ನಮ್ಮ ಜಿಲ್ಲೆ ಸರ್ವಜನಾಂಗದ ಶಾಂತಿಯ ತೋಟ ದ ಹಾಗೆ ಅದರಲ್ಲೂ ಯಲ್ಲಾಪುರ ಎಲ್ಲರಿಗೂ ಆತ್ಮೀಯ ತವರೂರಾಗಿದೆ.ಸಿದ್ದಿ ಜನಾಂಗ ಬಹು ವಿಶಿಷ್ಟವಾದ ಸಂಸ್ಕೃತಿಯನ್ನು ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಅಂಕೋಲಾ, ಮುಂಡ್ಗೋಡ ಮತ್ತು ಸಿರಸಿ ತಾಲೂಕುಗಳಲ್ಲಿ ನೆಲೆಸಿರುವರು. ಸಿದ್ದಿ ಜನಾಂಗ ದ ಮುಖ್ಯ ಕಸಬು ವ್ಯವಸಾಯವನ್ನೂ, ಕೆಲವರು ಮನೆ ಆಳುಗಳಾಗಿ, ಕೂಲಿಗಳಾಗಿ ಕೆಲಸ ಮಾಡು ವುದು,ಕಾಡಿನ ಸಂಪನ್ಮೂಲಗಳ ಸಂಪೂರ್ಣ ಅರಿವು, ಕಾಡುಜೇನು ಸಂಗ್ರಹ, ಮುರುಗಲ ಇವು ಸರ್ವೇಸಾಮಾನ್ಯವಾಗಿದ್ದು, ಇದನ್ನೇ ಮಾಡುವರೆಂದು ನಿಶ್ಚಿತವಾಗಿ ಹೇಳಲಾಗದು. ಗೋವಾದಿಂದ ಕರ್ನಾಟಕಕ್ಕೆ ವಲಸೆ ಬಂದ ಮೊದಲ ಸಿದ್ದಿ ಜನಾಂಗವು, ಉತ್ತರ ಕನ್ನಡ ಜಿಲ್ಲೆ ಯ ಕಾಡುಗಳನ್ನು ತಮ್ಮ ವಾಸಸ್ಥಾನ ವಾಗಿ ಪರಿ ವರ್ತಿಸಿಕೊಂಡು ಅದೇ ಸ್ಥಳದಲ್ಲಿ ವ್ಯವಸಾಯ ವನ್ನು ಮಾಡತೊಡಗಿದರು.

ಸಿದ್ದಿ, ಸಿದ್ಧಿ, ಸಿದಿ, ಶೀದಿ, ಹಬ್ಬಿ,ಸವಾಹಿಲಿ ಎಂದು ಮುಂತಾದ ಹೆಸರುಗಳಿಂದ ಗುರ್ತಿಸಲ್ಪ ಡುವ ಇವರು ಮೂಲತಃ ಪೂರ್ವ,ಆಗ್ನೇಯ ಆಫ್ರಿಕಾದ ಬಂಟು ಸಮುದಾಯಕ್ಕೆ ಸೇರಿದವ ರು ಎಂಬ ವಿಷಯವನ್ನು ಮಾನವಶಾಸ್ತ್ರಜ್ಞರು ಈಗಾಗಲೇ ಧೃಢೀಕರಿಸಿದ್ದಾರೆ. ಭಾರತ ದೇಶಕ್ಕೆ ಬಂದಿದ್ದ ಪೋರ್ಚುಗೀಸರು, ತಮ್ಮ ಕಾರ್ಯಾ ನುಕೂಲಕ್ಕಾಗಿ ಈ ಜನಾಂಗದವರನ್ನು ಆಫ್ರಿಕಾ ಖಂಡದಿಂದ ಇಲ್ಲಿಗೆ ಗುಲಾಮರಾಗಿ ಸಾಗಿಸಿದ್ದರು. ಈ ಜನಾಂಗದ ಹಲವಾರು ಮಂದಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಅನಂತರ ಪಾಕಿಸ್ತಾನಕ್ಕೆ ವಲಸೆ ಹೋಗಿ, ಸಿಂಧ್‍ನ ಕರಾಚಿಯಲ್ಲಿ ನೆಲೆ ಕಂಡರು.
