ನಾನಾಗ ಚಿಕ್ಕವಳು. ನಮ್ಮೂರಿನಲ್ಲಿರುವ ವೈ.ಟಿ. ಎಸ್.ಎಸ್ ಆಟದ ಮೈದಾನದಲ್ಲಿ ಟೆಂಟ್ ಹಾಕಿ ಅದಕ್ಕೂ ಮುನ್ನ ಯಕ್ಷಗಾನದ ಪ್ರಚಾರ ಕರಪತ್ರ ಗಳನ್ನು ಹಂಚುವ ರಿಕ್ಷಾದ ಮೈಕ ಸೌಂಡಗೆ ಮನಸ್ಸು ಹುಚ್ಚೆದ್ದು ಕುಣಿತಿತ್ತು. ಬಹಳ ಹತ್ತಿರ ದಿಂದ ಕಲಾವಿದರನ್ನು ನೋಡಿ ದವಳು. ಪಾತ್ರ ಧಾರಿಗಳೆಲ್ಲ ಸಭಾಂಗಣ ದಲ್ಲಿ ತಮ್ಮ ಪಾತ್ರಕ್ಕನು ಗುಣವಾಗಿ ಸಿದ್ದವಾಗುತ್ತಿ ದ್ದರೆ ಅದನ್ನು ನೋಡು ವುದೇ ಒಂದು ಹಬ್ಬ. ಟೆಂಟ್ ನ ಪರದೆ ಎತ್ತಿ ಗೋಣಿಚೀಲ ಬಗಲಲ್ಲಿ ಇಟ್ಟುಕೊಂಡು ಓಡಿ ಹೋಗಿ ನೋಡುವಾಗ ಲೆಲ್ಲ ಮೈನವಿರೇಳಿಸುವ ಭಾಗವತಿಕೆ, ಚಂಡೆ ವಾದ್ಯಕ್ಕೆ ಮೈಮರೆತದ್ದುಂಟು.

ಯಕ್ಷಗಾನದ ಪ್ರಾಚೀನತೆಯ ಕುರಿತು ಹೆಚ್ಚಿನ ಮಾಹಿತಿ ದೊರಕುವುದಿಲ್ಲವಾದರೂ ಭರತಮುನಿ ಯ ನಾಟ್ಯಶಾಸ್ತ್ರದಲ್ಲಿ ಅಲ್ಲಲ್ಲಿ ತೋರಿ ಬರುವ ಕೆಲವು ಆಧಾರಗಳಿಂದ ಈ ಕಲೆ ಬಹಳ ಹಿಂದಿ ನಿಂದಲೂ ಇತ್ತೆಂಬುದು ಸ್ಪಷ್ಟವಾಗುತ್ತದೆ. ಕನ್ನಡ ದ ಪ್ರಾಚೀನ ಕಾವ್ಯಗಳಲ್ಲಿ ಯಕ್ಷಗಾನ ಎಂಬ ಹೆಸರಿನ ಉಲ್ಲೇಖ ಕಂಡುಬರುತ್ತದೆ. ಯಕ್ಷ ಗಾನ ದ ಮೊದಲ ಉಲ್ಲೇಖವನ್ನು ಸಾರ್ಣ ದೇವನ “ಸಂಗೀತ ರತ್ನಾಕರ”ದಲ್ಲಿ (ಕ್ರಿ.ಶ ೧೨೧೦) “ಜಕ್ಕ” ಎಂದಿದ್ದು ಮುಂದೆ “ಯಕ್ಕಲ ಗಾನ” ಎಂದು ಕರೆಯಲ್ಪಟ್ಟಿತ್ತು ಎಂಬುದೊಂದು ಅಭಿಪ್ರಾಯ. ಗಂಧರ್ವಗಾನ ಎಂಬ ಈಗ ನಶಿಸಿ ಹೋಗಿರುವ ಗಾನ ಪದ್ದತಿಯಿಂದ ಗಾನ ಮತ್ತು ಸ್ವತಂತ್ರ ಜಾನಪದ ಶೈಲಿಗಳಿಂದ ನೃತ್ಯವು ರೂಪುಗೊಂಡಿತೆಂದು ಕಾರಂತರ ಯಕ್ಷಗಾನ ಬಯಲಾಟ ಎಂಬ ಸಂಶೋಧನ ಪ್ರಬಂಧಗಳ ಸಂಕಲನದಲ್ಲಿ ಹೇಳಿದೆ.

೧೫೦೦ ರಷ್ಟರಲ್ಲಿ ವ್ಯವಸ್ತಿತವಾಗಿ ಯಕ್ಷಗಾನ ರೂಢಿಯ ಲ್ಲಿತ್ತು ಎಂಬುದು ಬಹಳ ವಿದ್ವಾಂಸರು ಒಪ್ಪುವ ವಿಚಾರ. ಕರ್ನಾಟಕದಲ್ಲಿ ಸುಮಾರು 12ನೇ ಶತಮಾನದಲ್ಲಿದ್ದ “ಗಾನ ಸಂಪ್ರದಾಯ” ಯಕ್ಷಗಾನ ಎಂಬ ಹೆಸರಿನಿಂದ ಬಳಕೆಯಲ್ಲಿತ್ತು. ಅದೇ ಮುಂದೆ ನಾಟಕರೂಪ ದಲ್ಲಿ ಪರಿವರ್ತನೆ ಗೊಂಡು ಬಯಲಾಟ, ದಶಾವತಾರ ಆಟ, ದೊಡ್ಡಾಟ, ಪಾರಿಜಾತ ಎಂಬ ಹೆಸರುಗ ಳಿಂದ 15ನೇಯ ಶತಮಾನದ ಹೊತ್ತಿಗೆ ರೂಢಿಗೆ ಬಂದಿ ರುವಂತೆ ಕಾಣುತ್ತದೆ. ಈ ಬಯಲಾಟದ ಇನ್ನೊಂದು ರೂಪ ತಾಳಮದ್ದಲೆ ಅಥವಾ ಯಕ್ಷಗಾನ ಕೂಟ. ಇದು 16ನೇಯ ಶತಮಾನ ದಲ್ಲಿ ರೂಢಿಯಾಗಿ ದ್ದಂತೆ ತಿಳಿದುಬರುತ್ತದೆ.

