ಇನ್ನು, ಹೆಚ್ಚಾಗಿ ಯೋಚಿಸುವುದು ಏನಿದೆ?
ನನ್ನ ಪ್ರಾಯ, ಇಗೋ ನಾಲ್ಕು ದಶಕದ ವಸಂತಕ್ಕೆ ನಡುಘಟ್ಟವ ತಲುಪಿ
ಶತಪಥ ತುಳಿಯಲಿದೆ.
ಹೆಜ್ಜೆ ಹೆಜ್ಜೆಗು ಕನಸುಗಳನ್ನು ಹೊತ್ತು
ಸಾಕಾರಗೊಳ್ಳದ ತವಕ ತಲ್ಲಣಗಳೆಲ್ಲವು ಆ ಹೊತ್ತಿಗೆ ಅಂತ್ಯಗೊಳ್ಳಲಿದೆ.ಆಗ! ನನ್ನ ಆಸೆ ಆಕಾಂಕ್ಷೆಗಳು ನಿರಂತರವಾಗಿ
ನಿದ್ರಿಸುತ್ತ ಚಿರಂತನವಾಗಿ ವಿರಮಿಸಿಕ್ಕೊಳ್ಳುತ್ತವೆ.
ಕಾಲ ಗತಿಸಿದ ತರುವಾಯ ಕನಸುಗಳ ಬೆದಕಾಟದಲ್ಲಿ ತಲ್ಲೀನರಾಗುವುದು ಬರೀ ಹುಡುಗಾಟಿಕೆಯಲ್ಲದೇ ಇನ್ನೇನು?
ತ್ರಾಣವಿರದೆ ಸಾಧಿಸುವುದಾದರು ಏನನ್ನ? ಗುರಿಗಳಿಲ್ಲದೇ ಜೀವಿಸುವುದಾದರು ಏಕಿನ್ನ?
ಕಾಲಸಂದು ಹೋಗುವುದರ ಒಳಗೆ
ಕಂಡ ಕನಸುಗಳು ಕೈಗೂಡಲಿಲ್ಲವೆಂದಾದರೆ ಜೀವಿತಾದವಧಿಯ ಉದ್ದಕ್ಕೂ ನಾನು ಜೀವಿಸಲಿಲ್ಲವೆಂಬುದೇ ನಿಜದಲ್ಲಿ ವಾಸ್ತವ, ಕಟುಸತ್ಯ ಎಲ್ಲವು!
✍️ಶಿವಮೊಗ್ಗ ಎಂ ಸುಮಿತ್ರ
ಶಿವಮೊಗ್ಗ

ಅದ್ಭುತ.. ಮನಸ್ಸು ಕನಸಿನ ಜೊತೆ ಬದುಕಲು ಹವಣಿಸಿದರೂ ಕಾಲಗರ್ಭದಲ್ಲಿ ಏನಿದಯೋ …. ಬದುಕಬೇಕಿದೆ.. ವಾಸ್ತವತೆಗೆ ಶರಣಾಗಿ.. ಕನಸುಗಳಿಗೆ ಒಮ್ಮೆ ಯಾದರೂ ಜೀವ ಬರಲಿ.. ಅದು ಶಾಶ್ವತವಾಗಲಿ.
LikeLike
👌👌👌👌👌👌
LikeLike
ಬದಲಾವಣೆ ಜಗದ ನಿಯಮ
ಈ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗಿ
ಎಲ್ಲಾ ಕನಸು / ನಿರೀಕ್ಷೆಗಳು ನನಸಾಗುವುದಿಲ್ಲ.
LikeLike
ಸಾಹಿತ್ಯದಲ್ಲಿ ವಾಸ್ತವತೆ ತುಂಬಿದೆ… ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ…? ಮನಸಿನ ಭಾವನೆಗಳಿಗೆ ಕೊನೆ ಎಲ್ಲಿ? ಬಯಕೆಯ ಹಂಬಲ, ತುಡಿತ, ಅಭಿಲಾಷೆ ತುಂಬಿದ ಮನೋಹರವಾದ ಸಾಹಿತ್ಯ ತುಂಬಾ ಸೊಗಸಾಗಿದೆ mdm 🌹👍
LikeLiked by 1 person
ಜೀವನ ಎಂಬ ಹೆದ್ದಾರಿಯಲ್ಲಿ ಸಾಧನೆಗಳಿಗೆ ಬೆಳಕಾಗಿ ಕನಸುಗಳು ಸದಾ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಪ್ರೇರೆಪಿಸಿ ಕಾಯದ ಅಳಿವಿನಂತರದ ಅಸ್ತಿತ್ವಕ್ಕೆ ಬುನಾದಿ ಹಾಕಬೇಕು ಇಲ್ಲವೇ ಕನಸು ಕನಸಾಗಿಯೇ ಉಳಿದಿತು, ಕನಸು ನನಸಾಗಲು ವಯಸ್ಸು ಅಡ್ಡಿಯಾಗಲಾರದು
LikeLike
ತುಂಬಾ ಸುಂದರವಾಗಿ ಬರೆದಿದ್ದೀರ. ನಿಮ್ಮ ಈ ಕವಿತೆಯನು ಕಥೆಯಾಗಿ ಕೇಳಬೇಕು ಅಂತ ಅನಿಸುತ್ತಿದೆ.