ಸಿದ್ದಿ ಎಂಬ ಹೆಸರ ಹಿಂದೆ ಅನೇಕ ಕಾಲ್ಪನಿಕ ಕಥೆಗಳಿವೆ. ಒಂದು ವಿಶ್ಲೇಷಣೆಯ ಪ್ರಕಾರ, ಉತ್ತರ ಆಫ್ರಿಕಾದಲ್ಲಿ ಮರ್ಯಾದೆ ಪ್ರತೀಕ ವಾಗಿ ಉಪಯೋಗಿಸುವ ಪದ ಸಿದ್ದಿ. ಇದು, ಭಾರತದ ಲ್ಲಿ ಮತ್ತು ಪಾಕಿಸ್ತಾನದಲ್ಲಿ ವಾಡಿಕೆಯಲ್ಲಿರುವ ‘ಸಾಹೆಬ್‘ ಪದಕ್ಕೆ ಸಮಾನವಾಗಿದೆ ಎಂದು ಹೇಳಲಾಗಿದೆ. ಎರಡನೆಯ ವಿಶ್ಲೇಷಣದ ಪ್ರಕಾರ, ಅರಬರು ಈ ಸಿದ್ದಿ ಬುಡುಕಟ್ಟಿಗೆ ಸೇರಿದ ಜನರ ನ್ನು ಭಾರತಕ್ಕೆ ಕರೆದೊಯ್ದರು. ಈ ಅರಬರು ‘ಸಯ್ಯಿದ್‘ ಎಂಬ ಹೆಸರನ್ನು ಹೊಂದಿದ್ದರು. ಹಾಗಾಗಿ ಈ ಜನಾಂಗಕ್ಕೆ ಸಿದ್ದಿ ಎಂಬ ಹೆಸರು ಬಂತು ಎಂಬುದು ಪ್ರಚಲಿತದಲ್ಲಿದೆ. ಸಿದ್ದಿ ಎಂಬ ಜನಾಂಗಕ್ಕಿರುವ ಮತ್ತೊಂದು ಹೆಸರು ‘ಹಬ್ಷಿ’. ಈ ಶಬ್ದವೂ ಕೂಡ ಅರಬಿಕ್ ಭಾಷೆಯ ಮೂಲ ವನ್ನು ಹೊಂದಿದೆ ಎಂದು ಹೇಳಲಾಗಿದೆ.
ಸಿದ್ದಿ ಬುಡುಕಟ್ಟಿನವರು, ಪ್ರಮುಖವಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಕೆಲವರು ಕೊಂಕಣಿ ಮತ್ತು ಮರಾಠಿ ಭಾಷೆಗಳನ್ನು ಮಾತ ನಾಡುತ್ತಾರೆ. ಸಿದ್ದಿಯರು ಹಿಂದು ಧರ್ಮಕ್ಕೂ, ಕ್ರೈಸ್ತ ಧರ್ಮಕ್ಕೂ, ಇಸ್ಲಾಮ್ ಧರ್ಮಕ್ಕೂ ಸೇರಿ ದವರಾಗಿದ್ದಾರೆ. ಹಳಿಯಾಳ, ಮುಂಡಗೋಡ ತಾಲೂಕಿನಲ್ಲಿ ಕ್ರೈಸ್ತ ಮತ್ತು ಇಸ್ಲಾಮ್ ಧರ್ಮ ವನ್ನು ಪಾಲಿಸುವ ಸಿದ್ದಿಯರನ್ನು ಕಂಡರೆ, ಯಲ್ಲಾಪುರ ಮತ್ತು ಅಂಕೋಲಾದಲ್ಲಿ ಹಿಂದೂ ಧರ್ಮದವರನ್ನು ಕಾಣಬಹುದು. ಸಿದ್ದಿಯರಲ್ಲಿ ಎದ್ದು ಕಾಣುವ ಒಂದು ವಿಶೇಷವೆಂದರೆ, ಇವರಲ್ಲಿ ಬೇರೆ ಬೇರೆ ಮತದವರು ಇದ್ದರೂ ಕೂಡ, ಮದುವೆಯನ್ನು ಮಾಡುವಾಗ ಧರ್ಮ ಗಳನ್ನು ಪರಿಗಣಿಸುವುದಿಲ್ಲ. ಸಿದ್ದಿಯರು ಯಾವ ಮತ ಭೇದವಿಲ್ಲದೆ ಮಾಡುವ ಪೂಜೆ ಹಿರಿಯರ ಪೂಜೆ, ತಾವು ತಮ್ಮ ಪೂರ್ವಜ ರನ್ನು ನೆನಸಿ ಮಾಡುವ ಪೂಜೆ. ಈಗಾಗಲೇ ಮರಣವನ್ನು ಹೊಂದಿದ್ದರೂ ಸಹ, ಅವರು ತಮ್ಮ ಬಳಿಯೇ ಇದಾರೆ ಎಂದು ಭಾವಿಸಿ ಮಾಡುವ ಪೂಜೆ ಇದು. ಕುಟುಂಬದಲ್ಲಿ ನಡೆಯುವ ಪ್ರತಿಯೊಂದು ವಿಷಯವೂ ಅವರಿಗೆ ತಿಳಿದಿರುತ್ತದೆಯೆಂದು ಭಾವಿಸಿ, ಮದುವೆ, ಹುಟ್ಟು, ಸಾವು ಮತ್ತು ಇತರೆ ಮುಖ್ಯ ಘಟನೆಗಳಲ್ಲಿ ಅವರನ್ನು ನೆನೆಯಲಾ ಗುತ್ತದೆ. ಇದು ಮರಣ ಹೊಂದಿರುವ ಜೀವಿಗಳಿಗೆ ನಮಸ್ಕಾರವನ್ನು ಅರ್ಪಿಸುವ ರೀತಿ. ಈ ಒಂದು ಸಂದರ್ಭದಲ್ಲಿ ಎಲ್ಲಾ ಸಂಬಂಧಿಕರೂ ನೆರೆಯು ವುದು ಕಡ್ಡಾಯ. ಇದರಿಂದ ಸಂಬಂಧಗಳು ಬೆಳೆಯುತ್ತವೆ ಎಂಬ ನಂಬಿಕೆ.
ಭಾರತ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಗಳಲ್ಲಿ ಸಿದ್ದಿಯರನ್ನು ಕಾಣಬಹುದಾದ ರಾಜ್ಯ ಕರ್ನಾಟಕ. ಇತ್ತೀಚಿನ ಗಣನೆಯ ಪ್ರಕಾರ, ಕರ್ನಾಟಕದಲ್ಲಿ ಸುಮಾರು ೩೭೦೦ ಸಿದ್ದಿ ಕುಟುಂಬಗಳು ವಾಸವಾಗಿವೆ; ಎಂದರೆ, ಸುಮಾ ರು ೧೮೦೦೦ ಜನರನ್ನು ಕಾಣಬಹು ದು. ಗುಜರಾತಿನಲ್ಲಿ ೧೦೦೦೦ ಮತ್ತು ಹೈದರಾಬಾದಿ ನಲ್ಲಿ ೧೨೦೦೦ ಜನರಿದ್ದಾರೆ. ಕೆಲವರು ಲಕ್ನೊವ್ ದೆಹಲಿ ಮತ್ತು ಕಲ್ಕತ್ತಾದಲ್ಲಿ ಕೂಡ ಬೀಡು ಬಿಟ್ಟಿದ್ದಾರೆ. ೧೦೦೦ಕ್ಕಿಂತ ಕಡಿಮೆ ಸಿದ್ದಿಯರು ಶ್ರೀಲಂಕಾದಲ್ಲಿ ಇದ್ದಾರೆ.