ಯಕ್ಷಗಾನ-ನೃತ್ಯ,ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ,ದಕ್ಷಿಣಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನ ವು ಮನೆ ಮಾತಾಗಿದೆ.
ಯಕ್ಷಗಾನದ ಪಿತಾಮಹ ಪಾರ್ತಿ ಸುಬ್ಬ

ಕಾಸರಗೋಡಿನ ಕುಂಬಳೆಯ ಪಾರ್ತಿಸುಬ್ಬ ಇವರನ್ನು ಯಕ್ಷಗಾನದ ಪಿತಾಮಹ ಎಂದೇ ಕರೆಯಲಾಗುತ್ತದೆ. ಯಕ್ಷಗಾನವನ್ನು ಆಮೂ ಲಾಗ್ರ ಸುಧಾರಣೆ ಮಾಡಿ, ಪ್ರಸಂಗದ ಸಾಹಿತ್ಯ ರಚಿಸಿದವರು ಪಾರ್ತಿಸುಬ್ಬ. ಇಂದು ಯಕ್ಷಗಾನ ವಿಶ್ವವ್ಯಾಪಿಯಾಗಲು ಮೂಲ ಕಾರಣವಾದವರು ಅವರು. ರಾಮಾಯಣದ ಪ್ರಸಂಗಗಳನ್ನು ಅವರು ರಚಿಸಿದ್ದು, ಈಗಲೂ ಅದನ್ನು ಪ್ರದರ್ಶಿಸ ಲಾಗುತ್ತದೆ. ಪಾರ್ತಿಸುಬ್ಬ ಕಾಲಮಾನದಲ್ಲಿ ಇಂದಿಗೂ ಗೊಂದಲವಿದೆ. ಕ್ರಿ.ಶ1600- 1700 ಇರಬಹುದು ಎನ್ನುವುದು ಒಂದು ವಾದ ವಾದರೆ ಕ್ರಿ.ಶ.1760 ರಿಂದ 1830 ಎನ್ನುವವರೂ ಇದ್ದಾರೆ.

ಯಕ್ಷಗಾನ ನಾಲ್ಕು ಕಲಾಮಾಧ್ಯಮಗಳಿಂದ ಮೈಗೂಡಿನಿಂತ ಒಂದು ಸಮ್ಮಿಶ್ರಕಲೆ. ಇದರಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರ ಈ ನಾಲ್ಕು ಕಲೆಗಳ ಔಚಿತ್ಯಪೂರ್ಣವಾದ ಸಾಮ ರಸ್ಯವಿದೆ. ಪ್ರದರ್ಶನಕ್ಕೆ ಸಂಬಂಧಿಸಿದಂತೆ ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯ ದಕ್ಕೆ ಪೂರ್ವರಂಗ ಅಥವಾ ಸಭಾಲಕ್ಷಣ ಎನ್ನುವರು. ಎರಡನೆಯ ದು ಆರಿಸಿಕೊಂಡ ಕಥಾಭಾಗ.

ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳ ನ್ನು ಕಾಣಬಹುದು. ಪ್ರಸಂಗ ಯಕ್ಷಗಾನದಲ್ಲಿ ಯಾವುದಾದರೊಂದು ಕಥಾನಕವನ್ನು ಆಯ್ದು ಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು ಪ್ರಸಂಗ ಎಂದು ಕರೆಯು ತ್ತಾರೆ. ಉದಾಹರಣೆಗೆ ಮಹಾಭಾರತ ದಲ್ಲಿ ಭೀಮ ಮತ್ತು ದುರ್ಯೋಧನರ ನಡುವೆ ನಡೆಯುವ ಗದಾಯುದ್ಧದ ಕಥೆಯನ್ನು ಆಯ್ದು ಕೊಂಡರೆ ಆಗ ಅದನ್ನು “ಗದಾಯುದ್ಧ ಪ್ರಸಂಗ” ಎಂಬುದಾಗಿ ಕರೆಯುತ್ತಾರೆ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೇ ಆಯ್ದುಕೊಳ್ಳು ವುದು ಯಕ್ಷ ಗಾನದ ವಾಡಿಕೆಯಾದರೂ ಪ್ರಸಂಗವು ಪೌರಾಣಿ ಕವೇ ಆಗಬೇಕು ಎಂಬ ನಿಯಮವೇನೂ ಇಲ್ಲ. ಇದು ಐತಿಹಾಸಿಕವೂ, ಸಾಮಾಜಿಕವೂ ಆಗಿರ ಬಹುದು.

ಪಾತ್ರಧಾರಿಗಳು:ಪ್ರಸಂಗದಲ್ಲಿ ಬರುವ ಕಥೆ ಯನ್ನು ಅಭಿನಯಿಸುವವರೇ ಪಾತ್ರಧಾರಿ ಗಳು. ಸ್ತ್ರೀಪಾತ್ರ,ಖಳನಟನ ಪಾತ್ರ, ಹಾಸ್ಯ ಕಲಾವಿದನ ಪಾತ್ರ, ನಾಯಕನ ಪಾತ್ರ-ಹೀಗೆ ಪ್ರಸಂಗಕ್ಕೆ ಅನು ಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗು ತ್ತದೆ. ನೃತ್ಯ, ಅಭಿನಯ ಹಾಗೂ ಮಾತುಗಾರಿಕೆ ಗಳೊಂದಿಗೆ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪಾತ್ರಧಾರಿಗಳ ಮೇಲಿರು ತ್ತದೆ.

ವೇಷಭೂಷಣ: ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟದಲ್ಲಿ ವೇಷಭೂಷಣ ಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷ ಭೂಷಣಗಳಿರು ತ್ತವೆ. ಉದಾಹರಣೆಗೆ ಪ್ರಮುಖ ಖಳನಟ ಮತ್ತು ರಾಜ (ನಾಯಕ)ನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರ ಧಾರಿಗೆ ಬಳಸುವ ಕಿರೀಟಗಳಿಗಿಂತ ವಿಭಿನ್ನ ವಿನ್ಯಾಸದ್ದಾಗಿರುತ್ತದೆ. ಹಾಗೆಯೇ ಸ್ತ್ರೀ ಪಾತ್ರ ಗಳಿಗೆ ಬಳಸುವ ಕಿರೀಟವು ತುಂಬಾ ಚಿಕ್ಕದಾಗಿ ರುತ್ತದೆ. ಅಲ್ಲದೇ ತೆಂಕತಿಟ್ಟು ಶೈಲಿಯ ಯಕ್ಷಗಾನ ದಲ್ಲಿ ಉಪಯೋಗಿಸುವ ವೇಷಭೂಷಣಗಳು ಬಡಗತಿಟ್ಟಿನಲ್ಲಿ ಉಪಯೋಗಿಸುವ ವೇಷ ಭೂಷಣಗಳಿಗಿಂತ ಭಿನ್ನವಾಗಿರುತ್ತವೆ.

ಭಾಗವತಿಕೆ: ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರ ಧಾರಿಗಳು ಅಭಿನಯಿಸುವ ಕಥಾನಕ ವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ.

ಮಾತುಗಾರಿಕೆ: ಹಾಡುವುದನ್ನು ಪೂರ್ಣಗೊ ಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತಪಡಿಸ ಲಾಗುತ್ತದೋ ಅದೇ ಭಾಗದ ಅರ್ಥವನ್ನು ಜನ ಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡು ಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸು ತ್ತಾರೆ.
ಬಡಗು

ಇದು ಸಾಮಾನ್ಯವಾಗಿ ಉಡುಪಿ, ಕುಂದಾಪುರ, ಶಿವಮೊಗ್ಗ,ಉತ್ತರ ಕನ್ನಡದಲ್ಲಿ ಪ್ರಚಲಿತದ ಲ್ಲಿದೆ. ಬಡಗಿನ ವೇಷಭೂಷಣ ವೈವಿಧ್ಯತೆ ಯಿಂದ ಕೂಡಿದ್ದು, ಮುಖವರ್ಣಿಕೆಯು ಹೆಚ್ಚು ಆಕರ್ಷಣೀಯ.
ಚೌಕಿ
ಯಕ್ಷಗಾನ ವೇಷ ಹಾಕುವ ಸ್ಥಳವನ್ನು ಚೌಕಿ ಎನ್ನುತ್ತಾರೆ. ವೇಷ ಭೂಷಣ, ಆಲಂಕಾರಿಕ ವಸ್ತುಗಳನ್ನು ಇಲ್ಲಿ ಇರಿಸಲಾಗುತ್ತದೆ. ಕಲಾವಿದ ರೆಲ್ಲ ವೇಷ ಹಾಕಿದ ಮೇಲೆ ಚೌಕಿಯಲ್ಲಿ ದೇವರಿಗೆ ನಮಿಸುವರು.

ಯಕ್ಷಗಾನದಲ್ಲಿ ಅನೇಕ ಪ್ರಭೇದಗಳಿದ್ದು, ಅವುಗಳಲ್ಲಿ “ಯಕ್ಷಗಾನ ಬಯಲಾಟವು” ಅತ್ಯಂತ ಜನಪ್ರಿಯವಾದುದು. ಬಯಲಾಟ ವೆಂದರೆ ವೇಷಭೂಷಣಗಳೊಂದಿಗೆ ರಂಗ ಭೂಮಿಯಲ್ಲಿ ಆಡುವ ಯಕ್ಷಗಾನ ಪ್ರಭೇದ. ಕುಣಿತ ಎಂಬ ಹೆಸರು ಇದಕ್ಕಿದೆ. ಮೊದಲು ಹಬ್ಬ ಹರಿ ದಿನಗಳಂದು ಊರಿನ ಬಯಲಿನಲ್ಲಿ ರಾತ್ರಿಯಿಡಿ ಈ ಬಯಲಾಟ ಹೆಚ್ಚಾಗಿ ನಡೆಯು ತ್ತಿದ್ದ ಕಾರಣ “ಬಯಲಾಟ” ಎಂಬ ಹೆಸರು ರೂಢಿಯಲ್ಲಿದೆ. ಜನರು ಇದನ್ನು ಸರಳವಾಗಿ “ಆಟ” ಎಂದೂ ಕರೆಯುತ್ತಾರೆ.

ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಎಂಬ ಎರಡು ಪ್ರಮುಖ ಪ್ರಭೇದಗಳಿವೆ. ಪಶ್ಚಿಮ ಘಟ್ಟದ ಪೂರ್ವಕ್ಕೆ ಪ್ರಚಲಿತವಿರುವದು ಮೂಡಲಪಾಯ. ಮಲೆ ನಾಡು ಮತ್ತು ಕರಾವಳಿಯಲ್ಲಿ ಪ್ರಚಲಿತವಿರು ವುದು ಪಡುವಲಪಾಯ. ಪಡುವಲಪಾಯ ದಲ್ಲಿ ೩ವಿಭಾಗಗಳಿವೆ. ಅವು ತೆಂಕುತಿಟ್ಟು, ಬಡಗು- ತಿಟ್ಟು ಮತ್ತು ಉತ್ತರದ ತಿಟ್ಟು ಬಡಾಬಡಗು

ನಮ್ಮಲ್ಲಿ ಉತ್ತರದ ತಿಟ್ಟುಶೈಲಿಯ ಬಯಲಾಟ ಗಳು ಕಂಡು ಬಂದರೆ, ಉಡುಪಿಯಲ್ಲಿ ಬಡಗು ತಿಟ್ಟು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆ ಗಳಲ್ಲಿ ತೆಂಕು ತಿಟ್ಟು ಶೈಲಿಯ ಯಕ್ಷಗಾನ ವನ್ನು ಕಾಣಬಹುದು. ವೇಷಭೂಷಣಗಳ ವಿನ್ಯಾಸ, ನೃತ್ಯದ ಶೈಲಿ, ಭಾಗವತಿಕೆ ಮತ್ತು ಹಿಮ್ಮೇಳಗಳಲ್ಲಿ ಕಂಡುಬರುವ ಕೆಲವು ವ್ಯತ್ಯಾಸ ಗಳ ಆಧಾರದ ಮೇಲೆ ಈ ವಿಂಗಡಣೆ ಯನ್ನು ಮಾಡಲಾಗಿದೆಯೇ ಹೊರತು ಯಕ್ಷಗಾನದ ಮೂಲತತ್ವ, ಆಶಯಗಳು ೩ ಶೈಲಿಗಳಲ್ಲಿಯೂ ಒಂದೇ ಆಗಿರುತ್ತದೆ.

ನಮ್ಮಜಿಲ್ಲೆಯು ಪ್ರತಿಭೆಗಳ ಆಗರ. ಅದರಲ್ಲೂ ಈ ಕಲೆಯ ಸೊಗಡನ್ನು ಉಸಿರಾಗಿಸಿಕೊಂಡು ಎಲ್ಲ ಅಭಿಮಾನಿಗಳ ಅಚ್ಚುಮೆಚ್ಚಿನ ಯಕ್ಷಗಾನ ಕಲಾವಿದರ ಕಿರುಪರಿಚಯ ಮಾಡಿ ಕೊಡುವ ಪ್ರಥಮ ಪತ್ರಿಕೆ ಪ್ರಕಟವಾಗಿದ್ದು ವಿಶೇಷ. ‘ಒಂದಾಣೆ ಮಾಲೆ’ಎಂಬ ಹೆಸರಿನ ಈ ಕಿರು ಹೊತ್ತಿಗೆ ವರ್ಷ೨೦/೦೧/೧೯೫೬ ರಲ್ಲಿ ಪ್ರಕಟ ಗೊಂಡಿತು. ಇದರ ಬೆಲೆ ಒಂದಾಣೆ ಮಾತ್ರ. ಬರೆದವರು ಶ್ರೀವಿಘ್ನೇಶ್ವರ ಶರ್ಮಾ ತದ್ದಲಸೆ ಸಿರಸಿಯವರು.
ನಮ್ಮ ಉತ್ತರ ಕನ್ನಡ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದ ಕಲಾವಿದರು ಸಾಕಷ್ಟು …ಅವರಲ್ಲಿ ಇವರು ಕೂಡ…
ಕೆರೆಮನೆ ಶಿವರಾಮ ಹೆಗಡೆ

ಕೆರೆಮನೆ ಶಿವರಾಮ ಹೆಗಡೆ ಯಕ್ಷಗಾನದ ಶ್ರೇಷ್ಠ ಕಲಾವಿದರು, ಭಾರತದಾದ್ಯಂತ ಮತ್ತು ವಿದೇಶ ಗಳಲ್ಲಿ ಪ್ರದರ್ಶನಗಳನ್ನು ನೀಡಿರುವ
‘ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ‘ ತಂಡದ ಸ್ಥಾಪಕರು.”ರಾಷ್ಟ್ರಪತಿ ಪ್ರಶಸ್ತಿ“ಪಡೆದ ಮೊದಲ ಯಕ್ಷಗಾನ ಕಲಾವಿದ ಇವರು. ಅವರಿಗೆ 1970 ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು.
ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯ “ಕೆರೆಮನೆ” ಎಂಬ ದೂರದ ಊರಿನಲ್ಲಿ ಜನಿಸಿದರು.
ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ

ಹೊನ್ನಾವರದ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಯವರು ಇಡೀ ದೇಶ ವಿದೇಶದಾದ್ಯಂತ ಜನಪ್ರಿಯ ಕಲಾವಿದರು, ಯಕ್ಷಗಾನದ ಮೇರು ನಟ. ಅದ್ವಿತೀಯ ಕಲಾಕಾರ ನಟನೆ ಅದ್ಭುತ. ಇವರು “ಪದ್ಮಶ್ರೀ” ಪ್ರಶಸ್ತಿ ವಿಜೇತರು ಹಾಗೂ “ರಾಜ್ಯೋತ್ಸವ” ಪ್ರಶಸ್ತಿ ವಿಜೇತರೆಂಬುದು ಹೆಮ್ಮೆ.
ಕೆರೆಮನೆ ಶಂಭು ಹೆಗಡೆ

ದಿ.ಕೆರೆಮನೆ ಶಂಭು ಹೆಗಡೆ (ಅಕ್ಟೋಬರ್ ೬, ೧೯೩೮ – ಫೆಬ್ರುವರಿ ೩, ೨೦೦೯) ಯಕ್ಷಗಾನ ಲೋಕದ ಮಹಾನ್ ವಿದ್ವಾಂಸರಾಗಿ, ಕಲಾವಿದ ರಾಗಿ ವಿಶ್ವದಾದ್ದಂತ್ಯ ಪ್ರಸಿದ್ಧರಾಗಿದ್ದರು.
ಕೆರೆಮನೆ ಮಹಾಬಲ ಹೆಗಡೆ

ದಿ.ಕೆರೆಮನೆ ಮಹಾಬಲ ಹೆಗಡೆಯವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1991), ಚೆನ್ನೈಯ ಶ್ರುತಿ ಸಂಸ್ಥೆ, ಬೆಂಗಳೂರಿನ ಗಾನಕಲಾ ಪರಿಷತ್, ಕರ್ನಾಟಕ ಜನಪದ- ಯಕ್ಷಗಾನ ಅಕಾಡೆಮಿಯವರ ಜೀವನ ಸಾಧನೆ ಪ್ರಶಸ್ತಿ (2005) ಸೇರಿದಂತೆ ಹಲವು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಶ್ರೀ ಮಹಾಬಲ ನಾಯ್ಕರು

ಶ್ರೀಮಹಾಬಲ ನಾಯ್ಕರು ತಮ್ಮ ನಿರಂತರ ವಾದ ನಲವತ್ತೇಳು ವರ್ಷಗಳ ಕಲಾಸೇವೆಯಿಂ ದಾಗಿ ಈ ಕ್ಷೇತ್ರದ ಪ್ರಬುದ್ಧ ಕಲಾವಿದರಾಗಿ ಗುರುತಿಸಿ ಕೊಂಡಿದ್ದಾರೆ. ಇವರ ಈ ಕಲಾಸೇವೆ ಯನ್ನು ಗಮನಿಸಿ, ಮೆಚ್ಚಿಕೊಂಡ ವಿವಿಧ ಸಂಘ ಸಂಸ್ಥೆಗಳು ಹಲವಾರು ಸನ್ಮಾನ, ಗೌರವ ಹಾಗೂ ಪುರಸ್ಕಾರವನ್ನು ನೀಡಿ ಇವರ ನ್ನು ಗೌರವಿಸುತ್ತ ಬಂದಿವೆ.

5 ರಿಂದ 60ವರ್ಷ ವಯೋಮಾನದಲ್ಲಿರುವ ಸಾಕಷ್ಟು ಮಕ್ಕಳು, ಯುವತಿಯರು, ಮಹಿಳೆ ಯರು ಯಕ್ಷಕಲೆಯನ್ನು ನೆಚ್ಚಿಕೊಂಡು ವೇಷ ಕಟ್ಟಿದ್ದಾರೆಂದರೆ ಅದೊಂದು ಹೆಮ್ಮೆಯ ಸಂಗತಿ ಯೇ ಸರಿ. ಪ್ರಜ್ಞಾ ಮತ್ತಿಹಳ್ಳಿ, ಸುಮಾ ಗಡಿಗೆ ಹೊಳೆ, ನಿರ್ಮಲಾ ಹೆಗಡೆ, ಅರ್ಪಿತಾ ಹೆಗಡೆ, ನಮ್ಮ ಬಾಲಪ್ರತಿಭೆ ತುಳಸಿ ಹೆಗಡೆ ಅಂಬೆಗಾಲಿ ಡುತ್ತಲೇ ಯಕ್ಷರಂಗಕ್ಕಿಳಿದು ಈಗ ರಾಜ್ಯದೆಲ್ಲೆಡೆ ಯಕ್ಷಪ್ರಯೋಗ ನೀಡುತ್ತಿರು ವುದು ಹೆಮ್ಮೆಯ ಸಂಗತಿ. ಬಾಲ್ಯದಲ್ಲಿಯೇ ಯಕ್ಷಗಾನದ ವೇಷ ಕಟ್ಟಿದ ಮಾದರಿ ಪ್ರತಿಭೆ ಎಂದರೆ ಅದು ಶಿರಸಿ ಯ ಪ್ರಜ್ಞಾ ಮತ್ತಿಹಳ್ಳಿ, ಆಗ ಅವರು ಆರನೇ ತರಗತಿಯಲ್ಲಿ ಓದುತ್ತಿದ್ದರು.

ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಕಲಾವಿದರು, ವಿದ್ವಾಂಸರು ಪ್ರತಿ ವರ್ಷ ಕರ್ನಾಟಕ ಯಕ್ಷಗಾನ ಅಕಾಡೆಮಿಯವರು ನೀಡುವ ಪ್ರಶಸ್ತಿಗೆ ಭಾಜನರಾಗಿ ಗೌರವಿಸಲ್ಪಟ್ಟಿದ್ದಾರೆ.

ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನ. “ಶ್ರೀ ಯಕ್ಷಗಾನ ಕಲಾಮೇಳ ಸಿರಸಿ” ಹೊಸ ದಾಗಿ ರೂಪಿತವಾಗಿದೆ. ಕರಾವಳಿಯಾಚೆಗೂ ಯಕ್ಷಗಾನ ಇಂದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಕೊಂಡಿದೆ. ಹೊರ ರಾಜ್ಯ, ಹೊರದೇಶಗಳಲ್ಲಿರುವ ಯಕ್ಷಗಾನದ ಅಭಿಮಾನಿಗಳೆ ಹೆಮ್ಮೆ. ಯಕ್ಷಗಾನ ಎಂಬುದು ಗಂಡುಮಕ್ಕಳ ಕಲೆ ಎಂಬ ಮಾತಿದೆ, ಆದರೆ ಯಕ್ಷಗಾನ ಇಂದು ಹೆಣ್ಣು ಮಕ್ಕಳ ಕಲೆ ಯೂ ಕೂಡ ಹೌದು. ಹೆಣ್ಣುಮಕ್ಕಳು ಯಕ್ಷಗಾನ ಕ್ಷೇತ್ರದಲ್ಲಿ ಅದ್ವಿತೀಯವಾದ ಸಾಧನೆಯನ್ನು ಮಾಡುತ್ತಿದ್ದಾರೆ.

