಲ್ಲಿ ಹೊಸತನ ಹುಡುಕುವತ್ತ ಬೆಂಗಳೂರಿನಿಂದ ಜೈಪುರಕ್ಕೆ ವಾಯುಮಾರ್ಗ  ದಲ್ಲಿ ಹೊರಟಾಗಲೇ ನಮ್ಮ ಕನಿಸಿಗೊಂದು ಗರಿ….

ಜೈಪುರಕ್ಕೆ ಸುಮಾರು 20 ನಿಮಿಷ ತಡವಾಗಿ ತಲುಪಿದಾಗಲೇ ಮಧ್ಯಾಹ್ನ 12 ಘಂಟೆ. ನಮ್ಮ ವಾಹನ ಚಾಲಕನ ತಡವಾಯಿತು ಅನ್ನುವಾಗಲೇ ನಮ್ಮ ಪಯಣದಲ್ಲಿ ರಾಜಸ್ಥಾನದ ಕಥನ ಆರಂಭ. ಆರಂಭದಲ್ಲಿ ಜೈಪುರದ ನವನಗರದಿಂದ ಪುರಾತನ ನಗರದೊಳಗೆ ಹೊಕ್ಕಾಗ ಪಿಂಕ್ ಸಿಟಿ ಯ ಲೋಕಕ್ಕೆ ಪಯಣ.

ಜೈಪುರ ನಗರ ಹುಟ್ಟಿದ್ದೇ ಕ್ರಿ.ಶ.1727 ರಲ್ಲಿ     ರಜಪೂತ ದೊರೆ ಸವಾಯಿ ಜೈಸಿಂಗ್ ಅವರಿಂದ. ಅವರ ಹೆಸರಿಂದಲೇ ಈ ನಗರಕ್ಕೆ ಜೈಪುರ್ ಎಂಬ ಹೆಸರು ಬಂದಿದ್ದು, ಅದು ಪಿಂಕ್ ಸಿಟಿ ಅಗಿದ್ದು ಮಾತ್ರ ಕ್ರಿ.ಶ.1876ರಲ್ಲಿ. ವೇಲ್ಸ್ ರಾಜಕುಮಾರ  ಆಲ್ಬರ್ಟ್ ಎಡ್ವರ್ಡ್ ಸ್ವಾಗತಿ ಸಲು ಗುಲಾಬಿ ಬಣ್ಣದಿಂದ ಮಾರ್ಗಗಳನ್ನು ಅಲಂಕರಿಸಿದಾಗ.  ಈಗಲೂ ಹಳೇ ಜೈಪುರದ ಹವಾಮಹಲ್ ಸಮೀಪದ ಮಾರ್ಕೇಟ್ ಭಾಗದ ಎಲ್ಲಾ ಬೀದಿಗಳ ಕಟ್ಟಡಗಳು ಸರ್ಕಾರದ ನಿಯಂತ್ರಣದಲ್ಲಿದ್ದು, ಗುಲಾಬಿ ಬಣ್ಣದಲ್ಲಿ ಉಳಿದುಕೊಂಡಿದೆ. 

ಪಿಂಕ್ ಸಿಟಿ (ಗುಲಾಬಿ) ನಗರ ಪ್ರವೇಶದಲ್ಲಿ ಸಿಕ್ಕ ಗುಲಾಬಿ ಕಟ್ಟಡಗಳ ನಡುವೆ ಅದರ ಇತಿಹಾಸ ಹೊಕ್ಕಾಗ ನಮಗೆ ಸಿಕ್ಕಿದ್ದೇ ರೋಚಕ ಕಥೆಗಳು.  1876 ರಲ್ಲಿ ಬ್ರಿಟೀಷ್ ರಾಣಿ ವಿಕ್ಟೋರಿಯಾ ಮಗ ಪ್ರಿನ್ಸ್ ಅಲ್ಬರ್ಟ್ ಎಡ್ವರ್ಡ್ ಭಾರತಕ್ಕೆ ಭೇಟಿ ನೀಡಿದಾಗ ಜೈಪುರಕ್ಕೆ ಬರಲು ನಿರ್ಧರಿಸಿದರು.  ಗುಲಾಬಿ ಬಣ್ಣ ಅತಿಥ್ಯದ ಸಂಕೇತವಾದ ಕಾರಣ ಅವರನ್ನು ಸ್ವಾಗತಿಸಲು  ಆಗಿನ ರಾಜರಾಗಿದ್ದ ಮಹಾರಾಜ ಸವಾಯಿ ರಾಮಸಿಂಗ್ ಇಡೀ ನಗರವನ್ನು ಗುಲಾಬಿ ಬಣ್ಣದಿಂದ ಅಲಂಕರಿಸಿ ದರು. ಇದನ್ನು ನೋಡಿದ ಎಡ್ವರ್ಡ್ ಈ ನಗರಕ್ಕೆ ಪಿಂಕ್ ಸಿಟಿ ಎಂದೇ ಕರೆದರು.

ಕ್ರಿ.ಶ.1877ರಲ್ಲಿ ಇದರಿಂದ ಪ್ರೇರಿತರಾಗಿದ್ದ ಮಹಾರಾಜ ರಾಮಸಿಂಗ್ ತನ್ನ ರಾಣಿ ಗುಲಾಬಿ ಅಭಿಮಾನಿಯಾದ ಕಾರಣ ಜೈಪುರದ ನಗರದಲ್ಲಿ ಎಲ್ಲಾ ಕಟ್ಟಡಗಳಿಗೂ ಗುಲಾಬಿ ಬಣ್ಣವನ್ನೇ ಹಚ್ಚ ಬೇಕು ಎಂದು ಅದೇಶಿಸಿದರು. ಇದು ಇಂದಿಗೂ ಹಾಗೆಯೇ ಉಳಿದಿದ್ದು, ಹಳೆಯ ಜೈಪುರದ ಬಜಾರ್ ಮತ್ತು ಸುತ್ತಲಿನ ಎಲ್ಲಾ ಕಟ್ಟಡಗಳಿಗೂ ಇಂದಿಗೂ ಗುಲಾಬಿ ಬಣ್ಣವನ್ನ ಉಳಿಸಿಕೊಳ್ಳಲಾ ಗಿದೆ. ಕಾಲ ಬದಲಾದರೂ ನಂಬಿಕೆಯ ಅತಿಥ್ಯದ ತೋಳುಗಳು ಇಂದಿಗೂ ಅದೇ ನೆನಪಲ್ಲಿ ಸಾಗಿದೆ.