ಕರ್ನಾಟಕದಲ್ಲೂ ಸಹ ಇವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ನಿರ್ಲಕ್ಷಿಸಲಾಗಿದೆ. ೧೯೮೪ನಲ್ಲಿ, ನಮ್ಮ ರಾಜ್ಯದ ದಾಂಡೇಲಿಯ ಲ್ಲಿರುವ ಗ್ರಾಮೀಣ ಕಲ್ಯಾಣ ಸಮಿತಿಯವರು, ಕರ್ನಾಟಕ ಸಿದ್ದಿ ಅಭಿವೃದ್ಧಿ ಸಂಘವನ್ನು ಪ್ರಾರಂಭಿಸಿದರು. ಈ ಸಂಘದ ಮೂಲಕ, ಸಿದ್ದಿ ಜನರನ್ನು ಒಟ್ಟುಗೂಡಿಸುವ ಮತ್ತು ಅವರಿಗೆ ಉದ್ಯೋಗದ ಸದವಕಾಶ ನೀಡುವ ಮಹತ್ಕಾ ರ್ಯ ನಡೆಯುತ್ತಿದೆ. ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ರಾಗಿರುವ ವಿ. ಸುಬ್ಬಣ್ಣನವರೂ ಸಹ ಈ ಕೆಲಸ ದಲ್ಲಿ ಭಾಗಿಯಾಗಿರುವರು. ಜನವರಿ ೮, ೨೦೦೩ ರಲ್ಲಿ, ಕೇಂದ್ರ ಸರ್ಕಾರ ಸಿದ್ದಿ ಜನಾಂಗವನ್ನು ಶೆಡ್ಯೂಲ್ ಟ್ರೈಬ್ಸ್ ಪಟ್ಟಿಯಲ್ಲಿ ಪರಿಗಣಿಸಿತು. ಇದರಿಂದಾಗಿ ಈ ಜನಾಂಗ ಇಂದು ಸಂವಿಧಾನದ ಪ್ರಕಾರ ಶಕ್ತರಾಗಿರುತ್ತಾರೆ. ನಿರಾಶ್ರಿತ ಸಿದ್ದಿಯರಿಗೆ ವಸತಿ ಯೋಜನೆ, ಉದ್ಯೋಗಾವಕಾಶ, ಶಿಕ್ಷಣ, ವಿದ್ಯುತ್‌ಶಕ್ತಿ, ಆಸ್ಪತ್ರೆಗಳು, ರಸ್ತೆಗಳು, ಮುಂತಾದ ಸೌಲಭ್ಯಗಳನ್ನು ನೀಡುವ ಕಾರ್ಯ ಸರ್ಕಾರ ಕೈಗೊಂಡಿದೆ. ಇದರ ಅಡಿ, ಪ್ರತಿಯೊಂ ದು ಸಿದ್ದಿ ಕುಟುಂಬಕ್ಕೆ ತಲಾ ಎರಡು ಎಕರೆ ಜಮೀನನ್ನು ಅಥವಾ ಭೂಮಿಯನ್ನು ನೀಡಲಾ ಗುತ್ತಿದೆ. ಇತ್ತೀಚೆಗೆ ಯು.ಎನ್.ಓ ಸಂಘದ ಯುನೆಸ್ಕೊ ಸಮಿತಿ ಈ ಬುಡುಕಟ್ಟಿನವರ ಪುನರ್ವಸತಿ ಕಾರ್ಯವನ್ನು ಮಾಡಲು ಮುಂದಾ ಗಿದೆ. ಇದಕ್ಕಾಗಿಯೇ ಹಣದ ಸಹಾಯವನ್ನೂ ಸಹ ನೀಡುತ್ತಿದೆ.