ನಮ್ಮ ಜಿಲ್ಲೆಯ ಪ್ರಗತಿ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ನಿಂತಿದ್ದು, ಅದು ನಮಗೆಲ್ಲ ಅಚ್ಚಳಿಯದ ಸ್ವರ್ಗವೆಂದರೆ ತಪ್ಪಾಗಲಾರದು.
✍️ ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ
ಯಕ್ಷಗಾನದ ಕುರಿತು ಸಮಗ್ರ ಮಾಹಿತಿಯುಳ್ಳ ಅದ್ಭುತ ಲೇಖನ ಶಿವಲೀಲಾ👏👏👌
LikeLike
Yashoda Bhat Dubai
LikeLike
ಯಕ್ಷಗಾನದ ಕುರಿತು ಅಪಾರ ಮಾಹಿತಿ ಸಂಗ್ರಹ ಪ್ರಸಂಶನೀಯ. ಪ್ರಾಸಂಗಿಕವಾಗಿ ಚಿತ್ರ ಹಾಗೂಸಾಹಿತ್ಯದ ಪ್ರಸ್ತುತಿ ಬರಹಕ್ಕೆ ಮೆರಗನ್ನು ನೀಡಿದೆ.ಸರಳ,ಸಹಜ ಪ್ರಸ್ತುತಿ ತಮ್ಮ ಪ್ರೌಢಿಮೆಗೆ ಸಾಕ್ಷಿಯಾಗಿದೆ.
LikeLiked by 1 person
ಯಕ್ಷಗಾನದ ಬಾಲ್ಯದ ನೋಟದೊಂದಿಗೆ ಯಕ್ಷಗಾನದ ವಿವಿಧ ಮಜಲುಗಳ ಆಯಾಮಗಳನ್ನೊಳಗೊಂಡ ತಮ್ಮ ಲೇಖನ ಅಧ್ಯಯನಕ್ಕೆ ದಾರಿದೀಪದಂತಿದೆ. ಆಕರ್ಷಕವಾದ ಚಿತ್ರಗಳು..
ಶಿವರಾಮ ಕಾರಂತರ ಯಕ್ಷಗಾನ ಬಯಲಾಟ ಪುಸ್ತಕ ಉಲ್ಲೇಖ ಆಧಾರ ಸಹಿತವಾದ ವಿಶ್ಲೇಷಣೆ ಎಲ್ಲವೂ ಇಷ್ಟವಾಯಿತು.
ಅಧ್ಯಯನದಿಂದ ಒಳಗೊಂಡ ಲೇಖನ!
ಡಿ.ಎಸ್.ನಾ.
LikeLike
ಯಕ್ಷಗಾನ ಬಯಲಾಟದ ಸಮಗ್ರ ಚಿತ್ರಣವನ್ನು ಸ್ವಲ್ಪ ಶಬ್ದ ಗಳಲ್ಲಿ ಹಿಡಿದಿಡುವಲ್ಲಿ ಈ ಲೇಖನವು ಯಶಸ್ವಿಯಾಗಿ ಮೂಡಿ ಬಂದಿದೆ.ಮಲೆನಾಡಿನ ಪರಂಪರೆಯ ಯಶೋಗಾ ಥೆಯನ್ನು ಸಾರುವಂಥಹ ಇಂಥಹ ಇನ್ನೂ ನನ್ನ ಆತ್ಮೀಯ ಗೆಳತಿಯಿಂದ ಮೂಡಿಬರಲಿ ಎಂದು ಬಯಸುತ್ತೇನೆ.👌👌👌✌✌✌💝
LikeLike
ಉತ್ತಮವಾದ ಪ್ರಶಂಸೆಗೆ ಅರ್ಹವಾದ ಲೇಖನ ನಮ್ಮ ಈ ಮಲೆನಾಡು ಭಾಗದಲ್ಲಿ ಮನೋರಂಜನೆಗಾಗಿರಬಹುದು , ಅಥವಾ ಕಲಾ ವೈಭವದ ರೂಪದಲ್ಲಿಯೂ ಬಹಳಷ್ಟು ವ್ಯಕ್ತಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಯಕ್ಷಗಾನ ಮಹತ್ತರವಾದಂತಹ ವೇದಿಕೆಯಾಗಿದೆ ಇದರ ಸಂಪೂರ್ಣ ಮಾಹಿತಿಯನ್ನು ಸಂಕ್ಷಿಪ್ತವಾಗಿ ತಿಳಿಸಿರುವಂತಹ ನನ್ನ ಆತ್ಮೀಯ ಗೆಳತಿ ಶಿವಲೀಲಾ ನಿಜವಾಗ್ಲೂ ನಿಮ್ಮ ಈ ಬರಹ ಪ್ರಶಂಸೆಗೆ ಪಾತ್ರವಾಗಿದೆ ಇದು ಹೆಮ್ಮೆಯ ವಿಷಯ.
LikeLike
ಉತ್ತಮವಾದ ಪ್ರಶಂಸೆಗೆ ಅರ್ಹವಾದ ಲೇಖನ ನಮ್ಮ ಈ ಮಲೆನಾಡು ಭಾಗದಲ್ಲಿ ಮನೋರಂಜನೆಗಾಗಿರಬಹುದು , ಅಥವಾ ಕಲಾ ವೈಭವದ ರೂಪದಲ್ಲಿಯೂ ಬಹಳಷ್ಟು ವ್ಯಕ್ತಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಯಕ್ಷಗಾನ ಮಹತ್ತರವಾದಂತಹ ವೇದಿಕೆಯಾಗಿದೆ ಇದರ ಸಂಪೂರ್ಣ ಮಾಹಿತಿಯನ್ನು ಸಂಕ್ಷಿಪ್ತವಾಗಿ ತಿಳಿಸಿರುವಂತಹ ನನ್ನ ಆತ್ಮೀಯ ಗೆಳತಿ ಶಿವಲೀಲಾ ನಿಜವಾಗ್ಲೂ ನಿಮ್ಮ ಈ ಬರಹ ಪ್ರಶಂಸೆಗೆ ಪಾತ್ರವಾಗಿದೆ ಇದು ಹೆಮ್ಮೆಯ ವಿಷಯ.
LikeLike
ಯಕ್ಷಗಾನ ಕಲೆ ನಡೆದುಬಂದ ದಾರಿ,ನೆಲೆ ಹಿನ್ನೆಲೆಯನ್ನ ಸೊಗಸಾಗಿ ಸಮಗ್ರವಾಗಿ ಚಿತ್ರಸಹಿತವಾಗಿ ತಿಳಿಸಿಕೊಟ್ಟಿದ್ದೀರಿ.
ಸುಬ್ರಾಯ ಬಿದ್ರೆಮನೆ
LikeLike
ಯಕ್ಷಗಾನ ಅಧ್ಬುತ ಕಲೆ ಅದರ ಕುರಿತಾದ ಲೇಖನ ಓದಿ ಸವಿಸ್ತಾರವಾಗಿ ಅರ್ಥ ಮಾಡಿಕೊಳ್ಳಲು ಹಾಗೂ ತಿಳಿಯಬೇಕೆನ್ನುರಿಗೆ ಸೂಕ್ತ ಬರಹ ಸಂಗ್ರಹ ಯೋಗ್ಯ ಲೇಖನ