LikeLike
ಉತ್ತಮವಾದ ನಿರೂಪಣೆ ಮೇಡಂ.
LikeLike
ಜೀವನ ನೇ ಹಾಗೆ ದಾರಿ ಸಾಗಿಸಿದ ಹಾಗೆ ನಾವು ಸಾಗಬೇಕು
LikeLike
ಜೀವನ ಹಾಗೆ ದಾರಿ ಸಾಗಿಸಿದ ಹಾಗೆ ನಾವು ಪ್ರಯಾಣ ಮಾಡಬೇಕು
LikeLike
ಪ್ರತಿ ಕಣ್ಣಲ್ಲೂ ಕನಸಿರುತ್ತೆ. ಬದುಕಿನುದ್ದಕ್ಕೂ ಆಸೆಗಳಿರುತ್ತೆ. ಆದರೆ ಕೆಲವೊಮ್ಮೆ ಜೀವನ ಎನ್ನುವ ಆಪ್ತ ಸ್ನೇಹಿತ ನಿರ್ದಾಕ್ಷಿಣ್ಯವಾಗಿ ನಿಷ್ಕರುಣೆಯಿಂದ ನಮ್ಮ ಮೇಲೆ ಎರಗಿದಾಗೆಲ್ಲ ಆತ ಹಿತಶತ್ರುವೇನು ಅನ್ನಿಸಿಬಿಡುತ್ತಾನೆ. ಆಗಲೇ ನಮ್ಮ ಆಸೆ ಕನಸಿಗಳಿಗೆಲ್ಲ ಮರಣದಂಡನೆ. ಅದ್ಭುತವಾಗಿ ಬರೆದಿದ್ದೀರ. ನಿಮ್ಮೊಳಗಿನ ತುಡಿತ ಮಿಡಿತಗಳೆಲ್ಲವೂ ಸುಂದರ ಅನಾವರಣ..
LikeLike
ಜೀವನದ ಗುರಿ ಈಡೇರಲಿ ನಿಮ್ಮ ಕನಸು ವಾಸ್ತವವಾಗಿ ನಿಜರೂಪ ವಾಗಲಿ ಶುಭಕೋರುವೆ
LikeLike
👌👌👌
LikeLike
ಬದುಕುವ ಆಸೆ ಸತ್ತು ಹೋದರೆ
ಬದುಕುವ ಬದುಕಿಗೆ ಏನು ಅರ್ಥ
ಹುಟ್ಟಿದ ಕಾಯ ನಾಲಕ್ಕು ಜನಕ್ಕೆ ಉಪಯೋಗವಾಗದಿದ್ದರೆ ಬದುಕು ವ್ಯರ್ಥ.
ನಿರಾಶವಾದದ ಸಾಲು ನಿಮ್ಮ ಲೇಖನಿಗೆ ಸಲ್ಲ
LikeLike
ವಾಸ್ತವವಾಗಿ ಸತ್ಯ ವಿಚಾರ ಬರೆದಿದ್ದೀರಿ,,, ವಯಸ್ಸು /ಕನಸಿಗೂ ಇರುವ ನೆಂಟಸ್ತಿಕೆಗೆ, ಜೀವನ ಸತ್ಯ ಅಧ್ಭುತ,,,
LikeLike
ಚೆನ್ನಾಗಿದೆ…. ಆದರೆ ವಯಸ್ಸು ಅನ್ನೋದು ಕೇವಲ ದೇಹಕ್ಕೆ ಮಾತ್ರ…. ಕನಸಿಗೆ ವಯಸ್ಸಿನ ಅಂತರ ಗೊತ್ತಿಲ್ಲ…. ನಮ್ಮ ಕನಸುಗಳಿಗೆ ಕಟ್ಟುಪಾಡು ಅನ್ನೋ ಬೇಲಿ ಹಾಕಿಕೊಂಡು ಬದುಕಿದರೆ ಇಲ್ಲಿ ಬರೆದಿರುವ ಒಂದೊಂದು ಪದ ಸತ್ಯ ಅನ್ನಿಸೋಕೆ ಆರಂಭವಾಗತ್ತೆ…. ಆ ಬೇಲಿಯೊಳಗಿನ ಜಗತ್ತು ಒಂದಾರೆ, ಬೇಲಿಯಿಂದ ಹೊರ ಇರುವ ಜಗತ್ತು ಇನ್ನೊಂದು…. ಆ ಜಗತ್ತನ್ನು ನಮ್ಮದಾಗಿಸಿ ಕೊಳ್ಳಲು ನಮ್ಮಲ್ಲಿ ಸ್ವೀಕಾರದ ಮನಸ್ಸು ಇರುವುದು ಮುಖ್ಯ….
LikeLike
ಕನಸುಗಳ ಬೆನ್ನೇರಿ ಬರೆದ ಕವಿತೆ ತುಂಬಾ ಸೊಗಸಾಗಿದೆ….ಹೀಗೆ ಮುಂದುವರೆದು ಇನ್ನು ಅತ್ಯುತ್ತಮವಾದ ಪದಗಳು ಹೊರಬರಲಿ
LikeLike
👏👏👏👏👏👌👌👌👌👌🙏🙏🙏🙏💐💐💐💐💐
LikeLike