ಅರಣ್ಯ ಪ್ರದೇಶದಲ್ಲಿ ಬದುಕುವುದನ್ನೇ ಹೆಚ್ಚು ಪ್ರೀತಿಸುವ ಇವರು ಮೊದಲು ಜನರನ್ನು ಕಂಡರೆ ಹೆದರಿ ಓಡುತ್ತಿದ್ದರಂತೆ. ನಿಧಾನವಾಗಿ ಬದಲಾಗು ತ್ತಿರುವ ಕಾಲಕ್ಕೆ ಹೊಂದಿಕೊಂಡ ರೂ ಸಹ ಈಗಲೂ ಬೆಟ್ಟ ಗುಡ್ಡಗಳಲ್ಲೆ ಮನೆ ಮಾಡಿಕೊಂಡ ವರೂ ಇದ್ದಾರೆ. ಉತ್ತರ ಕನ್ನಡದ ಹಳಿಯಾಳ, ಯಲ್ಲಾಪುರ, ಅಂಕೋಲಾ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ತಮ್ಮದೇ ಆದ ಬುಡಕಟ್ಟು ಸಂಘಟನೆಗಳನ್ನೂ ಇವರು ಹೊಂದಿದ್ದಾರೆ. ಸಿದ್ದಿ ಜನಾಂಗದ ಪ್ರಸ್ತುತ ಮುಖಂಡರಲ್ಲಿ ನಮ್ಮ ಯಲ್ಲಾಪುರದ ಹೆಮ್ಮೆಯ ಶಾಸಕರಾಗಿ, ಪ್ರಪ್ರಥಮ ಬುಡಕಟ್ಟು ಜನಾಂಗದ ಪ್ರತಿನಿಧಿಯಾಗಿ ವಿಧಾನಸಭೆಗೆ ಪ್ರವೇಶ ಪಡೆದ ವರು ಸನ್ಮಾನ್ಯ ಶ್ರೀಶಾಂತಾ ರಾಮ ಸಿದ್ದಿ ಯವರು. ಸಿದ್ದಿ ಸಮುದಾಯದ ಇನ್ನೊರ್ವ ವ್ಯಕ್ತಿ ಶ್ರೀದಿಯಾಗೋ ಸಿದ್ದಿ ಪ್ರಮುಖರಾಗಿದ್ದಾರೆ.

ಸರ್ಕಾರ ಸಿದ್ದಿ ಜನಾಂಗಕ್ಕೆ ಶೈಕ್ಷಣಿಕ ಸೌಲಭ್ಯ ಜೊತೆಗೆ ಸ್ಕಾಲರ್ ಶಿಪ್, ಹಾಸ್ಟೇಲ್ ಸೌಲಭ್ಯಗ ಳನ್ನು ಒದಗಿಸುತ್ತ ಬಂದಿದ್ದರೂ ಈ ಜನಾಂಗ ಇದುವರೆಗೂ ಶಿಕ್ಷಣದಿಂದ ದೂರವೇ ಇದೆ. ಸಿದ್ದಿ ಜನರ ನಾಚಿಕೆ ಸ್ವಭಾವ ಇದಕ್ಕೆ ಕಾರಣ. ಹೊರ ಜಗತ್ತಿನ ಜನರ ಜೊತೆ ಬೆರೆಯಲು ಇವರು ಮುಜುಗರಪಡುತ್ತಾರೆ. ಹೈಸ್ಕೂಲು, ಪಿಯುವಿಗೆ ಶಿಕ್ಷಣ ಮೊಟಕುಗೊಳಿಸಿದವರ ಸಂಖ್ಯೆಯೇ ಅಧಿಕ. ಹಳಿಯಾಳದಲ್ಲಿ ಇತ್ತೀಚಿಗೆ ಓರ್ವರು ಕಾನೂನು ಪದವಿ ಪಡೆದಿದ್ದಾರೆ. ಯಲ್ಲಾಪುರದಲ್ಲಿ ಪಿ.ಎಚ್.ಡಿ ಮಾಡಿ ಉತ್ತಮ ಶಿಕ್ಷಣ ಪಡೆದ ಕೆಲವರು ವಿವಿಧ ಸರಕಾರೇತರ ಸಂಸ್ಥೆಗಳಲ್ಲಿ ಜನಾಂಗದ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ.