LikeLike
ಕರಾವಳಿಯ ಪ್ರಮುಖ ಕಲೆ ಯಕ್ಷಗಾನದ ಬಗ್ಗೆ ವಿವರವಾಗಿ, ಚಂದದ ನಿರೂಪಣೆಯೊಂದಿಗೆ ಬರೆದಿರುವಿರಿ. ಸುಂದರವಾದ ಲೇಖನ.ಅಂದಿನ ಬಯಲಾಟವನ್ನು ನೋಡಿ ಕಣ್ತುಂಬಿಕೊಂಡ, ಅನೇಕ ರಸಮಯ ಕ್ಷಣಗಳು ಮನದಂಚಿನಿಂದ ಹಾದು ಹೋದವು ಗೆಳತಿ.
LikeLike
ಯಕ್ಷಗಾನದ ಕಲೆಯ ಕುರಿತು ವಿವರಿಸಿದ ರೀತಿ ಅದ್ಭುತ.
ಸುಂದರವಾಗಿ ವಣಿ೯ಸಿರುವೆ ಗೆಳತಿ. ಸೂಪರ್.
LikeLike
ಬಾಲ್ಯದ ನೆನಪಿನೊಂದಿಗೆ,ಸಾಂಸ್ಕೃತಿಕ ಲೋಕವನ್ನೇ ಅನಾವರಣ ಮಾಡಿದ್ದೀರಿ.ಕಲೆ ಹಾಗೂ ಕಲಾವಿದರ ಪರಿಚಯದೊಂದಿಗೆ ಮತ್ತೊಂದು ತಲೆಮಾರಿಗೂ ನೆನಪಿಸುವ,ಅರಿಯುವ ಸುಧೆಯಾಗಿದೆ ತಮ್ಮೀ ಬರಹ.
LikeLiked by 1 person
ಯಕ್ಷಗಾನದ ಎಲ್ಲಾ ಮಗ್ಗುಲುಗಳನ್ನು ಪರಿಚಯಿಸಿದ್ದಿರಿ ನಮ್ಮ ಕಲೆ ಸಂಸ್ಕೃತಿಯ ಬಗ್ಗೆ ಬಹಳಷ್ಟು ವಿಷಯಗಳು ನಿಮ್ಮ ಲೇಖನಗಳಿಂದ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಧನ್ಯವಾದಗಳು ಮೆಡಮ್.
,
LikeLiked by 1 person
ಮೇಡಂ, ತುಂಬಾ ಅಧ್ಯಯನ ಪೂರ್ಣ ಲೇಖನ. ವಿವಿಧ ಆಯಾಮಗಳಲ್ಲೂ ಸಂಶೋಧನೆ ನಡೆಸಲು ಹತ್ತು ಹಲವು ಸುಳಿವುಗಳನ್ನು ಒಳಗೊಂಡಿದೆ.
LikeLiked by 1 person
ಯಕ್ಷಗಾನ ಕಲೆ ಸಾಹಿತ್ಯ ಹಾಗೂ ಕಲಾವಿದರ ಕುರಿತು ಸಮಗ್ರ ಮಾಹಿತಿ ನೀಡಿದ್ದ ಕ್ಕೆ ಮತ್ತು ಕಲಾವಿದರ ಪರಿಚಯ ಹೆಮ್ಮೆಯೆನಿಸಿತು.ಸುಂದರ ಲೇಖನ
LikeLiked by 1 person
ಗುಡ್, ಗುಡ್ ,ಗುಡ್,
ಯಕ್ಷಗಾನವೆಂಬ ಆಳವಾದ ಪ್ರಪಂಚಕ್ಕೆ ಕೈ ಹಾಕಿ” ಸೈ “ಎನಿಸಿಕೊಂಡ ನಿನಗೆ ಹೃತ್ಪೂರ್ವಕ ಅಭಿನಂದನೆಗಳು .ವನ್ಸ್ ಮೋರ್ ,
ವೆರಿ, ವೆರಿ ,ಗುಡ್.
LikeLiked by 1 person
ಗುಡ್, ಗುಡ್ ,ಗುಡ್,
ಯಕ್ಷಗಾನವೆಂಬ ಆಳವಾದ ಪ್ರಪಂಚಕ್ಕೆ ಕೈ ಹಾಕಿ” ಸೈ “ಎನಿಸಿಕೊಂಡ ನಿನಗೆ ಹೃತ್ಪೂರ್ವಕ ಅಭಿನಂದನೆಗಳು .ವನ್ಸ್ ಮೋರ್ ,
ವೆರಿ, ವೆರಿ ,ಗುಡ್.
LikeLike
Soooooper ಲೇಖನರೀ ಮೇಡಂ.ನಮ್ಮ ಹೆಮ್ಮೆ ಈ ಕಲೆ.ಇದರ ಬಗ್ಗೆ ಇಷ್ಟೊಂದು ನಿದರ್ಶನಗಳೊಂದಿಗೆ ಬಿಂಬಿಸಿದ್ದು ತಮ್ಮ ಅದ್ಭುತ ಪ್ರತಿಭೆಯ ಸಾಕಾರ.💐💐💐🙏🙏🙏🙏🌺🌺🌺🌺🌺🌺🌻🌹🌹
LikeLiked by 1 person
Soooooper ಲೇಖನರೀ ಮೇಡಂ.ನಮ್ಮ ಹೆಮ್ಮೆ ಈ ಕಲೆ.ಇದರ ಬಗ್ಗೆ ಇಷ್ಟೊಂದು ನಿದರ್ಶನಗಳೊಂದಿಗೆ ಬಿಂಬಿಸಿದ್ದು ತಮ್ಮ ಅದ್ಭುತ ಪ್ರತಿಭೆಯ ಸಾಕಾರ.💐💐💐🙏🙏🙏🙏🌺🌺🌺🌺🌺🌺🌻🌹🌹
LikeLike
ಯಕ್ಷಗಾನ ದ ಬಗ್ಗೆ ಇಷ್ಟೊಂದು ಆಳವಾದ ಅಧ್ಯಯನ, ಅದರ ಒಳ ಹೊರಗುಗಳ ಬಗ್ಗೆ ಮಾಹಿತಿ ಸಂಗ್ರಹ ವಾಹ್, ಯಕ್ಷಗಾನದ ಬಗ್ಗೆ ಇದ್ದ ಆಸಕ್ತಿ, good ಅತ್ಯುತ್ತಮ ಲೇಖನ.
ನಾಗರಾಜ್ ಆಚಾರಿ ಕುಂದಾಪುರ
LikeLiked by 1 person
ಓದಿದೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಂಗ್ರಹ ಯೋಗ್ಯ ಲೇಖನ
ಶ್ರೀ ಎನ್ ಆರ್.ಹೆಗಡೆ ಬಿ.ಇ.ಓ ಯಲ್ಲಾಪುರ
LikeLiked by 1 person
ಯಕ್ಷಗಾನದ ಬಗ್ಗೆ ಅತ್ಯುತ್ತಮ ಮಾಹಿತಿಯನ್ನು ನೀಡುವ ಸಂಗ್ರಹಯೋಗ್ಯ ರಚನೆ. ಸೂಪರ್ ಮೇಡಂ
LikeLike