ಅಕ್ಕಿ, ಜೋಳ, ಗೋದಿ ತಿನ್ನಲಾಗದು ಮನುಜ ಹಸಿವಿಗೆಂದು/
ಬೇಯಿಸಿ ವ್ಯಂಜನಗಳೊಂದಿಗೆ ತಿಂದಾಗಲೇ ರುಚಿ ಮುಂದು//
ಬಡತನ,ಕಷ್ಟ, ಸಂಯೋಗ,ವಿಯೋಗ ಅನುಭವಿಸಿದರು ಬೇಂದ್ರೆ ಅಂದು/
ಬೆಂದರೆ ಬೇಂದ್ರೆ ಎಂದು ಸಾರಿಕೊಂಡು, ಬೆಂದು ಸಾಹಿತ್ಯ ರಸಪಾಕದ ಗಂಗೆ ಹರಿಸಿಹರು ಇರುವಂತೆ ಎಂದೆಂದೂ//
ಕಷ್ಟ ಕೋಟಲೆ ಎಷ್ಟೇ ಇರಲಿ, ಸರಳ ಜೀವನ ಶೈಲಿ/
ಮುಖಾರವಿಂದದಲಿ ,ಅಧರದಲಿ ನಗುವಿನ ಸಂತೃಪ್ತಿಯ ಬೇಲಿ//
ಅಂಬಿಕೆಯ ತನಯ ನಾಮಾಂಕಿತದಲಿ ಹೊಳೆಯುವರು ಸಾಹಿತ್ಯ ಸರಸ್ವತಿಯ ಮುಕುಟದಲಿ ಬೆಳಗಿ/
ಅಮರತ್ವ ಸಾರುವ ಅಜರಾಮರ ಕೃತಿಗಳ ಜನಕ ಅಳೆಯಲಾಗದು ಬೆಲೆ ತೂಗಿ//
ಔದುಂಬರ ಪ್ರಿಯ ಶ್ರೀ ದತ್ತಾತ್ರೇಯ ನಾಮಾಂಕಿತ ಕನ್ನಡಿಗ ದತ್ತ/
ಓದುತ್ತ ತಿಳಿಯಬೇಕು ಬೇಂದ್ರೆ ಕಾವ್ಯ ಸುಧೆಯ ಚಿತ್ತ//

✍️ಕಮಲಾಭಿತನಯೆ
(ಶ್ರೀಮತಿ ರೇಖಾ ನಾಡಿಗೇರ)
ಹುಬ್ಬಳ್ಳಿ
