ಹೊಸ ಇತಿಹಾಸ ಆರಂಭ ೨೧ ನೇ ಶತಮಾನದೊಳು
ಮರು ಉದಯಿಸಿದನು ಪ್ರಭುರಾಮ ಭಾರತದ ಹೃದಯದೊಳು
ಶ್ರೀ ರಾಮನ ಪ್ರತಿಷ್ಠಾಪನೆ ರಾಮ ಜನ್ಮ ಅಯೋಧ್ಯೆಯೊಳು
ನೂತನ ಶುಭಕಾರ್ಯಕೆ ತಲೆಬಾಗಿತು ಭಕ್ತಜನಾ ವಿಶ್ವದೊಳು
ಅಗಣಿತ ಸದ್ಭಕ್ತರ ನಡಿಗೆ ಅಯೋಧ್ಯೆಯ ಕಡೆಗೆ
ಸಲ್ಲಿಸುತಿಹರು ಪ್ರೀತಿಯ ಉಡುಗೊರೆ ಶ್ರೀ ರಾಮನಿಗೆ
‘ಧರ್ಮೋ ಹಿ ಪರಮೋ ಲೋಕೆ’ ಸಿದ್ಧಿಸಿದೆ ರಾಮನ ವಾಕ್ಯ
ಸತ್ಯ ನಿಷ್ಠೆ ವ್ಯಕ್ತಿತ್ವವುಳ್ಳ ರಾಮನ ಆದರ್ಶದಲ್ಲಿ ಎಲ್ಲಾ ಸೌಖ್ಯ
ರಾಮಾಯಣದ ಕಥೆಯಲ್ಲಿ ಕಾಣಿರಿ ಶ್ರೀ ರಾಮನ ಶಕ್ತಿ
ಪಾದಸ್ಪರ್ಶವಾದ ಅಹಿಲ್ಯಗೆ ರಾಮನಿಂದ ಶಾಪಮುಕ್ತಿ
ಎಂಜಲು ಹಣ್ಣು ನೀಡಿ ಮೋಕ್ಷ ಪಡೆದ ಶಬರಿಯ ಭಕ್ತಿ
ಕಿಷ್ಕಿಂಧೆಯಲಿ ಸುಗ್ರೀವನ ಪಟ್ಟಾಭಿಷೇಕಕ್ಕೆ ಶ್ರೀ ರಾಮನ ಉಕ್ತಿ
ಆಜ್ಞೆಯಂತೆ ಹದಿನಾಲ್ಕು ವರ್ಷ ವನವಾಸದ ಗೈದವನು
ರಾವಣನ ಕೊಂದು ಪತಿವ್ರತೆ ಸೀತೆಯನ್ನು ಪಡೆದನು
ಭರತ ಖಂಡದ ಕಣಕಣದಲ್ಲೂ ವಾಸಿಪ ಶ್ರೀ ರಾಮನು
ತ್ರೀಲೋಕದ ಆದರ್ಶ ಪುರುಷೋತ್ತಮನ ಭಕ್ತ ಹನುಮನು
ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.