ಡಮಾಮಿ ಕುಣಿತ

ಸಿದ್ದಿ ಜನಾಂಗದ ಅನನ್ಯ ಕಲಾಪ್ರಕಾರ ಡಮಾಮಿ ಕುಣಿತ. ಆಫ್ರಿಕನ್ ಕಪ್ಪು ಜನಾಂಗ ಗಳಿಗೇ ಮೂಲ ಹಾಗೂ ಪ್ರಾಚೀನವಾದ ಪೂರ್ವೀಕ ಪಿತೃಗಳ ಪೂಜೆಯ ಸಂದರ್ಭದಲ್ಲಿ ಡಮಾಮಿ ಕುಣಿತ ಇರಲೇಬೇಕು. ಡಮಾಮಿ ಕುಣಿತದ ಬಹುತೇಕ ಹಾಡುಗಳು ಪ್ರೀತಿ, ಪ್ರೇಮ, ಪ್ರಣಯ ದ ವಸ್ತು ವನ್ನುಳ್ಳಂತಹವು. ಪಿತೃ ಹಿರಿಯರನ್ನು ಸ್ಮರಿಸುವುದಾಗಿದೆ. ಡಮಾಮಿ ಎಂಬುದೊಂದು ಚರ್ಮವಾದ್ಯ.

ಈ ಚರ್ಮ ವಾದ್ಯವನ್ನು ಒಬ್ಬರು ಅಥವ ಇಬ್ಬರು ನುಡಿಸು ತ್ತಿದ್ದರೆ, ಮೂರು ನಾಲ್ಕು ಮಂದಿ ತಮ್ಮ ಸಿದ್ದಿಮೊ ಭಾಷೆಯಲ್ಲಿ ಲಯಬದ್ಧ ಹಾಡುಗಳನ್ನು ಹಾಡುತ್ತಿ ರುತ್ತಾರೆ. ಡಮಾಮಿ ವಾದ್ಯವು ಸಿದ್ದಿಮೊಗಳಿಗೇ ವಿಶಿಷ್ಟವಾದ ವಾದ್ಯ ವಾಗಿದ್ದು ನಮ್ಮ ಜಾನಪದ ದ ಬೇರ‍್ಯಾವ ಪ್ರಕಾರ ದಲ್ಲೂ ಅಂತಹ ವಾದ್ಯ ಕಂಡುಬರುವು ದಿಲ್ಲ.

ಡಮಾಮಿ ಕುಣಿತ ಮಹಿಳಾ ಪ್ರಧಾನ ವಾದುದಾದರೂ ಪುರುಷರೂ ಕಲೆಯ ಆಸಕ್ತಿಯ ಕಾರಣದಿಂದಾಗಿ ಭಾಗವಹಿಸು ತ್ತಾರೆ. ಡಮಾಮಿ ಕುಣಿತದಲ್ಲಿ ನವಿಲುಗರಿ, ಮುಚಾಕೆ ಎಂಬ ತೆಂಗಿನ ಬುರುಡೆ, ಮಡಕೆಗೆ ಬದಲಾಗಿ ಈಗೀಗ ಪ್ಲಾಸ್ಟಿಕ್ ಬಿಂದಿಗೆಗಳನ್ನು ಬಳಸುವು ದುಂಟು. ಬರಿಗೈನ ನೃತ್ಯವೂ ಉಂಟು. ಡಮಾಮಿ ಯೊಂದಿಗೆ ಭವಾಂಗರ್ ಮತ್ತು ಮುಜಾಕೋ ಎಂಬ ವಾದ್ಯಗಳು ಇರುತ್ತವೆ.

