ಮುದ್ದೇನಹಳ್ಳಿಯ ಊರ
ಹುಟ್ಟಿದನೊಬ್ಬ ಮೇಧಾವಿ ಕುವರ
ಇವನೊಬ್ಬ ಜ್ಞಾನದ ಆಗರ
ವಿಶ್ವದ ಶ್ರೇಷ್ಠ ಅಭಿಯಂತರ.

ಬಡತನವೇ ಆಯಿತು ಮೆಟ್ಟಿಲು
ನಿರುದ್ಯೋಗ ವಿತ್ತು ಸುತ್ತಲು
ಎಲ್ಲೆಡೆ ತುಂಬಿತ್ತು ಅಜ್ಞಾನದ ಕತ್ತಲು
ಪ್ರಯತ್ನಿಸಿದರು ಇದನ್ನು ಅಡಗಿಸಲು.

ಕರ್ನಾಟಕ ಆದರೂ ಇವರ ತವರು
ವಿಶ್ವದ ತುಂಬೆಲ್ಲ ಇವರ ಹೆಸರು
ಸಾಧನೆಗಳು ಸಾವಿರಾರು
ಹೆಮ್ಮೆ ಪಡುವರು ಭಾರತೀಯರು.

ಜ್ಞಾನದ ಬೀಜ ಬಿತ್ತಿದರು
ಕತ್ತಲೆಯನ್ನು ಓಡಿಸಿದರು
ಶಿಸ್ತನ್ನು ಮೈಗೂಡಿಸಿಕೊಂಡವರು
ಚಲಿಸುವ ಗಡಿಯಾರ ಆದವರು.

ಅಚ್ಚಳಿಯದಂತ ಸಾಧನೆಗೆ
ಭಾರತ ರತ್ನ ಇವರ ಮುಡಿಗೆ
ಪ್ರೇರಣೆ ಮುಂದಿನ ಪೀಳಿಗೆಗೆ
ಸ್ಮರಿಸಬೇಕು ಇವರನ್ನು ಪ್ರತಿಗಳಿಗೆ.

✍️ ಶ್ರೀಶಿವು ಎಂ ಖನ್ನೂರ
ಶಿಕ್ಷಕ ಸಾಹಿತಿಗಳು
ಲಕಮಾಪುರ, ಧಾರವಾಡ