ಬೆಳಕಿನ ಹಬ್ಬವಿದು ದೀಪಾವಳಿ
ಎತ್ತ ನೋಡಿದರತ್ತ ದೀಪಗಳ ಓಕುಳಿ
ಹೊಸ ಉಡುಪು, ಸಿಹಿ ತಿನಿಸು ನವೀನ ಅನುಭವ
ದೇಶದಾದ್ಯಂತ ಆಚರಿಸುವ ಋತು ಉತ್ಸವ

ಹಣತೆಯ ಬೆಳಕೇ ಮನೆಗೆ ಶೃಂಗಾರ
ಮನೆಯಂಗಳದಿ ಕಂಗೊಳಿಸುತ್ತಿದೆ ನಕ್ಷತ್ರದೀಪದ ಅಲಂಕಾರ
ಜೋರಾಗೇ ನಡೆಯುತ್ತದೆ ಪಟಾಕಿ, ಬಾಣಬಿರುಸುಗಳ ಅಬ್ಬರ
ಈ ಸಾಂಪ್ರದಾಯಕ ಆಚರಣೆ ಹೆಚ್ಚಿಸಿತು ನಮ್ಮೆಲ್ಲರ ಸಂಸ್ಕಾರ

ಕಗ್ಗತ್ತಲ ದೂರ ಮಾಡಿದ ಹಣತೆಯ ದೀಪ
ಬದುಕಿನ ಕತ್ತಲೆಯ ದೂರ ಮಾಡುವ ಪರಂಜ್ಯೋತಿ ಸ್ವರೂಪ
ಐದು ದಿನದ ದೀಪಾವಳಿ ಹಬ್ಬದ ಸಡಗರದಲ್ಲಿ
ಹೊಸತನದ ಹುರುಪೊಂದು ಮೂಡಿದೆ ಮನದಲ್ಲಿ

✍️ನಾಗರಾಜ್ ಶೇಟ್
ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ
(ಪತ್ರಿಕೋದ್ಯಮ ವಿಭಾಗ)
ಶಿರಸಿ ಜಿ:ಉತ್ತರ ಕನ್ನಡ