 ಕ್ರಿ.ಶ.1727ರಲ್ಲಿ ಜೈಪುರ ನಗರ ಸ್ಥಾಪಿತವಾದಾಗ ಮಹಾರಜ ಜೈಸಿಂಗ್ ಅತ್ಯಂತ ವ್ಯವಸ್ಥಿತ ನಗರ ವಾಗಿ ವಿನ್ಯಾಸಗೊಳಿಸಿದರು.  ಭಾರತದ ಮೊದಲ ಯೋಜಿತ ನಗರವಾದ ಇಲ್ಲಿ ರಸ್ತೆಗಳು ವ್ಯವಸ್ಥಿತ ವಾಗಿಯೇ ರೂಪುಗೊಂಡವು.ಇಲ್ಲಿನ ಕಟ್ಟಡಗಳನ್ನ ರಜಪೂತ ವಾಸ್ತು ಶೈಲಿಯಲ್ಲಿಯೇ ನಿರ್ಮಿಸಿದ್ದು, ಮೊಘಲ್ ಶೈಲಿಯೊಂದಿಗೆ ಸಂಯೋಜಿತ ಗೊಳಿಸ ಲಾಗಿದೆ.

ಬಜಾರಿನಲ್ಲಿರುವ ಕಟ್ಟಡಗಳನ್ನು ಪಿಂಕ್ ಮಾದರಿ ಯಲ್ಲಿ ನಿರ್ಮಾಣವಾಗಿದ್ದು, ಇಲ್ಲಿನ ಸರ್ಕಾರವೇ ನಿರ್ವಹಣೆ ಮಾಡುತ್ತದೆ.  ಕಟ್ಟಡಗಳ ವಿನ್ಯಾಸ  ವಾಗಲಿ, ಬಣ್ಣವಾಗಲಿ, ಬದಲಾವಣೆ ಮಾಡಲು ಅವಕಾಶವಿಲ್ಲ.

ಮಾರುಕಟ್ಟೆಗಳು ವ್ಯವಸ್ಥಿತವಾಗಿ ನಿರ್ಮಾಣವಾ ಗಿದ್ದು 9 ವಿಭಿನ್ನ ಮಾರುಕಟ್ಟೆಗಳಿವೆ. ಚಿನ್ನದ ವ್ಯಾಪರಕ್ಕಾಗಿಯೂ ಜೋಹರಿ ಬಜಾರ್, ಕರಕುಶಲ ವಸ್ತುಗಳು, ಇಲ್ಲಿನ ಮಾರ್ಬೆಲ್ ವ್ಯಾಪರಕ್ಕೆ ಚಂದಪೋಲ್ ಬಜಾರ್,  ಬಳೆಗಳ ಮಾರುಕಟ್ಟೆಗೆ ಟ್ರಿಪೋಲ್ ಬಜಾರ್,  ಬಟ್ಟೆಗಾಗಿ ಕಿಶನ್ ಪೋಲ್ ಬಜಾರ್, ಚರ್ಮದ ವಸ್ತುಗಳಿ ಗಾಗಿ (ಚಪ್ಪಲಿ, ಬ್ಯಾಗ್) ಬಾಪು ಬಜಾರ್, ಸಾಂಪ್ರದಾಯಿಕ ವಸ್ತ್ರಗಳಿಗಾಗಿ ನೆಹರು ಬಜಾರ್, ಸೀರೆಗಳಿಗಾಗಿ ಸೀರೆಹ್ ದಿಯೋರಿ ಬಜಾರ್, ಜೈಪುರದ ಬೆಡಶೀಟ್ ಗಳಿಗಾಗಿ ಅರಾವಳಿ ಬಜಾರ್ ಇದೆ.

ಜೈಪುರದ ಪ್ರವಾಸಿ ಸ್ಥಳಗಳ ಜೊತೆಯಲ್ಲಿ ಇಲ್ಲಿನ ಮಾರುಕಟ್ಟೆಗಳು ನಮ್ಮನ್ನ ಅಲ್ಲಿನ ಸ್ಥಳೀಯ ಲೋಕಕ್ಕೆ ಕರೆದೊಯ್ದರೂ ಇಲ್ಲಿಯ ವಸ್ತುಗಳನ್ನ ಖರೀದಿಸುವ ಮುನ್ನ ಗುಣಮಟ್ಟ ಮತ್ತು ಖಚಿತ ಬೆಲೆಯನ್ನು ನೀವೇ ನಿರ್ಧರಿಸುವುದು ಒಳಿತು. ಇಲ್ಲದಿದ್ದರೇ ದುಬಾರಿ ವ್ಯಾಪಾರ ನಿಮ್ಮ ಜೇಬನ್ನೇ ಖಾಲಿ ಮಾಡುವುದರಲ್ಲಿ ಸಂಶಯವಿಲ್ಲ. 

✍️ಶ್ರೀನಿವಾಸ ಮೂರ್ತಿ ಎನ್. ಎಸ್.
ಬೆಂಗಳೂರು