ನಗು ಮೊಗವು ಚಂದ ಗೆಳತೀ
ನಗುವಿಂದ ಆರೋಗ್ಯ ಪಡಿತೀ
ಅಂದವು ನೋಡು ಹೆಣ್ಣಿಗೆ ಮೂಗುತಿ
ನಿಮ್ಮ ನಿಮ್ಮ ಮನಿಗೆ ನೀವೇ ಸಾರಥಿ
ಗೆಳೆತನ ಎಂಬುದು ದೇವನ ಉಡುಗೊರೆ
ನಿರ್ಮಲ ಮನಸಿನ ನಗು ಸೌಖ್ಯಕೆ ದಾರಿ
ಎಲ್ಲೋ ಹುಟ್ಟಿ ಎಲ್ಲೋ ಬೆಳೆದವರು
ಸ್ನೇಹದ ಕಡಲಲಿ ಮಿಂದೆದ್ದವರೂ
ಸ್ನೇಹದ ಬೆಲೆಯ ತಿಳಿಸಿದ ಆ ದೇವ ಮಾಧವ
ಸ್ನೇಹ ವಿಲ್ಲದೆ ಇರಲಾಗದು ಮಾನವ
ಸ್ನೇಹದಿ ನಗುತಿರಲು ಬದುಕಿಗೆ ಆಭರಣ
ನಿಸ್ವಾರ್ಥದ ಸ್ನೇಹವು ಬದುಕಿಗೆ ಹೂರಣ
✍️ ರ.ಗು.ಸುತೆ
(ಡಾ//ಸುಧಾ.ಚ.ಹುಲಗೂರ)
ಧಾರವಾಡ

ಸುಂದರ ಕವನ
LikeLike