ಪ್ರಥಮ ದಿನ ಗಂಗೆಯ ಪೂಜಿಸಿ
ದ್ವಿತೀಯ ದಿನ ಲಕ್ಷ್ಮಿಯ ಆರಾಧಿಸಿ
ತೃತೀಯವಾಗಿ ವಿಶ್ವ ಮಾತೆ ಗೋಮಾತೆಗೆ ವಂದಿಸಿ ಬಲಿಯ ತ್ಯಾಗವ ಸ್ಮರಿಸುವ ಹಬ್ಬ

ಸೀತಾರಾಮನ ವನವಾಸ ಕಳೆದು
ಅಯೋಧ್ಯೆಯಲ್ಲಿ ಪ್ರೀತಿಯ ದೀಪ ಬೆಳಗಿಸಿದ
ಮನಗಳ ಹೊಸೆದು ಬಾಂಧವ್ಯ
ಬೆಸೆಯುವ ಹಬ್ಬ

ಮನೆ ಮನೆಗಳಲ್ಲಿ ಸಾಲು ದೀಪವಿಟ್ಟು
ದೀಪದಿಂದ ದೀಪ ಹಚ್ಚಿ
ಮನಮನಗಳು ಪ್ರೀತಿ ಹಂಚಿ
ಪಟಾಕಿ ಸದ್ದಿನೊಂದಿಗೆ
ನಗುವು ಕಲೆವ ಹಬ್ಬ

ಆರಾಧನೆ ಜೊತೆಗಿನ ಸಡಗರ
ಜಗವೇ ನಲಿವಿನ ಸಾಗರ
ಕೆಡುಕಿನ ಕತ್ತಲ ಕಳೆವ ಕಲಾವಳಿ
ಸ್ವರ್ಗವೇ ಧರೆಗಿಳಿವ ಈ ದೀಪಾವಳಿ

✍️ಅನಿತಾ ಬೀ ಗೌಡ
ಪತ್ರಿಕೋದ್ಯಮ ವಿಭಾಗ
ಎಂ.ಎಂ ಕಾಲೇಜು ಶಿರಸಿ