“ಕೆಂಪಿರುವೆಯ ಚಟ್ನಿ” ಇವರಿಗೆ ತುಂಬಾನೆ ಇಷ್ಟ. ಮಾವಿನ ಗಿಡ ಅಥವಾ ಇತರೆ ಯಾವುದೇ ಗಿಡಗಳಲ್ಲಿ ಗೂಡು ಕಟ್ಟಿರುವ ಕೆಂಪಿರುವೆಯನ್ನು ತಂದು ಅದರ ಚಟ್ನಿ ಮಾಡುವ ಕಲೆ ಇವರಿಗೆ ಸಿದ್ದಿಸಿದೆ. ನಾನು ಕಣ್ಣಾರೆ ಕಂಡ ಕ್ಷಣ ಮರೆಯ ಲಾಗದು. ಮಾವಿನ ಮರದ ಟೊಂಗೆಯಲ್ಲಿ ಗೂಡು ಕಟ್ಟಿದ್ದ ಕೆಂಪಿರುವೆಯನ್ನು ನಮ್ಮ ಶಾಲೆಯ ಸಿದ್ದಿ ಜನಾಂಗದ ವಿದ್ಯಾರ್ಥಿಗಳು ಕೊಂಚವು ಅಳುಕದೆ ಗೂಡನ್ನು ಬಿಚ್ಚಿ ಇರುವೆ ಮೊಟ್ಟೆ ಸಮೇತ ಬೊಗಸೆಯಲ್ಲಿ ಹಿಡಿದು ಬಾಯಲ್ಲಿ ಹಾಕಿಕೊಂಡು ಗಬಗಬನೆ ತಿನ್ನುವಾಗ ನನಗೆ ಭಯ ಅಯ್ಯೋ ಇರುವೆ ಕಚ್ಚಿತೆಂಬ ಚಿಂತೆ ಅವರಿಗೆ ಅದಾವ ಭಯವು ಇರದಿರುವುದು ವಿಶೇಷ. ಟೀಚರ್ ನಮ್ಮ ಮನೆಯಲ್ಲಿ ಈ ಇರುವೆಯ ಚಟ್ನಿ ಮಾಡು ತ್ತಾರೆ ಹಾಗೂ ಅದು ಹುಳಿಯಾಗಿ, ರುಚಿಯಾಗಿರುತ್ತೆಂದು ಹೇಳುವಾ ಗೆಲ್ಲ ಕೆಂಪಿರುವೆ ಕಚಗುಳಿ ಇಟ್ಟಂತಾಗಿತ್ತು.

ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಗಿರಿಜಾ ಸಿದ್ದಿ, ಗೀತಾ ಸಿದ್ದಿಯವರು ರಂಗ ಭೂಮಿ ಕಲಾವಿದರು, ನಾಯಕ ನಟ ಬ್ಲಾಕ್ ಗೋಬ್ರಾ ದುನಿಯಾ ವಿಜಿ ಅಭಿನಯದ “ಸಲಗ” ಚಲನ ಚಿತ್ರದ ಮೂಲಕ ತಮ್ಮ ಸುಮಧುರ ಕಂಠಸಿರಿಯಲ್ಲಿ ಹಾಡಿದ ಹಾಡು:
“ಕಾ ಚಲಿಗೆ ಬೆಂಗಳೂರು ದೇಖನೇಕೋ ಟಿಣಿಂಗ್ ಮಿಣಿಂಗ್ ಟಿ಼ಷ್ಯಾ…..”
ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

ಗೀತಾ ಸಿದ್ದಿಯವರು “ರಂಗಭೂಮಿಯಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದ ಮೇಲೆ ಪಿ.ಎಚ್.ಡಿ ಪಡೆದ ಈ ಜನಾಂಗದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರಳಾ ಗಿದ್ದಾಳೆ. ಅದರಂತೆ ಕಾಮಿಡಿ ಕಿಲಾಡಿ ಗಳು ಶೋದಲ್ಲಿ ಪ್ರಶಾಂತ ಸಿದ್ದಿ ಕೂಡ ಯಲ್ಲಾಪುರದ ಮಂಚಿಕೇರಿ ಯವರೆಂಬುದೆ ಹೆಮ್ಮೆ.

ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿರು ವುದು ಸಂತಸದ ಸಂಗತಿ. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರೂ ಕನ್ನಡಿಗರೆಂದ ಮೇಲೆ ಇವರು ಕೂಡ ನಮ್ಮ ಹೆಮ್ಮೆಯ ಕನ್ನಡಿಗ ರೆಂದರೆ ತಪ್ಪಾಗಲಾರದು.

ಜಾತಿ, ಧರ್ಮ ಭಿನ್ನವಾದರೂ ಶತಮಾನಗ ಳಿಂದ ನಮ್ಮಲ್ಲಿ ಒಬ್ಬರಾಗಿ,ಕಾಡಿನಿಂದ ನಾಡಿಗೆ ಬಂದು ನೆಲೆಸುತ್ತ ನಮ್ಮೊಳಗೆ ಒಬ್ಬರಾಗಿ ವಿಶಿಷ್ಟವಾಗಿ ಬೆಳೆದು ಬೆಳಕಿಗೆ ಬರುತ್ತಿರುವ ಸಿದ್ದಿ ಜನಾಂಗ ನಮ್ಮ ಆಸು ಪಾಸಿನ ಹಳ್ಳಿಗಳಲ್ಲಿ ತಮ್ಮದೇ ಜನರ ಮಧ್ಯಿರುವುದು ವಿಶೇಷ. ಯಲ್ಲಾಪುರದ ಹುಣಶೆಟ್ಟಿ ಗ್ರಾಮ, ತಾವರ ಕಟ್ಟಾ, ಕೆಳಾಸೆ, ಮಂಚಿಕೇರಿ, ಅರಬೈಲ್, ಗುಳ್ಳಾಪುರ ಹೀಗೆ ಹಲವಾರು ಕಡೆ ಅಂದರೆ ಉತ್ತರ ಕನ್ನಡ ಜಿಲ್ಲೆಯ ಬಹು ಭಾಗದಲ್ಲಿ ವಾಸವಾಗಿರುವುದನ್ನು ಕಾಣ- ಬಹುದು. ಅದಕೆ ನಮ್ಮೂರ ಅಂದ ಚಂದ ಎಲ್ಲರೊಂದಿಗೆ ಒಂದಾಗಿರುವುದು….
✍️ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ,ಯಲ್ಲಾಪೂರ
ಸಿದ್ದಿ ಜನಾಂಗದ ಬಗ್ಗೆ ಅತ್ಯಂತ ಆಳವಾದ ಅಧ್ಯಯನ ಮಾಡಿ …
ಅವರ ಬಗ್ಗೆ ಏನೂ ಗೊತ್ತಿಲ್ಲದವರಿಗೂ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತಹ ಉತ್ತಮ ಬರಹವಾಗಿದೆ.super ಗೆಳತಿ.
ಓದುತ್ತಾ ಹೋದಂತೆ ಎಲ್ಲೂ ಒಂದಕ್ಷರ ಬಿಡದೆ ಓದಬೇಕು ಅಂತ ಅನಿಸುತ್ತೆ.
LikeLike
ಸಿದ್ದಿ ಸಮುದಾಯದ ಬಗ್ಗೆ ಬರೆದ ಲೇಖನ ಅದ್ಬುತವಾಗಿ ಮೂಡಿ ಬಂದಿದೆ
LikeLike
Soooooper 🙏🏻ಈ ಲೇಖನ ತಮ್ಮ ಮೇರು ವ್ಯಕ್ತಿತ್ವ ಕ್ಕ ಕನ್ನಡಿ ಹಿಡಿದ ಹಾಗೆ ಇದೆ.ಓದೀ ತುಂಬಾ ಸಂತೋಷ ಜೊತೆಗೆ ಹೆಮ್ಮೆ ತಮ್ಮ ಬಗ್ಗೆ…
LikeLike
Super madam
LikeLike
super article
LikeLike
Siddi Janar bagge sundhar article..super
LikeLike
ಸಿದ್ದಿ ಜನಾಂಗದ ಕುರಿತು ಬರೆದ ಬರವಣಿಗೆಯ ಸಾಲುಗಳು ಸೂಪರ್
LikeLike